ರಾಜ್ಯಗಳೂ ಅಲ್ಪಸಂಖ್ಯಾತ ಸಮುದಾಯ ಘೋಷಿಸಬಹುದು, ಕಡಿಮೆ ಸಂಖ್ಯೆ ಇದ್ದರೆ ಹಿಂದೂಗಳೂ ಅಲ್ಪಸಂಖ್ಯಾತರು: ಸುಪ್ರೀಂಗೆ ಕೇಂದ್ರ ಸರ್ಕಾರ

ನವದೆಹಲಿ: ರಾಜ್ಯಗಳಲ್ಲಿ ಹಿಂದೂಗಳು ಅಥವಾ ಇತರ ಧರ್ಮದವರು ಕಡಿಮೆ ಸಂಖ್ಯೆಯಲ್ಲಿ ಇದ್ದರೆ, ರಾಜ್ಯಗಳು ಅಂತಹವರನ್ನು ತಮ್ಮ ಪ್ರಾದೇಶಿಕ ವ್ಯಾಪ್ತಿಯೊಳಗೆ ಅಲ್ಪಸಂಖ್ಯಾತರು ಎಂದು ಘೋಷಿಸಬಹುದು. ಈ ಮೂಲಕ, ಆ ಸಮುದಾಯಗಳು ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಣೆ ಮಾಡಲು ಅನುವು ಮಾಡಿ ಕೊಡಬಹುದು’ ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಹೇಳಿದೆ. ರಾಷ್ಟ್ರೀಯ ಅಲ್ಪಸಂಖ್ಯಾತ … Continued

ಒಂದು ವಾರದಲ್ಲಿ 6ನೇ ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ..!

ನವದೆಹಲಿ: ಒಂದೇ ವಾರದಲ್ಲಿ 6ನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು, ಸೋಮವಾರ (ಮಾ.28) ಪೆಟ್ರೋಲ್ ಬೆಲೆಯಲ್ಲಿ 30 ಮತ್ತು ಡೀಸೆಲ್​ ಬೆಲೆಯಲ್ಲಿ 35 ಪೈಸೆಯಷ್ಟು ಏರಿಕೆಯಾಗಿದೆ. ಮಾರ್ಚ್​ 22 ರಿಂದ ಆರಂಭವಾದ ಇಂಧನ ದರ ಏರಿಕೆಯು ಮಾ. 24 ಒಂದು ದಿನ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳೂ ಏರಿಕೆ ಕಂಡಿವೆ. . … Continued

ಬಿಜೆಪಿ ಚುನಾವಣಾ ಗೆಲುವಿಗೆ ಸಿಹಿ ಹಂಚಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ್ದಕ್ಕಾಗಿ ನೆರೆಹೊರೆಯವರಿಂದ ವ್ಯಕ್ತಿಯ ಹತ್ಯೆ..!

ಕುಶಿನಗರ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಬೆಂಬಲಿಸಿದ್ದಕ್ಕಾಗಿ ಮತ್ತು ರಾಜ್ಯದಲ್ಲಿ ಪಕ್ಷದ ಚುನಾವಣಾ ಗೆಲುವಿನ ನಂತರ ಸಿಹಿ ಹಂಚಿದ್ದಕ್ಕಾಗಿ ಆತನ ನೆರೆಹೊರೆಯವರು ಅವರನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಮೃತ ವ್ಯಕ್ತಿಯನ್ನು ಬಾಬರ್ ಎಂದು ಗುರುತಿಸಲಾಗಿದ್ದು, ಕುಶಿನಗರದ ರಾಮ್‌ಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಕತ್‌ಗರ್ಹಿ ಗ್ರಾಮದ ನಿವಾಸಿ. ಮಾರ್ಚ್ … Continued

ಇಂದಿನಿಂದ 48 ಗಂಟೆಗಳ ಭಾರತ್ ಬಂದ್: ಬ್ಯಾಂಕಿಂಗ್, ಸಾರಿಗೆ, ಇತರ ಸೇವೆಗಳು ವ್ಯತ್ಯಯವಾಗಬಹುದು..

