ಡ್ರಗ್ ಪ್ರಕರಣ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನ

ಮುಂಬೈ: ಬಾಲಿವುಡ್ ಡ್ರಗ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಎನ್‍ಸಿಬಿ ಅಧಿಕಾರಿಗಳು ಬಾಲಿವುಡ್‌ ನಟ ಅರ್ಮಾನ್ ಕೋಹ್ಲಿ ಅವರನ್ನು ಬಂಧಿಸಿದ್ದಾರೆ. ಬಾಲಿವುಡ್ ಡ್ರಗ್ ಕೇಸ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದ ಎನ್‍ಸಿಬಿ ಅಧಿಕಾರಿಗಳು ಅರ್ಮಾನ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಅವರ ಮನೆಯಲ್ಲಿದ್ದ ನಿಷೇಧಿತ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದರು. ಇಂದು ಅರ್ಮಾನ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ … Continued

ಪ್ಯಾರಾ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಭಾವಿನಾಗೆ ಗುಜರಾತ್‌ ಸರ್ಕಾರಿದಂದ 3 ಕೋಟಿ ರೂ. ನಗದು ಬಹುಮಾನ

ಅಹಮದಾಬಾದ್:ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರಿಗೆ ದಿವ್ಯಾಂಗ್ ಖೇಲ್ ಪ್ರತಿಭಾ ಪ್ರೊತ್ಸಾಹನ್‌ ಪುರಸ್ಕಾರ್‌ ಯೋಜನೆಯಡಿ ಗುಜರಾತ್‌ ಸರ್ಕಾರ 3 ಕೋಟಿ ರೂ. ರೂಪಾಯಿ ನಗದು ಬಹುಮಾನ ನೀಡುವುದಾಗಿ ಹೇಳಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಭಾವಿಕಾ ಪಟೇಲ್‌ ಅಭಿನಂದಿಸಿದ್ದಾರೆ. … Continued

ಆಗ್ರಾ: ಪ್ರೆಶರ್‌ ಕುಕ್ಕರಿನಲ್ಲಿ ಸಿಲುಕಿಕೊಂಡ ಪುಟ್ಟ ಮಗುವಿನ ತಲೆ ಹೊರ ತೆಗೆದ ವೈದ್ಯರ ತಂಡ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯರ ತಂಡವು ಎರಡು ಗಂಟೆಗಳ ಕಠಿಣ ಪರಿಶ್ರಮದ ನಂತರ ಪ್ರೆಶರ್ ಕುಕ್ಕರ್‌ನಲ್ಲಿ ಸಿಲುಕಿಕೊಂಡಿದ್ದ ಮಗುವಿನ ತಲೆಯನ್ನು ಹೊರ ತೆಗೆದಿದೆ. ಕುಟುಂಬ ಸದಸ್ಯರ ಪ್ರಕಾರ, ಒಂದೂವರೆ ವರ್ಷದ ಬಾಲಕ ಶನಿವಾರ ನಗರದ ತನ್ನ ಚಿಕ್ಕಪ್ಪನ ಮನೆಯಲ್ಲಿ ಆಟವಾಡುತ್ತಿದ್ದಾಗ ತಲೆ ಕುಕ್ಕರ್ ಒಳಗೆ ಸಿಲುಕಿಕೊಂಡಿದೆ. ಕುಟುಂಬದ ಸದಸ್ಯರು ಮನೆಯಲ್ಲಿ ಮಗುವಿನ … Continued

ಬದುಕ್ಕಿದ್ದಾಗಲೇ ತಾವು ಸತ್ತಿದ್ದೇವೆ ಎಂದು ಪರಿಹಾರ ಪಡೆದಿದ್ದ ಗ್ರಾಮಸ್ಥರು..!

