ದೀಪಾವಳಿಯಂದು ಬ್ರಿಟನ್‌ ಪ್ರಧಾನಿ ಸ್ಪರ್ಧೆಯಲ್ಲಿ ಗೆದ್ದ ರಿಷಿ ಸುನಕ್ ಹೆಮ್ಮೆಯ ಹಿಂದೂ, ರಾಜಕೀಯವಾಗಿ ಸಂಪ್ರದಾಯವಾದಿ: ಹಿಂದಿ, ಪಂಜಾಬಿ ಭಾಷೆ ಚೆನ್ನಾಗಿ ಗೊತ್ತು

ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಅವರು ತಾವು ಹಿಂದೂ ಧರ್ಮದ ಅನುಯಾಯಿ ಎಂಬುದನ್ನು ಪ್ರದರ್ಶಿಸುವುದಕ್ಕೆ ಹಿಂದೆ ಸರಿಯುವುದಿಲ್ಲ. ಪೆನ್ನಿ ಮೊರ್ಡಾಂಟ್ ರೇಸ್‌ನಿಂದ ಹೊರಗುಳಿಯುತ್ತಿದ್ದಂತೆ ಈಗ ಅವರು ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಲಿದ್ದಾರೆ. ಆಗಸ್ಟ್‌ನಲ್ಲಿ ಬ್ರಿಟನ್‌ನ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ರಿಷಿ ಸುನಕ್ ಲಂಡನ್‌ನಲ್ಲಿ ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಗೋ ಪೂಜೆ … Continued

ವಿನಮ್ರತೆಯಿಂದ ಸೇವೆ ಮಾಡುವೆ: ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಮೊದಲ ಮಾತು; ಆರ್ಥಿಕ ಬಿಕ್ಕಟ್ಟಿನ ನಡುವೆ ಸ್ಥಿರತೆ ತರಲು ಪ್ರತಿಜ್ಞೆ

ಲಂಡನ್‌: ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿಯಾಗಲಿರುವ ಭಾರತೀಯ ಮೂಲದ ರಿಷಿ ಸುನಕ್ ಅವರು ಸೋಮವಾರ ತೀವ್ರವಾದ ಆರ್ಥಿಕ ಸವಾಲಿನ ಬಗ್ಗೆ ಎಚ್ಚರಿಸಿದ್ದಾರೆ ಮತ್ತು ಯುನೈಟೆಡ್ ಕಿಂಗ್‌ಡಂಗೆ ಸ್ಥಿರತೆ ಮತ್ತು ಏಕತೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ತಮ್ಮ ಮೊದಲ ಭಾಷಣದಲ್ಲಿ, ಮಾಜಿ ಹಣಕಾಸು ಸಚಿವ ರಿಷಿ ಸುನಕ್‌ ಅವರು, ಪಕ್ಷ … Continued

ಭಾರತ ಮೂಲದ ವಿಶ್ವ ನಾಯಕರ ಪಟ್ಟಿಗೆ ಸೇರಿದ ರಿಷಿ ಸುನಕ್: ಇತರರು ಯಾರು..? ಇಲ್ಲಿದೆ ಮಾಹಿತಿ

ನವದೆಹಲಿ: 42 ವರ್ಷದ ರಿಷಿ ಸುನಕ್ ಅವರು ಸೋಮವಾರ ಬ್ರಿಟಿಷ್ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ, ಪ್ರಪಂಚದಾದ್ಯಂತದ ಹಿಂದೂಗಳು ದೀಪಾವಳಿಯನ್ನು ಆಚರಿಸುತ್ತಿದ್ದಾರೆ. 42 ನೇ ವಯಸ್ಸಿನಲ್ಲಿ, ಅವರು 200 ವರ್ಷಗಳ ಕಾಲ ಭಾರವನ್ನಾಳಿದ ದೇಶದ ಪ್ರಧಾನಿಯಾಗಲಿದ್ದಾರೆ. ರಿಷಿ ಸುನಕ್‌ ಹೊರತು ಪಡಿಸಿಪ್ರ ಭಾರತೀಯ ಮೂಲದ ಇತರ ವಿಶ್ವ ನಾಯಕರ ಪಟ್ಟಿ ಇಲ್ಲಿದೆ.. ಕಮಲಾ ಹ್ಯಾರಿಸ್ … Continued

ಇನ್ಫಿ ನಾರಾಯಣಮೂರ್ತಿ ಅಳಿಯ, ಭಾರತದ ಮೂಲದ ರಿಷಿ ಸುನಕ್ ಬ್ರಿಟನ್‌ನ ನೂತನ ಪ್ರಧಾನಿ…! ‍

ಲಂಡನ್‌: ಭಾರತೀಯ ಮೂಲದ ರಿಷಿ ಸುನಕ್ ಅವರು ಬ್ರಿಟನ್‌ ಮುಂದಿನ ಪ್ರಧಾನ ಮಂತ್ರಿಯಾಗಿದ್ದಾರೆ….! ಲಿಜ್ ಟ್ರಸ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದ ದಿನಗಳ ನಂತರ ಆರ್ಥಿಕವಾಗಿ ತತ್ತರಿಸುತ್ತಿರುವ ರಾಷ್ಟ್ರವನ್ನು ಮುನ್ನಡೆಸುವ ಕಾರ್ಯವನ್ನು ರಿಷಿ ಸುನಕ್‌ ಅವರಿಗೆ ವಹಿಸಲಾಗಿದೆ. ಕೇವಲ 42ನೇ ವಯಸ್ಸಿನಲ್ಲಿ, ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಲಿರುವ ಅತ್ಯಂತ ಕಿರಿಯ ಮತ್ತು … Continued

