‘ಪಠಾಣ್‌ನ ಬಿಡುಗಡೆ ನಿರ್ಬಂಧಿಸಿ’: ಧಾರ್ಮಿಕ ಭಾವನೆ ಘಾಸಿಗೊಳಿಸಿದ್ದಕ್ಕೆ ಈಗ ಮುಸ್ಲಿಂ ಮಂಡಳಿಯಿಂದ ಶಾರುಖ್ ಖಾನ್ ಸಿನೆಮಾಕ್ಕೆ ವಿರೋಧ

ನವದೆಹಲಿ: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ‘ಪಠಾಣ್‌’ ಚಿತ್ರವು ಅದರ “ಬೇಷರಂ ರಂಗ್’ ಹಾಡು ಬಿಡುಗಡೆಯಾದಾಗಿನಿಂದ ಹಲವಾರು ವಿವಾದಗಳನ್ನು ಎದುರಿಸುತ್ತಿದೆ. ಹಿಂದೂ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಸಿನೆಮಾಕ್ಕೆ ಈಗ, ಮಧ್ಯಪ್ರದೇಶದ ಮುಸ್ಲಿಂ ಉಲೇಮಾ ಮಂಡಳಿಯೂ ಅಸಮಾಧಾನ ವ್ಯಕ್ತಪಡಿಸಿದೆ ಹಾಗೂ ಪಠಾಣ್‌ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಮಂಡಳಿ ಒತ್ತಾಯಿಸಿದೆ. ಚಿತ್ರದಲ್ಲಿನ ಅಸಭ್ಯತೆಯ … Continued

ಪತ್ನಿಯೊಂದಿಗೆ ಜಗಳ: 2 ವರ್ಷದ ಮಗುವನ್ನು ಬಾಲ್ಕನಿಯಿಂದ ಎಸೆದು ನಂತರ ತಾನೂ ಜಿಗಿದ ವ್ಯಕ್ತಿ

ನವದೆಹಲಿ: ಪತ್ನಿಯೊಂದಿಗೆ ಜಗಳ ಮಾಡಿದ ನಂತರ ವ್ಯಕ್ತಿಯೊಬ್ಬ ತನ್ನ ಎರಡು ವರ್ಷದ ಮಗನನ್ನು ಮೂರು ಅಂತಸ್ತಿನ ಮನೆಯ ಬಾಲ್ಕನಿಯಿಂದ ಎಸೆದು ನಂತರ ತಾನೂ ಜಿಗಿದ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಂದೆ ಮತ್ತು ಮಗುವಿಗೆ ಗಂಭೀರ ಗಾಯಗಳಾಗಿದ್ದು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (ಏಮ್ಸ್‌)ಗೆ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ … Continued

ಕೇವಲ ಸ್ಕ್ರ್ಯಾಪ್‌ಗಳಿಂದ 28 ಅಡಿ ಉದ್ದದ 5 ಟನ್ ತೂಕದ ವಿಶ್ವದ ಅತಿದೊಡ್ಡ ‘ರುದ್ರ ವೀಣೆ’ ತಯಾರಿಸಿದ 15 ಕಲಾವಿದರ ತಂಡ

ಭೋಪಾಲ್ : ಭೋಪಾಲ್‌ನಲ್ಲಿ ಕಲಾವಿದರ ತಂಡವೊಂದು 5 ಟನ್ ತೂಕದ ಅಪರೂಪದ ‘ರುದ್ರ ವೀಣೆ’ಯನ್ನು ಸ್ಕ್ರ್ಯಾಪ್‌ಗಳಿಂದ ಸಿದ್ಧಪಡಿಸಿದೆ. ಈ ವೀಣೆಯು 28 ಅಡಿ ಉದ್ದವಿದ್ದು, 10 ಅಡಿ ಅಗಲವಿದೆ ಮತ್ತು 12 ಅಡಿ ಎತ್ತರವಿದೆ. 15 ಸದಸ್ಯರ ತಂಡ ಇದನ್ನು ನಿರ್ಮಿಸಲು ಸುಮಾರು ಆರು ತಿಂಗಳು ತೆಗೆದುಕೊಂಡಿದೆ ಮತ್ತು ಅದರ ತಯಾರಿಕೆಗೆ ಸುಮಾರು 10 ಲಕ್ಷ … Continued

ಬದುಕಿರುವಾಗಲೇ ಸಾವಿನ ದಿನ ಆಚರಣೆಯ ಆಮಂತ್ರಣ ಪತ್ರಿಕೆ…!. ಮಾಜಿ ಸಚಿವರ ಡೆತ್‌ ಡೇ ಆಮಂತ್ರಣ ಪತ್ರಿಕೆ ವೈರಲ್…!

