ಭಾರತ್ ಜೋಡೋ ಯಾತ್ರೆ ಪೋಸ್ಟರ್‌ನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸಾವರ್ಕರ್ ಚಿತ್ರ : ಮುಜುಗರದ ನಂತರ ಇದು ‘ಮುದ್ರಣ ದೋಷ’ ಎಂದ ಕಾಂಗ್ರೆಸ್…! ವೀಕ್ಷಿಸಿ

ಕೊಚ್ಚಿ: ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದ ಮತ್ತೊಂದು ವಿವಾದದಲ್ಲಿ, ಕೇರಳದ ಕಾಂಗ್ರೆಸ್ ತಮ್ಮ ನಾಯಕರನ್ನು ಸ್ವಾಗತಿಸುವ ದೊಡ್ಡ ಪೋಸ್ಟರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನಡುವೆ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಚಿತ್ರವೂ ಕಾಣಿಸಿಕೊಂಡಿದೆ. ಕೇರಳದ ಕೊಚ್ಚಿಯಲ್ಲಿ ಅಲುವಾಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರು … Continued

ಟಿವಿ ಚಾನೆಲ್‌ಗಳಿಂದ ದ್ವೇಷ ಭಾಷಣ ನಿಭಾವಣೆ: ಸುಪ್ರೀಂಕೋರ್ಟ್ ಅತೃಪ್ತಿ

ನವದೆಹಲಿ: ದೇಶದ ಮುಖ್ಯವಾಹಿನಿಯ ಟಿವಿ ಸುದ್ದಿ ವಾಹಿನಿಗಳ ಕಾರ್ಯವೈಖರಿ ಬಗ್ಗೆ ಸುಪ್ರೀಂಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವು ಆಗಾಗ್ಗೆ ದ್ವೇಷ ಭಾಷಣಕ್ಕೆ ಅವಕಾಶ ಕಲ್ಪಿಸಿ ಬಳಿಕ ಶಿಕ್ಷೆ, ನಿರ್ಬಂಧಗಳಿಲ್ಲದೆ ತಪ್ಪಿಸಿಕೊಳ್ಳುತ್ತವೆ ಎಂದು ಹೇಳಿದೆ. ಟಿವಿಗಳಲ್ಲಿ ನಿರೂಪಕರ ಪಾತ್ರ ಬಹಳ ಮುಖ್ಯ. ಮುಖ್ಯವಾಹಿನಿಯ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಭಾಷಣಗಳು ಅನಿಯಂತ್ರಿತವಾಗಿವೆ. ದ್ವೇಷ ಭಾಷಣ … Continued

ರತನ್‌ ಟಾಟಾ ಈಗ ಪಿಎಂ ಕೇರ್ಸ್‌ ಫಂಡ್‌ ಟ್ರಸ್ಟಿ, ಸುಧಾಮೂರ್ತಿ ಸಲಹಾ ಮಂಡಳಿಗೆ ನೇಮಕ

ನವದೆಹಲಿ: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಯ (PM-CARES) ಮೂರು ಹೊಸ ಟ್ರಸ್ಟಿಗಳಲ್ಲಿ ಒಬ್ಬರಾಗಿ ನೇಮಕವಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಕೇಂದ್ರ ಗೃಹ ಸಚಿವರು ಮತ್ತು ಕೇಂದ್ರ ಹಣಕಾಸು ಸಚಿವರನ್ನು ಒಳಗೊಂಡ ಪಿಎಂ-ಕೇರ್ಸ್ ಟ್ರಸ್ಟಿಗಳ ಮಂಡಳಿಯ ಸಭೆಯ ಅಧ್ಯಕ್ಷತೆ … Continued