ನವದೆಹಲಿ: ಕಾರ್ಮಿಕರು, ರೈತರು ಮತ್ತು ಜನರ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಮಾರ್ಚ್ 28 ಮತ್ತು 29 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಬ್ಯಾಂಕಿಂಗ್ ವಲಯವೂ ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಫೇಸ್‌ಬುಕ್‌ನಲ್ಲಿ ತಿಳಿಸಿದೆ. ಸೋಮವಾರದಿಂದ ಪ್ರಾರಂಭವಾಗುವ ಎರಡು … Continued

ಬಿಹಾರ ಸಿಎಂ ನಿತೀಶ್ ಕುಮಾರ್ ಮೇಲೆ ಹಲ್ಲೆಗೆ ಯತ್ನ-ವ್ಯಕ್ತಿ ಪೊಲೀಸರ ವಶಕ್ಕೆ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸ್ವಗ್ರಾಮ ಭಕ್ತಿಯಾರ್‌ಪುರದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಹಲ್ಲೆಯಿಂದ ಮುಖ್ಯಮಂತ್ರಿ ಪಾರಾಗಿದ್ದು, ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಖ್ಯಮಂತ್ರಿಯನ್ನು ಹೊಡೆಯಲು ಪ್ರಯತ್ನಿಸುತ್ತಿರುವ ವ್ಯಕ್ತಿಯೊಬ್ಬರು ವೇದಿಕೆಯತ್ತ ವೇಗವಾಗಿ ಹೆಜ್ಜೆ ಹಾಕುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ನಿತೀಶ್ ಕುಮಾರ್ ಪುತ್ಥಳಿಗೆ … Continued

‌ ಎಮ್ಮೆ ಸಾವು…ಔತಣದಲ್ಲಿ ಎಮ್ಮೆ ಹಾಲಿನ ಮಜ್ಜಿಗೆ ಸೇವಿಸಿದ ನೂರಾರು ಗ್ರಾಮಸ್ಥರು ಆಸ್ಪತ್ರೆಗೆ ದೌಡು..!

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಚ್ಚು ನಾಯಿ ಕಚ್ಚಿ ಎಮ್ಮೆ ಮತ್ತು ಅದರ ಕರು ಮೃತಪಟ್ಟ ಸುದ್ದಿತಿಳಿದ ನಂತರ ನೂರಾರು ಗ್ರಾಮಸ್ಥರು ಭಯಭೀತರಾಗಿ ರೇಬಿಸ್ ಚುಚ್ಚುಮದ್ದು ಪಡೆಯಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಅಷ್ಟೊಂದು ಸಂಖ್ಯೆ ನೋಡಿ ವೈದ್ಯರೇ ಗಾಬರಿಯಾಗಿದ್ದಾರೆ. ಯಾಕೆಂದರೆ ಊರಿನಲ್ಲಿ ನಡೆದ ಔತಣಕೂಟವೊಂದಕ್ಕೆ ಈ ಎಮ್ಮೆಯ ಹಾಲಿನಿಂದ ತಯಾರಿಸಿದ ಮಜ್ಜಿಗೆಯನ್ನು ಬಳಸಲಾಗಿದೆ. ಅದರಲ್ಲಿ ಇಡೀ … Continued

ಅಮರನಾಥ ಯಾತ್ರೆ ಜೂನ್ 30 ರಂದು ಆರಂಭ, 43 ದಿನಗಳ ನಂತರ ಮುಕ್ತಾಯ

ಶ್ರೀನಗರ: ವಾರ್ಷಿಕ ಅಮರನಾಥ ಯಾತ್ರೆಗೆ ದಿನಾಂಕ ನಿಗದಿಯಾಗಿದೆ. ಈ ವರ್ಷ ಜೂನ್ 30 ರಿಂದ 43 ದಿನಗಳ ಕಾಲ ಅಮರನಾಥ ಯಾತ್ರೆಗೆ ದಿನಾಂಕ ನಿಗದಿ ಮಾಡಲಾಗಿದೆ. ಈ ಕುರಿತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಚೇರಿ ಅಧಿಕೃತವಾಗಿ ಟ್ವೀಟ್‌ ಮೂಲಕ ಮಾಹಿತಿ ನೀಡಿದೆ. ಅಮರನಾಥ ತೀರ್ಥಕ್ಷೇತ್ರ ಮಂಡಳಿಯ ಸಭೆ ನಡೆಸಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ … Continued

