ಹುಷಾರ್‌..| ವಾಟ್ಸಾಪ್‌ನಲ್ಲಿ ಮದುವೆ ಆಮಂತ್ರಣ ಬಂದ್ರೆ ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ ; ಒಂದೇ ಕ್ಲಿಕ್ ನಿಮ್ಮ ಎಲ್ಲ ʼಹಣ ಮಾಯʼ ಮಾಡಬಹುದು..!

ಮದುವೆಯ ಸೀಸನ್ ಆರಂಭವಾಗುತ್ತಿದ್ದಂತೆಯೇ, ಅನೇಕರು ವಾಟ್ಸಾಪ್‌ (WhatsApp) ಮೂಲಕ ಆಮಂತ್ರಣಗಳನ್ನು ಸ್ವೀಕರಿಸುತ್ತಿದ್ದಾರೆ. ಅನುಕೂಲಕರ ಮತ್ತು ವೆಚ್ಚದ ದೃಷ್ಟಿಯಿಂದ ಇದು ಸಾಂಪ್ರದಾಯಿಕ ಕಾರ್ಡ್‌ಗಳಿಗೆ ಪರ್ಯಾಯವಾಗುತ್ತಿದೆ. ಆದಾಗ್ಯೂ, ಈ ವಾಟ್ಸಾಪ್‌ ಪ್ರವೃತ್ತಿಯು ಸೈಬರ್ ವಂಚಕರು ಈಗ ಹೊಸ ರೀತಿಯಲ್ಲಿ ಮೋಸ ಮಾಡಲು ಇದನ್ನು ಬಳಸುತ್ತಿದ್ದಾರೆ. ಫೋನ್‌ನಲ್ಲಿ ಬರುವ ಮದುವೆಯ ಆಮಂತ್ರಣವು ಗಂಭೀರವಾದ ಸೈಬರ್‌ ವಂಚನೆಗೆ ಕಾರಣವಾಗಬಹುದು ಅಥವಾ ಮೊಬೈಲ್‌ … Continued

ವೀಡಿಯೊ | ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನದ ಹಡಗನ್ನು 2 ತಾಸುಗಳ ಕಾಲ ಬೆನ್ನಟ್ಟಿ ಭಾರತದ 7 ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ ಹಡಗು

ಭಾರತ-ಪಾಕಿಸ್ತಾನ ಕಡಲ ಗಡಿಯ ಬಳಿ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ (ಪಿಎಂಎಸ್‌ಎ)ಯ ಹಡಗಿನಿಂದ ಬಂಧಿಸಲ್ಪಟ್ಟಿದ್ದ ಏಳು ಭಾರತೀಯ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ರಕ್ಷಿಸಿದೆ. ನವೆಂಬರ್ 17 ರ ಭಾನುವಾರ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಮಧ್ಯಾಹ್ನ ಮೀನುಗಾರಿಕೆ ರಹಿತ ವಲಯ (ಎನ್‌ಎಫ್‌ಜೆಡ್) ಬಳಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೀನುಗಾರಿಕಾ ದೋಣಿ (ಐಎಫ್‌ಬಿ)ಯಿಂದ ಕಳುಹಿಸಲಾದ ತೊಂದರೆಯಲ್ಲಿದ್ದೇವೆ ಎಂಬ … Continued

ಕಾರಿನ ಮೇಲೆ ಕಲ್ಲು ತೂರಾಟ : ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ ದೇಶಮುಖಗೆ ಗಂಭೀರ ಗಾಯ

ನಾಗ್ಪುರ : ನಾಗ್ಪುರ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಮತ್ತು ಎನ್‌ಸಿಪಿ (ಶರದ್‌ ಪವಾರ್‌ ಬಣ) ನಾಯಕ ಅನಿಲ್ ದೇಶಮುಖ್ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ದೇಶಮುಖ್ ಅವರು ನಾರ್ಖೇಡ್ ಗ್ರಾಮದಲ್ಲಿ ನಡೆದ … Continued

