ಸಂಭಾಲ್ ಜಾಮಾ ಮಸೀದಿ ಸರ್ವೆ ಕುರಿತ ಟ್ರಯಲ್ ಕೋರ್ಟ್ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

ನವದೆಹಲಿ: ಉತ್ತರ ಪ್ರದೇಶದ ಸಂಭಾಲ್ ನ ಜಾಮಾ ಮಸೀದಿ ಸರ್ವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿ ಸಮೀಕ್ಷೆ ಕುರಿತ ಟ್ರಯಲ್ ಕೋರ್ಟ್ ವಿಚಾರಣೆಗೆ ‘ಸುಪ್ರೀಂ ಕೋರ್ಟ್’ ಶುಕ್ರವಾರ ತಡೆ ನೀಡಿದ್ದು, ಶಾಂತಿ ಕಾಪಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಶುಕ್ರವಾರ ಸೂಚನೆ ನೀಡಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ ಮೊರೆ ಹೋಗುವಂತೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ … Continued

ಅಶ್ಲೀಲ ವೀಡಿಯೊ ಪ್ರಕರಣ: ಉದ್ಯಮಿ ರಾಜ ಕುಂದ್ರಾ ಮನೆ ಮೇಲೆ ಇ.ಡಿ.ದಾಳಿ

ಮುಂಬೈ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ (Raj Kundra) ಮನೆ ಸೇರಿದಂತೆ ಹಲವರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ED Raid ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಅಶ್ಲೀಲ ವೀಡಿಯೊ ರೆಕಾರ್ಡಿಂಗ್‌ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಇ.ಡಿ. ಅಧಿಕಾರಿಗಳು ಮುಂಬೈನ ಕುಂದ್ರಾ ಅವರ … Continued

ಒಂದು ತಿಂಗಳಲ್ಲಿ 5 ಕೊಲೆ ; ರೈಲು ಪ್ರಯಾಣಿಕರೇ ಟಾರ್ಗೆಟ್‌ : ಊರಿಂದ ಊರಿಗೆ ಅಲೆಯುತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದೇ ರೋಚಕ…!

ಅಹಮದಾಬಾದ್‌ : ಒಂದು ತಿಂಗಳ ಅಂತರದಲ್ಲಿ ಐವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ರೈಲು ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡಿ ಅವರನ್ನು ಕೊಲೆ ಮಾಡಿ ಪರಾರಿಯಾಗಿ ಊರಿಂದ ಊರಿಗೆ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದೇ ರೋಚಕ. ಬಂಧಿತನನ್ನು ಹರಿಯಾಣದ ರೋಟಕ್‌ ನಿವಾಸಿ ರಾಹುಲ್‌ ಕರವೀರ ಜಾಟ್‌ ಎಂದು ಗುರುತಿಸಲಾಗಿದೆ. ಗುಜರಾತ್‌ನಲ್ಲಿ … Continued

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸುವ ಮಸೂದೆ ಅಂಗೀಕರಿಸಿದ ಆಸ್ಟ್ರೇಲಿಯಾ

ಮೆಲ್ಬೋರ್ನ್: 16 ವರ್ಷದೊಳಗಿನವರು ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಕೊಳ್ಳುವುದನ್ನು ನಿಷೇಧಿಸುವ ಮಸೂದೆಯನ್ನು ಆಸ್ಟ್ರೇಲಿಯಾದ ಸಂಸತ್ತು ಅಂಗೀಕರಿಸಿದೆ. ಪ್ರಮುಖ ಜಾಲತಾಣಗಳಾದ ಟಿಕ್‌ಟಾಕ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್ ಮುಂತಾದವುಗಳು ತಮ್ಮ ಜಾಲತಾಣದಲ್ಲಿ ಚಿಕ್ಕ ಮಕ್ಕಳು ಖಾತೆಗಳನ್ನು ಹೊಂದುವುದನ್ನು ನಿಷೇಧಿಸುವುದು ಕಡ್ಡಾಯವಾಗಿದೆ. ಇದಕ್ಕೆ ತಪ್ಪಿದ ಜಾಲತಾಣಗಳಿಗೆ 50 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ ​​ಮಿಲಿಯನ್ (ಸುಮಾರು 270 ಕೋಟಿ … Continued

ಜಲಾಂತರ್ಗಾಮಿ ನೌಕೆಯಿಂದ ಉಡಾವಣೆ ಮಾಡಿ ಪರಮಾಣು ಸಾಮರ್ಥ್ಯದ 3,500 ಕಿಮೀ ವ್ಯಾಪ್ತಿಯ K-4 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷಿಸಿದ ಭಾರತ..

