ಭಾರತದಲ್ಲಿ 15,786 ಹೊಸ ಕೋವಿಡ್ ಪ್ರಕರಣಗಳು ದಾಖಲು, 3,086ರಷ್ಟು ಕಡಿಮೆಯಾದ ಸಕ್ರಿಯ ಪ್ರಕರಣಗಳು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 15,786 ಹೊಸ ಪ್ರಕರಣಗಳನ್ನು ದಾಖಲಿಸಿದ್ದು, ಗುರುವಾರಕ್ಕಿಂತ ಶೇಕಡಾ 14.5 ರಷ್ಟು ಕಡಿಮೆಯಾಗಿದೆ. ಹೊಸ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಪ್ರಕರಣ 3,41,43,236 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಡೇಟಾ ಹೇಳಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 231 ಸಾವುಗಳು … Continued

ಆರೋಪ ಸಂಪೂರ್ಣ ಸುಳ್ಳು – ಖಂಡನೀಯ : ನವಾಬ್ ಮಲಿಕ್ ಹಣ ಸುಲಿಗೆ ಆರೋಪ ತಳ್ಳಿಹಾಕಿದ ಸಮೀರ್ ವಾಂಖೇಡೆ, ಕಾನೂನು ಕ್ರಮದ ಎಚ್ಚರಿಕೆ

ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸಮೀರ್ ವಾಂಖೇಡೆ ವಿರುದ್ಧ ಹಣ ‘ಸುಲಿಗೆ’ ಮಾಡಿದ ಆರೋಪ ಮಾಡಿದ ಕೆಲವೇ ಗಂಟೆಗಳಲ್ಲಿ, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ವಲಯ ಮುಖ್ಯಸ್ಥರಾದ ವಾಂಖೇಡೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ನಾಯಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಸಮೀರ್‌ ವಾಂಖೇಡೆ ಜನರ ವಿರುದ್ಧ ನಕಲಿ ಪ್ರಕರಣಗಳನ್ನು … Continued

ಎಫ್‌ಎಟಿಎಫ್ ಗ್ರೇ ಪಟ್ಟಿಯಲ್ಲೇ ಉಳಿದ ಪಾಕಿಸ್ತಾನ, ಈ ಪಟ್ಟಿಗೆ ಟರ್ಕಿ ಈಗ ಹೊಸ ಪ್ರವೇಶ

ನವದೆಹಲಿ: ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಗುರುವಾರ ಪಾಕಿಸ್ತಾನವನ್ನು ತನ್ನ ‘ಗ್ರೇ ಲಿಸ್ಟ್’ ನಲ್ಲಿ ಉಳಿಸಿಕೊಂಡಿದೆ. ಬ್ರೀಫಿಂಗ್‌ನಲ್ಲಿ, ಎಫ್‌ಎಟಿಎಫ್ ಅಧ್ಯಕ್ಷ ಮಾರ್ಕಸ್ ಪ್ಲೆಯರ್ ಮತ್ತೆ ಮೂರು ಹೊಸ ದೇಶಗಳಾದ ಟರ್ಕಿ, ಜೋರ್ಡಾನ್ ಮತ್ತು ಮಾಲಿಗಳನ್ನು ಗ್ರೇ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದರು. ಪಾಕಿಸ್ತಾನವು ಸಹಕರಿಸುತ್ತಿದೆ ಮತ್ತು ಕೇವಲ ನಾಲ್ಕು ಕ್ರಿಯಾ ಅಂಶಗಳನ್ನು ಮಾತ್ರ ಪೂರ್ಣಗೊಳಿಸಬೇಕಾಗಿದೆ … Continued

ಸ್ನಾತಕೋತ್ತರ ವೈದ್ಯಕೀಯ ಸೀಟು: ಇಡಬ್ಲ್ಯೂಎಸ್ ಆದಾಯ ಮಿತಿ ಬಗ್ಗೆ ವಿವರಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಸೂಚನೆ

ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮೂಲಕ ಆರ್ಥಿಕ ದುರ್ಬಲ ವರ್ಗಕ್ಕೆ (ಇಡಬ್ಲ್ಯೂಎಸ್‌) ಸೇರಿದವರಿಗೆ ಮೀಸಲಾತಿ ಪಡೆಯಲು ₹ 8 ಲಕ್ಷ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿರುವುದಕ್ಕೆ ಕಾರಣ ನೀಡಿ ಅಫಿಡವಿಟ್‌ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಇಡಬ್ಲ್ಯೂಎಸ್‌ಗೆ 8 ಲಕ್ಷ ರೂ.ಗಳ … Continued

ಡ್ರಗ್ಸ್ ಪ್ರಕರಣ : ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಮೊಬೈಲ್, ಲ್ಯಾಪ್ ಟಾಪ್ ವಶಕ್ಕೆ ಪಡೆದ ಎನ್ ಸಿಬಿ

ಮುಂಬೈ: ಡ್ರಗ್ಸ್ ಪ್ರಕರಣ ಬಾಲಿವುಡ್ ನಲ್ಲಿ ತಲ್ಲಣ ಸೃಷ್ಟಿಸಿದ್ದು, ಶಾರುಖ್ ಖಾನ್ ಮಗ ಆರ್ಯನ್‌ ಖಾನ್‌ ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾದ ಬಳಿಕ ಇತರ ಸೆಲೆಬ್ರಿಟಿಗಳನ್ನು ಈಗ ಈ ಡ್ರಗ್ಸ್ ಪ್ರಕರಣ ಸುತ್ತಿಕೊಳ್ಳುತ್ತಿದೆ. ಈ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ ಎನ್‌ಸಿಬಿ ಗುರುವಾರ ದಾಳಿ ನಡೆಸಿ ಶೋಧ ನಡೆಸಿತು. … Continued

ಗಂಡನ ಮನೆಯಲ್ಲಿ ಶೌಚಾಲಯವಿಲ್ಲ ಎಂದು ಗಂಡನಿಗೆ ವಿಚ್ಛೇದನ ನೀಡಿದ ಪತ್ನಿ..!

ಗಾಂಧಿನಗರ: ಗುಜರಾತಿ​​ನ ಗಾಂಧಿನಗರದ ರಂದೇಶನ್​ ಗ್ರಾಮದ ದಂಪತಿ ಶೌಚಾಲಯದ ವಿಚಾರವಾಗಿ ವಿಚ್ಛೇದನ​ ಪಡೆದಿದ್ದಾರೆ. ಎಂಟು ವರ್ಷಗಳ ಹಿಂದೆ ಯುವತಿ ರಂದೇಶನ್​​ ಗ್ರಾಮದ ಯುವಕನನ್ನು ಮದುವೆಯಾಗಿದ್ದರು. ಆದರೆ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲ ಎಂದು ಯುವತಿ ವಿಚ್ಛೇದನ ಪಡೆದಿದ್ದಾರೆ. ಯುವತಿ ಹತ್ತನೇ ತರಗತಿವರೆಗೆ ಓದಿದ್ದಾರೆ. ಗಂಡನ ಮನೆಯವರಿಗೆ 6 ಎಕರೆ ಭೂಮಿ ಇದ್ದು, ತಿಂಗಳಿಗೆ 10 ಸಾವಿರ … Continued

ಪ್ರತಿಭಟನೆ ನಡೆಸಿ, ಆದರೆ ರಸ್ತೆ ಸಂಚಾರ ಬಂದ್ ಮಾಡಬೇಡಿ : ರೈತರಿಗೆ ಸುಪ್ರೀಂ ಸೂಚನೆ

ನವದೆಹಲಿ: ಪ್ರತಿಭಟನೆ ನಡೆಸುವುದು ರೈತರ ಹಕ್ಕು ಪ್ರತಿಭಟನೆ ನಡೆಸಿ, ಆದರೆ ಜನ ಸಂಚಾರಕ್ಕೆ ಅಡ್ಡಿಯಾಗುವಂತೆ ರಸ್ತೆ ಬಂದ್ ಮಾಡುವುದನ್ನು ತಕ್ಷಣವೇ ನಿಲ್ಲಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಕಳೆದ ಹತ್ತು ತಿಂಗಳಿಂದ ದೆಹಲಿಯ ಗಡಿ ಭಾಗದ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. … Continued

