ಜೆಎಂಎಂ ಪಕ್ಷಕ್ಕೆ ಮಾಜಿ ಸಿಎಂ ಚಂಪೈ ಸೊರೇನ್ ರಾಜೀನಾಮೆ

ನವದೆಹಲಿ: ಜಾರ್ಖಂಡದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಬುಧವಾರ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಜಾರ್ಖಂಡದ ಆದಿವಾಸಿಗಳು, ಮೂಲನಿವಾಸಿಗಳು, ದಲಿತರು, ಹಿಂದುಳಿದವರು ಮತ್ತು ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ. ಪಕ್ಷದ ಈಗಿನ ಕಾರ್ಯವೈಖರಿ ಮತ್ತು ನೀತಿಗಳಿಂದ ನೊಂದಿರುವ ಕಾರಣ ನಾನು ಅಂತಹ ಕ್ರಮಕ್ಕೆ ಮುಂದಾಗಬೇಕಾಯಿತು … Continued

ವೀಡಿಯೊ..| 50 ಹಸುಗಳನ್ನು ನದಿಗೆ ಎಸೆದ ದುಷ್ಕರ್ಮಿಗಳು ; 20 ಹಸುಗಳು ಸಾವು..!

ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಹಲವಾರು ಹಸುಗಳನ್ನು ಉಕ್ಕಿ ಹರಿಯುತ್ತಿದ್ದ ನದಿಗೆ ಎಸೆಯುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಾಗೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, 15 ರಿಂದ 20 ಹಸುಗಳು ಸಾವಿಗೀಡಾಗಿವೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ, ಆದರೂ ಇದು ಇನ್ನೂ ದೃಢೀಕರಿಸಲ್ಪಟ್ಟಿಲ್ಲ ಎಂದು … Continued

ಮುಂದಿನ ಐಸಿಸಿ ಅಧ್ಯಕ್ಷರಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವಿರೋಧ ಆಯ್ಕೆ

ನವದೆಹಲಿ: ಭಾರತೀಯ ಕ್ರಿಕೆಟ್‌ ಮಂಡಳಿಯ (BCCI) ಹಾಲಿ ಗೌರವ ಕಾರ್ಯದರ್ಶಿ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ICC) ಸ್ವತಂತ್ರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮತ್ತು 1 ಡಿಸೆಂಬರ್ 2024 ರಂದು ಅವರ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಆಗಸ್ಟ್ 20 ರಂದು, ಪ್ರಸ್ತುತ ಐಸಿಸಿ (ICC) ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯ ಮುಕ್ತಾಯವಾಗಲಿದೆ. ಅಧ್ಯಕ್ಷ … Continued

ಕಿರಿಯ ವೈದ್ಯೆ ಅತ್ಯಾಚಾರ-ಕೊಲೆ | ಕೋಲ್ಕತ್ತಾದ ಬೀದಿಗಳಲ್ಲಿ ಆಕ್ರೋಶ ; ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಜಲಫಿರಂಗಿ, ಅಶ್ರುವಾಯು ಪ್ರಯೋಗ

ಕೋಲ್ಕತ್ತಾ : ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ-ಕೊಲೆ ಪ್ರಕರಣವನ್ನು ಖಂಡಿಸಿ ಮಂಗಳವಾರ ಕೋಲ್ಕತ್ತಾದಲ್ಲಿ ‘ನಬಣ್ಣ ಅಭಿಜನ’ ಪ್ರತಿಭಟನಾ ಮೆರವಣಿಗೆ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋದ ನಂತರ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ಲಾಠಿ ಚಾರ್ಜ್ ನಡೆಸಿದರು. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ಎಸೆದರು ಮತ್ತು … Continued

