‘ಒಸಾಮಾ ಬಿನ್ ಲಾಡೆನ್ಗೆ ಆತಿಥ್ಯ …ಸಂಸತ್ತಿನ ಮೇಲೆ ದಾಳಿ…’: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ ಜೈಶಂಕರ್

ವಿಶ್ವಸಂಸ್ಥೆ: ಪಾಕಿಸ್ತಾನವು ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪಿಸಿದ ನಂತರ ಭಾರತವು ಪಾಕಿಸ್ತಾನಕ್ಕೆ ಬಲವಾಗಿ ತಿರುಗೇಟು ನೀಡಿದೆ. ಹತ್ಯೆಯಾದ ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ನೀಡಿದ ಮತ್ತು ನೆರೆಯ ರಾಷ್ಟ್ರದ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶಕ್ಕೆ “ಬೋಧನೆ” ಮಾಡುವ ಅರ್ಹತೆ ಇಲ್ಲ ಎಂದು ಭಾರತವು ಬಲವಾಗಿ ಪ್ರತಿಪಾದಿಸಿದೆ. ನಾವು ಇಂದು … Continued

ಡಿಜೆ ಸಂಗೀತ, ಬ್ಯಾಂಡ್ ನುಡಿಸಿದರೆ ನಿಕಾಹ್ ಮಾಡಬೇಡಿ: ಧರ್ಮಗುರುಗಳಿಗೆ ಮುಸ್ಲಿಂ ಸಂಘಟನೆ ಸೂಚನೆ

ನವದೆಹಲಿ: ಕಾರ್ಯಕ್ರಮದಲ್ಲಿ ಡಿಜೆ ಮ್ಯೂಸಿಕ್ ಅಥವಾ “ಬ್ರಾಸ್ ಬ್ಯಾಂಡ್” ನುಡಿಸಿದರೆ ‘ನಿಕಾಹ್’ (ಮುಸ್ಲಿಂ ವಿವಾಹ) ಮಾಡಬೇಡಿ ಎಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮುಸ್ಲಿಂ ಮಹಾಸಭಾವು ಧರ್ಮಗುರುಗಳನ್ನು ಒತ್ತಾಯಿಸಿದೆ. ವಿವಾಹ ಸಮಾರಂಭಗಳನ್ನು “ಸರಳವಾಗಿ” ನಡೆಸಲು ಸಮುದಾಯಗಳನ್ನು ಮನವೊಲಿಸಲು ಧರ್ಮಗುರುಗಳ ಸಹಕಾರವನ್ನು ಕೋರಿ ಸಂಸ್ಥೆ ಹೇಳಿಕೆ ನೀಡಿದೆ. ಮದುವೆ ಕಾರ್ಯಕ್ರಮಗಳಿಗೆ ಹೆಚ್ಚು ಹಣ ಖರ್ಚು ಮಾಡುವುದನ್ನು ಸಂಸ್ಥೆ ವಿರೋಧಿಸುವುದನ್ನು … Continued

ದೆಹಲಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಮೂವರ ಬಂಧನ, ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್‌ ಮಾಡಿ ಆ್ಯಸಿಡ್ ಖರೀದಿಸಿದ್ದ ಖದೀಮರು…!

ನವದೆಹಲಿ: ದೆಹಲಿಯಲ್ಲಿ 17 ವರ್ಷದ ಶಾಲಾ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಎರಚಿದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದು, ಬಂಧಿತ ಮೂವರು ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಸೂಕ್ಷ್ಮವಾಗಿ ದಾಳಿಯನ್ನು ಯೋಜಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ನೈಋತ್ಯ ದೆಹಲಿಯ ದ್ವಾರಕಾದಲ್ಲಿ ಆ್ಯಸಿಡ್ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ … Continued

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ : ಸುಪ್ರೀಂಕೋರ್ಟ್ ತೀರ್ಪಿನ ವರೆಗೆ ಕಾಯಲು ನಿರ್ಧಾರ- ಸಿಎಂಗಳಾದ ಬೊಮ್ಮಾಯಿ-ಶಿಂಧೆ ಭೇಟಿ ನಂತರ ಅಮಿತ್ ಶಾ ಹೇಳಿಕೆ