ಇನ್ಫೋಸಿಸ್ ಪ್ರತಿಷ್ಠಾನದ ‘ವಿಶ್ರಾಮ ಸದನ’ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಕ್ಯಾನ್ಸರ್ ರೋಗಿಗಳಿಗಾಗಿ ನಿರ್ಮಿಸಲಾದ 806 ಹಾಸಿಗೆಗಳ ವಿಶ್ರಾಮ ಸದನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಗುರುವಾರ) ಉದ್ಘಾಟಿಸಿದರು. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ (ಎಐಐಎಂಎಸ್) ಜಜ್ಜರ್ ಕ್ಯಾಂಪಸ್‍ನಲ್ಲಿರುವ ನ್ಯಾಷನಲ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನಲ್ಲಿ (ಎನ್‍ಐಸಿ) 806 ಹಾಸಿಗೆಗಳ ವಿಶ್ರಮ್ ಸದನಕ್ಕೆ ವಿಡಿಯೋ ಕಾನರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು. ಇನ್ಫೋಸಿಸ್ … Continued

ಚೀನಾದಲ್ಲಿ ಮತ್ತೆ ಕೋವಿಡ್‌ ಸೋಂಕು ಹೆಚ್ಚಳ: ಹಲವೆಡೆ ಶಾಲೆ ಬಂದ್‌, ವಿಮಾನಯಾನ ಸ್ಥಗಿತ

ಬೀಜಿಂಗ್‌: ಪ್ರವಾಸಿಗರಿಂದ ಚೀನಾದಲ್ಲಿ ಕೋವಿಡ್‌ ಏಕಾಏಕಿ ಹೆಚ್ಚಾಗಿದ್ದು, ಹಲವು ಪ್ರದೇಶಗಳಿಗೆ ವಿಮಾನ ಹಾರಾಟ ರದ್ದು ಮಾಡಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ಜನರಿಗೆ ಸಾಮೂಹಿಕ ಪರೀಕ್ಷೆ ಮಾಡಿಸಲಾಗುತ್ತಿದೆ. ಚೀನಾ ಕಟ್ಟುನಿಟ್ಟಾದ ನಿರ್ಬಂಧವೂ ಸೇರಿದಂತೆ, ಲಾಕ್‌ಡೌನ್‌ ಕ್ರಮ ಅನುಸರಿಸಿ ಕೋವಿಡ್‌ ಸೋಂಕನ್ನು ಶೂನ್ಯಕ್ಕೆ ತಂದಿಟ್ಟಿತ್ತು. ಆದರೆ, ಸತತ ಐದನೇ ದಿನ ಚೀನಾದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಉತ್ತರ ಮತ್ತು … Continued

ಉತ್ತರ ಪ್ರದೇಶ:ಪ್ರಿಯಾಂಕಾ ಗಾಂಧಿ ಜೊತೆ ಸೆಲ್ಫಿ ಕ್ಲಿಕ್ಕಿಸಿದ್ದ ಮಹಿಳಾ ಪೇದೆಗಳ ವಿರುದ್ಧ ತನಿಖೆಗೆ ಆದೇಶ

ಆಗ್ರಾ: ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಬುಧವಾರ ಆಗ್ರಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಪ್ರಿಯಾಂಕ ಗಾಂಧಿ ಆಗ್ರಾಕ್ಕೆ ಬರುವುದನ್ನು ಉತ್ತರಪ್ರದೇಶ ಸರ್ಕಾರ ತಡೆದಿತ್ತು. ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬ ಭೇಟಿಯಾಗಲು ಪ್ರಿಯಾಂಕಾ ಗಾಂಧಿ ಆಗ್ರಾಕ್ಕೆ ತೆರಳುತ್ತಿದ್ದಾಗ ಪೊಲೀಸರು ಪ್ರಿಯಾಂಕ ಅವರನ್ನು ತಡೆದು ವಾಪಸ್ ಕಳುಹಿಸಿದ್ದರು. ಈ ವೇಳೆ ಕೆಲವು ಮಹಿಳಾ ಪೊಲೀಸರು ಪ್ರಿಯಾಂಕ … Continued