ಚಿಂದ್ವಾರಾ: ಬದುಕಿದ್ದರೂ ತಮ್ಮ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಕೂಲಿ ಕಾರ್ಮಿಕರ ಯೋಜನೆಯಡಿ ಪರಿಹಾರ ಪಡೆದು ವಂಚಿಸಿರುವ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಮಧ್ಯಪ್ರದೇಶ ಕೃಷಿ ಸಚಿವ ಕಮಲ್ ಪಟೇಲ್ ತಿಳಿಸಿದ್ದಾರೆ. ಚಿಂದ್ವಾರಾ ಜಿಲ್ಲೆಯ 23ಕ್ಕೂ ಹೆಚ್ಚು ಮಂದಿ ತಾವು ಬದುಕಿದ್ದರೂ ತಮ್ಮ ಸಾವಿನ ನಕಲಿ ಮರಣ … Continued

ಸೆಪ್ಟೆಂಬರ್‌ 15ರಿಂದ ವಾಹನಗಳಿಗಾಗಿ ಹೊಸ BH ಸಂಖ್ಯೆ ಸರಣಿ ಜಾರಿಗೆ: ಅದು ಜನರಿಗೆ ಹೇಗೆ ಅನುಕೂಲ?

ನವದೆಹಲಿ: ಭಾರತದ ರಾಜ್ಯಗಳಾದ್ಯಂತ ತಡೆರಹಿತ ವರ್ಗಾವಣೆ ಖಚಿತಪಡಿಸಿಕೊಳ್ಳಲು ಕೇಂದ್ರವು ಹೊಸ ವಾಹನ ನೋಂದಣಿ ಸರಣಿಯನ್ನು ಪರಿಚಯಿಸಿದೆ. BH (ಭಾರತ್ ಸರಣಿ) ಎಂದು ಕರೆಯಲ್ಪಡುವ ಇದು ವಾಹನ ಮಾಲೀಕರು ಒಂದು ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಮರು ನೋಂದಣಿ ಪ್ರಕ್ರಿಯೆಯಿಂದ ಅವರನ್ನು ಮುಕ್ತಗೊಳಿಸುತ್ತದೆ. ಈ ಸರಣಿಯನ್ನು ರಸ್ತೆ ಸಾರಿಗೆ ಸಚಿವಾಲಯ ಪರಿಚಯಿಸಿದೆ ಮತ್ತು ಕೇಂದ್ರ ಸರ್ಕಾರದಿಂದ … Continued

ಕಾಬೂಲ್‌’: ಮುಂದಿನ 36 ಗಂಟೆಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೊಂದು ದಾಳಿ ಸಾಧ್ಯತೆ ಎಚ್ಚರಿಕೆ ನೀಡಿದ ಬಿಡೆನ್

ವಾಷಿಂಗ್ಟನ್: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮುಂದಿನ 24-36 ಗಂಟೆಗಳಲ್ಲಿ ಮತ್ತೊಂದು ಭಯೋತ್ಪಾದಕ ದಾಳಿಯ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಕೆ ನೀಡಿದ್ದಾರೆ. ವಿಮಾನ ನಿಲ್ದಾಣದ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಹೆಚ್ಚಾಗಿದೆ. ಮುಂದಿನ 24-36 ಗಂಟೆಗಳಲ್ಲಿ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ನಮ್ಮ ಕಮಾಂಡರ್‌ಗಳು ನನಗೆ ಮಾಹಿತಿ ನೀಡಿದ್ದಾರೆ. ನಮ್ಮ ಪುರುಷರು … Continued

ಪ್ಯಾರಾ ಒಲಿಂಪಿಕ್ಸ್: ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭಾವಿನಾ ಪಟೇಲ್

ಟೋಕಿಯೊ: ಟೇಬಲ್ ಟೆನಿಸ್ ಪ್ಯಾರಾ ಒಲಿಂಪಿಕ್ ತಾರೆ ಭಾವಿನಾಬೆನ್ ಪಟೇಲ್ ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಟೇಬಲ್‌ ಟೆನಿಸ್‌ ಅಂತಿಮ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಚೀನಾದ ಯಿಂಗ್ ಜೌ ಎದುರು ಸೋತರು. ಅಂತಿಮ ಸ್ಕೋರ್ 7-11 5-11 6-11 (0-3) ನಲ್ಲಿ ನಿಂತಿದೆ, ಟೋಕಿಯೊದಲ್ಲಿ … Continued

ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು, ಆದರೆ ಆಸ್ಪತ್ರೆ ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳವಿಲ್ಲ ..ಯಾಕೆ-ಏನು..?