ವಂಚಕಿಯ ಮದುವೆಯಾಟ: ಕೊನೆಗೂ ಪೊಲೀಸರ ಬಲೆಗೆ ಬಿದ್ದ 7 ಜನರ ಮದುವೆಯಾಗಿ ವಂಚಿಸಿದ ಮಹಿಳೆ-ಗ್ಯಾಂಗ್

ಪಾಣಿಪತ್(ಹರಿಯಾಣ): ಮದುವೆಯಾಗುವುದಾಗಿ ಯುವಕರಿಗೆ ವಂಚಿಸುತ್ತಿದ್ದ ಗ್ಯಾಂಗ್‌ ಪೊಲೀಸ್ ಬಲೆಗೆ ಬಿದ್ದಿದ್ದು, ಈ ಗ್ಯಾಂಗ್‌ನಲ್ಲಿ ವಧುವಿನ ಪಾತ್ರ ಮಾಡುತ್ತಿದ್ದ ಯುವತಿಯನ್ನು ಹರಿಯಾಣ ಪೊಲೀಸರು ಪಾಣಿಪತ್‌ನಲ್ಲಿ ಬಂಧಿಸಿದ್ದಾರೆ. ಈಕೆ ಒಟ್ಟು ಏಳು ಮಂದಿಯನ್ನು ವಿವಾಹವಾಗಿ ನಂತರ ವಂಚಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ವಂಚನೆಗೊಳಗಾದ ವ್ಯಕ್ತಿ ಈ ಗ್ಯಾಂಗ್‌ನಿಂದ ಮೋಸಕ್ಕೊಳಗಾದ ಏಳನೇ ವ್ಯಕ್ತಿ ಎಂದು ತಿಳಿದು ಬಂದಿದೆ. ಈ … Continued

ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಯ ಪರೀಕ್ಷಿಸಿದ ಭಾರತ

ನವದೆಹಲಿ: ಒಡಿಶಾದ ಬಾಲಸೋರ್ ಕರಾವಳಿಯಲ್ಲಿ ಭಾರತೀಯ ಸೇನೆಯು ಮಧ್ಯಮ ಶ್ರೇಣಿಯ  ನೆಲದಿಂದ ಮೇಲ್ಮೈ  ವಾಯು ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯ ಪರೀಕ್ಷಾರ್ಥ ಉಡಾವಣೆಯನ್ನು ಭಾನುವಾರ ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಾಹಿತಿ ನೀಡಿದೆ. “MRSAM-ಆರ್ಮಿ ಕ್ಷಿಪಣಿ ವ್ಯವಸ್ಥೆಯ ಹಾರಾಟವನ್ನು ಐಟಿಆರ್‌ (ITR) ಬಾಲಸೋರ್, ಒಡಿಶಾದಿಂದ ಸುಮಾರು 10:30 ಗಂಟೆಗೆ … Continued

ಭಾರತದಲ್ಲಿ ಜಿಹಾದ್ ನಡೆಸುವುದಾಗಿ ಪ್ರತಿಜ್ಞೆ- ಭಾರತದಿಂದ ಹೊಸದಾಗಿ ಸೇರ್ಪಡೆಗೊಂಡವರ ವೀಡಿಯೊ ಬಿಡುಗಡೆ ಮಾಡಿದ ಐಎಸ್

ನವದೆಹಲಿ: ಇಸ್ಲಾಮಿಕ್ ಸ್ಟೇಟ್ (IS) ಇತ್ತೀಚಿನ ವೀಡಿಯೊದಲ್ಲಿ ಅವರು ಭಾರತದಲ್ಲಿ ಕನಿಷ್ಠ ಮೂರು ಮಾಡ್ಯೂಲ್‌ಗಳನ್ನು ಸಿದ್ಧಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ವೀಡಿಯೊದಲ್ಲಿ, ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರು 3 ವಿವಿಧ ಗುಂಪುಗಳಲ್ಲಿ ಸದಸ್ಯತ್ವವನ್ನು ತೆಗೆದುಕೊಳ್ಳುತ್ತಿದ್ದಾರೆ. 4 ನಿಮಿಷಗಳ ಅವಧಿಯ ವೀಡಿಯೊವನ್ನು ISHP (ಇಸ್ಲಾಮಿಕ್ ಸ್ಟೇಟ್ ಹಿಂದ್ ಪ್ರಾಂತ್ಯ) ಬಿಡುಗಡೆ ಮಾಡಿದೆ. ಮಾರ್ಚ್ 25 ರಂದು ಮಧ್ಯಾಹ್ನ 1 ಗಂಟೆಗೆ ಎನ್‌ಕ್ರಿಪ್ಟೆಡ್ … Continued