ಬೆಲಾರಸ್‌ನಲ್ಲಿ ರಷ್ಯಾದೊಂದಿಗೆ ಶಾಂತಿ ಮಾತುಕತೆ ಪ್ರಸ್ತಾಪಕ್ಕೆ ಉಕ್ರೇನ್‌ ಅಧ್ಯಕ್ಷರಿಂದ ತಿರಸ್ಕಾರ, ಮುಕ್ತ ಸ್ಥಳದಲ್ಲಿ ಮಾತ್ರ ಮಾತುಕತೆಗೆ ಸಿದ್ಧ ಎಂದು ಝೆಲೆನ್ಸ್ಕಿ

ಕೈವ್‌: ರಷ್ಯಾವು ಬೆಲಾರಸ್‌ಗೆ ನಿಯೋಗ ಕಳುಹಿಸಿ ಗೋಮೆಲ್ ನಗರದಲ್ಲಿ ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಹೇಳಿದ ನಂತರ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾಸ್ಕೋದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಬೆಲಾರಸ್‌ನಿಂದ ಉಕ್ರೇನ್ ಮೇಲೆ ರಷ್ಯಾ ತನ್ನ ಕೆಲವು ದಾಳಿಗಳನ್ನು ನಡೆಸುತ್ತಿದೆ ಮತ್ತು ತನ್ನ ದೇಶದ ಕಡೆಗೆ ದಾಳಿ ಮಾಡದ ಸ್ಥಳಗಳಲ್ಲಿ ಮಾತ್ರ ಮಾತುಕತೆಗೆ ಸಿದ್ಧವಾಗಿದೆ ಎಂದು … Continued

ರಷ್ಯಾ ಕ್ಷಿಪಣಿ ದಾಳಿಯಿಂದ ಉಕ್ರೇನ್‌ನ ತೈಲ ಟರ್ಮಿನಲ್‌-ಕೈವ್ ಬಳಿ ಗ್ಯಾಸ್ ಪೈಪ್‌ಲೈನಿನಲ್ಲಿ ಬೆಂಕಿ.. ದೃಶ್ಯ ವಿಡಿಯೊದಲ್ಲಿ ಸೆರೆ

ಮೂರು ದಿನಗಳ ಹೋರಾಟದ ನಂತರವೂ, ಉಕ್ರೇನಿಯನ್ ಪಡೆಗಳು ರಾಜಧಾನಿಯಲ್ಲಿ ದೊಡ್ಡ ಮತ್ತು ಹೆಚ್ಚು ಶಕ್ತಿಶಾಲಿ ರಷ್ಯಾದ ಮಿಲಿಟರಿಯ ಮುನ್ನಡೆಗೆ ತೀವ್ರ ಪ್ರತಿರೋಧ ನೀಡುತ್ತಲೇ ಇರುತ್ತವೆ. ವಿಶ್ವಸಂಸ್ಥೆಯು ಶನಿವಾರ ಕನಿಷ್ಠ 240 ನಾಗರಿಕ ಮೃತಪಟ್ಟಿದ್ದಾರೆಂದು ದೃಢಪಡಿಸಿದೆ. ಉಕ್ರೇನ್‌ನ ರಷ್ಯಾದ ಆಕ್ರಮಣವು ಮಿಲಿಟರಿ ಸಂಘರ್ಷದ ಕೆಲವು ಭಯಾನಕ ವೀಡಿಯೊಗಳನ್ನು ತೋರಿಸುತ್ತಿದೆ. ಕೈವ್ ಮೇಲೆ ರಷ್ಯಾದ ದಾಳಿಯು ಭಾನುವಾರ ಬೆಳಿಗ್ಗೆ … Continued

