ಹಿರಿಯ ಅಧಿಕಾರಿ ಅವಮಾನ ಮಾಡಿದ ಆರೋಫ: ಠಾಣೆಯೊಳಗೆ ಗುಂಡು ಹಾರಿಸಿಕೊಂಡು ಪೊಲೀಸ್‌ ಅಧಿಕಾರಿ ಆತ್ಮಹತ್ಯೆ

ಹೋಶಿಯಾರಪುರ: : ಹರ್ಯಾಣಾದ ಹೋಶಿಯಾರ್‌ಪುರ ಜಿಲ್ಲೆಯ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರು ಶನಿವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತೀಶ್‌ ಕುಮಾರ್‌ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಹಿರಿಯ ಅಧಿಕಾರಿಗಳಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ. ಹೀಗಾಗಿ ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ವೀಡಿಯೋ ಮಾಡಿ ನಂತರ ಪೊಲೀಸ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಠಾಣೆಯೊಳಗೆ ತನ್ನ ಸರ್ವಿಸ್‌ … Continued

ಸಫಾರಿ ವಾಹನ ಅಟ್ಟಿಸಿಕೊಂಡು ಬಂದ ಕಾಡಾನೆ : ಭಯದಲ್ಲಿ ನಡುಗಿದ ಪ್ರವಾಸಿಗರು | ವೀಕ್ಷಿಸಿ

ಕಾಡು ಪ್ರಾಣಿಗಳಿಗೆ ಕಿರಿಕಿರಿಯಾದರೆ ಅದರ ಪರಿಣಾಮವೂ ಅಷ್ಟೇ ಗಂಭೀರವಾಗಿರುತ್ತದೆ. ಕೆಲವೊಮ್ಮೆ ಸಫಾರಿ ಸಂದರ್ಭದಲ್ಲೂ ಭಯಾನಕ ಪರಿಸ್ಥಿತಿ ಎದುರಾಗುತ್ತದೆ. ಇದೀಗ, ಅಂತಹದ್ದೇ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದೆ. ಕಾಡಾನೆಯೊಂದು ವಾಹನದತ್ತ ನುಗ್ಗಿ ಓಡೋಡಿ ಬರುವ ಈ ದೃಶ್ಯ ಒಂದು ಕ್ಷಣ ಎದೆ ಧಗ್ ಎನ್ನವಂತೆ ಮಾಡುತ್ತದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸಾಕೇತ್ ಬಡೋಲಾ ತಮ್ಮ ಟ್ವಿಟ್ಟರ್ … Continued

ಜೀಸಸ್ ರಿಯಲ್ ಗಾಡ್, ಇತರ ಶಕ್ತಿಗಳಂತೆ ಅಲ್ಲ: ರಾಹುಲ್ ಜೊತೆ ಕ್ರೈಸ್ತ ಪಾದ್ರಿಯ ವಿವಾದದ ಹೇಳಿಕೆಯ ವೀಡಿಯೋ ವೈರಲ್

ಚೆನ್ನೈ: ಜೀಸಸ್ ಕ್ರೈಸ್ತ ನಿಜವಾದ ದೇವರು. ಬೇರೆ ಶಕ್ತಿಯ ರೀತಿ ಅಲ್ಲ ಎಂದು ಕನ್ಯಾಕುಮಾರಿಯ ಫಾದರ್ ಒಬ್ಬರು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಳಿ ಹೇಳಿರುವ ಮಾತುಗಳು ವೈರಲ್ಲಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಭಾರತ್ ಜೋಡೊ ಯಾತ್ರೆ ಹಮ್ಮಿಕೊಂಡಿರುವ ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿನ ಕ್ಯಾಥೋಲಿಕ್ ಫಾದರ್ ಜಾರ್ಜ್ ಪೊನ್ನಯ್ಯ ಅವರನ್ನು ಭೇಟಿಯಾಗಿ ಸಮಾಲೋಚನೆ … Continued

ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹೈದರಾಬಾದ್‌ನ ಬಾಲಾಪುರದ ಗಣಪನ ಲಡ್ಡು

