ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಸಹಾಯಕ ವಿಭವಕುಮಾರಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ನವದೆಹಲಿ: ಎಎಪಿಯ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹಾಯಕ ವಿಭವಕುಮಾರ ಅವರಿಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ನಿರಾಕರಿಸಿದೆ. ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸುಶೀಲ ಅನುಜ ತ್ಯಾಗಿ ಅವರು ಈ ಆದೇಶ ನೀಡಿದ್ದಾರೆ. ದೆಹಲಿ ಪೊಲೀಸರು ಮೇ … Continued

ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ : ಅಪ್ರಾಪ್ತನ ರಕ್ತದ ಮಾದರಿ ಬದಲಾಯಿಸಲು ಪಡೆದಿದ್ದ 3 ಲಕ್ಷ ರೂ. ವಶಕ್ಕೆ ಪಡೆದ ಪೊಲೀಸರು ; ಇಬ್ಬರು ವೈದ್ಯರ ಬಂಧನ

ಮೇ 19 ರಂದು ನಗರದ ಕಲ್ಯಾಣಿ ನಗರದಲ್ಲಿ ಕಾರು ಅಪಘಾತಕ್ಕೀಡಾಗಿ ಮೋಟಾರುಬೈಕಿನಲ್ಲಿದ್ದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಸಾವಿಗೀಡಾದ ಪ್ರಕರಣದಲ್ಲಿ ಕಾರು ಚಾಲನೆ ಮಾಡಿದ್ದ ಅಪ್ರಾಪ್ತನ ರಕ್ತದ ಮಾದರಿಯನ್ನೇ ಬದಲಾಯಿಸಲು ವೈದ್ಯರಿಗೆ ಲಂಚ ನೀಡಿದ್ದ 3 ಲಕ್ಷ ರೂ.ಗಳನ್ನು ಪುಣೆ ಪೊಲೀಸರ ಅಪರಾಧ ವಿಭಾಗವು ಸೋಮವಾರ ವಶಪಡಿಸಿಕೊಂಡಿದೆ. ಭಾನುವಾರ, 17 ವರ್ಷದ ಬಾಲಕನ ರಕ್ತದ ವರದಿಯನ್ನು ಬದಲಾಯಿಸಿದ … Continued

ವೀಡಿಯೊ..| ಮಧ್ಯರಸ್ತೆಯಲ್ಲೇ ವ್ಯಕ್ತಿಯೊಬ್ಬನಿಗೆ ಪಿಸ್ತೂಲ್ ತೊರಿಸಿ ಹಲ್ಲೆ ಮಾಡಿದ ಅಂತಾರಾಷ್ಟ್ರೀಯ ಮಟ್ಟದ ಶೂಟರ್ ; ಬಂಧನ

ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ವ್ಯಕ್ತಿಯೊಬ್ಬ ಒಂದು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಮತ್ತೊಬ್ಬನಿಗೆ ಬೆದರಿಕೆ ಹಾಕಿರುವ ಘಟನೆ ರಸ್ತೆಯಲ್ಲಿ ನಡೆದಿದೆ. ಲಕ್ನೋದ ವೆಬ್ ಮಾಲ್ ಪ್ರದೇಶದ ರಸ್ತೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ನಂತರ ಉಂಟಾದ ವಿವಾದದಿಂದ ರಸ್ತೆಯಲ್ಲಿ ಗಲಾಟೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಪಿಸ್ತೂಲ್ ಶೂಟರ್ ವಿನೋದ ಮಿಶ್ರಾ ಎಂಬವರು ಮತ್ತೊಂದು ವಾಹನದ ಚಾಲಕ ರಂಜೀತ್ ಎಂಬವರ … Continued

ವೀಡಿಯೊ..| ಇಂಡಿಯಾ ಬಣದ ಸಮಾವೇಶದಲ್ಲಿ ಕುಸಿದ ವೇದಿಕೆ : ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ರಾಹುಲ್ ಗಾಂಧಿ

