ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ: ಗಾಯಗೊಂಡಿದ್ದ ಸೇನಾಧಿಕಾರಿ, ಯೋಧ ಹುತಾತ್ಮ

ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೇನಾಧಿಕಾರಿ (ಜೆಸಿಒ) ಹಾಗೂ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಪೂಂಚ್-ರಾಜೌರಿ ಅರಣ್ಯದಲ್ಲಿ ಐವರು ಸೇನಾ ಯೋಧರು ಹುತಾತ್ಮರಾದ ನಾಲ್ಕು ದಿನಗಳ ನಂತರ ಅದೇ ಪ್ರದೇಶದಲ್ಲಿ ಸೇನೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆಯಿತು. ಈಗ ನಡೆಯುತ್ತಿರುವ … Continued

ಭಾರತದಲ್ಲಿ 16,862 ಹೊಸ ಕೋವಿಡ್ ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 16,862 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಗುರುವಾರ ವರದಿ ಮಾಡಿದ ಸಂಖ್ಯೆಗಿಂತ ಶೇಕಡಾ 11.2 ರಷ್ಟು ಕಡಿಮೆಯಾಗಿದೆ. ಹೊಸ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಕೇಸ್‌ಲೋಡ್ 3,40,37,592 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ. 379 ಜನರು ಸೋಂಕಿನಿಂದ ನಿಧನರಾಗಿದ್ದಾರೆ. ದೇಶದ … Continued

ವಿಜಯ ದಶಮಿಯಂದು ಗ್ರಾಹಕರಿಗೆ ಮತ್ತೆ ಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಶಾಕ್‌..!

ನವದೆಹಲಿ: ವಿಜಯದಶಮಿ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ದೇಶದ ಗ್ರಾಹಕರಿಗೆ ಶಾಕ್ ನೀಡಿರುವ ತೈಲ ಕಂಪನಿಗಳು, ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿವೆ. ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಳೆದ ಎರಡು ದಿನಗಳಿಂದ ಸತತವಾಗಿ ಏರಿಕೆ ಮಾಡುತ್ತಿವೆ. ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿ ಇಂಧನ … Continued

ಆದಾಯ ತೆರಿಗೆ ಇಲಾಖೆ ಹೊಸ ಪೋರ್ಟಲ್‌ನಲ್ಲಿ 2 ಕೋಟಿಗೂ ಹೆಚ್ಚು ಐಟಿಆರ್‌ಗಳ ಸಲ್ಲಿಕೆ

ನವದೆಹಲಿ: ಆದಾಯ ತೆರಿಗೆ ಇಲಾಖೆಯು ಹೊಸ ಐಟಿ ಪೋರ್ಟಲ್ ಅನ್ನು ಗಣನೀಯವಾಗಿ ಸ್ಥಿರಗೊಳಿಸಿದೆ ಎಂದು ಗುರುವಾರ ತಿಳಿಸಲಾಗಿದೆ. ಇದುವರೆಗೆ ಎರಡು ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು(ಸಿಬಿಡಿಟಿ) ಎಲ್ಲ ಐಟಿಆರ್‌ಗಳನ್ನು ಇ-ಫೈಲಿಂಗ್‌ಗಾಗಿ ಲಭ್ಯಗೊಳಿಸಿದೆ ಮತ್ತು ತೆರಿಗೆ ಪಾವತಿದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್)ಗಳನ್ನು 2020-21ರ ಹಣಕಾಸು … Continued

ಲಸಿಕೆ ಮೈತ್ರಿ ‘: ಭಾರತದಿಂದ ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್, ಇರಾನ್‌ ದೇಶಗಳಿಗೆ ತಲಾ 10 ಕೋಟಿ ಕೋವಿಡ್ -19 ಡೋಸುಗಳ ಪೂರೈಕೆ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಈ ಕಷ್ಟದ ಸಮಯದಲ್ಲಿ ನೆರೆಯ ರಾಷ್ಟ್ರಗಳಿಗೆ ಸಹಾಯ ಮಾಡುವ ನಮ್ಮ ಬದ್ಧತೆಯಲ್ಲಿ ದೃಢವಾಗಿ ನಿಂತು, ಭಾರತವು ಗುರುವಾರ ನಾಲ್ಕು ದೇಶಗಳಿಗೆ ಕೊರೊನಾ ವೈರಸ್ ವಿರೋಧಿ ಲಸಿಕೆಯ ಕೋಟ್ಯಂತರ ಡೋಸ್‌ಗಳನ್ನು ರಫ್ತು ಮಾಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೇಪಾಳ, ಮ್ಯಾನ್ಮಾರ್, ಇರಾನ್ ಮತ್ತು ಬಾಂಗ್ಲಾದೇಶಗಳು ಭಾರತದ ‘ಲಸಿಕೆ ಮೈತ್ರಿ’ ಕಾರ್ಯಕ್ರಮದ … Continued