ನವದೆಹಲಿ: ಭಾರತೀಯ ನೌಕಾಪಡೆಯು ಹೊಸದಾಗಿ ಸೇರ್ಪಡೆಗೊಂಡ ಪರಮಾಣು ಜಲಾಂತರ್ಗಾಮಿ ಐಎನ್‌ಎಸ್ ಅರಿಘಾಟ್‌ನಿಂದ 3,500 ಕಿಮೀ ದೂರದ ವರೆಗೆ ಹಾರಬಲ್ಲ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಬುಧವಾರ ನಡೆಸಿತು. ರಕ್ಷಣಾ ಮೂಲಗಳ ಪ್ರಕಾರ, ಪರೀಕ್ಷಾ ಫಲಿತಾಂಶಗಳನ್ನು ವಿಶ್ಲೇಷಿಸಲಾಗುತ್ತಿದೆ, ನಂತರ ಸಂಬಂಧಿಸಿದ ಅಧಿಕಾರಿಗಳು ಉನ್ನತ ಮಿಲಿಟರಿ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಮಾಹಿತಿ ನೀಡಲಿದ್ದಾರೆ. ದೇಶದ ಪರಮಾಣು ಸಾಮರ್ಥ್ಯದ … Continued

ಮಾಂಸಾಹಾರ ಬಿಡುವಂತೆ ಒತ್ತಾಯಿಸಿದ ಪ್ರಿಯಕರ ; ಏರ್ ಇಂಡಿಯಾದ ಮಹಿಳಾ ಪೈಲಟ್ ಆತ್ಮಹತ್ಯೆ

ಮುಂಬೈ: 25 ವರ್ಷದ ಏರ್ ಇಂಡಿಯಾದ ಮಹಿಳಾ ಪೈಲಟ್ ಮುಂಬೈನ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಆಕೆಯ ಗೆಳೆಯನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಅಂಧೇರಿಯ ಮರೋಲ್ ಪ್ರದೇಶದ ಕನಕಿಯಾ ರೈನ್‌ಫಾರೆಸ್ಟ್ ಕಟ್ಟಡದ ಬಾಡಿಗೆ ಫ್ಲಾಟ್‌ನಲ್ಲಿ ಮಹಿಳಾ ಪೈಲಟ್‌ ಸೃಷ್ಟಿ ತುಲಿ ಅವರ ಶವವು ಪತ್ತೆಯಾಗಿದೆ. ಅವರು … Continued

ಪ್ರಧಾನಿ ಮೋದಿ ಏನೇ ನಿರ್ಧರಿಸಿದರೂ….”: ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆ ಬಗ್ಗೆ ಶಿವಸೇನೆ ನಾಯಕ ಏಕನಾಥ ಶಿಂಧೆ

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಏಕನಾಥ ಶಿಂಧೆ ಅವರು ಚುನಾವಣಾ ಫಲಿತಾಂಶ ಬಂದ ನಾಲ್ಕು ದಿನಗಳ ನಂತರ ತಮ್ಮ ನಿಲುವನ್ನು ಸಡಿಲಿಸಿದ್ದು, ಮುಖ್ಯಮಂತ್ರಿ ಆಯ್ಕೆಯ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದೇನೆ ಎಂದು ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಏಕನಾಥ ಶಿಂಧೆ, ಬುಧವಾರ ಹೇಳಿದ್ದಾರೆ. “ಪ್ರಧಾನಿ ಮೋದಿಯವರಿಗೆ ನಾನು ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದೇನೆ. ಅವರು … Continued

ಧನುಷ್‌-ನಯನತಾರಾ ಜಗಳ ತಾರಕಕ್ಕೆ; ಮದ್ರಾಸ್‌ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ ಧನುಷ್‌