ಲೋಕಸಭೆ ಚುನಾವಣೆಯ ಅಂತಿಮ ಹಂತದ ಚುನಾವಣಾ ಪ್ರಚಾರಕ್ಕಾಗಿ ಬಿಹಾರಕ್ಕೆ ಆಗಮಿಸಿದ್ದ ರಾಹುಲ್‌ ಗಾಂಧಿ ಕಾರ್ಯಕ್ರಮದ ವೇದಿಕೆ ಹಠಾತ್ ಕುಸಿದಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಮೈತ್ರಿಕೂಟದ ಇತರ ನಾಯಕರು ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ಮುನ್ನ ನಾಯಕರು ಒಗ್ಗಟ್ಟು ಪ್ರದರ್ಶಿಸಲು ವೇದಿಕೆ ಮೇಲೆ … Continued

ಮಾಲೆಗಾಂವ್ ಮಾಜಿ ಮೇಯರ್, ಓವೈಸಿ ಪಕ್ಷದ ಪ್ರಮುಖ ನಾಯಕನ ಮೇಲೆ ಗುಂಡಿನ ದಾಳಿ

ಮುಂಬೈ : ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಪ್ರಮುಖ ಹಾಗೂ ಮಾಲೆಗಾಂವ್‌ನ ಮಾಜಿ ಮೇಯರ್ ಅಬ್ದುಲ್ ಮಲಿಕ್ ಮೊಹಮ್ಮದ್ ಯೂನಸ್ ಇಸಾ ಮೇಲೆ ದುಷ್ಕರ್ಮಿಗಳು ಸೋಮವಾರ ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ಮಾಲೆಗಾಂವ್‌ನಲ್ಲಿ ನಡೆದಿದೆ. ಮಲಿಕ್ ಅವರ ಎದೆಯ ಎಡಭಾಗದಲ್ಲಿ ಒಂದು ಗುಂಡು ಸೇರಿದಂತೆ ಮೂರು … Continued

ವೀಡಿಯೊ..| 27 ಮಂದಿ ಮೃತಪಟ್ಟ ರಾಜ​ಕೋಟ್​ ಗೇಮ್​ ಝೋನ್​ ದುರಂತ ; ವೆಲ್ಡಿಂಗ್‌ ಕಿಡಿಗಳಿಂದ ಬೆಂಕಿ ಹೊತ್ತಿಕೊಂಡಿದ್ದನ್ನು ತೋರಿಸಿದ ವೀಡಿಯೊ..

ಎರಡು ದಿನಗಳ ಹಿಂದೆ ಗುಜರಾತಿನ ರಾಜ್‌ಕೋಟದಲ್ಲಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ನ ಗೇಮ್ ಝೋನ್‌ನಲ್ಲಿ 27 ಜನರು ಸಾವಿಗೆ ಕಾರಣವಾದ ಬೆಂಕಿ ಅವಘಡವು ವೆಲ್ಡಿಂಗ್ ಯಂತ್ರದ ಕಿಡಿಗಳಿಂದ ಸಂಭವಿಸಿದೆ ಎಂದು ವರದಿಯಾಗಿದೆ. ಅದು ಅಮ್ಯೂಸ್‌ಮೆಂಟ್ ಪಾರ್ಕ್‌ನ ಗೇಮ್ ಝೋನ್‌ನಲ್ಲಿ ಸಂಗ್ರಹಿಸಿಟ್ಟಿದ್ದ ದಹನಕಾರಿ ವಸ್ತುಗಳ “ರಾಶಿ” ಮೇಲೆ ಬೆಂಕಿ ಕಿಡಿ ಬಿದ್ದಿದೆ. ಮೇ 25ರ ಸಂಜೆ, ಬೇಸಿಗೆ ರಜೆಯ ವಿಹಾರವನ್ನು … Continued

ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ : ​ರಕ್ತದ ಮಾದರಿ ತಿರುಚಿದ ಆರೋಪದ ಮೇಲೆ ಇಬ್ಬರು ವೈದ್ಯರ ಬಂಧನ

ಪುಣೆ: ಮೇ 19 ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಕಾರು ಅಪಘಾತಕ್ಕೀಡಾಗಿ ಮೋಟರ್‌ಬೈಕ್‌ನಲ್ಲಿದ್ದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಭಾಗಿಯಾಗಿದ್ದ 17 ವರ್ಷದ ಬಾಲಕನ ರಕ್ತದ ವರದಿಯನ್ನು ತಿರುಚಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಪುಣೆಯ ಸಸೂನ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ. ಪೋರ್ಷೆ ಕಾರಿನ ಮಾರಣಾಂತಿಕ ಅಪಘಾತದ ನಂತರ ಕಾರು ಚಾಲನೆ … Continued

