ಶಾಕಿಂಗ್‌…| ತಪ್ಪು ಮಾರ್ಗ ತೋರಿಸಿದ ಜಿಪಿಎಸ್‌ ; ಮುರಿದುಬಿದ್ದ ಸೇತುವೆಯಿಂದ ಕಾರು ನದಿಗೆ ಬಿದ್ದು ಮೂವರು ಸಾವು…!

ಜಿಪಿಎಸ್ ದೋಷದಿಂದಾಗಿ ಕಾರೊಂದು ಮುರಿದು ಬಿದ್ದ ಸೇತುವೆಯಿಂದ ರಾಮಗಂಗಾ ನದಿಗೆ ಬಿದ್ದು ಮೂವರು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಖಲ್ಪುರ-ದತಗಂಜ್ ರಸ್ತೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಮೃತರು ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ಪ್ರಯಾಣಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ. ನ್ಯಾವಿಗೇಷನ್‌ಗಾಗಿ ಜಿಪಿಎಸ್ ಬಳಸಿ ಅದು … Continued

ಐಪಿಎಲ್ 2025 ಹರಾಜು : ಮಾರಾಟದಲ್ಲಿ ಅಯ್ಯರ್ 26.75 ಕೋಟಿ ರೂ. ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ರಿಷಭ ಪಂತ…! ಅತ್ಯಂತ ದುಬಾರಿ 5 ಭಾರತೀಯ ಆಟಗಾರರು

ನವದೆಹಲಿ: ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಐಪಿಎಲ್ 2025 ಹರಾಜು ಭಾನುವಾರ ಆರಂಭವಾಗಿದ್ದು, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಭಾನುವಾರ (ನವೆಂಬರ್ 24) ಈ ಇಬ್ಬರು ಆಟಗಾರರು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದ್ದಾರೆ. ಮಾಜಿ ಡೆಲ್ಲಿ ಕ್ಯಾಪಿಟಲ್ಸ್ ಜೋಡಿಯನ್ನು ಪ್ರಾಂಚೈಸಿಗಳಾದ ಎಲ್‌ಸಿಜಿ ಮತ್ತು ಪಂಜಾಬ್ … Continued

ಮಸೀದಿಯ ಸರ್ವೆಗೆ ವಿರೋಧ ; ಘರ್ಷಣೆಯಲ್ಲಿ ಮೂವರು ಸಾವು

ಲಕ್ನೋ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಭಾನುವಾರ ಮಸೀದಿಯೊಂದರ ಸಮೀಕ್ಷೆಗೆ ವಿರೋಧಿಸಿದ ಗುಂಪೊಂದು ಪೊಲೀಸರೊಂದಿಗೆ ನಡೆಸಿದ ಹಿಂಸಾತ್ಮಕ ಘರ್ಷಣೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಮೊಘಲರು ಮಸೀದಿ ನಿರ್ಮಿಸಲು ದೇವಾಲಯವನ್ನು ಕೆಡವಿದ್ದಾರೆ ಎಂಬ ದೂರಿನ ಆಧಾರದ ಮೇಲೆ ನ್ಯಾಯಾಲಯವು ಸಮೀಕ್ಷೆ ನಡೆಸಲು ನೀಡಿದ ಆದೇಶದ ಮೇರೆಗೆ ಮಸೀದಿ ಸಮೀಕ್ಷೆಯನ್ನು ಪ್ರಾರಂಭಿಸಲಾಯಿತು. ಸಮೀಕ್ಷಾ ತಂಡ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ … Continued

ವೀಡಿಯೊ…| ಚುನಾವಣೆಯಲ್ಲಿ ಗೆಲುವು ; ವಿಜಯೋತ್ಸವದ ವೇಳೆ ಒಮ್ಮೆಗೇ ಹೊತ್ತಿ ಉರಿದ ಬೆಂಕಿ, ಹಲವರಿಗೆ ಗಾಯ

ಬೆಳಗಾವಿ: ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಚಂದಗಢ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಿವಾಜಿ ಪಾಟೀಲ ಅವರ ವಿಜಯೋತ್ಸವದ ವೇಳೆ ಅವಘಡ ಸಂಭವಿಸಿದೆ. ಅವಘಡದಲ್ಲಿ ಮೆರವಣಿಗೆಯಲ್ಲಿದ್ದ ಕೆಲ ಮಹಿಳೆಯರಿಗೂ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಗಡಿಭಾಗವಾದ ಮಹಾರಾಷ್ಟ್ರದ ಚಂದಗಢ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದ … Continued

ಮಹಾರಾಷ್ಟ್ರದಲ್ಲಿ 235 ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ಬರೆದ ʼಮಹಾಯುತಿʼ ; ಜಾರ್ಖಂಡ್‌ನಲ್ಲಿ 56 ಸ್ಥಾನಗಳಲ್ಲಿ ಗೆದ್ದ ಇಂಡಿಯಾ ಮೈತ್ರಿಕೂಟ

ನವದೆಹಲಿ: ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ 235 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ‘ಪ್ರಚಂಡ’ ಗೆಲುವು ಸಾಧಿಸಿದೆ. ಜಾರ್ಖಂಡ್ ನಲ್ಲಿ ಇಂಡಿಯಾ ಮೈತ್ರಿಕೂಟ (INDIA bloc) 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳಲ್ಲಿ ಮಹಾಯುತಿ ಮೈತ್ರಿಕೂಟ 235  ಕ್ಷೇತ್ರಗಳಲ್ಲಿ … Continued

ವಯನಾಡು ಉಪಚುನಾವಣೆ: ರಾಹುಲ್‌ ಗಾಂಧಿಗಿಂತ ಹೆಚ್ಚಿನ ಅಂತರದಲ್ಲಿ ಜಯಗಳಿಸಿದ ಸಹೋದರಿ ಪ್ರಿಯಾಂಕಾ ಗಾಂಧಿ…!

