ಹಾವಿನಿಂದ ಕಚ್ಚಿಸಿ ಹೆಂಡತಿ ಕೊಲೆ ಪ್ರಕರಣ; ಅಪರಾಧಿ​ಗೆ ಎರಡು ಜೀವಾವಧಿ ಶಿಕ್ಷೆ ಪ್ರಕಟ..!

ತಿರುವನಂತಪುರಂ: ಹಾವಿನಿಂದ ಕಚ್ಚಿಸಿ ಹೆಂಡತಿಯನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ತೀರ್ಪು ಇದೀಗ ಹೊರಬಿದ್ದಿದ್ದು, ಆರೋಪಿ ಸೂರಜ್ ಕುಮಾರ್​ಗೆ ಎರಡು ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಗಿದೆ. ಹಾಗೇ 5 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೇರಳದ ಕೊಲ್ಲಂನ ಅಡಿಷನಲ್ ಸೆಷನ್ಸ್ ಕೋರ್ಟ್ ಇಂದು (ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಷದ ಹಾವಿನಿಂದ ಕಚ್ಚಿಸಿ ಪತ್ನಿ ಉತ್ರಾಳನ್ನು ಕೊಂದಿದ್ದ ಗಂಡ … Continued

ಭಾರತದಲ್ಲಿ 15,823 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 15,823 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಇದು ದೇಶವು ಹಿಂದಿನ ದಿನಕ್ಕಿಂತ 10.5 % ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಗೆ ಬುಧವಾರ ತಿಳಿಸಿದೆ. ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣ 3,40,01,743 ಕ್ಕೆ ಏರಿಕೆಯಾಗಿದೆ. ಅದೇ ಸಮಯದಲ್ಲಿ ಒಟ್ಟು 226 … Continued

ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್‌ಗೆ ಹೇಳಿದ್ದು ಮಹಾತ್ಮ ಗಾಂಧೀಜಿ: ರಾಜನಾಥ್‌ ಸಿಂಗ್‌

ನವದೆಹಲಿ: ವೀರ ಸಾರ್ವಕರ್‌ ಅಂಡಮಾನ್‌ ಜೈಲಿನಲ್ಲಿದ್ದಾಗ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಸಾವರ್ಕರ್‌ ಅವರಿಗೆ ಹೇಳಿದ್ದು ಮಹಾತ್ಮ ಗಾಂಧೀಜಿ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರತಿಪಾದಿಸಿದ್ದಾರೆ. ಅಂಬೇಡ್ಕರ್‌ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸಾರ್ವಕರ್‌ ಕುರಿತ ವೀರ ಸಾವರ್ಕರ್: ವಿಭಜನೆಯನ್ನು ತಡೆಯಬಹುದಾದ ವ್ಯಕ್ತಿ ಎಂಬ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಾವರು, “ಸಾವರ್ಕರ್‌ಗೆ ಬ್ರಿಟಿಷರ ಮುಂದೆ ಕ್ಷಮಾದಾನ … Continued

ಅಫ್ಘಾನ್ ಪ್ರದೇಶ ಭಯೋತ್ಪಾದನೆಗೆ ಬಳಕೆಯಾಗದಂತೆ ಖಚಿತಪಡಿಸಿಕೊಳ್ಳಿ: ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಕರೆ

ನವದೆಹಲಿ: ಅಫ್ಘಾನಿಸ್ತಾನದ ಬಗ್ಗೆ ನಡೆದ ಜಿ 20 ವಿಶೇಷ ಶೃಂಗಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಫಘಾನ್ ಪ್ರದೇಶವು ಪ್ರಾದೇಶಿಕವಾಗಿ ಅಥವಾ ಜಾಗತಿಕವಾಗಿ ಭಯೋತ್ಪಾದನೆಯ ಮೂಲವಾಗದಂತೆ ನೋಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ ವಹಿಸಿದ್ದರು, ಅವರು ಮಂಗಳವಾರ ಗ್ರೂಪ್ 20 ಪ್ರಮುಖ ಆರ್ಥಿಕತೆಗಳ ವಿಶೇಷ ಶೃಂಗಸಭೆಯನ್ನು ಆಯೋಜಿಸಿದ್ದರು. ಸಭೆಯಲ್ಲಿ … Continued

