ಅತಿದೊಡ್ಡ ಸೈಬರ್ ವಂಚನೆಯಲ್ಲಿ ₹ 13 ಕೋಟಿ ಕಳೆದುಕೊಂಡ 75 ವರ್ಷದ ವೃದ್ಧ…!

ಹೈದರಾಬಾದ್: ತೆಲಂಗಾಣದ ಸೈಬರ್ ಸೆಕ್ಯುರಿಟಿ ಬ್ಯೂರೋಗೆ ವ್ಯಕ್ತಿಯೊಬ್ಬರಿಂದ ಅತಿದೊಡ್ಡ ಸೈಬರ್ ಹಣಕಾಸು ವಂಚನೆ ದೂರು ಬಂದಿದ್ದು, 75 ವರ್ಷದ ವ್ಯಕ್ತಿಯೊಬ್ಬರು ₹ 13 ಕೋಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತ ವ್ಯಕ್ತಿ ಸಾರ್ವಜನಿಕ ವಲಯದ ಘಟಕದ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು ಎಂದು ಹೇಳಲಾಗಿದೆ. ಈ ವ್ಯಕ್ತಿ ಜುಲೈ 1 ರಂದು ವಾಟ್ಸ್‌ಆ್ಯಪ್ ಮೂಲಕ ಹೂಡಿಕೆಯ ಪ್ರಸ್ತಾಪವನ್ನು … Continued

ಮನೆಯಲ್ಲಿ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ

ನವದೆಹಲಿ: ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ (70) ಅವರು ಮಂಗಳವಾರ ದೆಹಲಿಯ ಲುಟ್ಯೆನ್ಸ್ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಡಾ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಅವರ ಮನೆಯ ಪೂಜಾ ಕೊಠಡಿಯ ಬಳಿ ರಕ್ತದ ಮಡುವಿನಲ್ಲಿ … Continued

ಅಕ್ಟೋಬರ್ 28 ರಿಂದ ಅಯೋಧ್ಯೆಯಲ್ಲಿ 4 ದಿನಗಳ ದೀಪೋತ್ಸವ ; ಬೆಳಗಲಿವೆ 25 ಲಕ್ಷ ದೀಪಗಳು…!

ಲಕ್ನೋ : ಈ ವರ್ಷದ ಜನವರಿಯಲ್ಲಿ ಭಗವಾನ್ ರಾಮನ ಐತಿಹಾಸಿಕ ‘ಪ್ರಾಣ ಪ್ರತಿಷ್ಠೆ’ಗೆ ಸಾಕ್ಷಿಯಾದ ಅಯೋಧ್ಯೆಯಲ್ಲಿ ಅಕ್ಟೋಬರ್ 28 ರಿಂದ ನಾಲ್ಕು ದಿನಗಳ ದೀಪೋತ್ಸವ ಆಚರಣೆ ನಡೆಯಲಿದೆ. ಇದು ಭಗವಾನ್ ರಾಮನ ದೇವಾಲಯ ಉದ್ಘಾಟನೆಯಾದ ನಂತರ ಮೊದಲ ಕಾರ್ಯಕ್ರಮವಾಗಿದೆ. ದೀಪೋತ್ಸವ ಆಚರಣೆಗಳು ಅಕ್ಟೋಬರ್ 28 ರಿಂದ ಅಕ್ಟೋಬರ್ 31ರ ವರೆಗೆ ನಡೆಯಲಿದೆ ಎಂದು ಉತ್ತರ ಪ್ರದೇಶ … Continued

ಗೋವುಗಳ ಕಳ್ಳ ಎಂದು ತಪ್ಪಾಗಿ ಭಾವಿಸಿ 19 ವರ್ಷದ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದ ಗೋ ರಕ್ಷಕರು…!

ಸುಮಾರು 10 ದಿನಗಳ ಹಿಂದೆ ಗೋರಕ್ಷಕರು ಗುಂಡು ಹಾರಿಸಿದ ನಂತರ 19 ವರ್ಷದ ಘಟನೆಗೆ ಸಂಬಂದವೇ ಇರದ ಯುವಕ ಸಾವಿಗೀಡಾಗಿದ್ದು, ಇದು ಆತ ಗೋ ಕಳ್ಳ ಎಂಬ ತಪ್ಪಾಗಿ ಭಾವಿಸಿದ್ದರಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಅವರಲ್ಲಿ ಒಬ್ಬ ಗೋರಕ್ಷಕರ ಗುಂಪಿನ ಸದಸ್ಯ ಎಂದು ಹೇಳಲಾಗಿದೆ. ನಾಲ್ವರು ಆರೋಪಿಗಳು ಗೊಂದಲದ ಹಿನ್ನೆಲೆಯಲ್ಲಿ … Continued

ಪ್ರಧಾನಿ ಮೋದಿಯನ್ನು ಸ್ವಾಗತಿಸಲಿದ್ದಾರೆ 7000ಕ್ಕೂ ಹೆಚ್ಚು ಕಾರುಗಳ ಒಡೆಯ ಬ್ರೂನಿ ಸುಲ್ತಾನ್…!

