ಸೆಬಿ ನಿಯಮ ಉಲ್ಲಂಘನೆ: ಹಣ ಪಾವತಿಸಿ ಸಮಸ್ಯೆ ಬಗೆಹರಿಸಿಕೊಂಡ ಇಂಡಿಗೋ

ನವದೆಹಲಿ: ಸೆಬಿಯ ನಿಯಮ ಉಲ್ಲಂಘನೆಗಾಗಿ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ನಡೆಸುತ್ತಿರುವ ಇಂಟರ್‌ಗ್ಲೋಬ್‌ ಏವಿಯೇಶನ್‌ ಲಿಮಿಟೆಡ್‌ ೨.೧೦ ಕೋಟಿ ರೂ. ಭರಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡಿದೆ. ಸೆಬಿಯ ಒಪ್ಪಿಗೆಯ ಕಾರ್ಯವಿಧಾನದ ಅಡಿಯಲ್ಲಿ, ತಪ್ಪನ್ನು ಒಪ್ಪಿಕೊಳ್ಳದೇ ಅಥವಾ ಅದನ್ನು ತಪ್ಪನ್ನು ನಿರಾಕರಿಸದೆ ದಂಡವನ್ನು ಪಾವತಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದೆ. ತನ್ನ ಪಾಲುದಾರ ರಾಹುಲ್ ಭಾಟಿಯಾ ಮತ್ತು ಇಂಟರ್ … Continued

ಐಎನ್‌ಎಸ್‌ ವಿರಾಟ ಒಡೆಯಲು ಸುಪ್ರೀಂಕೋರ್ಟ್‌ ತಡೆ

ವಿಮಾನವಾಹಕ ನೌಕೆ ಐಎನ್‌ಎಸ್‌ ವಿರಾಟ್ ‌ಅನ್ನು ಒಡೆಯುವ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯ ತಡೆಯೊಡ್ಡಿದ್ದು, ವಿಶಾಲವಾದ ಹಡಗನ್ನು ವಸ್ತುಸಂಗ್ರಹಾಲಯ ಮಾಡುವಂತೆ ಆದೇಶ ನೀಡಿದೆ. ವಿಮಾನವಾಹನ ನೌಕೆಯನ್ನು ವಸ್ತುಸಂಗ್ರಹಾಲಯವಾಗಿ ರೂಪಿಸಬೇಕೆಂಬ ಎನ್ವಿಟೆಕ್‌ ಮೆರೈನ್‌ ಕನ್ಸಲ್ಟಂಟ್‌ ಲಿಮಿಟೆಡ್‌ನ ಮನವಿಯನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದ ನಂತರ ಸಂಸ್ಥೆ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಐಎನ್‌ಎಸ್‌ ವಿರಾಟನ್ನು ಒಡೆಯದೇ ಯಥಾಸ್ಥಿತಿ ಉಳಿಸಿಕೊಳ್ಳುವಂತೆ ನ್ಯಾಯಾಲಯ … Continued

ತೆಲಂಗಾಣದಲ್ಲಿ ವೈ.ಎಸ್‌.ಶರ್ಮಿಳಾ ಹೊಸ ಪಕ್ಷ.?

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ ರೆಡ್ಡಿ ಅವರ ಸೋದರಿ ವೈ.ಎಸ್.ಶರ್ಮಿಳಾ ತೆಲಂಗಾಣದಲ್ಲಿ ನೂತನ ಪಕ್ಷ ಆರಂಭಿಸುವ ಸಾಧ್ಯತೆಯಿದೆ. ೨೦೨೩ರಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕೆ.ಚಂದ್ರಶೇಖರ ರಾವ್‌ ಅವರ (ಕೆಸಿಆರ್)‌ ಪಕ್ಷಕ್ಕೆ ಪೈಪೋಟಿ ನೀಡಲು ಹೊಸ ಪಕ್ಷ ಆರಂಭಿಸಲು ಚಿಂತನೆ ನಡೆಸಿದ್ದಾರೆ. ಆಂಧ್ರಪ್ರದೇಶದ ಮಾಜಿ ಸಿಎಂ ವೈ.ಎಸ್‌.ರಾಜಶೇಖರ ಅವರ ಪುತ್ರಿ ಶರ್ಮಿಳಾ ತೆಲಂಗಾಣದಲ್ಲಿ ಭವಿಷ್ಯದ … Continued