ಪ್ರೊ ಕಬಡ್ಡಿ ಲೀಗ್ ಸೀಸನ್-9 ಬೆಂಗಳೂರಲ್ಲಿ ಅಕ್ಟೋಬರ್ 7ರಂದು ಆರಂಭ

ಪ್ರೊ ಕಬಡ್ಡಿ ಲೀಗ್‌ನ ಒಂಬತ್ತನೇ ಸೀಸನ್ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 7 ರಂದು ಪ್ರಾರಂಭವಾಗಲಿದೆ ಎಂದು ಮಶಾಲ್ ಸ್ಪೋರ್ಟ್ಸ್ ಬುಧವಾರ ಪ್ರಕಟಿಸಿದೆ. ಋತುವಿನ ಮೊದಲ ಹಂತವು ಅಕ್ಟೋಬರ್ 7ರಿಂದ ಬೆಂಗಳೂರಿನಲ್ಲಿ ನಡೆಯಲಿದ್ದು, ಅದರ ಮುಂದಿನ ಹಂತಕ್ಕಾಗಿ ಅಕ್ಟೋಬರ್ 28 ರಂದು ಪುಣೆಯ ಬಾಲೆವಾಡಿಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಳ್ಳಲಿದೆ ಎಂದು … Continued

ಸರ್ಕಾರದ ವಿರುದ್ಧ ಪ್ರತಿಭಟಿಸಲು ಹಸುವನ್ನೇ ವಿಧಾನಸೌಧಕ್ಕೆ ಕರೆತಂದ ರಾಜಸ್ಥಾನ ಶಾಸಕ, ಮಾತನಾಡುತ್ತಿದ್ದಾಗಲೇ ಪರಾರಿಯಾದ ಗೋವು..| ವೀಕ್ಷಿಸಿ

ಬಿಜೆಪಿ ಶಾಸಕ ಸುರೇಶ್ ಸಿಂಗ್ ರಾವತ್ ಅವರು ಸೋಮವಾರ ರಾಜಸ್ಥಾನ ವಿಧಾನಸಭೆಗೆ ಹಸುವಿನ ಜೊತೆ ಆಗಮಿಸಿ ಮುದ್ದೆ ಚರ್ಮದ ಕಾಯಿಲೆ (lumpy skin disease)ಯ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದರು. ಆದರೆ, ಸಚಿವರು ವಿಧಾನಸೌಧದ ಗೇಟ್‌ ಸಮೀಪ ಮಾಧ್ಯಮದವರ ಜೊತೆ ಮಾತನಾಡುತ್ತಿರುವಾಗ ಹಸು ಅಕ್ಷರಶಃ ಓಡಿಹೋಗಿದೆ..! ರಾವತ್ ವಿಧಾನಸಭೆ ಗೇಟ್‌ನ ಹೊರಗೆ ಶಾಸಕರು ಮಾತನಾಡುತ್ತಿರುವಾಗ … Continued

ಪ್ರಯಾಣದ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬೇಷರ್‌ ಕಮ್ಷೆಯಾಚಿಸಿದ ರಾಬರ್ಟ್ ವಾದ್ರಾ: ಇ.ಡಿ. ಅರ್ಜಿಯ ತೀರ್ಪು ನಾಳೆ ಪ್ರಕಟಿಸಲಿರುವ ದೆಹಲಿ ಕೋರ್ಟ್‌

ನವದೆಹಲಿ: ವಿದೇಶಿ ಪ್ರಯಾಣಕ್ಕೆ ನ್ಯಾಯಾಲಯ ವಿಧಿಸಿರುವ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉದ್ಯಮಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ರಾಬರ್ಟ್ ವಾದ್ರಾ ವಿರುದ್ಧ ಸ್ಥಿರ ಠೇವಣಿ ಮತ್ತು ಕಾನೂನು ಕ್ರಮಗಳನ್ನು ಪ್ರಾರಂಭಿಸಲು ಜಾರಿ ನಿರ್ದೇಶನಾಲಯ (ಇಡಿ) ಮಾಡಿದ ಮನವಿಯ ಕುರಿತು ದೆಹಲಿ ನ್ಯಾಯಾಲಯವು ಬುಧವಾರ ತನ್ನ ಆದೇಶವನ್ನು ನಾಳೆ ಗುರುವಾರಕ್ಕೆ ಕಾಯ್ದಿರಿಸಿದೆ ಎಂದು ಹಿಂದುಸ್ತಾನ್‌ಟೈಮ್ಸ್‌.ಕಾಮ್‌ ವರದಿ … Continued

