ಮಹಾರಾಷ್ಟ್ರ ಬಿಕ್ಕಟ್ಟು: ಸಿಎಂ ಉದ್ಧವ್ ಠಾಕ್ರೆ ಬೆಂಬಲಕ್ಕೆ ಈಗ ಬೆರಳೆಣಿಕೆ ಶಾಸಕರು ಮಾತ್ರ

ಮುಂಬೈ: ರಾಜಕೀಯ ಪ್ರಕ್ಷುಬ್ಧತೆಯ ನಡುವೆ, ಮಹಾರಾಷ್ಟ್ರ ರಾಜ್ಯ ವಿಧಾನಸಭೆಯಲ್ಲಿ ಆದಿತ್ಯ ಠಾಕ್ರೆ ಹೊರತುಪಡಿಸಿ, ಎಲ್ಲಾ ಎಂಟು ಸಚಿವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ತೊರೆದು ಗುವಾಹತಿಯಲ್ಲಿ ಬಂಡಾಯ ಶಿವಸೇನೆ ಸಚಿವ ಏಕನಾಥ್ ಶಿಂಧೆ ಬಣವನ್ನು ಸೇರಿಕೊಂಡಿದ್ದಾರೆ. ವಿಧಾನಸಭೆಯಿಂದ ಸಚಿವರಾದವರಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಜೊತೆಗೆ ಮಗ ಆದಿತ್ಯ ಠಾಕ್ರೆ ಮಾತ್ರ ಉಳಿದಿದ್ದಾರೆ. ಕುತೂಹಲಕಾರಿಯಾಗಿ, ಶನಿವಾರ ಶಿವಸೇನೆಯ … Continued

ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಪೂರ್ವಜರ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ವಿದ್ಯುತ್ ನೀಡುವ ಕೆಲಸ ಆರಂಭ..!

ರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಪೂರ್ವಜರ ಗ್ರಾಮವಾದ ಮಯೂರ್‌ಭಂಜ್ ಜಿಲ್ಲೆಯ ಉಪರಬೇಡದ ಒಂದು ಭಾಗದಲ್ಲಿ ಒಡಿಶಾ ಸರ್ಕಾರ ಭಾನುವಾರ ವಿದ್ಯುದ್ದೀಕರಣ ಕಾರ್ಯ ಪ್ರಾರಂಭಿಸಿದೆ. ಹಳ್ಳಿಯಲ್ಲಿ ಜನರು ವಿದ್ಯುತ್ ಇಲ್ಲದೆ ವಾಸಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಬಂದ ನಂತರ ಇದು ಆರಂಭವಾಗಿದೆ. ಆದರೆ, ಮುರ್ಮು ಈಗ ಆ ಗ್ರಾಮದಲ್ಲಿ ವಾಸಿಸುತ್ತಿಲ್ಲ. ಆಕೆ ತನ್ನ … Continued

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ 4000 ವರ್ಷಗಳಷ್ಟು ಪುರಾತನ ತಾಮ್ರದ ಆಯುಧಗಳು ಪತ್ತೆ

ಆಗ್ರಾ: ಮಣಿಪುರಿಯ ಗಣೇಶಪುರ ಗ್ರಾಮದ ರೈತರೊಬ್ಬರು ಮಣ್ಣಿನಡಿಯಲ್ಲಿ ದೊಡ್ಡಸಂಖ್ಯೆಯ ತಾಮ್ರದ ಆಯುಧಗಳನ್ನು ಪತ್ತೆ ಹಚ್ಚಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರು ತಮ್ಮ ಹೊಲವನ್ನು ಉಳುಮೆ ಮಾಡುವಾಗ ಅವರಿಗೆ ಹೆಚ್ಚಿನ ಸಂಖ್ಯೆಯ ತಾಮ್ರದ ಕತ್ತಿಗಳು ಮತ್ತು ಹಾರ್ಪೂನ್‌ಗಳನ್ನು ಕಂಡುಬಂದಿವೆ. ಈ ಎಲ್ಲಾ ವಸ್ತುಗಳು ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಬೆಲೆಬಾಳುವ ವಸ್ತುಗಳು ಎಂದು ಭಾವಿಸಿ ರೈತನು ಎಲ್ಲವನ್ನೂ … Continued