ಇಮ್ರಾನ್ ಖಾನ್‌ಗೆ ದೊಡ್ಡ ಹಿನ್ನಡೆ: ಪಾಕಿಸ್ತಾನ ಚುನಾವಣಾ ಆಯೋಗದ ಅನರ್ಹತೆ ಅಮಾನತುಗೊಳಿಸಬೇಕೆಂಬ ಮನವಿ ತಿರಸ್ಕರಿಸಿದ ಇಸ್ಲಾಮಾಬಾದ್ ಹೈಕೋರ್ಟ್

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ದೊಡ್ಡ ಹಿನ್ನಡೆಯಾಗಿ, ತೋಶಖಾನಾ ಪ್ರಕರಣದಲ್ಲಿ ತನ್ನ ಅನರ್ಹಗೊಳಿಸಿರುವ ಪಾಕಿಸ್ತಾನದ ಚುನಾವಣಾ ಆಯೋಗದ (ಇಸಿಪಿ) ನಿರ್ಧಾರವನ್ನು ಅಮಾನತುಗೊಳಿಸಬೇಕು ಎಂಬ ಅವರ ಮನವಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ಸೋಮವಾರ ತಿರಸ್ಕರಿಸಿದೆ ಎಂದು ಒಸ್ಲಾಮಾಬಾದ್‌ನ ಎಆರ್‌ವೈ ನ್ಯೂಸ್ ವರದಿ ಮಾಡಿದೆ. ಪಾಕಿಸ್ತಾನದ ಪಾಕಿಸ್ತಾನದ ಚುನಾವಣಾ ಆಯೋಗವು ತೋಶಖಾನಾ ಪ್ರಕರಣದ ಉಲ್ಲೇಖದಲ್ಲಿ ಇಮ್ರಾನ್‌ … Continued

4,000 ಉದ್ಯೋಗಿಗಳನ್ನು ವಜಾಗೊಳಿಸಿದ ಫಿಲಿಪ್ಸ್‌

ನವದೆಹಲಿ: ಕಂಪನಿಯು ಎದುರಿಸುತ್ತಿರುವ ಬಹು ಸವಾಲುಗಳನ್ನು ಎದುರಿಸಲು ಟೆಕ್ ಕಂಪನಿ ಫಿಲಿಪ್ಸ್ ಸೋಮವಾರ 4,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಉದ್ಯೋಗ ಕಡಿತವು ಕಂಪನಿಯ ಉದ್ಯೋಗಿಗಳ ಶೇಕಡಾ ಐದಕ್ಕಿಂತ ಹೆಚ್ಚು ಪ್ರತಿನಿಧಿಸುತ್ತದೆ. ಕಂಪನಿಯು ತನ್ನ ತ್ರೈಮಾಸಿಕ ಗಳಿಕೆಯ ನಂತರ ಈ ನಿರ್ಧಾರ ಪ್ರಕಟಿಸಿದೆ. ಮೂರನೇ ತ್ರೈಮಾಸಿಕದಲ್ಲಿ ಫಿಲಿಪ್ಸ್‌ ಗ್ರೂಪ್‌ 4.3 ಬಿಲಿಯನ್ ಯೂರೋ ಮಾರಾಟ ಸಾಧಿಸಿದ್ದು, ಆದಾಯ … Continued

ಚಾಕು ಇರಿತದ ಪ್ರಕರಣ: ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಸಲ್ಮಾನ್‌ ರಶ್ದಿ, ಒಂದು ಕೈ ನಿಷ್ಕ್ರಿಯ

ಆಗಸ್ಟ್‌ನಲ್ಲಿ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ನಡೆದ ಸಾಹಿತ್ಯಿಕ ಸಮಾರಂಭದಲ್ಲಿ ವೇದಿಕೆಯ ಮೇಲೆ ಸ್ಲಮಾನ್‌ ರಶ್ದಿ ಮೇಲೆ ನಡೆದ ದಾಳಿಯ ನಂತರ ರಶ್ದಿ ಅವರ ಒಂದು ಕಣ್ಣಿನ ಮತ್ತು ಒಂದು ಕೈಯ ಬಳಸುವುದು ಕಷ್ಟಸಾಧ್ಯವಾಗಿದೆ ಎಂದು ಅವರ ಏಜೆಂಟ್ ಹೇಳಿದ್ದಾರೆ. ಸಾಲ್ ಬೆಲ್ಲೊ ಮತ್ತು ರಾಬರ್ಟೊ ಬೊಲಾನೊ ಅವರಂತಹ ಸಾಹಿತ್ಯಿಕ ದಿಗ್ಗಜರನ್ನು ಪ್ರತಿನಿಧಿಸುವ ಆಂಡ್ರ್ಯೂ ವೈಲಿ ಅವರು ಸ್ಪ್ಯಾನಿಷ್ … Continued