ನ್ಯಾಟೋಗೆ ಸೇರ್ಪಡೆ ಇಂಗಿತ: ಫಿನ್ಲ್ಯಾಂಡ್-ಸ್ವೀಡನ್ ಗೆ ರಷ್ಯಾದಿಂದ ಖಡಕ್‌ ವಾರ್ನಿಂಗ್‌

ಫಿನ್ಲ್ಯಾಂಡ್ ಮತ್ತು ಸ್ವೀಡನ್ ರಾಷ್ಟ್ರಗಳು ನ್ಯಾಟೋಗೆ ಸೇರ್ಪಡೆಯಾಗುವ ಸಂಬಂಧ ರಷ್ಯಾ ಬೆದರಿಕೆ ಹಾಕಿದ್ದು, ಈ ಬೆಳವಣಿಗೆಗಳ ಬಳಿಕ, ಅಮೆರಿಕ ಅಧ್ಯಕ್ಷ ಜೋ ಬಿಡೆನ್, ನ್ಯಾಟೋದ ಮುಕ್ತ ನೀತಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ. ವಾಸ್ತವವಾಗಿ ಸೇಂಟ್ ಪೀಟರ್ಸ್ ಬರ್ಗ್ ರಷ್ಯಾದ ವ್ಯಾಪಾರ ರಾಜಧಾನಿ ಮತ್ತು ಬಿಲಿಯನೇರ್ ಗಳ ನಗರವಾಗಿದ್ದು, ಇದು ಫಿನ್ಲ್ಯಾಂಡ್ ಗಡಿಯ ಪಕ್ಕದಲ್ಲಿದೆ. ಫಿನ್‌ಲ್ಯಾಂಡ್ ನ್ಯಾಟೋದ … Continued

ರಷ್ಯಾ ದಾಳಿಯಲ್ಲಿ ಉಕ್ರೇನ್‌ನಲ್ಲಿ ಕನಿಷ್ಠ 240 ನಾಗರಿಕರ ಸಾವು: ವಿಶ್ವ ಸಂಸ್ಥೆ

ಉಕ್ರೇನ್‌ನಲ್ಲಿ ನಡೆದ ಹೋರಾಟದಲ್ಲಿ ಕನಿಷ್ಠ 240 ನಾಗರಿಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ದೃಢಪಡಿಸಿದೆ, ಅದರಲ್ಲಿ 64 ಜನರು ಗುರುವಾರ ಮೃತಪಟ್ಟಿದ್ದಾರೆ. ಆದಾಗ್ಯೂ, ಸಾವುನೋವುಗಳ ಅನೇಕ ವರದಿಗಳು ಇನ್ನೂ ದೃಢೀಕರಿಸಲ್ಪಟ್ಟಿಲ್ಲವಾದ್ದರಿಂದ “ನಿಜವಾದ ಸಂಖ್ಯೆಯು ತುಂಬಾ ಹೆಚ್ಚಾಗಿದೆ” ಎಂದು ಅದು ಹೇಳಿದೆ. ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (OCHA) ಶನಿವಾರ ತಡರಾತ್ರಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯಿಂದ … Continued

ರಷ್ಯಾದ ಆಕ್ರಮಣದ ಮಧ್ಯೆ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿರುವ ಪಶ್ಚಿಮದ ದೇಶಗಳು.. ಸಾವಿನ ಸಂಖ್ಯೆ ಏರಿಕೆ | ಮುಖ್ಯ ಬೆಳವಣಿಗೆಗಳು

ಕಳೆದ ಮೂರು ದಿನಗಳಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದಾಗಿನಿಂದ, ದೇಶಾದ್ಯಂತದ ನಗರಗಳು ಮತ್ತು ಮಿಲಿಟರಿ ನೆಲೆಗಳು ರಷ್ಯಾದ ಪಡೆಗಳ ದಾಳಿಗೆ ಒಳಗಾಗಿವೆ. ಶನಿವಾರ, ರಷ್ಯಾದ ಪಡೆಗಳು ಉಕ್ರೇನ್‌ನ ರಾಜಧಾನಿಯಾದ ಕೈವ್‌ ತೀರ ಸಮೀಪದಲ್ಲಿವೆ ಮತ್ತು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದಾಳಿಕೋರರ ವಿರುದ್ಧ”ದೃಢವಾಗಿ ನಿಲ್ಲುವಂತೆ” ಉಕ್ರೇನಿಯನ್ನರಿಗೆ ಕರೆ ನೀಡಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ, … Continued

