ಅನುಮತಿ ಇಲ್ಲದೆ ನಿರ್ಮಾಣ ಹಂತದ ಮೇಲ್ಸೇತುವೆ ಉದ್ಘಾಟನೆ: ಆದಿತ್ಯ ಠಾಕ್ರೆ ವಿರುದ್ಧ ಎಫ್‌ ಐ ಆರ್

ಮುಂಬೈ: ಕಾಮಗಾರಿ ಪೂರ್ಣವಾಗದ ಸೇತುವೆಯನ್ನು ಉದ್ಘಾಟಿಸಿದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಅಧಿಕಾರಿಗಳ ಅನುಮತಿ ಇಲ್ಲದೆ ನಗರದ ಲೋವರ್ ಪರೆಲ್‌ ನಲ್ಲಿರುವ ಡೆಲಿಸ್ಲೆ ಮೇಲ್ಸೇತುವೆಯನ್ನು ಉದ್ಘಾಟಿಸಿದ ಆರೋಪದ ಮೇಲೆ ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ, ಸುನಿಲ ಶಿಂಧೆ ಹಾಗೂ ಸಚಿನ್ ಅಹಿರ್ ವಿರುದ್ಧ ಎಫ್ಐಆರ್ … Continued

ವಿಶ್ವಕಪ್ 2023 ರ ಫೈನಲ್ ಸಮಾರಂಭ: ಏರ್ ಶೋನಿಂದ ಸಂಗೀತ ಕಾರ್ಯಕ್ರಮಗಳವರೆಗೆ… ಅಹಮದಾಬಾದ್‌ನಲ್ಲಿ ಐಸಿಸಿಯ‌ ಅದ್ಭುತ ವಿದಾಯ ಕಾರ್ಯಕ್ರಮ

ಅಭೂತಪೂರ್ವ ಸಮಾರೋಪ ಸಮಾರಂಭದೊಂದಿಗೆ ವಿಶ್ವಕಪ್ 2023 ಪಂದ್ಯಾವಳಿಗೆ ವಿದಾಯ ಹೇಳಲು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕೈಜೋಡಿಸಿದೆ. ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಬಿಸಿಸಿಐ ವಿವಿಧ ಕಾರ್ಯಕ್ರಮಗಳೊಂದಿಗೆ ಅಭಿಮಾನಿಗಳನ್ನು ರಂಜಿಸಲು ನೋಡುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ … Continued

ಅರ್ಜುನ ರಣತುಂಗರ ‘ಹಾಸ್ಯಾಸ್ಪದ’ ಹೇಳಿಕೆಗಳ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಬಳಿ ವಿಷಾದ ವ್ಯಕ್ತಪಡಿಸಿದ ಶ್ರೀಲಂಕಾ ಸರ್ಕಾರ

ಕೊಲಂಬೊ : ಮಾಜಿ ನಾಯಕ ಅರ್ಜುನ ರಣತುಂಗ ನೀಡಿದ ಹಾಸ್ಯಾಸ್ಪದ ಹೇಳಿಕೆಗಳ ಬಗ್ಗೆ ಶ್ರೀಲಂಕಾ ಸರ್ಕಾರವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ ಶಾ ಅವರಿಗೆ ಅಧಿಕೃತವಾಗಿ ಕ್ಷಮೆಯಾಚಿಸಿದೆ. ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗಾ ಶ್ರೀಲಂಕಾ ಕ್ರಿಕೆಟ್‌ನ ಅವನತಿಗೆ ಜಯ ಶಾ ಅವರೇ … Continued

ಭಾರತೀಯರು ಸಾಮಾನ್ಯವಾಗಿ ಬಳಸುವ 10 ಪಾಸ್‌ವರ್ಡ್‌ : ಪಟ್ಟಿ ಇಲ್ಲಿದೆ…ನಿಮ್ಮ ಪಾಸ್‌ವರ್ಡ್‌ಗಳು ಈ ಪಟ್ಟಿಯಲ್ಲಿದೆಯೇ…?

ಬಹು ಸಾಧನಗಳಲ್ಲಿ ಪಾಸ್‌ವರ್ಡ್‌ಗಳನ್ನು ನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ. ಪ್ರಕ್ರಿಯೆಯನ್ನು ಸರಳಗೊಳಿಸಲು, ನಮ್ಮಲ್ಲಿ ಹಲವರು ಸಾಧನಗಳನ್ನು ಅನ್ಲಾಕ್ ಮಾಡಲು ಮತ್ತು ವಿವಿಧ ಖಾತೆಗಳಿಗೆ ಲಾಗ್ ಇನ್ ಮಾಡಲು ಮೂಲ ಪಾಸ್ವರ್ಡ್ಗಳನ್ನು ಬಳಸುತ್ತಾರೆ. ಆದಾಗ್ಯೂ, ಈ ಅನುಕೂಲವು ಗಮನಾರ್ಹ ಅಪಾಯದೊಂದಿಗೆ ಬರುತ್ತದೆ. ಯಾಕೆಂದರೆ ಸಾಮಾನ್ಯ ಪಾಸ್‌ವರ್ಡ್‌ಗಳು ಹ್ಯಾಕರ್‌ಗಳಿಗೆ ಸುಲಭವಾದ ಗುರಿಯಾಗುತ್ತದೆ. NordVPN ನ ವರದಿಯು ಭಾರತದಲ್ಲಿ ಸಾಮಾನ್ಯವಾಗಿ ಬಳಸುವ … Continued