2-18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್’ ತುರ್ತು ಬಳಕೆಗೆ ಡಿಜಿಸಿಐ ಇನ್ನೂ ಅನುಮೋದಿಸಿಲ್ಲ ಸಚಿವೆ ಡಾ. ಭಾರತಿ ಪವಾರ್

ನವದೆಹಲಿ: ಕೋವಾಕ್ಸಿನ್ ಕೋವಿಡ್-19 ಲಸಿಕೆ 2-18 ವರ್ಷ ವಯಸ್ಸಿನವರಿಗೆ ತುರ್ತು ಬಳಕೆಗಾಗಿ ಡಿಜಿಸಿಐ ಇನ್ನೂ ಅನುಮೋದನೆ ನೀಡಿಲ್ಲ. ಇನ್ನೂ ಅದರ ಮೌಲ್ಯಮಾಪನ ನಡೆಯುತ್ತಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆ ಡಾ. ಭಾರತಿ ಪ್ರವೀಣ ಪವಾರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಧ್ಯಮಗಳಲ್ಲಿ ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿ ಮಾಹಿತಿ ನೀಡಿರುವ ಅವರು, ಭಾರತ್ ಬಯೋಟೆಕ್ ನ … Continued

ತತ್ಕಾಲ್ ಟ್ರಾಕ್ಟರ್ ಸಾಲ: ರೈತರಿಗೆ ಒಳ್ಳೆಯ ಸುದ್ದಿ ನೀಡಿದ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ

ನವದೆಹಲಿ : ರೈತರ ಸಂಕಷ್ಟ ಬಗೆಹರಿಹಾರಕ್ಕೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ಮುಂದಾಗಿದೆ.‌ ಕೃಷಿ ಕಾರ್ಯಕ್ಕಾಗಿ ಬಾಡಿಗೆ ಟ್ರ್ಯಾಕ್ಟರ್ ಪಡೆದು ಬೇಸತ್ತು ಹೊಸ ಟ್ರ್ಯಾಕ್ಟರ್ ಖರೀದಿಗೆ ಯೋಜಿಸುತ್ತಿರುವ ರೈತರಿಗೆ ಬ್ಯಾಂಕ್‌ ಸಿಹಿ ಸುದ್ದಿ ನೀಡಿದೆ. ಟ್ರ್ಯಾಕ್ಟರ್‌ ಖರೀದಿ ಆಸೆಯಿದ್ದು, ಹಣದ ಕೊರತೆಯಾದರೆ ದೇಶದ ಅತಿದೊಡ್ಡ ಬ್ಯಾಂಕ್‌ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ರೈತರಿಗಾಗಿ … Continued

ಮನೆಯಲ್ಲಿ ಆರು ಜನ ಇದ್ದರೂ ಈ ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಒಂದು ಮತ..!

ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಚುನಾವಣೆಯಲ್ಲಿ ಕೇವಲ ಒಂದೇ ಒಂದಉ ಮತ ಪಡೆದಿರುವುದೇ ಸಾಕ್ಷಿಯಾಗಿದೆ. ಕುಟುಂಬದಲ್ಲಿ ಆರು ಸದಸ್ಯರಿದ್ದರೂ ತನ್ನದೇ ಒಂದು ಮತ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ನಡೆದ ಕೊಯಮತ್ತೂರು ಜಿಲ್ಲಾ ಸ್ಥಳೀಯ … Continued

ಅಹಂಕಾರ ತೊಡೆಯಲು ಭಿಕ್ಷಾಟನೆ, ಹಿಂದಿನ ಜೀವನದ ಬಗ್ಗೆ ತಿಳಿದುಕೊಳ್ಳಲು ಭಗವದ್ಗೀತೆ ಅಧ್ಯಯನಕ್ಕಾಗಿ ಪ್ರತಿ ಭಾನುವಾರ ರಜೆ ಕೇಳಿ ಅರ್ಜಿ ಬರೆದ ಇಂಜಿನಿಯರ್‌..!

