ನದಿಯ ದಂಡೆಯ ಮೇಲೆ ಬರೋಬ್ಬರಿ 20 ಸಿಂಹಗಳು ಒಟ್ಟಿಗೆ ಕುಳಿತು ನೀರು ಕುಡಿಯುತ್ತಿರುವ ಅಪರೂಪದ ದೃಶ್ಯ ಸೆರೆ | ವೀಕ್ಷಿಸಿ

ವನ್ಯಜೀವಿಗಳಲ್ಲಿ ಈ ನಾಗರೀಕತೆಗೆ ಅರಿವಿಲ್ಲದ ಸಾಕಷ್ಟು ವಿಚಿತ್ರ ಸಂಗತಿಗಳಿವೆ. ಕೆಲವೊಮ್ಮೆ ದಟ್ಟವಾದ ಕಾಡುಗಳು ನಮ್ಮಲ್ಲಿ ಹೆಚ್ಚಿನವರು ಊಹಿಸಲು ಸಾಧ್ಯವಾಗದ ಪ್ರಕೃತಿಯ ಅನೇಕ ಸಂಗತಿಗಳನ್ನು ಬಹಿರಂಗಪಡಿಸುತ್ತವೆ. ದಕ್ಷಿಣ ಆಫ್ರಿಕಾದ ಮಾಲಾಮಾಲಾ ಮೀಸಲು ಪ್ರದೇಶದಲ್ಲಿ, ಇತ್ತೀಚೆಗೆ ಮರಳು ತುಂಬಿದ ನದಿಯಲ್ಲಿನ ಪುಟ್ಟ ಬುಗ್ಗೆಯಿಂದ 20 ಸಿಂಹಗಳು ಒಟ್ಟಿಗೆ ಸೇರಿಕೊಂಡು ನೀರು ಕುಡಿಯುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ. ಈ ದೃಶ್ಯದ … Continued

ಎಲೋನ್ ಮಸ್ಕ್ ಟ್ವಟರಿನಲ್ಲಿ ವೀಕ್ಷಣೆ ಮಿತಿ ಘೋಷಿಸಿದ ಕೆಲ ದಿನಗಳ ನಂತರ ಟ್ವಿಟರ್ ತರಹದ್ದೇ ಅಪ್ಲಿಕೇಶನ್ ʼಥ್ರೆಡ್‌ʼ ಬಿಡುಗಡೆಗೆ ಸಜ್ಜಾದ ಮೆಟಾ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಫೇಸ್‌ಬುಕ್‌ ಮೂಲ ಕಂಪನಿಯಾದ ಮೆಟಾ ಪ್ಲಾಟ್‌ಫಾರ್ಮ್ಸ್ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ಥ್ರೆಡ್‌ಗಳನ್ನು ಪ್ರಾರಂಭಿಸುತ್ತಿದೆ. ಆ್ಯಪ್ ಮುಂಬರುವ ಗುರುವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. ಎಲೋನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ಸೈಟ್‌ನಲ್ಲಿ ಬಳಕೆದಾರರು ವೀಕ್ಷಿಸಬಹುದಾದ ಪೋಸ್ಟ್‌ಗಳ ಸಂಖ್ಯೆಯ ಮೇಲೆ ತಾತ್ಕಾಲಿಕ ಮಿತಿಯನ್ನು ಘೋಷಿಸಿದ ಕೆಲವೇ ದಿನಗಳ ನಂತರ ಈ ಮಾಹಿತಿ ಹೊರಬಿದ್ದಿದೆ. ಮೆಟಾ (Meta) … Continued

