ದೇಶಮುಖ್ ನನ್ನ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು, ಪರಮ್ ಬೀರ್ ಸಿಂಗ್ ವಿರುದ್ಧ ನಕಲಿ ಪ್ರಕರಣ ದಾಖಲಿಸಿದ್ದಾರೆ: ಸಚಿನ್‌ ವಾಜೆ

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ತಮ್ಮ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಫಿಡವಿಟ್‌ನಲ್ಲಿ, ದೇಶಮುಖ್ ಅವರು ತಮ್ಮ ಮತ್ತು ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ವಿರುದ್ಧ ಸುಲಿಗೆಯ ನಕಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ … Continued

ದೆಹಲಿಯಲ್ಲಿ ಕೋವಿಡ್ ಸಾವುಗಳು : ಹೆಚ್ಚಿನವರು ಹೃದಯ, ಮೂತ್ರಪಿಂಡದ ಕಾಯಿಲೆ ರೋಗಿಗಳು

ನವದೆಹಲಿ: ಜನವರಿ 12-ಫೆಬ್ರವರಿ 7 ರ ಅವಧಿಯಲ್ಲಿ ದೆಹಲಿಯಲ್ಲಿನ ಒಟ್ಟು ಕೋವಿಡ್ ಸಾವುಗಳ ಪೈಕಿ, ಹೆಚ್ಚಿನವರು ಹೃದ್ರೋಗಗಳು ಅಥವಾ ಮೂತ್ರಪಿಂಡದ ಕಾಯಿಲೆಗಳಂತಹ ಸಹ-ಅಸ್ವಸ್ಥತೆ ಹೊಂದಿದ್ದರು ಎಂದು ವರದಿಯೊಂದು ತಿಳಿಸಿದೆ. ಅಧಿಕೃತ ಮೂಲಗಳು ಹಂಚಿಕೊಂಡಿರುವ ಕೋವಿಡ್‌-19 ಸಾವುಗಳ ವಿಶ್ಲೇಷಣೆಯ ವರದಿಯ ಪ್ರಕಾರ, ಈ ಅವಧಿಯಲ್ಲಿ ಲೆಕ್ಕಪರಿಶೋಧನೆ ಮಾಡಲಾದ 853 ಸಾವುಗಳಲ್ಲಿ, 779 ಅಥವಾ 91% ರಷ್ಟು ಸಾವಿಗೀಡಾದರಲ್ಲಿ … Continued

ಸಂಸತ್ತಿನಲ್ಲಿ ಕುಳಿತು ಕೇಳದ ವ್ಯಕ್ತಿಗೆ ನಾನು ಹೇಗೆ ಉತ್ತರಿಸಲಿ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ

ನವದೆಹಲಿ: ಸಂಸತ್ತಿನಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯಾರ ಮಾತನ್ನೂ ಕೇಳದ ಮತ್ತು ಸದನದಲ್ಲಿ ಕುಳಿತುಕೊಳ್ಳದ” ವ್ಯಕ್ತಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ತಿನಲ್ಲಿ ಪ್ರತಿಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ವಿವಿಧ … Continued

ಸಿಬಿಎಸ್‌ಇ 10, 12 ತರಗತಿಗಳಿಗೆ ಟರ್ಮ್ 2 ಬೋರ್ಡ್ ಪರೀಕ್ಷೆಗಳು ಏಪ್ರಿಲ್ 26 ರಿಂದ ಆರಂಭ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ತರಗತಿ 10, 12ರ ಟರ್ಮ್ 2 ಪರೀಕ್ಷೆ -2022ರ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಅಧಿಕೃತ ಅಧಿಸೂಚನೆಯಲ್ಲಿ, ಸಿಬಿಎಸ್‌ಇ ಟರ್ಮ್ 2 ಪರೀಕ್ಷೆಗಳು ಏಪ್ರಿಲ್ 26 ರಿಂದ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದೆ. ಪರೀಕ್ಷೆಯನ್ನು ಟರ್ಮ್ 2 ಅಥವಾ ಸಬ್ಜೆಕ್ಟಿವ್ ಮೋಡ್‌ನ ಮಾದರಿ ಪೇಪರ್‌ಗಳ ಪ್ರಕಾರ ಮಾದರಿಯಲ್ಲಿ ನಡೆಸಲಾಗುತ್ತದೆ. … Continued

