ಚಂದ್ರಯಾನ-3 : ಚಂದ್ರನ ಮೇಲೆ ಬೆಳಗಾಗುತ್ತಿದ್ದಂತೆ ಪ್ರಗ್ಯಾನ್ ರೋವರ್, ವಿಕ್ರಂ ಲ್ಯಾಂಡರ್ ಪುನಶ್ಚೇತನಗೊಳಿಸಲು ಇಸ್ರೋ ಸಿದ್ಧತೆ

ನವದೆಹಲಿ : ಚಂದ್ರನ ದಕ್ಷಿಣ ಧ್ರುವದ ಮೇಲೆ ಬೆಳಕಾಗುತ್ತಿದ್ದಂತೆ, ಇಸ್ರೋ ಈಗ ತನ್ನ ಚಂದ್ರಯಾನ-3 ರ ಸೌರಶಕ್ತಿ ಚಾಲಿತ ಲ್ಯಾಂಡರ್ ವಿಕ್ರಂ ಮತ್ತು ರೋವರ್ ಪ್ರಗ್ಯಾನ್‌ನೊಂದಿಗೆ ಸಂವಹನವನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದೆ. ಅವುಗಳನ್ನು ಪುನರುಜ್ಜೀವನಗೊಳಿಸಿದರೆ ವೈಜ್ಞಾನಿಕ ಪ್ರಯೋಗಗಳನ್ನು ಮುಂದುವರಿಸಬಹುದಾಗಿದೆ. ಲ್ಯಾಂಡರ್ ಮತ್ತು ರೋವರ್ ಎರಡನ್ನೂ ಈ ತಿಂಗಳ ಆರಂಭದಲ್ಲಿ ಚಂದ್ರನಲ್ಲಿ ರಾತ್ರಿಯಾಗುವ ಮೊದಲು ಕ್ರಮವಾಗಿ ಸೆಪ್ಟೆಂಬರ್ 4 … Continued

ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿಯೂ ಅಂಗೀಕಾರ

ನವದೆಹಲಿ: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮಹತ್ವದ ಮಸೂದೆಗೆ ರಾಜ್ಯಸಭೆ ಗುರುವಾರ ಅನುಮೋದನೆ ನೀಡಿದೆ. 128ನೇ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಬುಧವಾರ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸಲಾಯಿತು. ರಾಜ್ಯಸಭೆಯ ಒಪ್ಪಿಗೆಯೊಂದಿಗೆ, ಐತಿಹಾಸಿಕ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಮಹಿಳಾ ಮೀಸಲು ಮಸೂದೆಯ ಅಂಗೀಕಾರವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, … Continued

ಭಾರತದ ವೈದ್ಯಕೀಯ ಪದವೀಧರರು ಇನ್ಮುಂದೆ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ. ಇತರ ದೇಶಗಳಲ್ಲಿ ಪ್ರಾಕ್ಟೀಸ್‌ ಮಾಡಬಹುದು

ನವದೆಹಲಿ: ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC)ಕ್ಕೆ ವಿಶ್ವ ವೈದ್ಯಕೀಯ ಶಿಕ್ಷಣ ಫೆಡರೇಶನ್ (WFME) 10 ವರ್ಷಗಳ ಅವಧಿಯ ಮಾನ್ಯತೆಯ ಸ್ಥಾನಮಾನ ನೀಡಿದೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಇದರಿಂದಾಗಿ ಇನ್ನು ಮುಂದೆ ಭಾರತೀಯ ವೈದ್ಯಕೀಯ ಪದವೀಧರರು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ತರಬೇತಿ … Continued

ಕೆನಡಾದಲ್ಲಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆ ಮಾಡಿದ್ದು ತಾನೇ ಎಂದ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್

ನವದೆಹಲಿ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಕೆನಡಾದ ವಿನ್ನಿಪೆಗ್ ನಗರದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ ಎಂದು ಆತನ ಗ್ಯಾಂಗ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಪೋಸ್ಟ್‌ನಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಸುಖಾ ದುನುಕೆ ಎಂದೂ ಕರೆಯಲ್ಪಡುವ ಸುಖದೂಲ್ ಸಿಂಗ್ ಗ್ಯಾಂಗ್‌ಸ್ಟರ್‌ಗಳಾದ ಗುರ್ಲಾಲ್ ಬ್ರಾರ್ ಮತ್ತು ವಿಕ್ಕಿ ಮಿಡ್ಖೇರಾ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. … Continued

