ಅಂಕೋಲಾ ತಾಲೂಕಿನ ಅತ್ಯಂತ ಕುಗ್ರಾಮಕ್ಕೆ ದೋಣಿಯಲ್ಲಿ ತೆರಳಿದ ಸಚಿವೆ ಕರಂದ್ಲಾಜೆ: ರೈತರಿಂದ ಸರ್ಕಾರಕ್ಕೆ ಹಲವು ಬೇಡಿಕೆ

ಕಾರವಾರ :- ಮಳೆಯ ಅಬ್ಬರದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನ ಅನೇಕ ಕಡೆ ಕೃಷಿ ಜಮೀನುಗಳು ಕೊಚ್ಚಿಹೋಗುವ ಜೊತೆಗೆ ಹಲವು ಗ್ರಾಮಗಳಿಗೆ ಸಂಪರ್ಕ ಸಹ ಕಡಿತಗೊಂಡಿದೆ. ಇಂತಹ  ಗ್ರಾಮಗಳಲ್ಲಿ ಒಂದಾದ ಅಂಕೋಲಾ ತಾಲೂಕಿನ ಯಲ್ಲಾಪುರ ಗಡಿ ಹಂಚಿಕೊಂಡ ಡೊಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಂತ ಕುಗ್ರಾಮ ಕೈಗಡಿಯ ಕೃಷಿಕರಾದ ರಾಮಚಂದ್ರ ಹೆಗಡೆ, … Continued

ಬ್ಯಾಡರಹಳ್ಳಿ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣ:ಡೆತ್‌ನೋಟ್‌ನಲ್ಲಿ ಅಪ್ಪನ ವಿರುದ್ದವೇ ಮಕ್ಕಳ ಆರೋಪ

ಬೆಂಗಳೂರು: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಹಾಗೂ ಮಗು ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮನೆಯಲ್ಲಿ ನಡೆಯುತ್ತಿದ್ದ ಜಗಳವೇ ಈ ಘಟನೆಗೆ ಕಾರಣ ಎಂಬುದು ಪೋಲೀಸರ ತನಿಖೆಯಿಂದ ತಿಳಿದುಬಂದಿದೆ. ಇಂದು ಬೆಳಗ್ಗೆ ಪೋಲೀಸರು ಶಂಕರ್ ಮನೆಯನ್ನು ಸಂಪೂರ್ಣ ಮೊಹಜರು ನಡೆಸುತ್ತಿದ್ದಾಗ ದೊರೆತ ಡೆತ್ ನೋಟ್‍ಗಳಲ್ಲಿ ಅಪ್ಪನ ಅಕ್ರಮ ಸಂಬಂಧದ ಬಗ್ಗೆ ಹಾಗೂ ಅದರ ಬಗ್ಗೆ … Continued

ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ ಮೇಲೆ ದಾಳಿ, 20 ಜನರು ವಶಕ್ಕೆ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರು ಹೊರವಲಯದಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿ ಒಟ್ಟು 20 ಜನರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ರೇವ್‌ ಪಾರ್ಟಿಯಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದಾರೆ. ಪೊಲೀಸರು ಹಲವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಬೆಂಗಳೂರು ಹೊರವಲಯದ ಆನೇಕಲ್ ಬಳಿಯಲ್ಲಿರುವ ತಮ್ಮನಾಯಕನಹಳ್ಳಿ ಬಳಿಯಲ್ಲಿರುವ ರೆಸಾರ್ಟ್ ಒಂದರಲ್ಲಿ … Continued

ಇಂದು ಸಂಜೆ 4 ಗಂಟೆಗೆ ಕರ್ನಾಟಕ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ, ರಿಸಲ್ಟ್​ ನೋಡಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಅಗಸ್ಟ್ 28, 29 ಮತ್ತು 30ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ ( common entrance test KCET) ಫಲಿತಾಂಶ ಇಂದು  (ಸೋಮವಾರ) ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು ಕಡಿಮೆ ಕಾಲಾವಧಿಯಲ್ಲೇ ಫಲಿತಾಂಶ ಪ್ರಕಟವಾಗುತ್ತದೆ. ಇದಕ್ಕಾಗಿ ಪರೀಕ್ಷಾ ಪ್ರಾಧಿಕಾರದ … Continued

ಭಾರತದಲ್ಲಿ 30,773 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 30,773 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಶನಿವಾರ ದಾಖಲಾದ ಪ್ರಕರಣಗಳಿಗಿಂತ ಶೇಕಡಾ 13.7 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶ ತಿಳಿಸಿದೆ. ದೇಶದಲ್ಲಿ ಕೋವಿಡ್ -19 ರ ಸಾಪ್ತಾಹಿಕ ಸಕಾರಾತ್ಮಕತೆಯ ದರವು ಶೇಕಡಾ 2.04 ರಷ್ಟಿದ್ದು, ಇದು ಕಳೆದ 86 … Continued

ಹುಬ್ಬಳ್ಳಿ : ಚಿರತೆ ವಿಡಿಯೊದಲ್ಲಿ ಸೆರೆ: ಬೋನಿಟ್ಟು ಹಿಡಿಯಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ

ಹುಬ್ಬಳ್ಳಿ: ಮೂರು ದಿನಗಳ ಹಿಂದೆ ಹುಬ್ಬಳ್ಳಿ ನೃಪತುಂಗ ಬೆಟ್ಟದ ಬಳಿ ಚಿರತೆ ಕಾಣಿಸಿಕೊಂಡಿದೆ ಎನ್ನುವುದಕ್ಕೆ ಪುಷ್ಟಿ ನೀಡುವಂತೆ ಶನಿವಾರ ರಾಜನಗರದ ಕೇಂದ್ರೀಯ ವಿದ್ಯಾಲಯದ ಬಳಿ ಚಿರತೆ ಕಾಣಿಸಿಕೊಂಡಿದೆ. ಶನಿವಾರ ರಾತ್ರಿ 7.30ರ ಸುಮಾರಿಗೆ ರಾಜ ನಗರ ಕೇಂದ್ರಿಯ ವಿದ್ಯಾಲಯದ ಮೈದಾನದ ಸಮೀಪದಲ್ಲಿ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಹೀಗಾಗಿ ಚಿರತೆ ಸೆರೆಗೆ ಬೆಟ್ಟದ … Continued

ಮಗುವಿನ ಶವ ಬೋರ್​ವೆಲ್​ನಲ್ಲಿ ಪತ್ತೆ: ಕುಟುಂಬಸ್ಥರಿಗೆ ತಂದೆಯೇ ಕೊಲೆ ಮಾಡಿದ ಅನುಮಾನ..?

ಬೆಳಗಾವಿ: ಪ್ರಾರ್ಥನೆ ಫಲಿಸಿಲ್ಲ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರು ಗ್ರಾಮದಲ್ಲಿ ಬೋರ್​ವೆಲ್​ಗೆ ಬಿದ್ದಿದ್ದ ಎರಡು ವರ್ಷದ ಮಗು ಮೃತಪಟ್ಟಿದೆ.ಈ ಸಾವಿನ ಕುರಿತು ಬಾಲಕನ ತಂದೆಯ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ. ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರಿಂದ ಪೊಲೀಸರು ಸಿದ್ದಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕನ ಶವವನ್ನು ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ … Continued

ಫಲಿಸದ ಪ್ರಾರ್ಥನೆ :ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗು ಶವವಾಗಿ ಪತ್ತೆ

ಬೆಳಗಾವಿ : ಎರಡು ವರ್ಷದ  ಮಗುವೊಂದು ತೆರೆದ ಬೋರ್ ವೆಲ್ ಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ನಡೆದಿದ್ದು, ಆದರೆ ಮಗು ಶವವಾಗಿ ಪತ್ತೆಯಾಗಿದೆ. ಕೊಳವೆ ಬಾವಿಗೆ ಬಿದ್ದ ಬಾಲಕ ಶರತ್ ಮೃತದೇಹ ಪತ್ತಯಾಗಿದ್ದು, ಎರಡು ವರ್ಷದ ಬಾಲಕ ಶರತ್ ಹಸಿವೆ 15 ಅಡಿ ಆಳದ ಬೋರ್ ವೆಲ್ ನಲ್ಲಿ … Continued

ಬೋರ್ವೆಲ್ ಗೆ ಬಿದ್ದ ಎರಡು ವರ್ಷದ ಮಗು:ರಕ್ಷಣೆಗೆ ಹರಸಾಹಸ

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರು ಗ್ರಾಮದಲ್ಲಿ ಸುಮಾರು 2 ವರ್ಷದ ಮಗು ಬೋರ್ ವೆಲ್ ಗೆ ಬಿದ್ದ ಘಟನೆ ವರದಿಯಾಗಿದೆ. ಅಲಕನೂರು ಗ್ರಾಮದ ಶರತ್ ಸಿದ್ಧಪ್ಪ ಹಸಿರೇ ಎಂಬ ಮಗು ನಿನ್ನೆ ಕಾಣೆಯಾಗಿದ್ದು ಈ ಬಗ್ಗೆ ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಎಲ್ಲಿಯೂ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ. ಕುಟುಂದವರು ತೋಟದ … Continued

ಬೈಕ್-ಲಾರಿ ಡಿಕ್ಕಿ : ಸ್ಥಳದಲ್ಲೇ ಮೂವರು ಸಾವು

ಮುಂಡರಗಿ: ಬೈಕ್ ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದಿದ್ದರಿಂದ ಒಂದೇ ಕುಟುಂಬದ ಮೂವರು ಮೃತಪಟ್ಟ ಭೀಕರ ಘಟನೆ ಗದಗ ಜಿಲ್ಲೆಯ ಶನಿವಾರ ತಾಲೂಕಿನ ಕಲಕೇರಿ-ಬಾಗೇವಾಡಿ ನಡುವೆ ಇರುವ ಕಣವಿದುರ್ಗಾದೇವಿ ದೇವಸ್ಥಾನದ ಜ್ಯಾಲವಾಡಗಿ ಕ್ರಾಸ್ ನಲ್ಲಿ   ಸಂಭವಿಸಿದೆ. ಬಾಗೇವಾಡಿ ಸಮೀಪದ ಕಣವಿ ದುರ್ಗಮ್ಮ ದೇವಸ್ಥಾನದ ಸಮೀಪ ಸಂಭವಿಸಿದ ದುರ್ಘಟನೆಯಲ್ಲಿ ಕನಕವಾಡ ಗ್ರಾಮದ ನಿವಾಸಿಗಳಾದ ಅಣ್ಣ, ತಂಗಿ ಹಾಗೂ … Continued