ಫೆಬ್ರವರಿ 14ರಿಂದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಅನಿರ್ದಿಷ್ಟಾವಧಿ ಉಪವಾಸ

ನವದೆಹಲಿ: ಮಹಾರಾಷ್ಟ್ರ ಸರ್ಕಾರವು ಸೂಪರ್ ಮಾರ್ಕೆಟ್, ದಿನಸಿ‌ ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಿದ್ದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ (Anna Hazare) ಫೆಬ್ರವರಿ 14ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ. . ಈ ಕುರಿತು ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಅಣ್ಣಾ ಹಜಾರೆ ಈಗ ಮಾಲ್​ಗಳಲ್ಲಿ ವೈನ್ ಮಾರಾಟದ ನೀತಿಯನ್ನು … Continued

ಮಲಾಲಾ ರಕ್ಷಿಸಲಾಗದ ದೇಶ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಭಾರತಕ್ಕೆ ಪಾಠ ಮಾಡುವುದು ಬೇಡ: ಪಾಕ್‌ ವಿದೇಶಾಂಗ ಸಚಿವರಿಗೆ ತಿವಿದ ಓವೈಸಿ

ನವದೆಹಲಿ: ಕರ್ನಾಟಕದ ಹಿಜಾಬ್‌ ವಿವಾದದ ಸಂಬಂಧ ಬುಧವಾರ ಬೆಳಗ್ಗೆ ಬಾಲಕಿಯರ ಶಿಕ್ಷಣದ ಕುರಿತು ಭಾರತಕ್ಕೆ ಉಪನ್ಯಾಸ ನೀಡಲು ಯತ್ನಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಡಕ್‌ ಉತ್ತರ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು, ಮಲಾಲಾಳನ್ನು ರಕ್ಷಿಸಲಾಗದ … Continued

ಪೂರ್ಣತ್ರಯೀಶ ದೇಗುಲದಲ್ಲಿ ಭಕ್ತರು 12 ಬ್ರಾಹ್ಮಣರ ಪಾದ ತೊಳೆದ ವರದಿ ನಂತರ ಸ್ವಯಂಪ್ರೇರಿತವಾಗಿ ಪ್ರಕರಣ ಪರಿಗಣಿಸಿದ ಕೇರಳ ಹೈಕೋರ್ಟ್

ತಿರುವನಂತಪುರಂ: ತ್ರಿಪುಣಿತೂರಿನ ಶ್ರೀ ಪೂರ್ಣತ್ರಯೀಶ ದೇವಸ್ಥಾನದಲ್ಲಿ ಭಕ್ತರು ಪಾಪ ಪರಿಹಾರಕ್ಕಾಗಿ 12 ಬ್ರಾಹ್ಮಣರ ಪಾದಗಳನ್ನು ತೊಳೆಯುವಂತೆ ಮಾಡಲಾಗಿದೆ ಎಂಬ ವರದಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ. ದೇವಾಲಯದ ಅಧಿಕಾರಿಗಳ ವಕೀಲರು ಇದನ್ನು ನಿರಾಕರಿಸಿದ್ದಾರೆ ಮತ್ತು ಭಕ್ತರಲ್ಲ, ದೇವಾಲಯದ ಪ್ರಧಾನ ಅರ್ಚಕರು ಬ್ರಾಹ್ಮಣರ ಪಾದಗಳನ್ನು ತೊಳೆದಿದ್ದಾರೆ ಮತ್ತು ಎಂದು ಹೇಳಿದ್ದಾರೆ. ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ … Continued

