ವಿಮಾನಗಳಿಗೆ ಬಾಂಬ್ ಬೆದರಿಕೆಗಳು ; ‘X’ ಅನ್ನು ತರಾಟೆ ತೆಗೆದುಕೊಂಡ ಕೇಂದ್ರ ; ಎಐ (AI) ಆಧಾರಿತ ಕಾರ್ಯವಿಧಾನ ಅಳವಡಿಕೆಗೆ ಸೂಚನೆ

ನವದೆಹಲಿ: ಕಳೆದ ಕೆಲವು ದಿನಗಳಿಂದ ವಿಮಾನಯಾನ ಸಂಸ್ಥೆಗಳಿಗೆ ಸರಣಿ ಬಾಂಬ್ ಬೆದರಿಕೆಗಳ ನಡುವೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಬುಧವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಹಿಂದಿನ ಟ್ವಿಟರ್) ಅನ್ನು ತರಾಟೆಗೆ ತೆಗೆದುಕೊಂಡಿದೆ. ಜಂಟಿ ಕಾರ್ಯದರ್ಶಿ ಸಂಕೇತ್ ಎಸ್ ಭೋಂಡ್ವೆ ಅವರು ಏರ್‌ಲೈನ್ಸ್ ಮತ್ತು ಎಕ್ಸ್ ಮತ್ತು ಮೆಟಾದಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಪ್ರತಿನಿಧಿಗಳೊಂದಿಗೆ … Continued

ಹುಸಿ ಬಾಂಬ್ ಬೆದರಿಕೆ : 79 ವಿಮಾನಗಳ ಸಂಚಾರ ಸ್ಥಗಿತ, ವಿಮಾನಯಾನ ಸಂಸ್ಥೆಗಳಿಗೆ 600 ಕೋಟಿ ನಷ್ಟ…!

ನವದೆಹಲಿ: ವಿಮಾನಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆಗಳು ಮುಂದುವರಿದಿದ್ದು, ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಒಟ್ಟು 79 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಇದು ಪರಿಣಾಮ ಬೀರಿದೆ. ಕಳೆದ ಒಂಬತ್ತು ದಿನಗಳಲ್ಲಿ, ಈ ಸುಳ್ಳು ಬಾಂಬ್ ಬೆದರಿಕೆಗಳಿಂದ ವಾಯುಯಾನ ಉದ್ಯಮವು ಗಮನಾರ್ಹ ತೊಂದರೆ ಎದುರಿಸಿದ್ದು, ಇದರ ಪರಿಣಾಮವಾಗಿ ಅಂದಾಜು 600 ಕೋಟಿ ರೂ. ಏರ್‌ಲೈನ್‌ನ ಅಧಿಕಾರಿಯೊಬ್ಬರು … Continued

ವೀಡಿಯೊ..| ಜಾರ್ಖಂಡ್-ಗೋವಾ ರೈಲಿನ ಎಸಿ 2-ಟೈರ್ ಬೋಗಿಯಲ್ಲಿ ಜೀವಂತ ಹಾವು ಪತ್ತೆ…!

ಆಘಾತಕಾರಿ ಘಟನೆಯೊಂದರಲ್ಲಿ, ಅಕ್ಟೋಬರ್ 21 ರಂದು ಜಾರ್ಖಂಡ್‌ನಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ವಾಸ್ಕೋ-ಡ-ಗಾಮಾ ವೀಕ್ಲಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ (AC) ಕೋಚ್‌ನಲ್ಲಿ ಜೀವಂತ ಹಾವು ಪತ್ತೆಯಾಗಿದೆ. ಹಲವಾರು ಪ್ರಯಾಣಿಕರು ಎಸಿ 2-ನಲ್ಲಿ ಕೆಳಗಿನ ಬರ್ತ್‌ ಪರದೆಯ ಬಳಿ ಹಾವು ಜಾರುತ್ತಿರುವುದನ್ನು ಗಮನಿಸಿದರು. ನಂತರ ಅದರ ವೀಡಿಯೊಗಳನ್ನು ತೆಗೆದುಕೊಂಡರು. ತಮ್ಮ ಪೋಷಕರು ಪ್ರಯಾಣಿಸುತ್ತಿದ್ದ ಕೋಚ್‌ನಲ್ಲಿ (ಎ 2 31, 33) … Continued

ಬೆಂಗಳೂರು | ಭಾರೀ ಮಳೆಗೆ ಕಟ್ಟಡ ಕುಸಿದು ದುರಂತ ; ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಬೆಂಗಳೂರು : ಬೆಂಗಳೂರಿನ ಕಟ್ಟಡ ಕುಸಿತದ ಘಟನೆಯಲ್ಲಿ ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ. ಅವಶೇಷಗಳನ್ನು ತೆರವುಗೊಳಿಸಲು ಮತ್ತು ಅದರ ಒಳಗೆ ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಇದುವರೆಗೆ 13 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ಪೂರ್ವ ಭಾಗದ ಹೊರಮಾವು ಅಗರ ಪ್ರದೇಶದಲ್ಲಿ ನಿರ್ಮಾಣ ಹಂತದ … Continued

ಗಾಲ್ವಾನ್ ಘರ್ಷಣೆಯ 4 ವರ್ಷಗಳ ನಂತರದ ಬ್ರಿಕ್ಸ್‌ನಲ್ಲಿ ಮೊದಲ ದ್ವಿಪಕ್ಷೀಯ ಸಭೆ ನಡೆಸಲಿರುವ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ

ನವದೆಹಲಿ: ರಷ್ಯಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 2020 ರ ಗಾಲ್ವಾನ್ ಘರ್ಷಣೆಯ ನಂತರದ ಮೊದಲ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನೇಕ ಅಡಚಣೆಗಳನ್ನು ಎದುರಿಸುತ್ತಿರುವ ವಾಸ್ತವಿಕ ನಿಯಂತ್ರಣ ರೇಖೆ(LAC)ಯ ಉದ್ದಕ್ಕೂ ಗಸ್ತು … Continued

ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಹತ್ಯೆ ಮಾಡುವ ಪೊಲೀಸ್‌ ಅಧಿಕಾರಿಗೆ 1,11,11,111 ರೂ. ಬಹುಮಾನ ಘೋಷಿಸಿದ ಕರ್ಣಿ ಸೇನೆ ; ಯಾಕೆಂದರೆ…

ನವದೆಹಲಿ : ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ನನ್ನು ಎನ್‌ಕೌಂಟರ್‌ ಮಾಡಿದ ಪೊಲೀಸರಿಗೆ ಕ್ಷತ್ರಿಯ ಕರ್ಣಿ ಸೇನೆಯು ₹ 1,11,11,111 ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಸದಸ್ಯರಿಂದ ಹತ್ಯೆಗೀಡಾದ ಪ್ರಮುಖ ರಜಪೂತ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಕ್ಷತ್ರಿಯ ಕರ್ಣಿ ಸೇನೆಯ … Continued

ವೀಡಿಯೊ…| ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಬಾ..ಬಾ..ಬಾ..ಎಂದು ಕರೆದು ʼಚಿರತೆʼ ಕೆಣಕಿದ ಗುಂಪು : ದಾಳಿ ಮಾಡಿ ಮೂವರನ್ನು ಗಾಯಗೊಳಿಸಿದ ಚಿರತೆ

ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಶಾಹದೋಲ್ ಪ್ರದೇಶದ ದಕ್ಷಿಣ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಚಿರತೆ ದಾಳಿ ಮಾಡಿದ ಘಟನೆಯಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಪಿಕ್‌ನಿಕ್‌ಗೆ ಬಂದ ಗುಂಪು ಚಿರತೆಯನ್ನು ಕೆಣಕಿ ಪ್ರಚೋದಿಸಿದ ನಂತರ ಅದು ದಾಳಿ ಮಾಡದ ಘಟನೆ ಖಿತೌಲಿ ನದಿ ತೀರದಲ್ಲಿ ಭಾನುವಾರ ನಡೆದಿದೆ. ಗಾಯಗೊಂಡವರ ಪೈಕಿ ಇಬ್ಬರ ತಲೆಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ … Continued

ವೀಡಿಯೊ…| ಬೆಂಗಳೂರು : ನಿರ್ಮಾಣ ಹಂತದ ಕಟ್ಟಡ ಕುಸಿತ; ಮೂವರು ಕಾರ್ಮಿಕರ ಸಾವು, ಹಲವರು ಸಿಲುಕಿರುವ ಶಂಕೆ

ಬೆಂಗಳೂರು: ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು ಮಂಗಳವಾರ ಸುರಿಯುತ್ತಿರುವ ಮಳೆಯ ಪರಿಣಾಮ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಬಿದ್ದಿದೆ. ಅವಶೇಷಗಳಡಿ ಹಲವು ಕಾರ್ಮಿಕರು ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳ, ಪೊಲೀಸರು ಅವಶೇಷಗಳಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರ ಶವ ಹೊರ ತೆಗೆದಿದ್ದಾರೆ ಹಾಗೂ ಮೂವರನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. … Continued

ವೀಡಿಯೊ…| ಚಿನ್ನಾಭರಣ ಅಂಗಡಿ ಮಾಲೀಕ-ದರೋಡೆಕೋರರ ನಡುವೆ ಗುಂಡಿನ ಚಕಮಕಿ ; 3 ಮಂದಿಗೆ ಗಾಯ

ನವದೆಹಲಿ : ಬಿಹಾರದ ಬೇಗುಸರಾಯ್‌ನಲ್ಲಿರುವ ಆಭರಣ ಮಳಿಗೆಯೊಂದರಲ್ಲಿ ಶಸ್ತ್ರಧಾರಿಗಳ ತಂಡವೊಂದು ಹಗಲು ದರೋಡೆ ನಡೆಸಿದ ನಾಟಕೀಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಗಡಿಯ ಮಾಲೀಕರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಆಭರಣ ಅಂಗಡಿಯ ಉದ್ಯೋಗಿ ಮತ್ತು ಇಬ್ಬರು ದರೋಡೆಕೋರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು ದರೋಡೆಕೋರರನ್ನು … Continued

ರಾಜ್ಯದಲ್ಲಿ 13.87 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಗಳು ಪತ್ತೆ, ರದ್ದುಗೊಳಿಸುವ ಪ್ರಕ್ರಿಯೆ ಚುರುಕು : ಸಚಿವ ಮುನಿಯಪ್ಪ

ಬೆಂಗಳೂರು: ರಾಜ್ಯದಲ್ಲಿ 13.87 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಯಾಗಿದ್ದು, ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ನಿಯಮಾವಳಿಗೆ ವಿರುದ್ಧವಾಗಿ ಒಟ್ಟು 4,036 ಸರಕಾರಿ ನೌಕರರು ಬಿಪಿಎಲ್‌ ಕಾರ್ಡ್‌ ಪಡೆದಿರುವುದನ್ನು ಪತ್ತೆ ಮಾಡಲಾಗಿದೆ. ಈಗಾಗಲೇ 2,964 ಕುಟುಂಬಗಳ … Continued