ಭಾರತೀಯ ಪಿಎಸ್‌ಯುಗಳ ರೂವಾರಿ, ದಂತಕಥೆ ವಿ. ಕೃಷ್ಣಮೂರ್ತಿ ನಿಧನ

ಚೆನ್ನೈ: ಬಿಎಚ್‌ಇಎಲ್, ಮಾರುತಿ ಉದ್ಯೋಗ್, ಎಸ್‌ಎಐಎಲ್ (SAIL) ಮತ್ತು ಗೇಲ್ (ಇಂಡಿಯಾ) ನಂತಹ ಹಲವಾರು ಭಾರತೀಯ ಕಾರ್ಪೊರೇಟ್ ಸಂಸ್ಥೆಗಳ ಟರ್ನ್‌ರೌಂಡ್ ಮ್ಯಾನ್ ಎಂದು ಪರಿಗಣಿಸಲ್ಪಟ್ಟಿರುವ ವೆಂಕಟರಮಣ ಕೃಷ್ಣಮೂರ್ತಿ (97 ವರ್ಷ) ಭಾನುವಾರ ನಿಧನರಾದರು. ಕೃಷ್ಣಮೂರ್ತಿ ಅವರು ಚೆನ್ನೈನಲ್ಲಿರುವ ಅವರ ಮನೆಯಲ್ಲಿ ನಿಧನರಾದರು ಎಂದು ಅವರ ಮಾಜಿ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ. ಅವರ ಅಂತಿಮ ಸಂಸ್ಕಾರ ಸೋಮವಾರ ನಡೆಯಲಿದೆ. … Continued

ತೀಸ್ತಾ ಸೆತಲ್ವಾಡ್, ಮಾಜಿ ಮಾಜಿ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಅವರನ್ನು ಜುಲೈ 1ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್‌

ಅಹಮದಾಬಾದ್‌: ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಆರ್ ಬಿ ಶ್ರೀಕುಮಾರ್ ಅವರನ್ನು ಜುಲೈ 1ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಗುಜರಾತ್ ಪೊಲೀಸರು ಕೃತ್ರಿಮ ಸಾಕ್ಷ್ಯ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಅವರನ್ನು ಬಂಧಿಸಿದ್ದರು. ಸೆತಲ್ವಾಡ್ ಮತ್ತು ಶ್ರೀಕುಮಾರ್ ಅವರನ್ನು ಜುಲೈ 2 ರಂದು ಅಹಮದಾಬಾದ್ ನ್ಯಾಯಾಲಯಕ್ಕೆ … Continued

ಈಗ ಸುಪ್ರೀಂಕೋರ್ಟ್‌ ಮುಂದೆ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕದನ : ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಏಕನಾಥ್ ಶಿಂಧೆ ಬಣ

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಶಿವಸೇನೆ ಬಂಡಾಯ ಶಾಸಕರು ಶನಿವಾರ ತಮ್ಮ ವಿರುದ್ಧ ಶಿವಸೇನೆ ತೆಗೆದುಕೊಂಡ ನಿರ್ಧಾರಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಏಕನಾಥ್‌ ಶಿಂಧೆ ಬಣ ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳಿಂದಾಗಿ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಶಿವಸೇನಾ ಶಾಸಕಾಂಗ ಪಕ್ಷದ ನಾಯಕರಾಗಿ ಅಜಯ್ ಚೌಧರಿ ನೇಮಕವನ್ನು ಪ್ರಶ್ನಿಸಿ ಒಂದು … Continued

ಕಥೆ ಹೆಣೆದ’ ಆರೋಪದ ಮೇಲೆ ನಿವೃತ್ತ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಬಂಧನ, ನನ್ನ ಪ್ರಕರಣದಲ್ಲೂ ಹೀಗೆಯೇ ಮಾಡಿದ್ದಾರೆ: ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್

