ಪಾಂಗೊಂಗ್‌ ಲೇಕ್‌ನಿಂದ ಭಾರತ-ಚೀನಾ ಸೇನಾ ಹಿಂತೆಗೆತ ಆರಂಭ: ಚೀನಾ

ಚೀನಾ ಮತ್ತು ಭಾರತದ ಸಶಸ್ತ್ರ ಪಡೆಗಳ ಮುಂಚೂಣಿ ಘಟಕಗಳಾದ ಚೀನಾ ಮತ್ತು ಭಾರತದ ನಡುವಿನ ಕಮಾಂಡರ್ ಮಟ್ಟದ ಮಾತುಕತೆಯ ಒಂಬತ್ತನೇ ಸುತ್ತಿನ ಒಮ್ಮತದ ಪ್ರಕಾರ ಪೂರ್ವ ಲಡಾಕ್‌ ಭಾರತಿ-ಚೀನಾ ಗಡಿಯಲ್ಲಿ ಸೈನ್ಯವನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಚೀನಾ ರಕ್ಷಣಾ ಸಚಿವಾಲಯ ತಿಳಿಸಿದೆ. ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರದ ದಕ್ಷಿಣ ಮತ್ತು ಉತ್ತರ ದಂಡೆಯಲ್ಲಿರುವ ಚೀನಾ … Continued

ಮೋದಿಗೆ ಜೈ, ರೈತರ ಮೇಲೆ ಕ್ರಮಕ್ಕೆ ಭಾರತೀಯ ಅಮೆರಿಕನ್ನರ ವಿರೋಧ

ವಾಷಿಂಗ್ಟನ್: ಅಮೆರಿಕದಲ್ಲಿ ವಾಸವಾಗಿರುವ ಭಾರತೀಯ ಮೂಲದವರಲ್ಲಿ ಶೇ.೫೦ರಷ್ಟು ಜನರು ಭಾರತದ ಕೇಂದ್ರ ಸರಕಾರದ ನೀತಿಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಕಾರ್ನೆಗಿ ಎಂಡೋಮೆಂಟ್‌ ಫಾರ್‌ ಇಂಟರ್‌ನ್ಯಾಷನಲ್‌ ಪೀಸ್‌, ಜಾನ್ಸ್‌ ಹಾಪ್ಕಿನ್ಸ್‌-ಎಸ್‌ಎಐಎಸ್‌ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆದ “ಭಾರತೀಯ ಅಮೆರಿಕನ್ನರ ದೃಷ್ಟಿಯಲ್ಲಿ ಭಾರತʼ ವಿಷಯದ ಸಮೀಕ್ಷೆ ನಡೆದಿದೆ. ವಲಸೆಗಾರರ ಬಗ್ಗೆ ಪ್ರಧಾನಿ ಮೋದಿ ಹೆಚ್ಚು ಉದಾರತೆ … Continued

ಕೊರೊನಾ ಲಸಿಕೆ ರವಾನೆಗೆ ಮೋದಿಗೆ ಡೊಮಿನಿಕನ್‌ ಧನ್ಯವಾದ

ತಮ್ಮ ದೇಶಕ್ಕೆ ೩೫,೦೦೦ ಕೋವಿಡ್-‌೧೯ ಲಸಿಕೆ ಕಳಿಸಿದ್ದಕ್ಕೆ ಡೊಮಿನಿಕನ್‌ ಪ್ರಧಾನಿ ಸ್ಕೆರಿಟ್‌ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ. ತ್ವರಿತ ಗತಿಯಲ್ಲಿ ಲಸಿಕೆಗಳನ್ನು ರವಾನಿಸಿದ್ದು ಶ್ಲಾಘನೀಯ. ಇದರಿಂದ ದೇಶದ ೭೨,೦೦೦ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರನ್ನು ಮಾರಕ ಕೊರೊನಾ ಲಸಿಕೆಯಿಂದ ರಕ್ಷಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. ಲಸಿಕೆಗಳನ್ನು ನೆರೆಯ ಬಾರ್ಬಡೋಸ್‌ನ ಏರ್ ನ್ಯಾಷನಲ್ ಗಾರ್ಡ್‌ನ ವಿಮಾನದಲ್ಲಿರುವ ಡೊಮಿನಿಕಾದ … Continued

ಮುಂದಿನ ವರ್ಷ ಟಿಸಿಎಸ್‌ನಿಂದ ಬ್ರಿಟನ್‌ನಲ್ಲಿ ೧೫೦೦ ಟೆಕ್ಕಿಗಳ ನೇಮಕ

ಭಾರತೀಯ ಮೂಲದ ಜಾಗತಿಕ ಐಟಿ ಸಂಸ್ಥೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮುಂದಿನ ವರ್ಷದಲ್ಲಿ ಬ್ರಿಟನ್ಯಾದ್ಯಂತ 1,500 ತಂತ್ರಜ್ಞಾನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಬ್ರಿಟನ್‌ ವ್ಯಾಪಾರ ಕಾರ್ಯದರ್ಶಿ ಲಿಜ್ ಟ್ರಸ್ ಮತ್ತು ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಗೋಪಿನಾಥನ್ ಅವರೊಂದಿಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಚರ್ಚೆಯ ಸಮಯದಲ್ಲಿ ಬ್ರಿಟನ್ನಿನ ಆರ್ಥಿಕತೆ, ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರ … Continued