ಟ್ವಿಟರ್ ಬಳಕೆದಾರರು ಪ್ರತಿದಿನ ಓದಬಹುದಾದ ಪೋಸ್ಟ್‌ಗಳ ಸಂಖ್ಯೆ ಮಿತಿಗೊಳಿಸಿದ ಎಲೋನ್ ಮಸ್ಕ್

ನವದೆಹಲಿ: ಸಾವಿರಾರು ಬಳಕೆದಾರರು ವೆಬ್‌ಸೈಟ್‌ಗೆ ಪ್ರವೇಶಿಸಲು ಸಮಸ್ಯೆಗಳನ್ನು ವರದಿ ಮಾಡಿದ ನಂತರ ಜನರು ಒಂದು ದಿನದಲ್ಲಿ ಓದಬಹುದಾದ ಟ್ವೀಟ್‌ಗಳ ಸಂಖ್ಯೆಯನ್ನು ಟ್ವಿಟರ್ ತಾತ್ಕಾಲಿಕವಾಗಿ ಮಿತಿಗೊಳಿಸುತ್ತಿದೆ ಎಂದು ಎಲೋನ್ ಮಸ್ಕ್ ಘೋಷಿಸಿದ್ದಾರೆ. ಫೀಡ್‌ಗಳನ್ನು ವೀಕ್ಷಿಸಲು ಪ್ರಯತ್ನಿಸುತ್ತಿರುವ ಬಳಕೆದಾರರಿಗೆ “ಏನೋ ತಪ್ಪಾಗಿದೆ. ಮರುಲೋಡ್ ಮಾಡಲು ಪ್ರಯತ್ನಿಸಿ ಎಂಬ ಸಂದೇಶ ಕಾಣಿಸಿದೆ. ಇತರರು ಪ್ಲಾಟ್‌ಫಾರ್ಮ್‌ನಲ್ಲಿ ವಿಷಯವನ್ನು ಪ್ರವೇಶಿಸುವಲ್ಲಿ ಸಂಬಂಧಿಸಿದ ಸಮಸ್ಯೆಗಳನ್ನು … Continued

ಅಪರೂಪದ ದಾಖಲೆ..: T20 ಕ್ರಿಕೆಟ್‌ ಪಂದ್ಯದಲ್ಲಿ ಮೊದಲ ಓವರ್‌ನಲ್ಲೇ 4 ವಿಕೆಟ್‌ ಪಡೆದು ನೂತನ ದಾಖಲೆ ಸ್ಥಾಪಿಸಿದ ವೇಗಿ ಶಾಹೀನ್ ಅಫ್ರಿದಿ | ವೀಕ್ಷಿಸಿ

ಶುಕ್ರವಾರದ ಟಿ20 ಬ್ಲಾಸ್ಟ್‌ನಲ್ಲಿ ನಾಟಿಂಗ್‌ ಹ್ಯಾಮ್‌ಶೈರ್‌ ಪರವಾಗಿ ಆಡುತ್ತಿರುವ ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲ ದಾಖಲೆ ಬರೆದಿದ್ದಾರೆ. ಈ ಮೂಲಕ T20 ಪಂದ್ಯದ ಆರಂಭಿಕ ಓವರ್‌ನಲ್ಲಿ ಅತಿ ಹೆಚ್ಚು ಜನರನ್ನು ಔಟ್‌ ಮಅಡಿದ ದಾಖಲೆಯನ್ನು ಸ್ಥಾಪಿಸಿದ್ದಾರೆ. ಈ ವರ್ಷದ ಬ್ಲಾಸ್ಟ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ ಪರವಾಗಿ ಆಡುತ್ತಿರುವ ಶಾಹೀನ್‌ … Continued

ದೂರವಾಣಿಯಲ್ಲಿ ಉಕ್ರೇನ್ ಪರಿಸ್ಥಿತಿ, ರಷ್ಯಾ ಸಶಸ್ತ್ರ ದಂಗೆ ಬೆದರಿಕೆ ಬಗ್ಗೆ ಚರ್ಚಿಸಿದ ಪ್ರಧಾನಿ ಮೋದಿ-ವ್ಲಾದಿಮಿರ್ ಪುತಿನ್

ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಉಕ್ರೇನ್ ಪರಿಸ್ಥಿತಿ ಮತ್ತು ಮಾಸ್ಕೋ ಶಸ್ತ್ರಸಜ್ಜಿತ ದಂಗೆ ತಣ್ಣಗಾದ ನಂತರ ಅದರ ಸುತ್ತಮುತ್ತಲಿನ ವಿದ್ಯಮಾನದ ಬಗ್ಗೆ ಶುಕ್ರವಾರ ದೂರವಾಣಿ ಕರೆಯಲ್ಲಿ ಚರ್ಚಿಸಿದ್ದಾರೆ. ಕಳೆದ ಶನಿವಾರ ವ್ಯಾಗ್ನರ್ ಗುಂಪಿನ ದಂಗೆಯನ್ನು ನಿಭಾಯಿಸುವಲ್ಲಿ ರಷ್ಯಾದ ನಾಯಕತ್ವದ ನಿರ್ಣಾಯಕ ಕ್ರಮಗಳಿಗೆ ಪ್ರಧಾನಿ ಮೋದಿ ಬೆಂಬಲ ವ್ಯಕ್ತಪಡಿಸಿದ್ದಾರೆ … Continued

ಇನ್ಮುಂದೆ ದೀಪಾವಳಿ ಹಬ್ಬಕ್ಕೆ ಅಮೆರಿಕದ ನ್ಯೂಯಾರ್ಕ್ ನಗರದ ಶಾಲೆಗಳಿಗೆ ರಜೆ

ನವದೆಹಲಿ: ನ್ಯೂಯಾರ್ಕ್ ನಗರದಲ್ಲಿ ಭಾರತೀಯ ಸಮುದಾಯಕ್ಕೆ ಅತ್ಯಂತ ಸಂಭ್ರಮದ ವಿಷಯವಾಗಿ, ಈ ವರ್ಷದಿಂದ ರಜೆಯ ಕ್ಯಾಲೆಂಡರ್‌ನಲ್ಲಿ ದೀಪಾವಳಿಯನ್ನು ಶಾಲಾ ರಜೆ ಎಂದು ಸೇರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ದೀಪಗಳ ಹಬ್ಬವು ಈಗ ನ್ಯೂಯಾರ್ಕ್‌ನಲ್ಲಿ ಶಾಲಾ ರಜಾ ದಿನವಾಗಿದೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ. ಸ್ಟೇಟ್ ಅಸೆಂಬ್ಲಿ ಮತ್ತು ಸ್ಟೇಟ್ ಸೆನೆಟ್ ದೀಪಾವಳಿಯನ್ನು ಸಾರ್ವಜನಿಕ ಶಾಲಾ ರಜೆಯನ್ನಾಗಿ ಮಾಡುವ ಮಸೂದೆಯನ್ನು … Continued

ಹೊಸ ಮೈಲಿಗಲ್ಲು ; ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಮೂತ್ರ, ಬೆವರಿನಿಂದ 98%ರಷ್ಟು ಕುಡಿಯುವ ನೀರು ಉತ್ಪಾದಿಸಿದ ನಾಸಾ | ವೀಡಿಯೊ

ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಗಗನಯಾತ್ರಿಗಳು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಬಾಹ್ಯಾಕಾಶದಲ್ಲಿ ನಾಸಾ ಗಗನಯಾತ್ರಿಗಳು ಮೂತ್ರ ಮತ್ತು ಬೆವರಿನಿಂದ ಶೇಕಡಾ 98 ರಷ್ಟು ಕುಡಿಯುವ ನೀರು ಮರುಉತ್ಪಾದಿಸುವ ಗುರಿ ಸಾಧಿಸಿದ್ದಾರೆ. ಇದು ಬಾಹ್ಯಾಕಾಶದಲ್ಲಿ ನೀರಿನ ಕೊರತೆ ನೀಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ನಾಸಾ ಆಹಾರ, ಗಾಳಿ ಮತ್ತು ನೀರಿನಂತಹ ಉಪಭೋಗ್ಯ ವಸ್ತುಗಳನ್ನು ಪುನರುತ್ಪಾದಿಸುವ ಅಥವಾ … Continued

ಯೂಟ್ಯೂಬ್ ಹೊಸ ಟೂಲ್ಸ್‌…: ಶೀಘ್ರವೇ ಇತರ ಭಾಷೆಗಳಲ್ಲಿ ವೀಡಿಯೊಗಳನ್ನು ಉಚಿತವಾಗಿ ʼಡಬ್ʼ ಮಾಡುವ ಸೌಲಭ್ಯ…!