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬ್ರೂನೈಗೆ ಆಗಮಿಸಲಿದ್ದು, ಆಗ್ನೇಯ ಏಷ್ಯಾದ ಈ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿಯಾಗಿದೆ. ಎರಡು ದಿನಗಳ ಭೇಟಿಯು ಬ್ರೂನಿಯೊಂದಿಗೆ ಭಾರತದ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಮತ್ತು ಉಭಯ ದೇಶಗಳ ನಡುವಿನ 40 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಇದು ಸ್ಮರಿಸುತ್ತದೆ. ಬ್ರಿಟನ್‌ ರಾಣಿ ಎಲಿಜಬೆತ್ II ರ … Continued

ಎನ್‌ಕೌಂಟರ್‌ನಲ್ಲಿ 9 ಮಾವೋವಾದಿಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ದಾಂತೇವಾಡ: ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಒಂಬತ್ತು ಮಾವೋವಾದಿಗಳು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭದ್ರತಾ ಪಡೆಗಳ ಜಂಟಿ ತಂಡವು ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ಬೆಳಿಗ್ಗೆ 10:30 ರ ಸುಮಾರಿಗೆ ಗುಂಡಿನ ಚಕಮಕಿ ನಡೆಯಿತು ಎಂದು ಬಸ್ತಾರ್ … Continued

ಕೋಲ್ಕತ್ತಾ ಆರ್‌.ಜಿ. ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಬಂಧಿಸಿದ ಸಿಬಿಐ

ಕೋಲ್ಕತ್ತಾ: ಕಳೆದ ತಿಂಗಳು ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಹತ್ಯೆಗೈದ ಕೋಲ್ಕತ್ತಾ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಅವರನ್ನು ಸಿಬಿಐ ಸೋಮವಾರ ಬಂಧಿಸಿದೆ. ಅತ್ಯಾಚಾರ-ಕೊಲೆ ಪ್ರಕರಣದ ಜೊತೆಗೆ ಸಿಬಿಐ ತನಿಖೆ ನಡೆಸುತ್ತಿರುವ ಸಂದೀಪ ಘೋಷ್ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಸಂದೀಪ್ ಘೋಷ್ ಜೊತೆ ಮಾರಾಟಗಾರರಾದ ಬಿಪ್ಲವ್ ಸಿಂಘಾ … Continued

ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್ : ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಭಾರತದ ನಿತೇಶಕುಮಾರ

ನವದೆಹಲಿ : ನಿತೇಶಕುಮಾರ ಅವರು ಪ್ಯಾರಾಲಿಂಪಿಕ್ಸ್ 2024 ರ ಪುರುಷರ ಸಿಂಗಲ್ಸ್ ಎಸ್‌ಎಲ್ 3 (SL3) ವರ್ಗದ ಪ್ಯಾರಾ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದಿದ್ದಾರೆ. ಸೋಮವಾರ (ಸೆಪ್ಟೆಂಬರ್ 2) ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ಎಸ್‌ಎಲ್ 3 ವರ್ಗದ ಚಿನ್ನದ ಪದಕದ ಪಂದ್ಯದಲ್ಲಿ ನಿತೇಶಕುಮಾರ ಅವರು ಗ್ರೇಟ್ ಬ್ರಿಟನ್‌ನ ಡೇನಿಯಲ್ … Continued

ವೀಡಿಯೊ..| ಎಂ.ಎಸ್. ಧೋನಿಯನ್ನು ನಾನು ಎಂದಿಗೂ ಕ್ಷಮಿಸಲ್ಲ ; ಕ್ರಿಕೆಟರ್‌ ಯುವರಾಜ ಸಿಂಗ್ ತಂದೆ ಹೀಗೆ ಹೇಳಿದ್ಯಾಕೆ…?

ನವದೆಹಲಿ : ಭಾರತದ ಮಾಜಿ ಬ್ಯಾಟರ್ ಯುವರಾಜ ಸಿಂಗ್ ಅವರ ತಂದೆ ಯೋಗರಾಜ ಸಿಂಗ್ ಅವರು ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಜೀ ಸ್ವಿಚ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಯೋಗರಾಜ ಸಿಂಗ್ ಅವರು ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. … Continued

3 ಟಿವಿ ಚಾನೆಲ್‌ ಗಳ ಬಹಿಷ್ಕಾರಕ್ಕೆ ತೃಣಮೂಲ ಕಾಂಗ್ರೆಸ್‌ ನಿರ್ಧಾರ

ನವದೆಹಲಿ : ಕೋಲ್ಕತ್ತಾದ ಆರ್‌.ಜಿ. ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯೊಬ್ಬರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ತನ್ನ ವಕ್ತಾರರನ್ನು ಟಿವಿ ಚಾನೆಲ್‌ ಚರ್ಚೆಗಳಿಗೆ ಕಳುಹಿಸದಿರಲು ನಿರ್ಧರಿಸಿದ್ದು, ಮೂರು ಸುದ್ದಿ ವಾಹಿನಿಗಳನ್ನು ‘ಬಂಗಾಳ ವಿರೋಧಿ’ ಎಂದು ಆರೋಪಿಸಿದೆ. “ನಿರಂತರ ಬಂಗಾಳ ವಿರೋಧಿ ಅಜೆಂಡಾ-ಚಾಲಿತ ಪ್ರಚಾರದಿಂದಾಗಿ … Continued