ಐಪಿಎಲ್ 2024 ಮುಕ್ತಾಯ : ವಿವಿಧ ಪ್ರಶಸ್ತಿ ವಿಜೇತರು, ತಂಡಗಳು ಪಡೆದ ಬಹುಮಾನದ ಮೊತ್ತದ ಸಂಪೂರ್ಣ ಪಟ್ಟಿ….

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಮುಕ್ತಾಯಗೊಂಡಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಮ್ಮ 3 ನೇ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಸನ್‌ರೈಸರ್ಸ್ ಹೈದರಾಬಾದ್ ರನ್ನರ್-ಅಪ್ ಪದಕಕ್ಕೆ ತೃಪ್ತಿಪಡಬೇಕಾಯಿತು ಗೆಲುವಿನೊಂದಿಗೆ, ಕೋಲ್ಕತ್ತಾ ನೈಟ್ ರೈಡರ್ಸ್(KKR) 20 ಕೋಟಿ ಬಹುಮಾನವನ್ನು ಪಡೆದುಕೊಂಡಿತು, ಇದೇ ವೇಳೆ ರನ್ನರ್-ಅಪ್ ಆದ ಸನ್‌ರೈಸರ್ಸ್ ಹೈದರಾಬಾದ್ (SRH) 12.5 ಕೋಟಿ ರೂ. ಬಹುಮಾನವನ್ನು ಪಡೆದುಕೊಂಡಿತು. ಐಪಿಎಲ್-2024ರ … Continued

ಇವಿಎಂ ಧ್ವಂಸ : ಬಿಜೆಪಿ ಅಭ್ಯರ್ಥಿ ಪ್ರಶಾಂತ ಜಗದೇವ ಬಂಧನ

ಭುವನೇಶ್ವರ : ಒಡಿಶಾದ ಖುರ್ದಾದಲ್ಲಿ ಇವಿಎಂ ಧ್ವಂಸಗೊಳಿಸಿದ ಆರೋಪದ ಮೇರೆಗೆ ಬಿಜೆಪಿ ಅಭ್ಯರ್ಥಿಯನ್ನು ಬಂಧಿಸಲಾಗಿದೆ. ಖುರ್ದಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಚಿಲಿಕಾದ ಬಿಜೆಪಿ ಶಾಸಕ ಪ್ರಶಾಂತ ಜಗದೇವ ಅವರನ್ನು ಶನಿವಾರ ಇವಿಎಂಗೆ ಹಾನಿಗೊಳಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಬೇಗನಿಯಾ ವಿಧಾನಸಭಾ ಕ್ಷೇತ್ರದ ಬೋಲಗಾಡ್ ಬ್ಲಾಕ್‍ನ ಕೌನ್ರಿಪಟ್ನಾದ ಮತಗಟ್ಟೆಗೆ ಮತ ಚಲಾಯಿಸಲು ಪ್ರಶಾಂತ ಜಗದೇವ ಅವರು ಪತ್ನಿಯೊಂದಿಗೆ … Continued

ಐಪಿಎಲ್ 2024 : ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಚಾಂಪಿಯನ್‌ ಆದ ಕೋಲ್ಕತ್ತಾ ನೈಟ್ ರೈಡರ್ಸ್

ಚೆನ್ನೈ: ಕೋಲ್ಕತ್ತಾ ನೈಟ್ ರೈಡರ್ಸ್ ಭಾನುವಾರ ಮೇ 26 ರಂದು ನಡೆದ ಐಪಿಎಲ್ 2024 ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಎಸ್‌ಆರ್‌ಹೆಚ್ ವಿರುದ್ಧ ಎಂಟು ವಿಕೆಟ್‌ಗಳ ಜಯ ಸಾಧಿಸಿತು. ಹಾಗೂ ಮೂರನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿತು. ಫೈನಲ್‌ ಏಕಪಕ್ಷೀಯ … Continued