ಹರಿಯಾಣದ ಖಾಸಗಿ ವಲಯದ ಉದ್ಯೋಗದಲ್ಲಿ ಸ್ಥಳೀಯರಿಗೆ 75% ಮೀಸಲಾತಿ : ಅಸಂವಿಧಾನಿಕ ಎಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಚಂಡೀಗಢ : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ನೀಡಿರುವ 75% ಮೀಸಲನ್ನು ಅಸಾಂವಿಧಾನಿಕ ಎಂದು ಹೇಳಿದೆ. ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಹರ್‌ಪ್ರೀತ್ ಕೌರ್ ಜೀವನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ-2020, ಸಂವಿಧಾನದ ಭಾಗ 3 ರ ಉಲ್ಲಂಘನೆಯಾಗಿದೆ ಎಂದು ಹೇಳಿದೆ. … Continued

ಮರಣದಂಡನೆ ವಿರುದ್ಧ ಕೇರಳ ನರ್ಸ್‌ನ ಮೇಲ್ಮನವಿ ವಜಾಗೊಳಿಸಿದ ಯೆಮೆನ್ ಸುಪ್ರೀಂ ಕೋರ್ಟ್

ನವದೆಹಲಿ : ಯೆಮೆನ್ ಪ್ರಜೆಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ 2017ರಿಂದ ಆ ದೇಶದಲ್ಲಿ ಸೆರೆವಾಸ ಅನುಭವಿಸುತ್ತಿರುವ ಕೇರಳದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಿರುವ ಮರಣದಂಡನೆ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ಯೆಮೆನ್ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ತಲಾಲ್ ಅಬ್ದೋ ಮಹದಿ ಎಂಬಾತನ ಬಳಿಯಿಂದ ತನ್ನ ಪಾಸ್‌ಪೋರ್ಟ್ ಅನ್ನು ಹಿಂಪಡೆಯುವ ಪ್ರಯತ್ನದಲ್ಲಿ ನಿಮಿಷಾ ಪ್ರಿಯಾ ನಿದ್ರಾಜನಕವನ್ನು ಚುಚ್ಚುಮದ್ದಿನ … Continued

ಎಸ್‌ಬಿಐ ನಿಂದ 8283 ಜೂನಿಯರ್ ಅಸೋಸಿಯೇಟ್ಸ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾವು 8283 ಜೂನಿಯರ್ ಅಸೋಸಿಯೇಟ್‌ (ಕಸ್ಟಮರ್ ಸಪೋರ್ಟ್‌ ಮತ್ತು ಸೇಲ್ಸ್‌) ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್‌ ಪ್ರಕಟಿಸಿದೆ. ಆಸಕ್ತರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಪದವಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಸಲು ಡಿಸೆಂಬರ್ 07 ರವರೆಗೆ ಅವಕಾಶವಿದೆ. ಅರ್ಜಿ ಸಲ್ಲಿಕೆ ಹಾಗೂ ಇತರೆ ಮಾಹಿತಿಗಾಗಿ ಎಸ್‌ಬಿಐ’ನ ಕರಿಯರ್‌ ವೆಬ್‌ಸೈಟ್‌ … Continued

ಕುಲ್ಗಾಮ್ ಎನ್‌ಕೌಂಟರ್: ಐವರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

ಕುಲ್ಗಾಮ್: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಒಟ್ಟು ಐವರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳು ದೋಷಾರೋಪಣೆಯ ವಸ್ತುಗಳನ್ನು ಸಹ ವಶಪಡಿಸಿಕೊಂಡಿವೆ. ಕಾಶ್ಮೀರ ವಲಯ ಪೊಲೀಸರ ಪ್ರಕಾರ, ಕುಲ್ಗಾಮ್ ಪೊಲೀಸ್, ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜಂಟಿ ತಂಡದಿಂದ … Continued

ದುಬೈ ಲಾಟರಿಯಲ್ಲಿ 45 ಕೋಟಿ ರೂ. ಬಂಪರ್‌ ಬಹುಮಾನ ಗೆದ್ದು ರಾತ್ರೋರಾತ್ರಿ ಕೋಟ್ಯಧಿಪತಿಯಾದ ಭಾರತದ ವ್ಯಕ್ತಿ….!

ದುಬೈ: 39 ವರ್ಷದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಇತ್ತೀಚಿನ ಮಹ್ಝೂಜ್ ಡ್ರಾದಲ್ಲಿ 20 ಮಿಲಿಯನ್ ದಿರ್ಹಾಮ್ಸ್ ( 45,32,59,200 ರೂ.) ಬಹುಮಾನವನ್ನು ಗೆದ್ದ ನಂತರ ಕೋಟ್ಯಾಧಿಪತಿಯಾಗಿದ್ದಾರೆ. ಶ್ರೀಜು ಬುಧವಾರ ಪ್ರಕಟಗೊಂಡ ಲಾಟರಿ ಫಲಿತಾಂಶದಲ್ಲಿ 45 ಕೋಟಿ ರೂಪಾಯಿ ಗೆಲ್ಲುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ವಿಜೇತ ಶ್ರೀಜು ಯುಎಇಯಲ್ಲಿ … Continued

ಇನ್ಮುಂದೆ ಪ್ರತಿ ತಿಂಗಳು ಚಾಮುಂಡೇಶ್ವರಿ ದೇವಿಗೂ ತಲುಪಲಿದೆ ಗೃಹಲಕ್ಷ್ಮೀ ಯೋಜನೆ ಹಣ

ಮೈಸೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯನ್ನು ಚಾಮುಂಡೇಶ್ವರಿ ದೇವಿಗೆ ಅರ್ಪಿಸಿದ್ದು, ಪ್ರತಿ ತಿಂಗಳು ದೇವಸ್ಥಾನಕ್ಕೆ 2 ಸಾವಿರ ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ. ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಗಿತ್ತು. ಈ ವೇಳೆ ನಾಡದೇವತೆ ಚಾಮುಂಡೇಶ್ವರಿಗೆ … Continued