ಮೈ ಜುಂ ಎನಿಸುವ ವೀಡಿಯೊ…| ತಾಯಿ-ಮಗಳನ್ನು ಸಮುದ್ರಕ್ಕೆ ಎಳೆದೊಯ್ದ ಬೃಹತ್‌ ಅಲೆಗಳು ; ಜೀವನ್ಮರಣ ಹೋರಾಟದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಎಲ್ಲರೂ ಸಮುದ್ರತೀರದಲ್ಲಿ ಕುಳಿತು ಅಲೆಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಆದರೆ ಅಲೆಗಳು ದೈತ್ಯ ರೂಪವನ್ನು ಪಡೆದರೆ, ಅದು ಅತ್ಯಂತ ಭಯಾನಕ. ಹೀಗಾಗಿ ಅಲೆಗಳ ಸ್ವರೂಪವನ್ನು ಗಮನಿಸಿಯೇ ಸಮುದ್ರಕ್ಕೆ ಇಳಿಯಬೇಕು… ಇಲ್ಲವಾದರೆ ಯಾವುದೇ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಈ ವೈರಲ್‌ ಆದ ವೀಡಿಯೊವೇ ನಿದರ್ಶನ. ಸಮುದ್ರದ ಅಲೆಗಳು ಯಾರನ್ನಾದರೂ ಹೇಗೆ ಅಸಹಾಯಕರನ್ನಾಗಿ ಮಾಡುತ್ತವೆ ಎಂಬುದನ್ನು ಈ ವೀಡಿಯೊದಲ್ಲಿ ನೋಡಬಹುದು. … Continued

ಬಾಬಾ ಸಿದ್ದಿಕ್ ಹತ್ಯೆ ಆರೋಪಿ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅಮೆರಿಕದಲ್ಲಿ ಬಂಧನ ; ಮೂಲಗಳು

ನವದೆಹಲಿ: ಜೈಲಿನಲ್ಲಿದ್ದರೂ ಜಾಗತಿಕ ಕ್ರಿಮಿನಲ್ ಸಿಂಡಿಕೇಟ್ ನಡೆಸುತ್ತಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. 2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮತ್ತು ಕಳೆದ ತಿಂಗಳು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಮತ್ತು ಈ ವರ್ಷದ ಜೂನ್‌ನಲ್ಲಿ ನಟ … Continued

ಭಯಾನಕ ಕೃತ್ಯ..| ಕ್ಷುದ್ರ ವಿದ್ಯೆ ಸಾಧನೆಗಾಗಿ ಒಂದೂವರೆ ವರ್ಷದ ಮಗಳನ್ನೇ ಬಲಿಕೊಟ್ಟು ದೇಹದ ಅಂಗಾಂಗ ತಿಂದ ತಾಯಿ…!

ಪಲಮು: ಮೂಢನಂಬಿಕೆಯ ಹುಚ್ಚಾಟಕ್ಕೆ ಇತ್ತೀಚೆಗೆ ಜಾರ್ಖಂಡ್‍ನ ಪಲಮು ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಉತ್ತಮ ನಿದರ್ಶನವಾಗಿದೆ. ಮಹಿಳೆಯೊಬ್ಬಳು ತನ್ನ ಒಂದೂವರೆ ವರ್ಷದ ಮಗಳನ್ನು ಬಲಿಕೊಟ್ಟು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಂತರ ಅವಳ ಯಕೃತ್ತನ್ನು ತಾನೇ ತಿಂದ ಘಟನೆ ಹುಸೈನಾಬಾದ್ ಠಾಣೆ ಪ್ರದೇಶದ ಖರದ್ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಪುಟ್ಟ ಕಂದಮ್ಮನನ್ನು ಹತ್ಯೆ (Murder … Continued

ಎಎಪಿ ತೊರೆದ ಒಂದು ದಿನದ ನಂತರ ಬಿಜೆಪಿ ಸೇರಿದ ದೆಹಲಿಯ ಮಾಜಿ ಸಚಿವ ಕೈಲಾಶ ಗಹ್ಲೋಟ್

ನವದೆಹಲಿ : ಆಮ್ ಆದಿ ಪಕ್ಷ (ಎಎಪಿ) ತೊರೆದ ಒಂದು ದಿನದ ನಂತರ, ದೆಹಲಿಯ ಮಾಜಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಸೋಮವಾರ ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವ ಮನೋಹರಲಾಲ ಖಟ್ಟರ್ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಅವರ ಸಮ್ಮುಖದಲ್ಲಿ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿಗೆ ಸೇರ್ಪಡೆಯಾದ … Continued

ವೀಡಿಯೊ…| ಬ್ರೆಜಿಲ್‌ ಗೆ ಆಗಮಿಸಿದ ಪ್ರಧಾನಿ ಮೋದಿಗೆ ವೇದಘೋಷಗಳ ಮೂಲಕ ಸ್ವಾಗತಿಸಿದ ಬ್ರೇಜಿಲ್ಲಿನ ವೇದ ವಿದ್ವಾಂಸರು…!