ಅನಂತ್ ಕರ್ಮುಸ್ ಅಪಹರಣ -ಹಲ್ಲೆ ಪ್ರಕರಣ: ಮಹಾರಾಷ್ಟ್ರ ಸಚಿವ ಜಿತೇಂದ್ರ ಅವ್ಹದ್ ಬಂಧನ, ಜಾಮೀನು

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಅನಂತ್ ಕರ್ಮುಸ್ ಅವರ ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ಜಿತೇಂದ್ರ ಅವ್ಹದ್ ಅವರನ್ನು ಗುರುವಾರ ಬಂಧಿಸಲಾಗಿದೆ. ಅವರನ್ನು ಥಾಣೆ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಜಾಮೀನು ನೀಡಲಾಗಿದೆ. ಈ ಪ್ರಕರಣವು ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಅವ್ಹದ್ ಅವರ ಮಾರ್ಫ್ ಮಾಡಿದ ಚಿತ್ರವನ್ನು ಪೋಸ್ಟ್ ಮಾಡಿದ ಆರೋಪಕ್ಕಾಗಿ ಕೆಲವು … Continued

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಪುನರಾಯ್ಕೆ

ನ್ಯೂಯಾರ್ಕ್: 2022-24ರ ಅವಧಿಯ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಗುರುವಾರ ಮರು ಆಯ್ಕೆಯಾಗಿದೆ. ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ (2022-24) 6ನೇ ಅವಧಿಗೆ ಭಾರೀ ಬಹುಮತದಿಂದ ಆಯ್ಕೆಯಾಗಿದೆ. ಭಾರತದ ಮೇಲೆ ವಿಶ್ವಾಸವನ್ನು ಮತ್ತೊಮ್ಮೆ ತೋರಿದ್ದಕ್ಕಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಹೃದಯಪೂರ್ವಕ ಕೃತಜ್ಞತೆಗಳು. ವಿಶ್ವದಲ್ಲಿ ಸಮ್ಮಾನ, ಸಂವಾದ ಮತ್ತು ಸಹಯೋಗದ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ … Continued

ಸಿಬಿಎಸ್‌ಇ :ಆಫ್‌ಲೈನ್‌ನಲ್ಲಿ 10, 12ನೇ ತರಗತಿಯ ಮೊದಲ ಅವಧಿಯ ಬೋರ್ಡ್ ಪರೀಕ್ಷೆ; ಅ. 18ರಂದು ದಿನಾಂಕ ಪ್ರಕಟ, ಪ್ರಮುಖ ವಿಷಯಗಳಿಗೆ ಮಾತ್ರ ಪರೀಕ್ಷೆ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (Central Board of Secondary Education- CBSE) ಅ. 18ರಂದು ಪರೀಕ್ಷೆ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಬೋರ್ಡ್​​​ ಸೋಮವಾರ 10 ಮತ್ತು 12 ನೇ ತರಗತಿಯ ಡೇಟ್​ ಶೀಟ್ (Board Exam date sheet) ​ ಬಿಡುಗಡೆ ಮಾಡಲಾಗುತ್ತದೆ. ಈ ವರ್ಷ … Continued

ಲಖೀಂಪುರ ಖೇರಿ ಹಿಂಸಾಚಾರ: ಎಸ್ಐಟಿಯಿಂದ ಘಟನೆ ಮರುಸೃಷ್ಟಿ; ಕೇಂದ್ರ ಸಚಿವರ ಪುತ್ರನನ್ನು ಸ್ಥಳಕ್ಕೆ ಕರೆದೊಯ್ದ ಅಧಿಕಾರಿಗಳು

ಲಖಿಂಪುರ ಖೇರಿ: ಲಿಖಿಂಪುರ ಖೇರಿ ಹಿಂಸಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಗುರುವಾರ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಮತ್ತು ಇನ್ನಿತರ ಮೂವರನ್ನು ಉತ್ತರ ಪ್ರದೇಶದ ತಿಕೋನಿಯಾ ಗ್ರಾಮಕ್ಕೆ ಕರೆದೊಯ್ದು ಘಟನೆಯನ್ನು ಮರುಸೃಷ್ಟಿಸಿದೆ. ಬಿಗಿ ಭದ್ರತೆಯ ನಡುವೆ ಮೂವರು ಆರೋಪಿಗಳನ್ನು ಲಖಿಂಪುರ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ … Continued

ಯುನಿಟೆಕ್ ಪ್ರಕರಣ; ತಿಹಾರ್ ಜೈಲಿನ 30 ಅಧಿಕಾರಿಗಳ ಅಮಾನತು…!

ನವದೆಹಲಿ: ವಂಚನೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಯುನಿಟೆಕ್​​ನ ಮಾಜಿ ಪ್ರವರ್ತಕರಿಗೆ ಸಹಾಯ ಮಾಡಿದ ಆರೋಪದಡಿ ತಿಹಾರ್​ ಜೈಲಿ​​ನ 30 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಯುನಿಟೆಕ್​ ಸಂಸ್ಥೆಯ ಮಾಜಿ ಮುಖ್ಯಸ್ಥರಾದ ಸಂಜಯ್​​ ಚಂದ್ರ ಮತ್ತು ಅಜಯ್​ ಚಂದ್ರ ಅವರಿಗೆ ಸಹಾಯ ಮಾಡಿದ ಆರೋಪದ ಮೇಲೆ ತಿಹಾರ್​ ಜೈಲು ಆಡಳಿತ ಮಂಡಳಿಯು 30 ಅಧಿಕಾರಿಗಳು ಸೇರಿದಂತೆ ಇಬ್ಬರು ಗುತ್ತಿಗೆ ನೌಕರರನ್ನು … Continued