ದೆಹಲಿ ಅಬಕಾರಿ ನೀತಿ ಪ್ರಕರಣ: ಬಿಆರ್‌ ಎಸ್‌ ನಾಯಕಿ ಕವಿತಾಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಲಾಯ (ಇ.ಡಿ.) ಮತ್ತು ಸಿಬಿಐ ದಾಖಲಿಸಿದ್ದ ಎರಡೂ ಪ್ರಕರಣಗಳಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ. ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ತನಿಖೆ ಪೂರ್ಣಗೊಂಡಿದ್ದು ವಿಚಾರಣೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿಯುವುದರಿಂದ ಈ ಆದೇಶ ನೀಡುತ್ತಿರುವುದಾಗಿ ನ್ಯಾಯಮೂರ್ತಿಗಳಾದ ಬಿ.ಆರ್. … Continued

ʼಎಮರ್ಜೆನ್ಸಿʼ ಸಿನೆಮಾ ಬಿಡುಗಡೆಗೂ ಮುನ್ನ ನಟಿ-ಸಂಸದೆಗೆ ಕಂಗನಾ ರಣಾವತಗೆ ಕೊಲೆ ಬೆದರಿಕೆ

ನವದೆಹಲಿ: ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸಿರುವ ತಮ್ಮ ಮುಂದಿನ ಚಿತ್ರ ‘ಎಮರ್ಜೆನ್ಸಿ’ ಬಿಡುಗಡೆಗೆ ಮುನ್ನ ಕೆಲವರಿಂದ ಕೊಲೆ ಬೆದರಿಕೆಗಳು ಬಂದಿವೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಈ ಬೆದರಿಕೆಗಳು ಬಂದಿವೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಿಜೆಪಿ ಸಂಸದರಾಗಿರುವ … Continued

ದೇವರ ದರ್ಶನಕ್ಕೆ ಹೋದಾಗ ನೀವು ಹಿಂದೂ ಎಂಬುದಕ್ಕೆ ಪುರಾವೆ ತೋರಿಸಿ ಎಂದ ಮಧುರೈ ದೇವಸ್ಥಾನದ ಸಿಬ್ಬಂದಿ ; ನಟಿ ನಮಿತಾ

ಚೆನ್ನೈ: ಮಧುರೈನ ಶ್ರೀ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನಕ್ಕೆ ತಮ್ಮ ಪತಿಯೊಂದಿಗೆ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಯೊಬ್ಬರು ದೇವರ ದರ್ಶನ ಮಾಡದಂತೆ ನನ್ನನ್ನು ತಡೆದರು ಮತ್ತು ನಾನು ಹಿಂದೂ ಎಂಬುದಕ್ಕೆ ಪುರಾವೆ ತೋರಿಸಿ ಕೇಳಿದರು ಎಂದು ನಟಿ ಮತ್ತು ತಮಿಳುನಾಡು ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ನಮಿತಾ ಅವರು ಆರೋಪಿಸಿದ್ದಾರೆ. ದೇವಾಲಯದ ಅಧಿಕಾರಿಗಳ “ಅಸಭ್ಯ” ನಡವಳಿಕೆಯ ಬಗ್ಗೆ ದಕ್ಷಿಣ … Continued

ರೈತರ ಕುರಿತು ವಿವಾದಾತ್ಮಕ ಹೇಳಿಕೆ : ತಮ್ಮದೇ ಪಕ್ಷದ ಸಂಸದೆಗೆ ಬಿಜೆಪಿಯಿಂದ ಪಾಠ…!

ನವದೆಹಲಿ : ರೈತರ ಪ್ರತಿಭಟನೆ ಕುರಿತ ಹೇಳಿಕೆ ವಿವಾದಕ್ಕೆ ಕಾರಣವಾದ ನಂತರ ನಟಿ-ರಾಜಕಾರಣಿ ಕಂಗನಾ ರಣಾವತ್ ಅವರಿಗೆ ಬಿಜೆಪಿ ನಾಯಕತ್ವವು ಛೀಮಾರಿ ಹಾಕಿದೆ. ಅಲ್ಲದೆ ಕಂಗನಾ ರಣಾವತ್ ಅವರ ಹೇಳಿಕೆಗಳು ಪಕ್ಷದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. 38ರ ಹರೆಯದ ಬಿಜೆಪಿ ಸಂಸದರು ಸರಕಾರ ಕೈಗೊಂಡಿರುವ ದೃಢವಾದ ಕ್ರಮಗಳಿರದಿದ್ದಲ್ಲಿ ರೈತರ ಪ್ರತಿಭಟನೆಯು ಭಾರತದಲ್ಲಿ ಬಾಂಗ್ಲಾದೇಶದಂತಹ … Continued