ಹೈದರಾಬಾದ್: ಹೈದರಾಬಾದ್​ನ ಬಾಲಾಪುರದಲ್ಲಿ ಒಂಬತ್ತು ದಿನಗಳವರೆಗೆ ನಡೆಯುವ ಗಣೇಶೋತ್ಸವದಲ್ಲಿ ಪ್ರತಿ ವರ್ಷವೂ ಗಣೇಶನಿಗೆ ಇಟ್ಟ ಲಡ್ಡು ದಾಖಲೆ ಪ್ರಮಾಣದಲ್ಲಿ ಇಲ್ಲಿ ಹರಾಜಾಗುತ್ತದೆ. ಇಲ್ಲಿ 9ನೇ ದಿನ ಗಣೇಶ ಲಡ್ಡುವಿನ ಹರಾಜು ನಡೆಯುತ್ತದೆ. ಕಳೆದ ವರ್ಷ 18.90 ಲಕ್ಷ ರೂ.ಗಳಿಗೆ ಲಡ್ಡು ಮಾರಾಟವಾಗಿತ್ತು. ಆದರೆ ಈ ಬಾರಿ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದು ಲಡ್ಡು ಅತಿ ಹೆಚ್ಚಿನ … Continued

ವಿವಿಧ ರಾಜ್ಯಗಳಿಗೆ ಹೊಸ ಉಸ್ತುವಾರಿಗಳನ್ನು ಘೋಷಿಸಿದ ಬಿಜೆಪಿ

ನವದೆಹಲಿ: ಮಾಜಿ ಕೇಂದ್ರ ಸಚಿವರಾದ ಪ್ರಕಾಶ ಜಾವಡೇಕರ್ ಮತ್ತು ಮಹೇಶ್ ಶರ್ಮಾ ಅವರಲ್ಲದೆ ಮಾಜಿ ಮುಖ್ಯಮಂತ್ರಿಗಳಾದ ವಿಜಯ್ ರೂಪಾನಿ ಮತ್ತು ಬಿಪ್ಲಬ್ ಕುಮಾರ್ ದೇಬ್ ಸೇರಿದಂತೆ ಹಲವಾರು ಹಿರಿಯ ನಾಯಕರನ್ನು ಬಿಜೆಪಿ ಶುಕ್ರವಾರ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಮತ್ತು ಅವರನ್ನು ವಿವಿಧ ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿಯನ್ನಾಗಿ ಮಾಡಿದೆ. . ಬಿಜೆಪಿಯು ತನ್ನ ಪ್ರಧಾನ ಕಾರ್ಯದರ್ಶಿ ವಿನೋದ್ … Continued

ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಉತ್ತರ ಪ್ರದೇಶ ಪೊಲೀಸರಿಂದ ಬಂಧಿತರಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ. ಹಾಥ್‌ರಸ್‌ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಗೆಂದು ತೆರಳಿದ್ದ ಮಲಯಾಳಂ ಸುದ್ದಿತಾಣ ಅರಿಮುಖಂ ವರದಿಗಾರ ಮತ್ತು ಕೇರಳ ಕಾರ್ಯನಿರತ ಪತ್ರಕರ್ತರ … Continued

ಭಾರತದ ದೊಡ್ಡ ಪಪ್ಪು: ಟಿ-ಶರ್ಟ್ ಮೇಲೆ ಅಮಿತ್‌ ಶಾ ವ್ಯಂಗ್ಯಚಿತ್ರ ಮುದ್ರಿಸಿ ಅಣಕವಾಡಿದ ಟಿಎಂಸಿ

ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ತನ್ನ ಕಾರ್ಯಕರ್ತರಿಗೆಂದು ಅಮಿತ್ ಶಾ ಅವರ ವ್ಯಂಗ್ಯಚಿತ್ರವಿರುವ ಟಿ-ಶರ್ಟ್‌ ವಿನ್ಯಾಸಗೊಳಿಸಿದೆ. ಟಿ-ಶರ್ಟ್‌ನಲ್ಲಿ ಅಮಿತ್ ಶಾ ಅವರ ವ್ಯಂಗ್ಯಚಿತ್ರವಿದ್ದು ಅದರ ಕೆಳಗೆ ‘ಭಾರತದ ಅತಿದೊಡ್ಡ ಪಪ್ಪು’ ಎಂದು ಬರೆದಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಬಿಜೆಪಿ … Continued

ಕಾನೂನುಬದ್ಧ ಸಾಲ-ಹಣಕಾಸು ಅಪ್ಲಿಕೇಶನ್‌ಗಳ ಪಟ್ಟಿ ಸಿದ್ಧಪಡಿಸುತ್ತಿರುವ ಸರ್ಕಾರ, ಉಳಿದವುಗಳಿಗೆ ಶೀಘ್ರವೇ ನಿಷೇಧ

ನವದೆಹಲಿ: ಅಕ್ರಮ ಸಾಲದ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆ್ಯಪ್ ಸ್ಟೋರ್‌ಗಳನ್ನು ತುಂಬುತ್ತಿವೆ. ಸಾಲದ ಆ್ಯಪ್ ಏಜೆಂಟ್‌ಗಳಿಂದ ಕಿರುಕುಳದ ಘಟನೆಗಳು ಕಳೆದ ಹಲವಾರು ತಿಂಗಳುಗಳಲ್ಲಿ ಗಮನಾರ್ಹ ಏರಿಕೆ ಕಂಡಿವೆ. ಇತ್ತೀಚೆಗೆ, ಸಾಲದ ಅಪ್ಲಿಕೇಶನ್ ಏಜೆಂಟ್ ಕಿರುಕುಳದಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ದೇಶದಲ್ಲಿ ಈ ಕಾನೂನುಬಾಹಿರ/ಅನಧಿಕೃತ ಸಾಲದ ಅಪ್ಲಿಕೇಶನ್‌ಗಳ ವಿರುದ್ಧ ಕಠಿಣ … Continued

ನಬಾರ್ಡ್​ನಲ್ಲಿ 177 ಹುದ್ದೆಗೆ ಅರ್ಜಿ ಆಹ್ವಾನ; ಪದವಿ ಆದ್ರೆ ಅರ್ಜಿ ಸಲ್ಲಿಸಬಹುದು

ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ 177 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಸಹಾಯಕ ವ್ಯವಸ್ಥಾಪಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ಅಕ್ಟೋಬರ್​ 10. ಬ್ಯಾಂಕ್ ಹೆಸರು: ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಹುದ್ದೆಯ ಹೆಸರು: … Continued

ಪರ್ಯುಶನ ಪರ್ವದ ಸಮಯದಲ್ಲಿ ಮೊಬೈಲ್‌ಗಳು, ಇಂಟರ್ನೆಟ್‌ಗಳಿಂದ ದೂರವಿದ್ದು 24-ಗಂಟೆಗಳ ‘ಡಿಜಿಟಲ್ ಫಾಸ್ಟ್’ ಆಚರಿಸಿದ 1,000 ಜೈನರು..!

ಭೋಪಾಲ್‌: ವ್ಯಸನಕಾರಿ ತಂತ್ರಜ್ಞಾನದ ತುಣುಕುಗಳು ಈಗ ನಮ್ಮ ಜೀವನವನ್ನು ಸಂಪೂರ್ಣವಾಗಿ ಆಳುತ್ತಿವೆ. ಹೀಗಾಗಿ ನಾವು ಮುಖಾಮುಖಿ ಸಂವಹನಗಳನ್ನು ಮರೆತುಬಿಟ್ಟಿದ್ದೇವೆ. ಈಗ ನಿಟ್ಟಿನಲ್ಲಿ ಜಾಗೃತಿಯೊಂದಿಗೆ ಜೈನ ಸಮುದಾಯದ ಕೆಲವು ಸದಸ್ಯರು 24 ಗಂಟೆಗಳ “ಡಿಜಿಟಲ್ ಉಪವಾಸ” ವನ್ನು ಆಚರಿಸಲು ನಿರ್ಧರಿಸಿದರು. ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ನಡೆಯುತ್ತಿರುವ ಪರ್ಯುಶನ ಪರ್ವದ ಸಮಯದಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇಂಟರ್ನೆಟ್‌ನಿಂದ ದೂರವಿರುವುದು … Continued