ಇತರ ಭಾಷೆಗಳಲ್ಲಿ ವೀಡಿಯೊಗಳನ್ನು ಡಬ್ ಮಾಡಲು ರಚನೆಕಾರರಿಗೆ ಅನುಮತಿಸುವ ಮೂಲಕ ಅನುವಾದಿಸಿದ ಸಬ್‌ ಟೈಟಲ್‌ ಮೀರಿ ಹೋಗಲು YouTube ಯೋಜಿಸಿದೆ. ವಿಡ್‌ಕಾನ್‌ನಲ್ಲಿ, ಗೂಗಲ್‌ನ ಏರಿಯಾ 120 ಇನ್ಕ್ಯುಬೇಟರ್‌ನಲ್ಲಿ ಅಭಿವೃದ್ಧಿಪಡಿಸಲಾದ ಅಲೌಡ್ ಎಂಬ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಚಾಲಿತ (AI-powered) ಡಬ್ಬಿಂಗ್ ಸೇವೆಯನ್ನು ಪರೀಕ್ಷಿಸುತ್ತಿದೆ ಎಂದು ಕಂಪನಿಯು ಶನಿವಾರ ಘೋಷಿಸಿದೆ ಎಂದು ದಿ ವರ್ಜ್ ವರದಿ ಮಾಡಿದೆ. ಈ … Continued

ಪ್ರಧಾನಿ ಮೋದಿಗೆ ಈಜಿಪ್ಟ್‌ನ ಅತ್ಯುನ್ನತ ಗೌರವ ʼಆರ್ಡರ್ ಆಫ್ ದಿ ನೈಲ್ʼ ಪ್ರದಾನ

ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಈಜಿಪ್ಟ್‌ನ ಅತ್ಯುನ್ನತ ಸರ್ಕಾರಿ ಗೌರವವಾದ ‘ದಿ ಆರ್ಡರ್ ಆಫ್ ದಿ ನೈಲ್’ ಪುರಸ್ಕಾರ ಪ್ರದಾನ ಮಾಡಲಾಯಿತು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಕೈರೋದಲ್ಲಿ ಪ್ರಧಾನಿ ಮೋದಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಳೆದ ಒಂಬತ್ತು ವರ್ಷಗಳಲ್ಲಿ ವಿಶ್ವದ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡುತ್ತಿರುವ … Continued

ಪಾಕಿಸ್ತಾನದಲ್ಲಿ ಗುಂಡು ಹಾರಿಸಿ ಸಿಖ್ ವ್ಯಾಪಾರಿ ಹತ್ಯೆ ಮಾಡಿದ ಬೈಕಿನಲ್ಲಿ ಬಂದ ಅಪರಿಚಿತರು : ವರದಿ

ಪೇಶಾವರ: ಪೇಶಾವರದ ಕಕ್ಷಾಲ್ ಪ್ರದೇಶದಲ್ಲಿ ಮನಮೋಹನ್ ಸಿಂಗ್ ಎಂದು ಗುರುತಿಸಲಾದ ಸಿಖ್ ವ್ಯಾಪಾರಿಯನ್ನು ಅಪರಿಚಿತ ಮೋಟಾರು ಸೈಕಲ್ ಸವಾರರು ಶನಿವಾರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಾಕಿಸ್ತಾನ ಮೂಲದ ಇಂಗ್ಲಿಷ್ ಪತ್ರಿಕೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಅಬ್ದುಲ್ ಸಲಾಮ್ ಖಾಲಿದ್ ಪ್ರಕಾರ, ಈ ಘಟನೆಯು ಶನಿವಾರ ರಾತ್ರಿ 8 ಗಂಟೆಗೆ … Continued