ಮಂಗಳನ ಕಕ್ಷೆ ಸುತ್ತಲಾರಂಭಿಸಿದ ಯುಎಇ ಬಾಹ್ಯಾಕಾಶ ನೌಕೆ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ ಬಾಹ್ಯಾಕಾಶ ನೌಕೆ ಮಂಗಳವಾರ ಮಂಗಳ ಗ್ರಹದ ಸುತ್ತ ಕಕ್ಷೆಗೆ ತಿರುಗಿತು. ದುಬೈನ ಯುಎಇಯ ಬಾಹ್ಯಾಕಾಶ ಕೇಂದ್ರದಲ್ಲಿನ ಏಲ್ಲರೂ ಚಪ್ಪಾಳೆ ತಟ್ಟಿದರು, ಫಾರ್ ಹೋಪ್ ಎಂದು ಅರೆಬಿಕ್‌ ಶಬ್ದದಲ್ಲಿ ಕರೆಯಲ್ಪಡುವ ಅಮಲ್, ತನ್ನ ಏಳು ತಿಂಗಳ, 300 ಮಿಲಿಯನ್ ಮೈಲಿ ಪ್ರಯಾಣದ ಅಂತ್ಯ ತಲುಪಿದೆ ಮತ್ತು ಕೆಂಪು ಗ್ರಹಸುತ್ತಲು ಆರಮಭಿಸಿದೆ. ಅಲ್ಲಿ … Continued

ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕ ಯುದ್ಧ ನೌಕೆಗಳ ಮಿಲಿಟರಿ ಕವಾಯತು

ಈ ತಿಂಗಳ ಆರಂಭದಲ್ಲಿ ಪರ್ಷಿಯನ್ ಕೊಲ್ಲಿಯಿಂದ ಹೊರತೆಗೆಯಲಾದ ಅಮೆರಿಕದ ನಿಮಿಟ್ಜ್ ಸೇರಿದಂತೆ ಎರಡು ಅಮರಿಕನ್ ವಿಮಾನ ವಾಹಕ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಮಿಲಿಟರಿ ಕವಾಯತು ನಡೆಸಿದ್ದು ಕ್ಸಿ ಜಿನ್‌ಪಿಂಗ್ ಅವರ ಚೀನಾಕ್ಕೆ ಸ್ಪಷ್ಟ ಸಂಕೇತವಾಗಿ ನೀಡಿದೆ ಹಾಗೂ ಅಧ್ಯಕ್ಷ ಜೋ ಬಿಡನ್ ಬೀಜಿಂಗ್‌ಗೆ ಟ್ರಂಪ್ ಆಡಳಿತದ ನೀತಿ ಮುಂದುವರಿಸುವುದಾಗಿ ಹೇಳಿದಂತಾಗಿದೆ. ಎರಡು ಸ್ಟ್ರೈಕ್ ಗುಂಪುಗಳಾದ … Continued

ಕ್ವಾಡ್‌ ಬಲಪಡಿಸಲು ಬಾಂಗ್ಲಾ, ಶ್ರೀಲಂಕಾ ಜೊತೆಗೂಡಿ ಕೆಲಸ

ನವದೆಹಲಿ: ಜಪಾನ್‌, ಭಾರತ, ಆಸ್ಟ್ರೇಲಿಯಾ ಹಾಗೂ ಅಮೆರಿಕವನ್ನೊಳಗೊಂಡ “ಕ್ವಾಡ್‌” ದೇಶಗಳು ತಮ್ಮ ನವ ದೆಹಲಿ: ಇಂಡೋ-ಫೆಸಿಫಿಕ್‌ ಚೌಕಟ್ಟಿನಡಿಯಲ್ಲಿ ಕ್ವಾಡ್‌ ಬಲಪಡಿಸುವ ನಿಟ್ಟಿನಲ್ಲಿ ಭಾರತ ಹಾಗೂ ಜಪಾನ್‌ ದೇಶಗಳು ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್‌ ಹಾಗೂ ಮಾಲ್ಡಿವ್ಸ್‌ ದೇಶಗಳೊಂದಿಗೆ ಜೊತೆಗೂಡಿ ಕೆಲಸ ಮಾಡುತ್ತಿವೆ ಎಂದು ಜಪಾನ್‌ ರಾಯಭಾರಿ ಸತೋಶಿ ಸುಜುಕಿ ಹೇಳಿದ್ದಾರೆ. ಉದ್ದೇಶವನ್ನು ಉತ್ತೇಜಿಸುವ ದಿಸೆಯಲ್ಲಿ ಒಟ್ಟಾಗಿ ಕಾರ್ಯ … Continued