ಆಗಸ್ಟ್ 1 ರಂದು ಕೇರಳವು 20,000ಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿತು. ಸೋಂಕಿತರಲ್ಲಿ, ಸುಮಾರು 2,400 ಜನರಿಗೆ ಆಸ್ಪತ್ರೆಗೆ ಅಗತ್ಯವಿತ್ತು. ಆಗಸ್ಟ್ 25 ರಂದು, ಕೊರೊನಾವೈರಸ್ ಹರಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಕೇರಳವು 31,000ಕ್ಕೂ ಹೆಚ್ಚು ಹೊಸ ಪ್ರಕರಣಗಳೊಂದಿಗೆ ದೊಡ್ಡ ಏರಿಕೆಯನ್ನು ವರದಿ ಮಾಡಿದೆ. ಆದಾಗ್ಯೂ, ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ … Continued

ಜಮೀನು ಜಗಳ : ಜಮಖಂಡಿಯಲ್ಲಿ ನಾಲ್ವರ ಸಹೋದರರ ಭೀಕರ ಹತ್ಯೆ

ಬಾಗಲಕೋಟೆ : ಮಾರಕಾಸ್ತ್ರಗಳಿಂದ ಕೊಚ್ಚಿ ನಾಲ್ವರು ಸಹೋದರರನ್ನು ಬರ್ಬರವಾಗಿ ಕೊಲೆ ಮಾಡಿದ  ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಧುರಖಂಡಿಯಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹಣಮಂತ  (45), ಬಸವರಾಜ   (37), ಈಶ್ವರ   (35) ಮತ್ತು ಮಲ್ಲಪ್ಪ  (33) ಕೊಲೆಯಾದ ಸಹೋದರರು ಎಂದು ಗುರುತಿಸಲಾಗಿದೆ. ತೋಟದ … Continued

ಎಂಥಾ ಲೋಕವಯ್ಯಾ..:ಗುಂಪಿನ ಕ್ರೌರ್ಯಕ್ಕೆ ಅಮಾಯಕನೊಬ್ಬ ಬಲಿ; ಕಳ್ಳತನದ ಸಂಶಯಕ್ಕೆ ಪಿಕಪ್ ವ್ಯಾನ್‌ಗೆ ಕಟ್ಟಿ ಎಳೆದರು..! ವಿಡಿಯೋ ವೈರಲ್‌

ಜವಾದ್ (ಮಧ್ಯಪ್ರದೇಶ): ಜನರ ಗುಂಪೊಂದು ಕ್ರೌರ್ಯವನ್ನು ನಡೆಸಿದ್ದು ಗುರುವಾರ ಜಿಲ್ಲಾ ಕೇಂದ್ರದಿಂದ 70 ಕಿಮೀ ದೂರದಲ್ಲಿರುವ ಜೆಟ್ಲಿಯಾ ಗ್ರಾಮದಲ್ಲಿ 45 ವರ್ಷದ ವ್ಯಕ್ತಿಯ ಸಾವಿಗೆ ಕಾರಣವಾಗಿದೆ. ಇದು ಶನಿವಾರ ಬೆಳಕಿಗೆ ಬಂದಿದ್ದು, ಘಟನೆಯ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಕಳ್ಳತನದಲ್ಲಿ ಭಾಗಿಯಾಗಿದ್ದಾನೆ ಎಂದು ಅನುಮಾನಿಸಿ ಗ್ರಾಮಸ್ಥರು ಆತನನ್ನು ಥಳಿಸಿದರು ಮತ್ತು … Continued