ಜೈಲರ್‌ಗೆ ಬೆದರಿಕೆ ಹಾಕಿದ ಆರೋಪ: ಉತ್ತರ ಪ್ರದೇಶ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ 2 ವರ್ಷ ಜೈಲು ಶಿಕ್ಷೆ

ನವದೆಹಲಿ: ಜೈಲರ್‌ಗೆ ಬೆದರಿಕೆ ಮತ್ತು ಪಿಸ್ತೂಲ್ ತೋರಿಸಿದ ಆರೋಪದಲ್ಲಿ ಗ್ಯಾಂಗ್‌ಸ್ಟರ್-ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ದೋಷಿ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಬುಧವಾರ ತೀರ್ಪು ನೀಡಿದೆ. ಅನ್ಸಾರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಉತ್ತರ ಪ್ರದೇಶ ಸರ್ಕಾರದ ಅರ್ಜಿಯ ವಿಚಾರಣೆ ವೇಳೆ ಈ … Continued

Instagram ದೋಷ ಕಂಡುಹಿಡಿದ ಜೈಪುರ ವಿದ್ಯಾರ್ಥಿಗೆ 38 ಲಕ್ಷ ರೂಪಾಯಿ ಬಹುಮಾನ…!

ಜೈಪುರ: ಕೋಟ್ಯಂತರ ಜನರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಆಗದಂತೆ ಕಾಪಾಡಿದ್ದಕ್ಕಾಗಿ ಜೈಪುರದ ನೀರಜ್ ಶರ್ಮಾ ಎಂಬ ವಿದ್ಯಾರ್ಥಿ ಇನ್‌ಸ್ಟಾಗ್ರಾಮ್‌ನಿಂದ 38 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. ಮಾಹಿತಿಯ ಪ್ರಕಾರ, ಶರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ದೋಷವನ್ನು ಕಂಡುಹಿಡಿದಿದ್ದಾರೆ, ಇದರಿಂದಾಗಿ ಲಾಗಿನ್ ಮತ್ತು ಪಾಸ್‌ವರ್ಡ್ ಇಲ್ಲದೆ ಯಾವುದೇ ಬಳಕೆದಾರರ ಖಾತೆಯಲ್ಲಿ ಥಂಬ್‌ನೇಲ್‌ಗಳನ್ನು ಬದಲಾಯಿಸಬಹುದಾಗಿತ್ತು. ಈ ದೋಷದ ಬಗ್ಗೆ ಇನ್‌ಸ್ಟಾಗ್ರಾಮ್ … Continued

ಸುಪ್ರೀಂಕೋರ್ಟ್ ಸಂವಿಧಾನ ಪೀಠದ ವಿಚಾರಣೆ ಸೆಪ್ಟೆಂಬರ್ 27ರಿಂದ ನೇರ ಪ್ರಸಾರ

ನವದೆಹಲಿ : ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ವಿಚಾರಣೆಗಳು ಸೆಪ್ಟೆಂಬರ್ 27 ರಿಂದ ಲೈವ್ ಸ್ಟ್ರೀಮ್ ಆಗಲಿವೆ. ಮಂಗಳವಾರ ಎಲ್ಲಾ ನ್ಯಾಯಾಧೀಶರ ನಡುವೆ ಈ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಚರ್ಚಿಸಿದ ನಂತರ ಈ ನಿರ್ಧಾರವು ಬಂದಿದೆ, ಇದರಲ್ಲಿ ಪ್ರಕ್ರಿಯೆಗಳನ್ನು ಲೈವ್ ಸ್ಟ್ರೀಮ್ ಮಾಡಲು ನಿರ್ಧರಿಸಲಾಯಿತು. ಬೆಳವಣಿಗೆಯ ಬಗ್ಗೆ ತಿಳಿದಿರುವ ಜನರ ಪ್ರಕಾರ, ನ್ಯಾಯಾಧೀಶರು ಸೆಪ್ಟೆಂಬರ್ 27ರಿಂದ … Continued