ರಾಹುಲ್ ಪೌರತ್ವ ವಿವಾದ : ಡಿ.19ರೊಳಗೆ ನಿರ್ಧಾರ ಕೈಗೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿದ ಅಲಾಹಾಬಾದ್ ಹೈಕೋರ್ಟ್

ಲಕ್ನೋ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವ ಪ್ರಶ್ನಿಸಿ ನಾಗರಿಕರೊಬ್ಬರು ಬರೆದಿರುವ ಪತ್ರದ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಅಲಾಹಾಬಾದ್ ಹೈಕೋರ್ಟ್ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದೆ. ಡಿಸೆಂಬರ್ 19ರಂದು ಪತ್ರದ ಕುರಿತು ತೆಗೆದುಕೊಳ್ಳಲಾದ ನಿರ್ಧಾರದ ಬಗ್ಗೆ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಮೂರ್ತಿ ಅತ್ತೌ ರೆಹಮಾನ್ ಮಸೂದಿ ಮತ್ತು ನ್ಯಾಯಮೂರ್ತಿ … Continued

“ನೀವು ಗೆದ್ದಾಗ ಇವಿಎಂ ತಿರುಚುವುದಿಲ್ಲವೇ ? ; ಬ್ಯಾಲೆಟ್ ಪೇಪರ್ ಮೂಲಕ ಮತದಾನ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಚುನಾವಣೆಯಲ್ಲಿ ಮತದಾನದಕ್ಕೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ಮತಪತ್ರ (ಬ್ಯಾಲೆಟ್ ಪೇಪರ್) ವ್ಯವಸ್ಥೆ ಮರುಜಾರಿಗೊಳಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಚಂದ್ರಬಾಬು ನಾಯ್ಡು ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ಅವರಂತಹ ನಾಯಕರು ವಿದ್ಯುನ್ಮಾನ ಮತಯಂತ್ರ (ಇವಿಎಂ) ತಿರುಚಿರುವುದನ್ನು ಪ್ರಶ್ನಿಸಿದ್ದಾರೆ ಎಂಬ ಅರ್ಜಿದಾರರ ವಾದ ತೂಕದಿಂದ ಕೂಡಿಲ್ಲ … Continued

ಚಂಡಮಾರುತ ಫೆಂಗಲ್ ಎಚ್ಚರಿಕೆ: ತಮಿಳುನಾಡು, ಪುದುಚೇರಿಗೆ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ನವದೆಹಲಿ: ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ (ನವೆಂಬರ್ 26) ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ತೀವ್ರವಾದ ವಾಯುಭಾರ ಕುಸಿತವು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಈ ಚಂಡಮಾರುತಕ್ಕೆ ಫೆಂಗಲ್ ಎಂದು ಹೆಸರಿಸುವ ಸಾಧ್ಯತೆಯಿದೆ. ಇದು ಈ ವಾರದ ಕೊನೆಯಲ್ಲಿ ತಮಿಳುನಾಡು ಕರಾವಳಿಯನ್ನು ಸಮೀಪಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಉತ್ತರ-ವಾಯುವ್ಯವಾಗಿ ಗಂಟೆಗೆ … Continued

ಪ್ಯಾನ್ 2.0 ಯೋಜನೆ ಘೋಷಣೆ : ಹಳೆಯ ಪ್ಯಾನ್ ಕಾರ್ಯನಿರ್ವಹಿಸುತ್ತದೆಯೇ ? ಕ್ಯೂಆರ್‌ (QR) ಕೋಡ್‌ ಇರುವ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಉತ್ತರ…

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಪ್ಯಾನ್ ಕಾರ್ಡ್ 2.0 ಯೋಜನೆ ಪ್ರಮುಖವಾದದ್ದು. ಭಾರತದ ತೆರಿಗೆ ಆಡಳಿತ ಆಧುನೀಕರಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯ ಹೊಸ ಉಪಕ್ರಮ ಪ್ಯಾನ್ 2.0 ಯೋಜನೆಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ … Continued

ವೀಡಿಯೊ..| ಕಂಡಕಂಡವರಿಗೆ ತಿವಿದು ಗಾಯಗೊಳಿಸಿದ ಗೂಳಿ ; 15 ಜನರಿಗೆ ಗಾಯ : 3 ತಾಸು ಕಾರ್ಯಾಚರಣೆ ನಂತರ ಸೆರೆ…!