ನವದೆಹಲಿ; ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಉಭಯ ರಾಜ್ಯಗಳ ನಡುವಿನ ಗಡಿ ಸಮಸ್ಯೆಯ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಾಲ್ಗೊಂಡಿದ್ದರು.. ಸಭೆಯ … Continued

ಭಾರತ-ಚೀನಾ ತವಾಂಗ್ ಎಲ್‌ಎಸಿ ಉದ್ವಿಗ್ನತೆ ನಡುವೆ ಭಾರತೀಯ ಸೈನಿಕರು ಚೀನೀ ಸೈನಿಕರನ್ನು ಹಿಮ್ಮೆಟ್ಟಿಸುವ 2021ರ ವೀಡಿಯೊ ವೈರಲ್

ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಡಿಸೆಂಬರ್ 9 ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆಯನ್ನು ಸರ್ಕಾರ ಖಚಿತಪಡಿಸಿದ ಒಂದು ದಿನದ ನಂತರ, ಭಾರತ ಮತ್ತು ಚೀನಾ ಸೈನಿಕರ ಹಿಂದಿನ ಘರ್ಷಣೆಯ ವೀಡಿಯೊ ಹೊರಬಿದ್ದಿದೆ. ಅರುಣಾಚಲ ಪ್ರದೇಶದ ತವಾಂಗ್‌ನ ಅದೇ ಪ್ರದೇಶದಲ್ಲಿ ಕಳೆದ ವರ್ಷ ನಡೆದ ಘರ್ಷಣೆಯನ್ನು ಈ ವೀಡಿಯೊ ತೋರಿಸುತ್ತದೆ. ಈ ವೀಡಿಯೊ … Continued

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.79 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ

ನವದೆಹಲಿ: ಕೇಂದ್ರ ಸರ್ಕಾರದಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು 9.79 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಲೋಕಸಭೆಗೆ ಬುಧವಾರ ಮಾಹಿತಿ ನೀಡಲಾಗಿದೆ. ವೆಚ್ಚ ಇಲಾಖೆಯ ವೇತನ ಸಂಶೋಧನಾ ಘಟಕದ ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 1, 2021ರ ಪ್ರಕಾರ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳ ಅಡಿಯಲ್ಲಿ 9,79,327 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಿಬ್ಬಂದಿ … Continued

17 ವರ್ಷದ ವಿದ್ಯಾರ್ಥಿನಿ ಮೇಲೆ ಎಸಿಡ್ ದಾಳಿ : ಆಕೆಯ ಸ್ಥಿತಿ ಗಂಭೀರ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ : ನೈಋತ್ಯ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಇಂದು, ಬುಧವಾರ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು 17 ವರ್ಷದ ವಿದ್ಯಾರ್ಥಿನಿಯ ಮೇಲೆ ಮೇಲೆ ಆಸಿಡ್ ಎರಚಿದ ಪರಿಣಾಮ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಮತ್ತು ರಾಸಾಯನಿಕವು ಆಕೆಯ ಮುಖಕ್ಕೆ ಚಿಮ್ಮಿ ಆಕೆಯ ಕಣ್ಣಿಗೂ ನುಗ್ಗಿದೆ ಎಂದು ಹುಡುಗಿಯ ತಂದೆ ಮಾಧ್ಯಮಗಳಿಗೆ … Continued

ಚೀನಾದ ಮಾನವರಹಿತ ವೈಮಾನಿಕ ವಾಹನಗಳನ್ನು ಬೆದರಿಸಿದ ಸುಖೋಯ್-30MKI ಫೈಟರ್ ಜೆಟ್; ಇದೆಂದರೆ ಶತ್ರುಗಳಿಗೆ ದುಃಸ್ವಪ್ನ ಯಾಕೆ..? ಮಾಹಿತಿ ಇಲ್ಲಿದೆ

