ರಫೇಲ್ ಒಪ್ಪಂದದ ವಿವಾದ ಮರಜೀವಗೊಳಿಸಿದ ಫ್ರೆಂಚ್ ಮಾಧ್ಯಮ ವರದಿ, 2007 – 2012 ರ ನಡುವೆ ಕಿಕ್‌ಬ್ಯಾಕ್‌- ಮೀಡಿಯಾಪಾರ್ಟ್ ವರದಿ!

ಫ್ರೆಂಚ್ ಮಾಧ್ಯಮದ ವರದಿಯೊಂದು ಭಾರತೀಯ ವಾಯುಪಡೆಗೆ (ಐಎಎಫ್) ಫ್ರೆಂಚ್ ನಿರ್ಮಿತ ರಫೇಲ್ ವಿಮಾನಗಳನ್ನು ಖರೀದಿಸುವ ಕುರಿತು ರಾಜಕೀಯ ಚರ್ಚೆಗೆ ಮತ್ತೆ ಕಾರಣವಾಗಿದೆ. ಭಾರತ ಸರ್ಕಾರವು ಸೆಪ್ಟೆಂಬರ್ 23, 2016 ರಂದು 36 ರಫೆಲ್‌ ಜೆಟ್‌ಗಳನ್ನು ಖರೀದಿಸಲು ಫ್ರೆಂಚ್ ಸರ್ಕಾರ ಮತ್ತು ಡಸಾಲ್ಟ್ ಏವಿಯೇಷನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಯುಪಿಎ ಆಡಳಿತಾವಧಿಯಲ್ಲಿ 126 ಮಧ್ಯಮ ಬಹು-ಪಾತ್ರ ಯುದ್ಧ ವಿಮಾನಗಳನ್ನು … Continued

ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಒಂದು ವರ್ಷ: ನವೆಂಬರ್ 29 ರಂದು ಸಂಸತ್ತಿಗೆ ಮೆರವಣಿಗೆ ನಡೆಸಲು ಯೋಜನೆ

ನವದೆಹಲಿ: ಮೂರು ಕೃಷಿ ಕಾನೂನುಗಳ ವಿರುದ್ಧದ ತಮ್ಮ ಆಂದೋಲನಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಒಂದು ವರ್ಷ ಪೂರೈಸಿದ ನಂತರ ನವೆಂಬರ್ 29 ರಂದು ಸಂಸತ್ತಿಗೆ ಮೆರವಣಿಗೆ ನಡೆಸಲು ರೈತ ಸಂಘಗಳು ನಿರ್ಧರಿಸಿವೆ. ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾದ ಒಂಬತ್ತು ಸದಸ್ಯರ ಸಮಿತಿಯು ಮಂಗಳವಾರ ಈ ನಿರ್ಧಾರ … Continued

ತುಳಸಿ ಗೌಡ ಪದ್ಮಶ್ರೀ ಪಡೆದ ಫೋಟೋ ರಿಟ್ವೀಟ್‌ ಮಾಡಿ ಇಂಥವರ ಮುಂದೆ ತಾನು ಪದ್ಮಭೂಷಣ ಪ್ರಶಸ್ತಿಗೆ ‘ಅನರ್ಹ’ ಎಂದ ಆನಂದ ಮಹೀಂದ್ರ..!

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ನಂತರ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಕೃತಜ್ಞತೆಯ ಟಿಪ್ಪಣಿ ಹಂಚಿಕೊಂಡಿದ್ದಾರೆ. ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮ ಭೂಷಣದೊಂದಿಗೆ ಆನಂದ ಮಹೀಂದ್ರಾ ಅವರನ್ನು ಸೋಮವಾರ ಗೌರವಿಸಲಾಯಿತು. ಆದಾಗ್ಯೂ, ಇತರ ಸ್ವೀಕರಿಸುವವರಿಗೆ ಹೋಲಿಸಿದರೆ ತಾವು “ನಿಜವಾಗಿಯೂ ಅನರ್ಹರು” … Continued

ನ್ಯೂಜಿಲೆಂಡ್ ವಿರುದ್ಧ ಭಾರತದ ಟಿ 20 ತಂಡ ಪ್ರಕಟ:ಕೊಹ್ಲಿ ಬದಲಿಗೆ ಹೊಸ ನಾಯಕನ ಆಯ್ಕೆ ಮಾಡಿದ ಬಿಸಿಸಿಐ

ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ನಡೆಯುವ ಟಿ 20 ಸರಣಿಗಾಗಿ 16 ಸದಸ್ಯರ ಭಾರತದ ತಂಡವನ್ನು ಪ್ರಕಟಿಸಲಾಗಿದೆ. ಟೀಮ್ ಇಂಡಿಯಾ ಟಿ 20 ತಂಡದ ಹೊಸ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ರವಿಶಾಸ್ತ್ರಿ ಬದಲಿಗೆ ರಾಹುಲ್ ದ್ರಾವಿಡ್‌ ಮುಖ್ಯ ಕೋಚ್ ಆಗಿ ತಂಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.ಉಪನಾಯಕನಾಗಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ತಂಡದಲ್ಲಿ ವಿರಾಟ್ … Continued

ಮುಂಬೈ ಸ್ಫೋಟದ ಆರೋಪಿ, ದಾವೂದ್‌ ಬಂಟರೊಂದಿಗೆ ಸಚಿವ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರ: ಫಡ್ನವೀಸ್‌

ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು 1993 ರ ಮುಂಬೈ ಬಾಂಬ್ ಸ್ಫೋಟದ ಆರೋಪಿ ಸರ್ದಾರ್ ಶಾವಾಲಿ ಖಾನ್ ಮತ್ತು ದಾವೂದ್ ಇಬ್ರಾಹಿಂ ಅವರ ಸಹೋದರಿ ಹಸೀನಾ ಪಾರ್ಕರ್ ಅವರ ಜೊತೆಯಲ್ಲಿದ್ದ ಮೊಹಮ್ಮದ್ ಸಲೀಂ ಇಶಾಕ್ ಪಟೇಲ್ ಅವರೊಂದಿಗೆ ಆಸ್ತಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ … Continued

ನಟಿ ಪೂನಂ ಪಾಂಡೆ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು; ಪತಿ ಬಂಧನ

ಮುಂಬೈ : ಬಾಲಿವುಡ್‌ ನ ಖ್ಯಾತ ನಟಿ ಪೂನಂ ಪಾಂಡೆ ತನ್ನ ಮೇಲೆ ಪತಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದು, ಈ ಸಂಬಂಧ ಪೂನಂ ಪಾಂಡೆ ಪತಿ ಸ್ಯಾಮ್‌ ಬಾಂಬೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯಿಂದಾಗಿ ಪೂನಂ ಪಾಂಡೆ ಅವರ ತಲೆ, ಕಣ್ಣು, ಮುಖಕ್ಕೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಮಾಡಲಾಗಿದೆ. ಮಾದಕ … Continued

ಈವರೆಗಿನ ಎಲ್ಲ ದಾಖಲೆ ಪುಡಿ ಮಾಡಿದ ಟಿ 20 ಭಾರತ-ಪಾಕ್ ನಡುವಿನ ಪಂದ್ಯ.. ಇದು ಈವರೆಗಿನ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯ…!

ನವದೆಹಲಿ: ಟಿ 20 ವಿಶ್ವಕಪ್​ನಲ್ಲಿ ಅಕ್ಟೋಬರ್ 24 ರಂದು ನಡೆದ ಭಾರತ ಹಾಗೂ ಪಾಕಿಸ್ತಾನ್ (India-Pakistan) ಮಧ್ಯದ ಪಂದ್ಯವು ಹೊಸ ದಾಖಲೆ ಬರೆದಿದೆ. ಈ ಪಂದ್ಯವು ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತೀ ಹೆಚ್ಚು ವೀಕ್ಷಣೆ ಕಂಡ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಟಾರ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾರತ-ಪಾಕ್ ನಡುವಣ … Continued

ಕ್ಯಾನ್ಸರ್​ ಪೀಡಿತರಿಗಾಗಿ ಎರಡು ವರ್ಷ ಕೂದಲು ಬಿಟ್ಟು ದಾನ ಮಾಡಿದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್​ ಪುತ್ರ.. ವಿಡಿಯೊ ಶೇರ್‌ ಮಾಡಿದ ನಟಿ

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7) ತಮ್ಮ ತಲೆ ಕೂದಲನ್ನು ದಾನ ಮಾಡಿದ್ದಾರೆ. ನವೆಂಬರ್ 7, ಭಾನುವಾರ ರಾಷ್ಟ್ರೀಯ ಕ್ಯಾನ್ಸರ್ ದಿನದ ಸಂದರ್ಭದಲ್ಲಿ, ಮಾಧುರಿ ದೀಕ್ಷಿತ್ ಅವರು ತಮ್ಮ ಕಿರಿಯ ಮಗ ರಿಯಾನ್ ಕ್ಯಾನ್ಸರ್ ರೋಗಿಗಳಿಗೆ ತನ್ನ ಕೂದಲನ್ನು … Continued

ಡಬ್ಲ್ಯುಎಚ್‌ಒ ಅನುಮೋದನೆಯ ನಂತರ ನವೆಂಬರ್ 22ರಿಂದ ಬ್ರಿಟನ್ನಿನ ಅನುಮೋದಿತ ಲಸಿಕೆ ಪಟ್ಟಿಗೆ ಸೇರ್ಪಡೆಯಾದ ಕೊವ್ಯಾಕ್ಸಿನ್‌

ಲಂಡನ್: ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆ ಕೋವಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ತುರ್ತು ಬಳಕೆ ಅನುಮೋದನೆ ನೀಡಿದ ಒಂದು ವಾರದ ನಂತರ, ಬ್ರಿಟನ್‌ ಸರ್ಕಾರವು ಅಂತಿಮವಾಗಿ ಕೋವಾಕ್ಸಿನ್ ಅನ್ನು ತನ್ನ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನುಮೋದಿತ ಕೋವಿಡ್ -19 ಲಸಿಕೆಗಳ ಪಟ್ಟಿಗೆ ಸೇರಿಸುವುದಾಗಿ ಹೇಳಿದೆ ಹಾಗೂ ಈ ಬದಲಾವಣೆಗಳು ನವೆಂಬರ್ 22 ರಂದು ಬೆಳಿಗ್ಗೆ 4 … Continued

ಭಾರತದಲ್ಲಿ 10,126 ಹೊಸ ಕೋವಿಡ್ ಪ್ರಕರಣಗಳು ದಾಖಲು, ಇದು 266 ದಿನಗಳಲ್ಲಿ ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10,126 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ, ಇದು 266 ದಿನಗಳಲ್ಲಿ ವರದಿಯಾದ ಕಡಿಮೆ ದೈನಂದಿನ ಪ್ರಕರಣಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ. ಹೊಸ ಪ್ರಕರಣಗಳು ನಿನ್ನೆ ದಾಖಲಾಗಿದ್ದಕ್ಕಿಂತ ಶೇಕಡಾ 11.6 ರಷ್ಟು ಕಡಿಮೆಯಾಗಿದೆ ಮತ್ತು ಇದು ಒಟ್ಟು ಪ್ರಕರಣಗಳನ್ನು 3,43,77,113 ಕ್ಕೆ ಒಯ್ದಿದೆ. ಸಕ್ರಿಯ … Continued