ಸೆಪ್ಟೆಂಬರ್‌ ಕೊನೆಗೆ ಉತ್ತಮ ಮಳೆ, ಭಾರತದಲ್ಲಿ ಈ ಬಾರಿ ಸುದೀರ್ಘ ಮಳೆಗಾಲ: ಹವಾಮಾನ ಇಲಾಖೆಯ ಮಹತ್ವದ ಮಾಹಿತಿ

ನವದೆಹಲಿ : ಈ ಬಾರಿ ಸುದೀರ್ಘ ಮಳೆಗಾಲಕ್ಕೆ ಭಾರತ ಸಾಕ್ಷಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನೂ ಕೆಲವು ದಿನಗಳವರೆಗೆ ನೈಋತ್ಯ ಮಾನ್ಸೂನ್ ಭಾರತದಾದ್ಯಂತ ವಿಸ್ತರಿಸುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ. ಪ್ರಸ್ತುತ ಹವಾಮಾನ ಪರಿಸ್ಥಿತಿಗಳು ಮುಂದಿನ ಕೆಲವು ದಿನಗಳಲ್ಲಿ ಮಾನ್ಸೂನ್ ಕಡಿಮೆಯಾಗುವ ಸಾಧ್ಯತೆಯಿಲ್ಲ ಎಂದು … Continued

ರಾಜತಾಂತ್ರಿಕ ಬಿಕ್ಕಟ್ಟಿನ ನಂತರ ಕೆನಡಾ ಪ್ರಜೆಗಳಿಗೆ ಭಾರತೀಯ ವೀಸಾ ಸ್ಥಗಿತಗೊಳಿಸಿದ ಸರ್ಕಾರ

ನವದೆಹಲಿ: ಭಾರತವು ಗುರುವಾರ ಕೆನಡಾದ ನಾಗರಿಕರಿಗೆ ವೀಸಾ ನೀಡುವಿಕೆಯನ್ನು “ಮುಂದಿನ ಸೂಚನೆಯವರೆಗೆ” ಸ್ಥಗಿತಗೊಳಿಸಿದೆ. ಕೆನಡಾದ ಪ್ರಜೆಗಳ ವೀಸಾ ಅರ್ಜಿಗಳ ಪ್ರಾಥಮಿಕ ಪರಿಶೀಲನೆಗಾಗಿ ನೇಮಕಗೊಂಡ ಖಾಸಗಿ ಏಜೆನ್ಸಿಯಾದ BLS ಇಂಟರ್‌ನ್ಯಾಶನಲ್‌ನ ಸೂಚನೆಯು “ಕಾರ್ಯಾಚರಣೆಯ ಕಾರಣಗಳಿಂದಾಗಿ… ಮುಂದಿನ ಸೂಚನೆ ಬರುವವರೆಗೆ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ. ಖಲಿಸ್ತಾನ್ ಪರ ಸಿಖ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ … Continued

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕೆಂಪು ಅಂಗಿ ತೊಟ್ಟು ʼಹಮಾಲಿʼಯಾದ ರಾಹುಲ್ ಗಾಂಧಿ | ವೀಕ್ಷಿಸಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ದೆಹಲಿಯ ಆನಂದ್ ವಿಹಾರ ರೈಲು ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿದರು ಮತ್ತು ಕೆಂಪು “ಕೂಲಿ” ಶರ್ಟ್ ಮತ್ತು ಕೈಗೆ ಬ್ಯಾಡ್ಜ್ ಕಟ್ಟಿಕೊಂಡು ತಲೆಯ ಮೇಲೆ ಲಗೇಜ್ ಹೊತ್ತುಕೊಂಡು ಸಾಗಿದರು. ವೈರಲ್ ಕ್ಲಿಪ್‌ನಲ್ಲಿ, ವಯನಾಡ್ ಸಂಸದ ತಲೆಯ ಮೇಲೆ ಟ್ರಾಲಿ ಬ್ಯಾಗ್ ಇರಿಸುತ್ತಿರುವುದು ಹಾಗೂ ಪೋರ್ಟರ್‌ಗಳು ಅವರನ್ನು ಸುತ್ತುವರೆದಿರುವುದನ್ನು … Continued

ಜಿ20 ಸಮಯದಲ್ಲಿ ಭಾರತ ನೀಡಿದ ಅಧ್ಯಕ್ಷೀಯ ಸೂಟ್‌ನಲ್ಲಿ ಉಳಿಯಲು ನಿರಾಕರಿಸಿದ್ದ ಕೆನಡಾದ ಪ್ರಧಾನಿ ಟ್ರುಡೊ : ವರದಿ…!