ತಿರುವನಂತಪುರಂ: ಇಡೀ ದೇಶದ ಗಮನ ಸೆಳೆದಿದ್ದ ವಯನಾಡು (Wayanad) ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ (Priyanka Gandhi) 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ಸಹೋದರ ರಾಹುಲ್‌ ಗಾಂಧಿ … Continued

ಆಹಾರ ನಿಗಮದ (FCI) ಗೋಡೌನ್‌ನಲ್ಲಿ ಹೂಳಲಾಗಿದ್ದ 145 ಮಂಗಗಳ ಶವಗಳು ಪತ್ತೆ…!

ಲಕ್ನೋ: ಒಂದು ವಾರದ ಹಿಂದೆ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಗೋದಾಮಿನಲ್ಲಿ 145 ಮಂಗಗಳನ್ನು ಸತ್ತಿದ್ದು, ಅವುಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಹತ್ರಾಸ್ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶುಕ್ರವಾರ (ನವೆಂಬರ್ 22) ಪೊಲೀಸರು ಗುಂಡಿಯಲ್ಲಿ ಹೂತಿದ್ದ ಮಂಗಗಳ ದೇಹಗಳನ್ನು ಹೊರತೆಗೆದಿದ್ದಾರೆ. ನಂತರ ಪಶುವೈದ್ಯರ ತಂಡವು ಶವಗಳನ್ನು … Continued

ವಿಧಾನಸಭೆ ಚುನಾವಣೆ ಮತ ಎಣಿಕೆ : ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಬಹುದೊಡ್ಡ ಲೀಡ್‌ ; ಜಾರ್ಖಂಡದಲ್ಲಿ ಇಂಡಿಯಾ ಬಣಕ್ಕೆ ಮುನ್ನಡೆ

ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ (Maharashtra, Jharkhand Election Result) ರಾಜ್ಯ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ನಡೆಯುತ್ತಿದ್ದು, ಎರಡೂ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. 288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ, ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಮಹಾಯುತಿ ಮೈತ್ರಿಕೂಟವು … Continued

ವೀಡಿಯೊ..| ಊರಿಗೆ ಬಂದ ವ್ಯಾಘ್ರ ; ಕಲ್ಲು, ಇಟ್ಟಿಗೆಯಿಂದ ಹೊಡೆದ ಜನ : ದೃಷ್ಟಿ ಕಳೆದುಕೊಂಡ ಹುಲಿ

ಗುವಾಹತಿ : ಹುಲಿಯನ್ನು ಕಂಡು ಭಯಭೀತರಾದ ಜನರು ಅದರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದ ಪರಿಣಾಮ ಹುಲಿಯೊಂದು ತೀವ್ರವಾಗಿ ಗಾಯಗೊಂಡಿದೆ. ಅಲ್ಲದೆ, ಚೂಪಾದ ಕಲ್ಲುಗಳು ತಗುಲಿ ಹುಲಿಯ ಮೆದುಳಿಗೆ ಗಾಯವಾಗಿ ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿದೆ. ಈ ಘಟನೆ ಅಸ್ಸಾಂನ ಕಲಿಯಾಬೋರ್‌ ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅಸ್ಸಾಂ ನ ಅರಣ್ಯ ಪ್ರದೇಶದ ಪೊದೆಗಳಲ್ಲಿ ಬಹಿರಂಗವಾಗಿ … Continued

ಅಂತ್ಯಕ್ರಿಯೆ ನಡೆಸುವಾಗ ಕಣ್ಣು ಬಿಟ್ಟ ಚಿತೆ ಮೇಲಿಟ್ಟ ಶವ …! ಮೂವರು ವೈದ್ಯರು ಅಮಾನತು..!!

ಜೈಪುರ : ಅಂತ್ಯಕ್ರಿಯೆ ನಡೆಸಲು ಚಿತೆ ಮೇಲೆ ಮಲಗಿಸಿದ್ದ 25 ವರ್ಷದ ಯುವಕನೊಬ್ಬ ಕಣ್ಣು ಬಿಟ್ಟ ಘಟನೆ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದಿದೆ.ಈ ಘಟನೆ ಸಂಬಂಧ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ ಸೇರಿದಂತೆ ನಾಲ್ವರು ವೈದ್ಯರನ್ನು ಅಮಾನತುಗೊಳಿಸಲಾಗಿದೆ. ಆತ ಎಚ್ಚರಗೊಂಡ ತಕ್ಷಣ ಆಂಬುಲೆನ್ಸ್ ಕರೆಸಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಸ್ಥಿತಿ ಸ್ಥಿರವಾಗಿದೆ ಎಂದು … Continued