ನವದೆಹಲಿ: ಮಾಜಿ ಐಪಿಎಸ್‌ ಅಧಿಕಾರಿ ಆರ್‌.ಬಿ. ಶ್ರೀಕುಮಾರ್‌ ಅವರನ್ನು ಶನಿವಾರ ಗುಜರಾತ್‌ ಪೊಲೀಸರು ಬಂಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಇಸ್ರೊದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರು, ನಿವೃತ್ತ ಪೊಲೀಸ್‌ ಅಧಿಕಾರಿಯು ‘ಕಥೆಗಳನ್ನು ಸೃಷ್ಟಿಸಿ ಸಂಚಲನ ಮೂಡಿಸಲು ಯತ್ನಿಸಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ. 1994 ರ ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಅವರು ನನ್ನ ವಿಷಯದಲ್ಲಿಯೂ ಹೀಗೆ … Continued

16 ಬಂಡಾಯ ಶಾಸಕರ ವಿರುದ್ಧ ಶಿವಸೇನಾ ಕ್ರಮ ಆರಂಭಿಸಿದ ಮಧ್ಯೆಯೇ ಏಕನಾಥ ಶಿಂಧೆ ಪಾಳಯ ಸೇರಿದ ಮತ್ತೊಬ್ಬ ಸಚಿವ…!

ಮುಂಬೈ: ಶಿವಸೇನೆ ನಾಯಕತ್ವಕ್ಕೆ ಮತ್ತೊಂದು ಹಿನ್ನಡೆಯಾಗಿ ಮತ್ತೊಬ್ಬ ಸಚಿವರು ಭಾನುವಾರ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳಯಕ್ಕೆ ಸೇರಿದ್ದಾರೆ. ಕಳೆದ ನಾಲ್ಕು ದಿನಗಳಿಂದಐಷಾರಾಮಿ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಬೀಡುಬಿಟ್ಟಿರುವ ಗುವಾಹಟಿಗೆ ಬಂದಿಳಿದ ಉದಯ್ ಸಮಂತ್ ಅವರು, ಉದ್ಧವ್ ಠಾಕ್ರೆ ಗುಂಪನ್ನು ತೊರೆದ ಒಂಬತ್ತನೇ ಸಚಿವರಾಗಿದ್ದಾರೆ. ಈ ಮೊದಲು ಎಂಟು ಸಚಿವರು ಉದ್ಧವ್‌ ಠಾಕ್ರೆ ಗುಂಪನ್ನು ತೊರೆದಿದ್ದಾರೆ. … Continued

ಮಹಾರಾಷ್ಟ್ರ ಬಿಕ್ಕಟ್ಟು: ಬೆದರಿಕೆ ನಡುವೆ 15 ಬಂಡಾಯ ಸೇನಾ ಶಾಸಕರಿಗೆ Y+ ಭದ್ರತೆ ನೀಡಿದ ಕೇಂದ್ರ

ಮುಂಬೈ: ಶಿವಸೇನೆ ಕಾರ್ಯಕರ್ತರು ಶಿಂಧೆ ಪಾಳಯದಲ್ಲಿರುವ ಸೇನಾ ಶಾಸಕರ ಕಚೇರಿಗಳು ಮತ್ತು ಆಸ್ತಿಗಳನ್ನು ಧ್ವಂಸಗೊಳಿಸಿರುವ ವರದಿಗಳ ನಡುವೆ ಕೇಂದ್ರವು ಭಾನುವಾರ 15 ಬಂಡಾಯ ಶಿವಸೇನೆ ಶಾಸಕರಿಗೆ ‘ವೈ ಪ್ಲಸ್’ ಭದ್ರತೆ ನೀಡಿದೆ. ಆದರೆ, ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನು ಭದ್ರತಾ ಕವಚ ಪಟ್ಟಿಯಲ್ಲಿ ಸೇರಿಸಿಲ್ಲ. ‘ವೈ’ ವರ್ಗದ ಭದ್ರತೆಯು ಎಂಟು ಸಿಬ್ಬಂದಿಯನ್ನು ಒಳಗೊಂಡಿರುತ್ತದೆ, ಇದರಲ್ಲಿ … Continued