ನವದೆಹಲಿ: ಭಾರತದಲ್ಲಿ G20 ಶೃಂಗಸಭೆಯ ಸಂದರ್ಭದಲ್ಲಿ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ನವದೆಹಲಿಯ ದಿ ಲಲಿತ್ ಹೋಟೆಲ್‌ನಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಅಧ್ಯಕ್ಷೀಯ ಸೂಟ್‌ (ರೂಂ)ನಲ್ಲಿ ಉಳಿಯಲು ನಿರಾಕರಿಸಿದ್ದರು. ಇದು ಹೀಗಾಗಿ ಭಾರತೀಯ ಗುಪ್ತಚರ ಅಧಿಕಾರಿಗಳಲ್ಲಿ ಕಳವಳಕ್ಕೆ ಕಾರಣವಾಗಿತ್ತು ಎಂದು ವರದಿಯೊಂದು ತಿಳಿಸಿದೆ. ಮೂಲಗಳ ಪ್ರಕಾರ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ನವದೆಹಲಿಯ … Continued

ಮೆಕ್ಸಿಕೋದ “ಅನ್ಯಲೋಕದ ಜೀವಿ” ದೇಹದ ವೈಜ್ಞಾನಿಕ ವಿಶ್ಲೇಷಣೆ : ದೇಹದೊಳಗೆ ಮೊಟ್ಟೆಗಳು ಪತ್ತೆ

ಮೆಕ್ಸಿಕನ್ ವೈದ್ಯರು ಕಳೆದ ವಾರ ಬಹಿರಂಗಪಡಿಸಿದ ಎರಡು “ಮಾನವ-ಅಲ್ಲದ” ಅನ್ಯಲೋಕದ ಶವಗಳ ಮೇಲೆ ವ್ಯಾಪಕವಾದ ಪ್ರಯೋಗಾಲಯದ ಅಧ್ಯಯನಗಳನ್ನು ನಡೆಸಲಾಗಿದೆ. ಸೋಮವಾರ ನೂರ್ ಕ್ಲಿನಿಕ್‌ನಲ್ಲಿ ನೌಕಾಪಡೆಯ ಫೋರೆನ್ಸಿಕ್ ವೈದ್ಯ ಜೋಸ್ ಡಿ ಜೀಸಸ್ ಜಾಲ್ಸೆ ಬೆನಿಟೆಜ್ ಅವರು ಪರೀಕ್ಷೆಗಳನ್ನು ನಡೆಸಿದರು. “ತಲೆಬುರುಡೆಗಳ ಯಾವುದೇ ಜೋಡಣೆ ಅಥವಾ ಕುಶಲತೆಯ ಯಾವುದೇ ಪುರಾವೆಗಳು ಕಂಡುಬಂದಿಲ್ಲ” ಎಂದು ಡಾ ಬೆನಿಟೆಜ್ ಹೇಳಿದ್ದಾರೆ. … Continued

454-2 ಬಹುಮತದೊಂದಿಗೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ (ಸಂವಿಧಾನ (128 ನೇ ತಿದ್ದುಪಡಿ ಮಸೂದೆ)) 2023 ಅನ್ನು ಲೋಕಸಭೆಯು ಬುಧವಾರ (ಸೆಪ್ಟೆಂಬರ್ 20) ಅಂಗೀಕರಿಸಿತು, ಅದರ ಪರವಾಗಿ 454 ಮತಗಳು ಮತ್ತು ಅದರ ವಿರುದ್ಧ ಎರಡು ಮತಗಳು ಚಲಾವಣೆಯಾದವು. ಹೊಸ ಸಂಸತ್ ಭವನದಲ್ಲಿ ಸದನದ ಮೊದಲ ದಿನವಾದ ಮಂಗಳವಾರ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು … Continued