ಎಂ.ಜೆ. ಅಕ್ಬರ್‌ ಮಾನಷ್ಟ ಮೊಕದ್ದಮೆ ತೀರ್ಪು: ಫೆ.೧೭ಕ್ಕೆ ಮುಂದೂಡಿಕೆ

ಲೈಂಗಿಕ ಕಿರುಕುಳ ಆರೋಪ ಮಾಡಿದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ದಾಖಲಿಸಿದ ಮಾನಹಾನಿ ಪ್ರಕರಣದ ತೀರ್ಪನ್ನು ದೆಹಲಿ ನ್ಯಾಯಾಲಯ ಫೆ.೧೭ಕ್ಕೆ ಮುಂದೂಡಿದೆ. ಎರಡೂ ಪಕ್ಷಗಳಿಂದ ಲಿಖಿತ ಸಲ್ಲಿಕೆಯಲ್ಲಿ ವಿಳಂಬವಾಗಿದ್ದರಿಂದ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ರವೀಂದ್ರಕುಮಾರ ಪಾಂಡೆ ತೀರ್ಪನ್ನು ಮುಂದೂಡಿದ್ದಾಗಿ ತಿಳಿಸಿದರು. ೧೯೯೪ರಲ್ಲಿ ಏಷ್ಯನ್‌ ಏಜ್‌ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ … Continued

ಕಾಂಗ್ರೆಸ್‌-ಎಡ ಪಕ್ಷಗಳ ಬಗ್ಗೆ ಮಮತಾ ಮೌನ

ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ತಮಗೆ ನೇರ ಎದುರಾಳಿ ಎಂಬುದನ್ನು ಮನಗಂಡ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳ ಬಗ್ಗೆ ಮೌನವಹಿಸಿದ್ದಾರೆ. ಇತ್ತೀಚಿನ ಚುನಾವಣಾ ಭಾಷಣಗಳಲ್ಲಿ ಅವರು ಕೇವಲ ಬಿಜೆಪಿಯನ್ನು ಮಾತ್ರ ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್‌-ಎಡ ಪಕ್ಷಗಳು ಉತ್ತಮ ಪ್ರದರ್ಶನ … Continued

೫ ವರ್ಷದಲ್ಲಿ ೬.೭೬ ಲಕ್ಷ ಜನರಿಗೆ ಭಾರತೀಯ ಪೌರತ್ವ

ನವದೆಹಲಿ: ಕೇಂದ್ರ ಸರ್ಕಾರ ಕಳೆದ 5 ವರ್ಷಗಳಲ್ಲಿ 6,76,074 ಮಂದಿಗೆ ಭಾರತೀಯ ಪೌರತ್ವವನ್ನು ನೀಡಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ. ಸಂಸದ ಕಾರ್ತಿ ಚಿದಂಬರಂ ಅವರ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರ ನೀಡಿರುವ ಅವರು 2015- 19ರ ನಡುವೆ ನೀಡಲಾಗಿರುವ ಭಾರತೀಯ ಪೌರತ್ವದ ಬಗ್ಗೆ ಮಾಹಿತಿ ನೀಡಿದ್ದಾರೆ. ವಿದೇಶದಲ್ಲಿ ನೆಲೆಸುತ್ತಿರುವವರಿಗೆ … Continued

ನ್ಯೂಸ್‌ಕ್ಲಿಕ್‌ ಸುದ್ದಿ ಪೋರ್ಟಲ್‌ ವಿರುದ್ಧ ಇಡಿ ತನಿಖೆ ಆರಂಭ

ಅದಾನಿ ಸಮೂಹ ಸಂಸ್ಥೆಯಿಂದ ೧೦೦ ಕೋಟಿ ರೂ. ಮಾನಹಾನಿ ಮೊಕದ್ದಮೆ ಎದುರಿಸುತ್ತಿರುವ ನ್ಯೂಸ್‌ಕ್ಲಿಕ್‌ ಸುದ್ದಿ ಪೋರ್ಟಲ್‌  ಕಚೇರಿ ಮೇಲೆ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಅದಾನಿ ಸಂಸ್ಥೆ ಕಳೆದ ವರ್ಷ ಪೋರ್ಟಲ್‌ನಲ್ಲಿ ಪ್ರಕಟಗೊಂಡ ಎರಡು ವರದಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಸುದ್ದಿ ಪೋರ್ಟಲ್‌  ವಿವಾದಾತ್ಮಕ ಕೃಷಿ ಕಾನೂನುಗಳ ಜಾರಿಯಿಂದ ಅದಾನಿ ಸಂಸ್ಥೆಗೆ ಲಾಭವಾಗಲಿದೆ … Continued