ಹಲವು ದಿನಗಳಿಂದ ಚೀನಾ ಅರುಣಾಚಲದ ತವಾಂಗ್ ನಲ್ಲಿ ಭಾರತೀಯ ಸೈನಿಕರನ್ನು ಕೆರಳಿಸುವ ಕೆಲಸ ಮಾಡುತ್ತಿತ್ತು. ಗಡಿಯಾಚೆಯಿಂದ ಡ್ರೋನ್‌ಗಳನ್ನು ಒಳಗೆ ಕಳುಹಿಸುತ್ತಿತ್ತು. ಇದಕ್ಕೆ ಉತ್ತರಿಸಲು, ಭಾರತವು ತೇಜ್‌ಪುರ ವಾಯುಪಡೆ ನಿಲ್ದಾಣದಿಂದ ಸುಖೋಯ್-30MKI ಫೈಟರ್ ಜೆಟ್‌ಗಳನ್ನು ಬಳಸಿತು. ಭಾರತೀಯ ವಾಯುಪಡೆಯ (ಐಎಎಫ್) ಈ ಯುದ್ಧ ವಿಮಾನಗಳು ಗಡಿ ಪ್ರದೇಶದ ಆಗಸದಲ್ಲಿ ಹಾರಾಟ ಮಾಡಿದ ಕೂಡಲೇ ಚೀನಿಯರು ತಮ್ಮ ಡ್ರೋನ್‌ಗಳನ್ನು … Continued

ಬಿಲ್ಕಿಸ್ ಬಾನೊ ಪ್ರಕರಣ: : ಅಪರಾಧಿಗಳ ಕ್ಷಮೆ ವಿರುದ್ಧದ ರಿಟ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ

ನವದೆಹಲಿ: ಗುಜರಾತ್‌ ಕೋಮುಗಲಭೆ ವೇಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ತನ್ನ ಕುಟುಂಬದ ಸದಸ್ಯರನ್ನು ಕೊಂದ 11 ಅಪರಾಧಿಗಳ ಶಿಕ್ಷೆ ತಗ್ಗಿಸಿ, ಬಿಡುಗಡೆಗೊಳಿಸಿರುವ ಗುಜರಾತ್‌ ಸರ್ಕಾರದ ನಿರ್ಧಾರ ಪ್ರಶ್ನಿಸಿ   ಬಿಲ್ಕಿಸ್‌ ಬಾನೋ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮಂಗಳವಾರ ಹಿಂದೆ ಸರಿದಿದ್ದಾರೆ. ನ್ಯಾಯಮೂರ್ತಿಗಳಾದ ಅಜಯ್ … Continued

ಲಂಚ ಪ್ರಕರಣ: ವಿಚಕ್ಷಣ ದಳದ ಕೈಗೆ ಸಿಕ್ಕಿಬಿದ್ದ ತಕ್ಷಣ ನೋಟು ನುಂಗಿದ ಪೊಲೀಸ್‌ | ದೃಶ್ಯ ವೀಡಿಯೊದಲ್ಲಿ ಸೆರೆ

ಹರ್ಯಾಣದ ಫರಿದಾಬಾದ್‌ನಲ್ಲಿ ವಿಚಕ್ಷಣದ ದಳದ (ವಿಜಿಲೆನ್ಸ್) ಅಧಿಕಾರಿಗಳ ತಂಡವು ಎಮ್ಮೆ ಕಳ್ಳತನ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆದರೆ ನಂತರ ನಡೆದಿದ್ದು ತನಿಖಾ ಸಂಸ್ಥೆಗೂ ಅಚ್ಚರಿ ಮೂಡಿಸಿದೆ. ಘಟನೆಯ ವೀಡಿಯೋ ಹೊರಬಿದ್ದಿದ್ದು, ಸಬ್ ಇನ್ಸ್‌ಪೆಕ್ಟರ್  ಅವರನ್ನು ವಿಜಿಲೆನ್ಸ್ ಇಲಾಖೆ ಅಧಿಕಾರಿಗಳು ಹಿಡಿದಿದ್ದಾರೆ. ಆದರೆ ಆ ಸಬ್ ಇನ್ಸ್‌ಪೆಕ್ಟರ್ ವಿಚಕ್ಷಣ … Continued