ನವದೆಹಲಿ : ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣದಲ್ಲಿ ಗೂಳಿಗೆ ಜನರು ಭಯಭೀತರಾಗಿದ್ದಾರೆ. ದಾರಿತಪ್ಪಿ ಬಂದ ಗೂಳಿಯೊಂದು ಜನರನ್ನು ಬೆನ್ನಟ್ಟುವುದು, ಕೊಂಬುಗಳಿಂದ ತಿವಿಯುವುದು ಮತ್ತು ಜನರನ್ನು ಎತ್ತಿ ಒಗೆಯುವುದನ್ನು ಮಾಡಿದೆ. ಈ ರೊಚ್ಚಿಗೆದ್ದ ಗೂಳಿ ಕಂಡವರನ್ನೆಲ್ಲ ತಿವಿದಿದ್ದು, ಸುಮಾರು 15 ಜನರನ್ನು ಗಂಭೀರವಾಗಿ ಗಾಯಗೊಳಿಸಿದೆ ಎಂದು ಹೇಳಲಾಗಿದೆ. ಜಲಾಲಾಬಾದ್ ಪಟ್ಟಣದಲ್ಲಿ, ದಟ್ಟಣೆಯ ಮಧ್ಯೆ ಗೂಳಿಯೊಂದು ವ್ಯಕ್ತಿಯನ್ನು ಹಿಂಬಾಲಿಸುತ್ತಿರುವುದು … Continued

ವೀಡಿಯೊಗಳು…| ಕೌಟುಂಬಿಕ ಕಲಹ : ನೂತನ ಮಹಾರಾಣಾಗೆ ಪ್ರವೇಶ ನಿರಾಕರಿಸಿದ ನಂತರ ಉದಯಪುರ ಅರಮನೆ ಹೊರಗೆ ಘರ್ಷಣೆ, ಕಲ್ಲು ತೂರಾಟ

ಉದಯಪುರ : ರಾಜಸಮಂದ್‌ನ ಬಿಜೆಪಿ ಶಾಸಕ ವಿಶ್ವರಾಜ ಸಿಂಗ್ ಮೇವಾರ್ ಮತ್ತು ಅವರ ಬೆಂಬಲಿಗರಿಗೆ ಅರಮನೆಗೆ ಪ್ರವೇಶ ನಿರಾಕರಿಸಿದ ನಂತರ ಸೋಮವಾರ ರಾತ್ರಿ ರಾಜಸ್ಥಾನದ ಉದಯಪುರದ ಸಿಟಿ ಪ್ಯಾಲೇಸ್‌ನ ಹೊರಗೆ ಘರ್ಷಣೆಗಳು ಮತ್ತು ಕಲ್ಲು ತೂರಾಟಗಳು ನಡೆದವು. ಈ ತಿಂಗಳ ಆರಂಭದಲ್ಲಿ ಅವರ ತಂದೆ ಮಹೇಂದ್ರ ಸಿಂಗ್ ಮೇವಾರ್ ಅವರ ಮರಣದ ನಂತರ ವಿಶ್ವರಾಜ ಸಿಂಗ್ … Continued

ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’, ‘ಜಾತ್ಯತೀತ’ ಪದ ತೆಗೆಯಲು ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕುವಂತೆ ಕೋರಿದ್ದ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ 2 ನೇ ತಿದ್ದುಪಡಿಯ ಮೂಲಕ ಈ ಪದಗಳನ್ನು ಸಂವಿಧಾನ ಪೀಠಿಕೆಗೆ ಸೇರಿಸಲಾಗಿತ್ತು ಎಂದು ಅರ್ಜಿಗಳು ಆರೋಪಿಸಿದ್ದವು. ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರ ಪೀಠಿಕೆಗೂ ಅನ್ವಯಿಸುತ್ತದೆ ಎಂದು ಸುಪ್ರೀಂ … Continued

ವರನಿಗೆ ತಿಂಗಳಿಗೆ 1.20 ಲಕ್ಷ ರೂ. ಸಂಬಳವಿದ್ರೂ ಅದು ಸರ್ಕಾರಿ ನೌಕರಿ ಅಲ್ಲದ ಕಾರಣ ಮದುವೆಗೆ ಒಪ್ಪದೆ ಮಂಟಪದಿಂದ ಎದ್ದು ಹೋದ ವಧು…!