ರಿಯೊ ಡಿ ಜನೈರೊ : ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಜಿ 20 ನಾಯಕರ ಶೃಂಗಸಭೆಯಲ್ಲಿ (G20 Leaders’ Summit) ಪಾಲ್ಗೊಳ್ಳಲು ಬ್ರೆಜಿಲ್‌(Brazil)ಗೆ ಆಗಮಿಸಿದ್ದಾರೆ. ರಿಯೊ ಡಿ ಜನೈರೊಗೆ ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಬೆಳಗ್ಗೆ ಆಗಮಿಸಿದ ಪ್ರಧಾನಿ ಮೋದಿಗೆ ಬ್ರೆಜಿಲ್‌ ನಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ. ಬ್ರೆಜಿಲ್‌ನಲ್ಲಿರುವ … Continued

ರ‍್ಯಾಗಿಂಗ್ : 3 ತಾಸು ನಿಂತಲ್ಲೇ ನಿಂತಿದ್ದ ಎಂಬಿಬಿಎಸ್ ವಿದ್ಯಾರ್ಥಿ ಕುಸಿದುಬಿದ್ದು ಸಾವು…!

ಗುಜರಾತಿನ ಮೆಡಿಕಲ್ ಕಾಲೇಜೊಂದರಲ್ಲಿ ಹಿರಿಯರ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನನ್ನು ರ‍್ಯಾಗಿಂಗ್ ಮಾಡುವಾಗ ಆತನನ್ನು ಮೂರು ಗಂಟೆಗಳ ಕಾಲ ನಿಲ್ಲಿಸಿದ ನಂತರ ಆತ ಕುಸಿದುಬಿದ್ದು ಸಾವಿಗೀಡಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ವರ್ಷ ಧಾರ್ಪುರ್ ಪಟಾನ್‌ನಲ್ಲಿರುವ ಜಿಎಂಇಆರ್‌ಎಸ್‌ (GMERS) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪ್ರವೇಶ ಪಡೆದ ಹಲವಾರು ಪ್ರಥಮ ವರ್ಷದ ವಿದ್ಯಾರ್ಥಿಗಳಲ್ಲಿ ಅನಿಲ್ ಮೆಥನಿಯಾ ಕೂಡ … Continued

ಆಘಾತಕಾರಿ…| ಬೈದಿದ್ದಕ್ಕೆ ಯೂ ಟ್ಯೂಬ್‌ ನೋಡಿ ಬಾಂಬ್ ತಯಾರಿಸಿ ಶಿಕ್ಷಕಿಯ ಕುರ್ಚಿ ಕೆಳಗಿಟ್ಟು ಸ್ಫೋಟಿಸಿದ ವಿದ್ಯಾರ್ಥಿಗಳು…!

ಯೂ ಟ್ಯೂಬ್‌ (You tube) ನೋಡಿ ಬಾಂಬ್ ತಯಾರಿಸುವುದನ್ನು ಕಲಿತ 12ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕಿಯೊಬ್ಬರ ಕುರ್ಚಿಯ ಕೆಳಗೆ ಅದನ್ನು ಇಟ್ಟು ಸ್ಪೋಟಿಸಿದ (Bomb Blast), ಆಘಾತಕಾರಿ ಘಟನೆ ವರದಿಯಾಗಿದೆ. ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಶಿಕ್ಷಕಿ ಅಪಾಯದಿಂದ ಪಾರಾಗಿದ್ದಾರೆ. ವರದಿಯ ಪ್ರಕಾರ, 12 ನೇ ತರಗತಿಯ ವಿದ್ಯಾರ್ಥಿಗಳ ಗುಂಪೊಂದುಶಿಕ್ಷಕಿಯನ್ನು ಹೆದರಿಸಲು … Continued