ಭೋಪಾಲ್: ಮಧ್ಯಪ್ರದೇಶ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್ ಒಬ್ಬರ ರಜೆ ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ವಿಲಕ್ಷಣ ಪತ್ರದಲ್ಲಿ, ಅಗರ್ ಮಾಲ್ವಾ ಜಿಲ್ಲೆಯ ಸುಸ್ನರ್‌ನಲ್ಲಿನ ಎಂಜಿಎನ್‌ಆರ್‌ಇಜಿಎ ಯೋಜನೆಗಳ ಉಪಇಂಜಿನಿಯರ್ ರಾಜಕುಮಾರ ಯಾದವ್, ತನ್ನ ಹಿಂದಿನ ಜೀವನದ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಲು ತಾನು ಭಿಕ್ಷೆ ಬೇಡಬೇಕು ಮತ್ತು ಭಗವದ್ಗೀತೆ ಅಧ್ಯಯನ ಮಾಡಬೇಕು ಎಂದು … Continued

ಪ್ರಧಾನಿ ಮೋದಿ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಅಮಿತ್​ ಖರೆ ನೇಮಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರಾಗಿ ನಿವೃತ್ತ ಐಎಎಸ್​ ಅಧಿಕಾರಿ ಅಮಿತ್​ ಖರೆ ಇಂದು (ಮಂಗಳವಾರ) ನೇಮಕವಾಗಿದ್ದಾರೆ. ಅಮಿತ್​ ಖರೆ ಅವರು 1985ನೇ ಬ್ಯಾಚ್​​ನ ಐಎಎಸ್​ ಅಧಿಕಾರಿಯಾಗಿದ್ದು, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದಾರೆ. ಉನ್ನತ ಶಿಕ್ಷಣ ಕಾರ್ಯದರ್ಶಿಯೂ ಆಗಿದ್ದ ಅವರು ಸೆಪ್ಟೆಂಬರ್​ 30ರಂದು ನಿವೃತ್ತರಾಗಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರಾಗಿ ನೇಮಕವಾಗಿದ್ದಾರೆ. … Continued

2ರಿಂದ 18 ವರ್ಷದ ಮಕ್ಕಳಿಗೆ ಕೋವಾಕ್ಸಿನ್ ತುರ್ತು ಬಳಕೆಗೆ ಇನ್ನೂ ಅನುಮತಿ ನೀಡಿಲ್ಲ:ಡಾ. ಭಾರತಿ ಪವಾರ್

ನವದೆಹಲಿ: ಕೋವಿಡ್ -19 ರ ವಿಷಯ ತಜ್ಞರ ಸಮಿತಿಯು 2-18 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ಗೆ ತುರ್ತು ಬಳಕೆಯ ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿತ್ತು. ಆದರೆ ಕೋವಾಕ್ಸಿನ್ ಕೋವಿಡ್-19 ಲಸಿಕೆ 2-18 ವರ್ಷ ವಯಸ್ಸಿನವರಿಗೆ ತುರ್ತು ಬಳಕೆಗಾಗಿ ಡಿಜಿಸಿಐ ಇನ್ನೂ ಅನುಮೋದನೆ ನೀಡಿಲ್ಲ. ಇನ್ನೂ ಅದರ ಮೌಲ್ಯಮಾಪನ ನಡೆಯುತ್ತಿದೆ ಎಂದು ಕೇಂದ್ರ … Continued