ಪಾಕಿಸ್ತಾನ ಸೇನೆಯು ಭಯೋತ್ಪಾದನೆ ಹರಡುತ್ತಿದೆ: ಲಾಹೋರ್ ಸಮ್ಮೇಳನದಲ್ಲಿ ಪಶ್ತೂನ್ ನಾಯಕರು, ವಕೀಲರ ಆರೋಪ

ಲಾಹೋರ್: ಅಕ್ಟೋಬರ್ 22-23 ರಂದು ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನದಲ್ಲಿ ವಾರ್ಷಿಕ ಅಸ್ಮಾ ಜಹಾಂಗೀರ್ ಸಮ್ಮೇಳನದಲ್ಲಿ ಕೆಲವು ರಾಜಕಾರಣಿಗಳು ಮತ್ತು ವಕೀಲರು ಪಾಕಿಸ್ತಾನದ ಸೇನೆಯನ್ನು ಟೀಕಿಸಿದರು, ಜನರಲ್‌ಗಳು ವಿಶ್ವದಾದ್ಯಂತ ಭಯೋತ್ಪಾದನೆಯನ್ನು ಹರಡಲು ಶತಕೋಟಿ ಡಾಲರ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಅಕ್ಟೋಬರ್ 23 ರಂದು ಸಮ್ಮೇಳನದ ಮುಕ್ತಾಯದ ದಿನದಂದು, ಪಶ್ತೂನ್ ತಹಾಫುಜ್ ಮೂವ್ಮೆಂಟ್ (PTM) ಅಧ್ಯಕ್ಷ ಮಂಜೂರ್ ಪಶ್ತೀನ್ … Continued

140 ಸಂಸದರ ಬೆಂಬಲ ಪಡೆದ ರಿಷಿ ಸುನಕ್ ಸೋಮವಾರದ ವೇಳೆಗೆ ಬ್ರಿಟನ್‌ ಪ್ರಧಾನಿಯಾಗಲೂಬಹುದು…

ಲಂಡನ್: ಬ್ರಿಟನ್‌ನ ಮಾಜಿ ವಿತ್ತ ಸಚಿವ ರಿಷಿ ಸುನಕ್ ಅವರ ಎದುರಾಳಿಗಳಾದ ಬೋರಿಸ್ ಜಾನ್ಸನ್ ಮತ್ತು ಪೆನ್ನಿ ಮೊರ್ಡಾಂಟ್ ಸೋಮವಾರದೊಳಗೆ 100 ಸಂಸದರ ಬೆಂಬಲವನ್ನು ಗೆಲ್ಲಲು ವಿಫಲವಾದರೆ ಸುನಕ್‌ ಅವರು ದೇಶದ ಮುಂದಿನ ಪ್ರಧಾನಿಯಾಗಬಹುದು. ಸುನಕ್ ಈಗಾಗಲೇ ಸಂಸತ್ತಿನ 142 ಸದಸ್ಯರ ಬೆಂಬಲವನ್ನು ಹೊಂದಿದ್ದಾರೆ. ಇಂಗ್ಲೆಂಡ್​ ಪ್ರಧಾನಿ ಹುದ್ದೆ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಪ್ರಧಾನಿ ಬೋರಿಸ್ … Continued

ಬ್ರಿಟನ್ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದನ್ನು ದೃಢಪಡಿಸಿದ ಭಾರತೀಯ ಮೂಲದ ರಿಷಿ ಸುನಕ್: ಅವರಿಗೆ 128 ಸಂಸದರ ಬೆಂಬಲ

ಲಂಡನ್‌: ಮುಂದಿನ ಪ್ರಧಾನಿಯಾಗುವ ನೆಚ್ಚಿನವರಲ್ಲಿ ಒಬ್ಬರಾದ ಯುನೈಟೆಡ್ ಕಿಂಗ್‌ಡಂನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಮುಂದಿನ ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಪ್ರಧಾನಿಯಾಗಲು ಸ್ಪರ್ಧಿಸುತ್ತಿರುವುದಾಗಿ ಇಂದು, ಭಾನುವಾರ ಔಪಚಾರಿಕವಾಗಿ ಘೋಷಿಸಿದ್ದಾರೆ. ಅವರು ಈಗಾಗಲೇ 100ಕ್ಕೂ ಹೆಚ್ಚು ಸಂಸದರ ಬೆಂಬಲವನ್ನು ಹೊಂದಿದ್ದಾರೆ. ಉನ್ನತ ಹುದ್ದೆಗೆ ಕನಿಷ್ಠ 100 ಸಂಸದರ ಬೆಂಬಲದ ಅವಶ್ಯಕತೆ ಇದೆ. ನಮ್ಮ … Continued