ವಿಜಯವಾಡ : “ನನ್ನ ಸಾವಿನ ದಿನದ ಆಚರಣೆಗೆ ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ.. ಇಷ್ಟು ವರ್ಷ ಆಚರಿಸಿಕೊಂಡು ಬಂದ ಜನ್ಮದಿನ ಅರ್ಥಹೀನವಾದ ಕಾರಣ ನನ್ನ ಸಾವಿನ ದಿನವನ್ನು ಆಚರಿಸಲು ಬಯಸುತ್ತೇನೆ.. ನನ್ನ ಸಾವಿನ ವರ್ಷವನ್ನು 2034 ಎಂದು ನಿರ್ಧರಿಸಿದ್ದೇನೆ.. ನನಗೆ ಸಾಯಲು ಇನ್ನೂ 12 ವರ್ಷಗಳಿವೆ. ಹೀಗಾಗಿ ಇಂದಿನಿಂದ 12ನೇ ಪುಣ್ಯತಿಥಿಯನ್ನು ಆಚರಿಸುತ್ತಿದ್ದೇನೆ. ಆದ್ದರಿಂದ ನೀವೆಲ್ಲರೂ ಬಂದು ನನ್ನನ್ನು … Continued

ಬಿಲ್ಕಿಸ್ ಬಾನೊ ಪ್ರಕರಣ: 11 ಅಪರಾಧಿಗಳ ಬಿಡುಗಡೆ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2002ರ ಗುಜರಾತ್ ಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳ ಕ್ಷಮಾಪಣೆ ಅರ್ಜಿಗಳನ್ನು ಅಸ್ತಿತ್ವದಲ್ಲಿರುವ ನೀತಿಯಂತೆ ಪರಿಗಣಿಸಬೇಕು ಎಂಬ  2022ರ ಮೇ ತಿಂಗಳ ತೀರ್ಪನ್ನು ಮರುಪರಿಶೀಲಿಸುವಂತೆ ಬಿಲ್ಕಿಸ್ ಬಾನೊ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರ … Continued

ಮನೆಗೆ ಬೆಂಕಿ ತಗುಲಿ 6 ಮಂದಿ ಸಜೀವ ದಹನ

ಹೈದರಾಬಾದ್‌: ತೆಲಂಗಾಣದ ಮಂಚಾರ್ಯಾಲಾ ಜಿಲ್ಲೆಯಲ್ಲಿ ಶನಿವಾರ ಮನೆಯೊಂದರಲ್ಲಿ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಆರು ಸದಸ್ಯರು ದಹನಗೊಂಡಿದ್ದಾರೆ. ಅಪಘಾತದಲ್ಲಿ ಮನೆ ಮಾಲೀಕ ಶಿವಯ್ಯ (50), ಪತ್ನಿ ಪದ್ಮಾ (45), ಪದ್ಮಾ ಅವರ ಅಕ್ಕನ ಮಗಳು ಮೌನಿಕಾ (23) ಮತ್ತು ಅವರ ಇಬ್ಬರು ಪುತ್ರಿಯರು ಸಾವಿಗೀಡಾಗಿದ್ದಾರೆ.ಮಂದಮರಿ ಸರ್ಕಲ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ಪ್ರಮೋದ್ ಕುಮಾರ್ ಮಾತನಾಡಿ, ತೆಲಂಗಾಣದ … Continued

ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಮಾತುಕತೆ-ರಾಜತಾಂತ್ರಿಕ ಮಾರ್ಗವೇ ಪರಿಹಾರ: ರಷ್ಯಾ ಅಧ್ಯಕ್ಷ ಪುತಿನ್ ಜೊತೆ ಮಾತುಕತೆ ವೇಳೆ ಪ್ರಧಾನಿ ಮೋದಿ ಪುನರುಚ್ಚಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ “ಒಂದೇ ಮಾರ್ಗ” ಎಂದು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ದೂರವಾಣಿ ಸಂಭಾಷಣೆಯಲ್ಲಿ ಉಭಯ ನಾಯಕರು ಇಂಧನ, ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸಿದರು. “ಮೋದಿಯವರ ಕೋರಿಕೆಯ ಮೇರೆಗೆ … Continued

6,700 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಪಿಎನ್‌ಬಿ ಹಗರಣದ ಆರೋಪಿ ಮೆಹುಲ್ ಚೋಕ್ಸಿ ವಿರುದ್ಧ 3 ಹೊಸ ಪ್ರಕರಣಗಳು ದಾಖಲು

ನವದೆಹಲಿ: ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದಂತೆ ಪರಾರಿಯಾಗಿರುವ ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮೂರು ಹೊಸ ಪ್ರಕರಣಗಳನ್ನು ದಾಖಲಿಸಿದೆ. ತನ್ನ ಸೋದರಳಿಯ ನೀರವ್ ಮೋದಿ ಜೊತೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್(PNB)ಗೆ 13,000 ಕೋಟಿ ರೂ.ಗಳಿಗೆ ವಂಚಿಸಿದ ಆರೋಪ ಹೊತ್ತಿರುವ ಚೋಕ್ಸಿ ಈಗ 6,700 ಕೋಟಿ ರೂ.ಗಳಿಗೂ ಹೆಚ್ಚು ಸಾಲದ … Continued

5ನೇ ತರಗತಿ ಬಾಲಕಿಗೆ ಕತ್ತರಿಯಿಂದ ಹೊಡೆದ ನಂತರ ಶಾಲೆಯ 1ನೇ ಮಹಡಿಯಿಂದ ಎಸೆದ ಶಿಕ್ಷಕಿ…!

ನವದೆಹಲಿ; ಆಘಾತಕಾರಿ ಘಟನೆಯೊಂದರಲ್ಲಿ, 5ನೇ ತರಗತಿಯ ವಿದ್ಯಾರ್ಥಿನಿಯನ್ನು ಕತ್ತರಿಯಿಂದ ಹೊಡೆದು ನಂತರ ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ಎಸೆದ ಶಿಕ್ಷಕಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಆರೋಪಿಯನ್ನು ಮಧ್ಯ ದೆಹಲಿಯ ಮಾಡೆಲ್ ಬಸ್ತಿ ಪ್ರದೇಶದ ಪ್ರಾಥಮಿಕ ವಿದ್ಯಾಲಯದ ತರಗತಿ ಶಿಕ್ಷಕಿ ಗೀತಾ ದೇಶ್ವಾಲ್ ಎಂದು ಗುರುತಿಸಲಾಗಿದ್ದು, ಮೊದಲು ಬಾಲಕಿಯನ್ನು ಸಣ್ಣ ಕತ್ತರಿಗಳಿಂದ ಹೊಡೆದು ನಂತರ … Continued

“ಇದು ಅತ್ಯಂತ ಕೀಳುಮಟ್ಟದ ಹೇಳಿಕೆ, ಪಾಕಿಸ್ತಾನಕ್ಕೂ ಸಹ”: ಪ್ರಧಾನಿ ಮೋದಿ ವಿರುದ್ಧ ಬಿಲಾವಲ್ ಭುಟ್ಟೋ ಆಕ್ಷೇಪಾರ್ಹ ಹೇಳಿಕೆಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ

ನವದೆಹಲಿ: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಪ್ರಧಾನಿ ಮೋದಿಯವರ ವಿರುದ್ಧ ನೀಡಿದ್ದ ಅಸಂಬದ್ಧ ಹೇಳಿಕೆಗೆ ಭಾರತ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿ ಮೋದಿಯವರ ಮೇಲೆ ಬಿಲಾವಲ್ ಅವರ ವೈಯಕ್ತಿಕ ದಾಳಿಯ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪಾಕಿಸ್ತಾನಿ ವಿದೇಶಾಂಗ ಸಚಿವರ ಹೇಳಿಕೆಗಳು “ಪಾಕಿಸ್ತಾನಕ್ಕೂ … Continued