ವುಹಾನ್‌ನಲ್ಲಿ ೨೦೧೯ರ ಡಿಸೆಂಬರ್‌ಗಿಂತ ಮೊದಲು ಕೊರೋನಾ ಪುರಾವೆಯಿಲ್ಲ

ಚೀನಾ:  ಚೀನಾದ ವುಹಾನ್‌ನಲ್ಲಿ ೨೦೧೯ರ ಡಿಸೆಂಬರ್‌ಗಿಂತ ಮೊದಲು ಕೊರೊನಾ ಸೋಂಕು ಹರಡಿರುವುದಕ್ಕೆ ಪುರಾವೆಗಳಿಲ್ಲ ಎಂದು ವುಹಾನ್‌ನಲ್ಲಿ ಸಾಂಕ್ರಾಮಿಕ ರೋಗದ ಉಗಮದ ಬಗ್ಗೆ ತನಿಖೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾ ತಜ್ಞರ ಜಂಟಿ ಸಮಿತಿ ತಿಳಿಸಿದೆ. ಡಿಸೆಂಬರ್ 2019 ರ ಮೊದಲು ಜನಸಂಖ್ಯೆಯಲ್ಲಿ ಸಾರ್ಸ್-ಕೋವ್-2 ಹರಡಿರುವ ಬಗ್ಗೆ ಯಾವುದೇ ಸೂಚನೆಯಿರಲಿಲ್ಲ. ಅದಕ್ಕೂ ಮುಂಚೆ ನಗರದಲ್ಲಿ … Continued

ಭಾರತದ ಮಾನವ ಸಹಿತ ಉಪಗ್ರಹ ಉಡಾವಣೆ: ಮೆನು ಸಿದ್ಧ

ಬೆಂಗಳೂರು: ಬಾಹ್ಯಾಕಾಶದಲ್ಲಿ ಭಾರತದಲ್ಲಿ ಮೊದಲ ಮಾನವ ಸಹಿತ ಉಪಗ್ರಹ ಉಡಾವಣೆಯಾದಾಗ ಅಲ್ಲಿ ಗಗನಯಾನಿಗಳಿಗೆ ಬೆಳಗ್ಗೆ ಇಡ್ಲಿ, ಉಪ್ಪಿಟ್‌, ಊಟಕ್ಕೆ ಬಿರಿಯಾನಿ, ಪುಲಾವ್‌ ಹಾಗೂ ರಾತ್ರಿ ಊಟಕ್ಕೆ ಕೂರ್ಮಾ ಹಾಗೂ ಚಪಾತಿ…..ವೈವಿಧ್ಯಮಯ ಮೆನು ಸಿಗಲಿದೆ. ಭಾರತೀಯ ಸೈನಿಕರಿಗೆ ಆಹಾರೋತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೈಸೂರು ಮೂಲಕ ಡಿಫೆನ್ಸ್‌ ಫುಡ್‌ ರಿಸರ್ಚ್‌ ಲ್ಯಾಬೊರೇಟರಿ ಗಗನಯಾನಿಗಳ ಮೆನುವನ್ನು ಅಂತಿಮಗೊಳಿಸಿದೆ. ಇದಲ್ಲದೇ ಕಡಲೆ ಹಿಟ್ಟಿನ … Continued

ಬಿಟ್‌ ಕಾಯಿನ್‌ನಲ್ಲಿ ೧.೫ ಹೂಡಿಕೆ ಮಾಡಿದ ಟೆಸ್ಲಾ

ವಿದ್ಯುತ್‌ ಕಾರು ಉತ್ಪಾದನಾ ಸಂಸ್ಥೆ ಟೆಸ್ಲಾ ಕ್ರಿಪ್ಟೊಕರೆನ್ಸಿ ಬಿಟ್‌ಕಾಯಿನ್‌ (ಬಿಟಿಸಿ)ದಲ್ಲಿ ೧.೫ ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಲು ಮುಂದಾಗಿದೆ. ಎಲೋನ್‌ ಮಸ್ಕ್‌ ಅವರ ಸಂಸ್ಥೆ ಟೆಸ್ಲಾ ಡಿಜಿಟಲ್‌ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದ ನಂತರ ಬಿಟ್‌ ಕಾಯಿನ್‌ ಪ್ರತಿ ಬಿಟಿಸಿಗೆ ೪೭,೫೧೩ ಡಾಲರ್‌ ಮುಟ್ಟಿದೆ. ಕಂಪನಿಯು ಒಂದು ಹಂತದಲ್ಲಿ ಬಿಟಿಸಿಯನ್ನು ಕರೆನ್ಸಿಯಾಗಿ ಸ್ವೀಕರಿಸುತ್ತದೆ ಎಂದು ಅಂದಾಜಿಸಲಾಗಿದೆ. … Continued