ಉಕ್ರೇನ್ ಬಿಕ್ಕಟ್ಟು: ಫೇಸ್‌ಬುಕ್‌ನಲ್ಲಿ ಹಣಗಳಿಸದಂತೆ ರಷ್ಯಾದ ಮಾಧ್ಯಮಗಳನ್ನು ನಿರ್ಬಂಧಿಸಿದ ಮೆಟಾ

ಸದ್ಯ ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ರಷ್ಯಾದ ದಾಳಿಯಿಂದ ಕೋಪಗೊಂಡ ಹಲವು ದೇಶಗಳು ಅದರ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿವೆ. ಈ ನಡುವೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಫೇಸ್‌ಬುಕ್ ರಷ್ಯಾದ ಮಾಧ್ಯಮ ಚಾನೆಲ್‌ಗಳ ಮೇಲೆ ನಿಷೇಧವನ್ನು ಘೋಷಿಸಿದೆ. ನೆರೆಯ ಉಕ್ರೇನ್‌ನ ಮಾಸ್ಕೋದ ಆಕ್ರಮಣವು ಕೈವ್‌ನ ಬೀದಿಗಳನ್ನು ತಲುಪಿದ … Continued

ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ನ್ಯಾಯಾಧೀಶರನ್ನು ತಯಾರಿಸಿದ ಚೀನಾ, ಈ ನ್ಯಾಯಾಧೀಶರು 97% ನಿರ್ಧಾರಗಳನ್ನು ಸರಿಯಾಗಿ ನೀಡ್ತಾರಂತೆ..!

ಬೀಜಿಂಗ್: ಸೂಪರ್‌ ಕಂಪ್ಯೂಟರ್‌ನಿಂದ ರೋಬೋಟ್‌ಗಳ ವರೆಗೆ, ಚೀನಾ ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ನ್ಯಾಯಾಧೀಶರನ್ನು ರಚನೆ ಮಾಡಿದೆ..! ಇದು ವಿಶ್ವದಲ್ಲೇ ಮೊದಲನೆಯದು. ಈ ನ್ಯಾಯಾಧೀಶರು ಮೌಖಿಕ ವಾದಗಳನ್ನು ಆಲಿಸಿದ ನಂತರ ಶೇಕಡಾ 97 ರಷ್ಟು ಸರಿಯಾದ ನಿರ್ಧಾರಗಳನ್ನು ನೀಡುತ್ತಾರೆ ಎಂದು ಹೇಳಲಾಗಿದೆ. ಈ ನ್ಯಾಯಾಧೀಶರನ್ನು ಶಾಂಘೈ ಪುಡಾಂಗ್ ಪೀಪಲ್ಸ್ ಪ್ರೊಕ್ಯುರೇಟರೇಟ್ ರಚನೆ ಮಾಡಿದೆ. ಇದು ಚೀನಾದ ಅತ್ಯಂತ … Continued

ಭಾರತ-ರಷ್ಯಾ ಸಂಬಂಧಗಳು, ಅಮೆರಿಕ-ರಷ್ಯಾ ಸಂಬಂಧಗಳಿಗಿಂತ ಭಿನ್ನವಾಗಿವೆ…’: ಭಾರತದ ಸಂದಿಗ್ಧತೆಯನ್ನು ವಿಶ್ವದ ದೊಡ್ಡಣ್ಣ ಅರ್ಥಮಾಡಿಕೊಂಡಿದೆಯೇ?