ಚೆನ್ನೈ: ತಮಿಳು ನಟ ಧನುಷ್‌ ಮತ್ತು ನಟಿ ನಯನತಾರಾ ನಡುವಿನ ಬಿಕ್ಕಟ್ಟು (Dhanush v/s Nayanthara) ಈಗ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದೆ. ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ(Nayanthara: Beyond The Fairy Tale)ದಲ್ಲಿ ಅನುಮತಿಯನ್ನು ಪಡೆಯದೆ ತಮ್ಮ ನಿರ್ಮಾಣದ ನಾನು ರೌಡಿ ಧಾನ್‌ ಸಿನಿಮಾದ ದೃಶ್ಯಗಳನ್ನು ಬಳಸಿದ್ದಾರೆಂದು ಆರೋಪಿಸಿ ನಟ ಧನುಷ್ ಅವರು ನಯನತಾರಾ ವಿರುದ್ಧ ಸಿವಿಲ್ ಮೊಕದ್ದಮೆ … Continued

ಮಹಾರಾಷ್ಟ್ರದ ಚುನಾವಣೆ ಸೋಲಿಗೆ ರಾಹುಲ್ ಗಾಂಧಿಯ ‘3 ತಪ್ಪುಗಳು’ ಕಾರಣ ಎಂದು ಭಾವಿಸಿದ ಮಿತ್ರಪಕ್ಷಗಳು ; ಅವುಗಳು ಯಾವುದೆಂದರೆ….

ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಮುಂದೆ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ (ಎಂವಿಎ) ಮಕಾಡೆ ಮಲಗಿದೆ. ಇದರಿಂದಾಗಿ ಈಗ ಇಂಡಿಯಾ ಬ್ಲಾಕ್‌ ನಲ್ಲಿ ಅತೃಪ್ತಿ ಕಾಣಿಸಿಕೊಂಡಿದೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಗೋಚರಕ್ಕೆ ಬಂದಿದೆ. ವಿಪಕ್ಷವು ಮತ್ತೊಂದು ಚುನಾವಣಾ ಸೋಲನ್ನು ಎದುರಿಸಿತು. ಕಾಂಗ್ರೆಸ್ ನೇತೃತ್ವದ ಮಹಾ … Continued

ತಮ್ಮ ತಂದೆಯ 45339 ಕೋಟಿ ರೂ. ಮೌಲ್ಯದ ಉದ್ಯಮ ಸಾಮ್ರಾಜ್ಯ ತ್ಯಜಿಸಿ ಸನ್ಯಾಸಿ ಜೀವನ ಆಯ್ಕೆ ಮಾಡಿಕೊಂಡ ಅಜಾನ್ ಸಿರಿಪಾನ್ಯೊ…!

ಮಲೇಷ್ಯಾದ ಉದ್ಯಮಿ ಆನಂದ ಕೃಷ್ಣನ್ ಅವರ ಪುತ್ರ ವೆನ್ ಅಜಾನ್ ಸಿರಿಪಾನ್ಯೊ ಅವರು ನಿರೀಕ್ಷಿಸಿದ್ದಕ್ಕಿಂತ ವಿಭಿನ್ನವಾದ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆನಂದ ಕೃಷ್ಣನ್ ಅವರು ಸರಿಸುಮಾರು ₹45,339 ಕೋಟಿ ನಿವ್ವಳ ಸಂಪತ್ತನ್ನು ಹೊಂದಿರುವ ಉದ್ಯಮಿಯಾಗಿದ್ದಾರೆ. ಅವರು ಟೆಲಿಕಾಂ, ಮಾಧ್ಯಮ, ತೈಲ, ಅನಿಲ, ರಿಯಲ್ ಎಸ್ಟೇಟ್ ಮತ್ತು ಉಪಗ್ರಹಗಳನ್ನು ವ್ಯಾಪಿಸಿರುವ ಉದ್ಯಮ ಸಾಮ್ರಾಜ್ಯವನ್ನು ಹೊಂದಿರುವ ಮಲೇಷ್ಯಾದ ಶ್ರೀಮಂತ … Continued