ವೀಡಿಯೊ..| ನಿದ್ದೆ ಅಂದ್ರೆ ಇದಪ್ಪ..! ಪಕ್ಕದಲ್ಲಿ ರೈಲು ನಿಂತ್ರೂ ಹಳಿ ಮೇಲೆ ಗಡದ್ದಾಗಿ ಮಲಗಿದ್ದ ಈ ವ್ಯಕ್ತಿ ; ಲೋಕೊ ಪೈಲಟ್‌ ಎಬ್ಬಿಸಬೇಕಾಯ್ತು..!!

ನವದೆಹಲಿ : ಜೀವನದ ಜಂಜಾಟವನ್ನು ಮರೆಯಲು ಕೆಲವೊಮ್ಮೆ ಒಳ್ಳೆಯ ನಿದ್ದೆ ಸಾಕಾಗುತ್ತದೆ. ಆದರೆ ಅದರಿಂದ ಜೀವಕ್ಕೆ ಕುತ್ತು ಬರುವ ಸಾಧ್ಯತೆಯೂ ಇರುತ್ತದೆ ಎಂಬುದಕ್ಕೆ ಘಟನೆಯೊಂದು ಸಾಕ್ಷಿಯಾಗಿದೆ. ಈ ಘಟನೆಯಲ್ಲಿ ರೈಲ್ವೆ ಹಳಿಯ ಮೇಲೆ ಗಡದ್ದಾಗಿ ನಿದ್ದೆ ಹೋಗಿದ್ದ ವ್ಯಕ್ತಿಯೊಬ್ಬರನ್ನು ರೈಲ್ವೆಯ ಲೋಕೊ ಪೈಲಟ್‌ ಅವರ ಸಮಯ ಪ್ರಜ್ಞೆಯಿಂದ ಜೀವ ಕಳೆದುಕೊಳ್ಳುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿದ್ದಾರೆ. ವೈರಲ್‌ ಆದ … Continued

ಪಾಕಿಸ್ತಾನ: ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸಿ ಗುರುತಿನ ಚೀಟಿ ನೋಡಿದ ನಂತರ 23 ಪ್ರಯಾಣಿಕರ ಗುಂಡಿಕ್ಕಿ ಹತ್ಯೆ..

ಕ್ವೆಟ್ಟಾ : ನೈರುತ್ಯ ಪಾಕಿಸ್ತಾನದಲ್ಲಿ ನಡೆದ ಭೀಕರ ದಾಳಿಯಲ್ಲಿ ಬಂದೂಕುಧಾರಿಗಳು 23 ಪ್ರಯಾಣಿಕರನ್ನು ಗುರುತಿಸಿ ಬಸ್‌ಗಳು, ವಾಹನಗಳು ಮತ್ತು ಟ್ರಕ್‌ಗಳಲ್ಲಿದ್ದ ಅವರನ್ನು ಕರೆದೊಯ್ದ ನಂತರ ಅವರನ್ನು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಬಲೂಚಿಸ್ತಾನ್ ಪ್ರಾಂತ್ಯದ ಮುಸಾಖೈಲ್ ಜಿಲ್ಲೆಯಲ್ಲಿ ರಾತ್ರಿ ಈ ಹತ್ಯೆಗಳು ನಡೆದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಯೂಬ್ ಅಚಕ್ಝೈ … Continued