ವಾಷಿಂಗ್ಟನ್/ದೆಹಲಿ: ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ (ರಷ್ಯಾ-ಉಕ್ರೇನ್ ಯುದ್ಧ), ವಿಶ್ವದ ಆಸಕ್ತಿ ಭಾರತ ಯಾವ ನಿಲುವು ತೆಗೆದುಕೊಳ್ಳುತ್ತಿದೆ ಎಂಬುದರ ಮೇಲಿದೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಜೊತೆಗೆ, ವಿಶ್ವದ ಎಲ್ಲ ದೇಶಗಳು ಈ ದಾಳಿಯನ್ನು ಬಹಿರಂಗವಾಗಿ ಟೀಕಿಸಿದವು. ಆದರೆ, ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳೊಂದಿಗೆ ಉತ್ತಮ ಸಂಬಂಧವಿದ್ದರೂ ಭಾರತ ಅವರ ಮಾತಿಗೆ ಕಿವಿಗೊಡಲಿಲ್ಲ. ಅವರು … Continued

ಉಕ್ರೇನ್‌ ರಕ್ಷಣೆಗೆ ಹೋರಾಡಲು ಶಸ್ತ್ರಾಸ್ತ್ರ ಹಿಡಿಯುವ ಘೋಷಣೆ ಮಾಡಿದ ಬಾಕ್ಸಿಂಗ್ ದಂತಕಥೆಗಳಾದ ಕ್ಲಿಟ್ಸ್ಕೊ ಸಹೋದರರು..!

ಕೈವ್‌: ಮಾಜಿ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ವಿಟಾಲಿ ಕ್ಲಿಟ್ಸ್ಕೊ ಅವರು ತಮ್ಮ ದೇಶವಾದ ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ “ರಕ್ತಸಿಕ್ತ ಯುದ್ಧ”ದಲ್ಲಿ ಉಕ್ರೇನ್‌ ರಕ್ಷಣೆಗೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಕೊಳ್ಳುವುದಾಗಿ ಘೋಷಿಸಿದ್ದಾರೆ. ತಮ್ಮ ಜೊತೆ ಸಹೋದರ ಮತ್ತು ಹಾಲ್ ಆಫ್ ಫೇಮರ್ ವ್ಲಾಡಿಮಿರ್ ಕ್ಲಿಟ್ಸ್ಕೊ ಸಹ ಶಸ್ತ್ರಾಸ್ತ್ರ ಹೋರಾಟ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ … Continued

ರಷ್ಯಾದ ದಾಳಿಯ ಮಧ್ಯೆಯೇ ಬಂಕರ್‌​​ನಲ್ಲೇ ಮಗುವಿಗೆ ಜನ್ಮ ನೀಡಿದ ಉಕ್ರೇನ್ ಮಹಿಳೆ..!

ಕೈವ್: ಉಕ್ರೇನ್‌ನ (Ukraine) ಮೇಲಿನ ರಷ್ಯಾದ ಯುದ್ಧದ ನಡುವೆ ಕೈವ್‌ನಲ್ಲಿ ವಾಯುದಾಳಿ ಶೆಲ್ಟರ್​​ (ಬಂಕರ್)ನಲ್ಲಿ ಆಶ್ರಯ ಪಡೆದಿದ್ದ ಕುಟುಂಬವೊಂದರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಒಂದೆಡೆ ನೂರಾರು ಜನರು ಯುದ್ಧದಲ್ಲಿ ಸಾವುನೋವು ಅನೂಭವಿಸುತ್ತಿರುವ ನಡುವೆ ಪ್ರಾಣಭೀತಿಯ ನಡುವೆಯೂ ಆ ಕುಟುಂಬ ಸಂತಸದಿಂದ ಮಗುವನ್ನು ಸ್ವಾಗತಿಸಿದೆ.ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಸಂತೋಷದ ಸುದ್ದಿಯನ್ನು ಟ್ವಿಟ್ಟರ್​ನಲ್ಲಿ … Continued