ವಧು-ವರರು ಮದುವೆ ಮಂಟಪದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡ ನಂತರ ತಾನು ನಂಬಿದಂತೆ ಮದುಮಗ ಸರ್ಕಾರಿ ನೌಕರಿಯಲ್ಲಿ ಇಲ್ಲ, ಬದಲಾಗಿ ಖಾಸಗಿ ಉದ್ಯೋಗದಲ್ಲಿದ್ದಾನೆ ಎಂದು ತಿಳಿದ ಮದುಮಗಳು ನಂತರ ಮದುವೆ ಬೇಡ ಎಂದು ಹಠ ಹಿಡಿದು ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ…! ವರನ ಕುಟುಂಬ ಪ್ರಕರಣ ಸುಖಾಂತ್ಯವಾಗಬಹುದು ಎಂದು  ನಿರೀಕ್ಷಿಸಿ … Continued

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಇಸ್ಕಾನ್‌ ಸನ್ಯಾಸಿಯನ್ನು ಢಾಕಾದಲ್ಲಿ ಬಂಧಿಸಿದ ಆಡಳಿತ

ಕೋಲ್ಕತ್ತಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ವ್ಯಾಪಕ ರಾಜಕೀಯ ಹಿಂಸಾಚಾರವನ್ನು ಕಂಡಿರುವ ಬಾಂಗ್ಲಾದೇಶದಲ್ಲಿ ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ದಾಳಿ ನಡೆಯುತ್ತಿದೆ ಎಂಬ ಆರೋಪಗಳ ಮಧ್ಯೆ ಬಾಂಗ್ಲಾದೇಶದ ಹಿಂದೂ ಸಂನ್ಯಾಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ನಾಯಕ ಚಿನ್ಮಯ ಕೃಷ್ಣ ದಾಸ ಬ್ರಹ್ಮಚಾರಿ ಅವರನ್ನು ಢಾಕಾದಲ್ಲಿ ಬಂಧಿಸಲಾಗಿದೆ. ಢಾಕಾದಿಂದ ಉತ್ತರಕ್ಕೆ ಸುಮಾರು 300 … Continued

ಐಪಿಎಲ್‌ 2025 ಮೆಗಾ ಹರಾಜು : 1.1 ಕೋಟಿ ರೂ.ಗೆ ಐಪಿಎಲ್ ನಲ್ಲೇ ಅತ್ಯಂತ ಕಿರಿಯ 13 ವರ್ಷದ ಆಟಗಾರನ ಖರೀದಿಸಿದ ರಾಜಸ್ಥಾನ ರಾಯಲ್ಸ್‌..!

ನವದೆಹಲಿ : 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025 Auction) ಟೂರ್ನಿಯ ಎರಡನೇ ದಿನದ ಮೆಗಾ ಹರಾಜಿನಲ್ಲಿ 13ರ ವಯಸ್ಸಿನ ಹುಡುಗ ವೈಭವ ಸೂರ್ಯವಂಶಿ ದಾಖಲೆ ಬರೆದಿದ್ದು, ಸೋಮವಾರ ನಡೆದಿದ್ದ ಮೆಗಾ ಹರಾಜಿನಲ್ಲಿ ಅವರನ್ನು ರಾಜಸ್ಥಾನ ರಾಯಲ್ಸ್‌ ತಂಡ 1.10 ಕೋಟಿ ರೂ.ಗಳಿಗೆ ಖರೀದಿಸಿದೆ. ಆ ಮೂಲಕ 13 ವರ್ಷದ ಕ್ರಿಕೆಟಿಗ ವೈಭವ ಸೂರ್ಯವಂಶಿ … Continued