ಭಾರತ-ಪಾಕ್ ಗಡಿಯಲ್ಲಿ ಸ್ಫೋಟಕ ಎಸೆದ ಡ್ರೋನ್​; ಬಿಎಸ್​ಎಫ್ ಯೋಧರಿಂದ ಗುಂಡಿನ ದಾಳಿ

ಅಮೃತಸರ: ಪಂಜಾಬ್‌ನ ಅಮೃತಸರದ ಪಂಜ್‌ಗ್ರಾಹಿಯನ್ ಗಡಿಯ ಹೊರವಲಯದಲ್ಲಿ ಮಂಗಳವಾರ ತಡರಾತ್ರಿ ಡ್ರೋನ್ ಮೂಲಕ ಸ್ಫೋಟಕಗಳನ್ನು ಎಸೆಯಲಾಗಿದ್ದು, ಭಾರತೀಯ ಗಡಿ ಭದ್ರತಾ ಪಡೆಯ (BSF) ಯೋಧರು ಭಯೋತ್ಪಾದಕರ ಸ್ಫೋಟದ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ಸ್ಫೋಟಕಗಳು ಕೆಳಗೆ ಬೀಳುತ್ತಿದ್ದಂತೆ ಕೂಡಲೇ ಎಚ್ಚೆತ್ತ ಯೋಧರು ಡ್ರೋನ್‌ನತ್ತ ಗುಂಡು ಹಾರಿಸಿದ್ದಾರೆ. ಬಳಿಕ ಆ ಡ್ರೋನ್ ಪಾಕಿಸ್ತಾನದ ಕಡೆಗೆ ಹಾರಿದೆ.ಈ ಘಟನೆಯ ನಂತರ, ತಕ್ಷಣವೇ … Continued

ಎರಡು ದಿನಗಳಿಂದ ಕಡಿದಾದ ಪರ್ವತದ ಸೀಳಿನಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಸೇನಾಪಡೆ… ಸಿಲುಕಿದ್ದ ದೃಶ್ಯ ವಿಡಿಯೊದಲ್ಲಿ ಸೆರೆ

ಪಾಲಕ್ಕಾಡ್‌: ಕೇರಳದ ಪಾಲಕ್ಕಾಡ್‌ನ ಮಲಂಪುಳ ಪ್ರದೇಶದಲ್ಲಿ ಚಾರಣಿಗನೊಬ್ಬ ಕಾಲು ಜಾರಿ ಬಿದ್ದು ಬಂಡೆಗಳ ನಡುವಿನ ಬೆಟ್ಟದ ಕಂದಕದಲ್ಲಿ ಸಿಕ್ಕಿಬಿದ್ದು, ಎರಡು ದಿನಗಳಿಂದ ನೀರು ಆಹಾರವಿಲ್ಲದೆ ಕಾಲಕಳೆದಿದ್ದು, ಭಾರತೀಯ ಸೇನೆ ಆತನನ್ನು ಸುರಕ್ಷಿತವಾಗಿ ಅಲ್ಲಿಂದ ಮೇಲೆತ್ತಿದೆ.. ಸುಮಾರು 40 ನಿಮಿಷಗಳ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ಆತನನ್ನು ಹಗ್ಗ ಹಾಗೂ ಬೆಲ್ಟ್‌ ಸಹಾಯದಿಂದ ಯಶ್ವಿಯಾಗಿ ಹಾಗೂ ಸುರಕ್ಷಿತವಾಗಿ ಅಲ್ಲಿಂದ … Continued

ಭಾರತದಲ್ಲಿ 71,365 ಹೊಸ ಕೋವಿಡ್ ಪ್ರಕರಣಗಳು ದಾಖಲು…ಇದು ನಿನ್ನೆಗಿಂತ 5.6% ಹೆಚ್ಚು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 71,365 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 5.6% ಹೆಚ್ಚಾಗಿದೆ. ಇದು ರಾಷ್ಟ್ರದ ಒಟ್ಟು ಪ್ರಕರಣವನ್ನು 4,24,10,976 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,217 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯನ್ನು 5,05,279 ಕ್ಕೆ ಹೆಚ್ಚಿಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,72,211 … Continued