ಮಾ.೬ರ ನಂತರ ಆದ್ಯತಾ ಗುಂಪುಗಳಿಗೆ ಕೊವಿಡ್‌ ಲಸಿಕೆ

ನವ ದೆಹಲಿ: ಮಾರ್ಚ್‌ ೬ರ ನಂತರ ದೇಶದ ಜನಸಂಖ್ಯೆಯ ಆದ್ಯತೆಯ ಗುಂಪುಗಳಿಗೆ ಕೋವಿಡ್‌-೧೯ ಲಸಿಕೆ ಹಾಕುವ ಅಭಿಯಾನ ಆರಂಭವಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿಗೆ ಮೊದಲ ಹಂತದಲ್ಲಿ ಮಾರ್ಚ್‌ ೬ರವರೆಗೆ ಕೋವಿಡ್-‌೧೯ ಲಸಿಕೆ ನೀಡಲಾಗುವುದು. 50 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ದೀರ್ಘಕಾಲದ ಆರೋಗ್ಯ ಅಸ್ವಸ್ಥತೆ ಹೊಂದಿರುವವರಿಗೆ … Continued

ಗಡಿ ಸಮಸ್ಯೆ ಬಗೆಹರಿಯಲು ಪರಸ್ಪರ ನಂಬಿಕೆ ಹೆಚ್ಚಬೇಕು: ಚೀನಾ ರಾಯಭಾರಿ

ಚೀನಾ ಹಾಗೂ ಭಾರತ ಗಡಿ ಸಮಸ್ಯೆಗಳನ್ನು ಬಗೆಹರಿಸಲು ಪರಸ್ಪರ ಗೌರವ, ನಂಬಿಕೆ ಹೆಚ್ಚಬೇಕು, ರಚನಾತ್ಮಕ ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳಬೇಕು ಎಂದು ಚೀನಾದ ರಾಯಭಾರಿ ಸನ್‌ ವೀಡಾಂಗ್‌ ಹೇಳಿದ್ದಾರೆ. ಗಡಿ ಸಮಸ್ಯೆ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಎರಡೂ ದೇಶಗಳು ಒಂದೊಂದು ಹೆಜ್ಜೆ ಮುಂದಿಡಬೇಕು ಎಂದು ತಿಳಿಸಿದ್ದಾರೆ. ಲದಾಖ್‌ ಸೆಕ್ಟರ್‌ನಲ್ಲಿ ವಾಸ್ತವ ನಿಯಂತ್ರಣ ಗಡಿರೇಖೆ ಕುರಿತು ವಿವಾದ ಉಂಟಾಗಿರುವ ಸಂದರ್ಭದಲ್ಲಿ … Continued

ಗಣರಾಜ್ಯೋತ್ಸವ ಹಿಂಸಾಚಾರ: ಮತ್ತೊಬ್ಬ ಆರೋಪಿ ಬಂಧನ

ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪಂಜಾಬ್‌ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಇಕ್ಬಾಲ್‌ ಸಿಂಗ್‌ನನ್ನು ಹೋಶಿಯಾರ್ಪುರದಿಂದ ಬಂಧಿಸಲಾಗಿದೆ ಎಂದು ಉಪ ಪೊಲೀಸ್‌ ಆಯುಕ್ತ ಸಂಜೀವಕುಮಾರ ಯಾದವ ತಿಳಿಸಿದ್ದಾರೆ. ಇಕ್ಬಾಲ್ ಸಿಂಗ್ ಅವರು ಕಥಾ ವಚಕ್ ಆಗಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಧಾರ್ಮಿಕ ಪ್ರಾರ್ಥನೆ ನಡೆಸುತ್ತಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜನವರಿ … Continued