ಕಾಬೂಲ್ ವಿಮಾನ ನಿಲ್ದಾಣ ದಾಳಿ: ಐಸಿಸ್‌-ಕೆ ನಾಯಕ ಸನಾವುಲ್ಲಾ ಗಫಾರಿ, ದಾಳಿ ಹಿಂದಿರುವವರ ಬಗ್ಗೆ ಮಾಹಿತಿ ನೀಡಿದವರಿಗೆ 75 ಕೋಟಿ ರೂ. ಬಹುಮಾನ..!

ವಾಷಿಂಗ್ಟನ್‌: ಭಯೋತ್ಪಾದಕ ಸಂಘಟನೆ ಐಸಿಸ್‌ ಖೊರಾಸನ್‌ (ISIS-Khorasan) ಅಥವಾ ಐಸಿಸ್‌-ಕೆ (ISIS-K) ಭಯೋತ್ಪಾದಕ ಸನಾವುಲ್ಲಾ ಗಫಾರಿ ಮತ್ತು ಕಳೆದ ವರ್ಷ ಕನಿಷ್ಠ 185 ಜನರನ್ನು ಕೊಂದ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಉಗ್ರಗಾಮಿ ದಾಳಿಗೆ ಕಾರಣರಾದವರ ಬಗ್ಗೆ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಅಮೆರಿಕನ್‌  (ಸುಮಾರು 74.65 ಕೋಟಿ ರೂ.) ಡಾಲರ್‌ ವರೆಗೆ ಬಹುಮಾನ … Continued

ಪಂಜಾಬ್ ಚುನಾವಣೆ: ಕಾಂಗ್ರೆಸ್‌ ಹಿಂದಿಕ್ಕಿ ಎಎಪಿ ಅಧಿಕಾರಕ್ಕೆ ಬರುವ ಸಾಧ್ಯತೆ-ಟೈಮ್ಸ್ ನೌ-ವೀಟೊ ಸಮೀಕ್ಷೆ ಊಹೆ

ನವದೆಹಲಿ: ಮಂಗಳವಾರ (ಫೆಬ್ರವರಿ 8) ಪ್ರಕಟಿಸಲಾದ ಟೈಮ್ಸ್ ನೌ-ವೀಟೋ ಅಭಿಪ್ರಾಯ ಸಮೀಕ್ಷೆಯ ಪ್ರಕಾರ, 2022 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬರಲಿದೆ ಎಂದು ಊಹಿಸಿದೆ. ಟೈಮ್ಸ್ ನೌ ಸಮೀಕ್ಷೆಯು ಭಗವಂತ್ ಮಾನ್ ಅವರನ್ನು ಪಂಜಾಬ್‌ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೆಸರಿಸಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷವು ಫೆಬ್ರವರಿ … Continued

ಉತ್ತರ ಪ್ರದೇಶ ಚುನಾವಣೆ: ಸರಳ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಎಂದು ಊಹಿಸಿದ ಟೈಮ್ಸ್ ನೌ-ವೀಟೋ ಸಮೀಕ್ಷೆ

ಲಕ್ನೋ: ಟೈಮ್ಸ್ ನೌ-ವೀಟೋ ಸಮೀಕ್ಷೆಯ ಫಲಿತಾಂಶಗಳು ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಡಿಮೆ ಬಹುಮತದೊಂದಿಗೆ ಸತತ ಎರಡನೇ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿದೆ. ಫೆಬ್ರವರಿ 10ರಂದು ಉತ್ತರ ಪ್ರದೇಶ ಚುನಾವಣೆ 2022 ರ ಮೊದಲ ಸುತ್ತಿನ ಮತದಾನಕ್ಕೆ ಎರಡು ದಿನಗಳ ಮೊದಲು ಸಮೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ … Continued

ಭಾರತದ 5G ನೆಟ್‌ವರ್ಕ್ ಅಭಿವೃದ್ಧಿಯ ಅಂತಿಮ ಹಂತದಲ್ಲಿ: ಸರ್ಕಾರ

5G ನೆಟ್‌ವರ್ಕ್ ಈಗ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ. ದೇಶವು 6G ಮಾನದಂಡಗಳ ಅಭಿವೃದ್ಧಿಯಲ್ಲಿ ಸಹ ಭಾಗವಹಿಸುತ್ತಿದೆ. 5G ಯ ರೋಲ್ ಔಟ್ ಈ ವರ್ಷದ ಅಂತ್ಯದ ವೇಳೆಗೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ನವದೆಹಲಿ: 5G ನೆಟ್‌ವರ್ಕ್ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂದು ಸರ್ಕಾರವು ಬಹಿರಂಗಪಡಿಸಿರುವುದರಿಂದ ಭಾರತದಲ್ಲಿ 5G ರೋಲ್ ಔಟ್ ಟ್ರ್ಯಾಕ್‌ನಲ್ಲಿದೆ. ಮಂಗಳವಾರ ಮುಂಜಾನೆ ನಡೆದ … Continued

ಹಿಜಾಬ್‌ ವಿವಾದ: ವಿಚಾರಣೆ ನಾಳೆ ಮತ್ತೆ ವಿಚಾರಣೆ, ಶಾಂತಿ, ನೆಮ್ಮದಿ ಕಾಪಾಡಲು ವಿದ್ಯಾರ್ಥಿಗಳು, ಜನತೆಗೆ ಕರ್ನಾಟಕ ಹೈಕೋರ್ಟ್‌ ಮನವಿ

ಬೆಂಗಳೂರು: ರಾಜ್ಯದಾದ್ಯಂತ ಹಿಜಾಬ್‌ ವಿವಾದ ತಾರಕಕ್ಕೇರಿರುವ ನಡುವೆಯೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಶಾಂತಿ ಮತ್ತು ನೆಮ್ಮದಿ ಕಾಪಾಡುವಂತೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮನವಿ ಮಾಡಿದೆ. ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕುಂದಾಪುರದ ಭಂಡಾರ್ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಸಲ್ಲಿಸಿರುವ ಮೂರು ಪ್ರತ್ಯೇಕ ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. … Continued

ಹುಂಡೈ ಪಾಕಿಸ್ತಾನದ ಕಾಶ್ಮೀರ ಪೋಸ್ಟ್‌ಗೆ ಭಾರತದ ಬಲವಾದ ಆಕ್ಷೇಪ

ನವದೆಹಲಿ: ಪಾಕಿಸ್ತಾನದ ಕಾಶ್ಮೀರ ಒಗ್ಗಟ್ಟಿನ ದಿನವನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮದಲ್ಲಿ ಹುಂಡೈ ಪಾಕಿಸ್ತಾನದ ಪೋಸ್ಟ್ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ದಕ್ಷಿಣ ಕೊರಿಯಾದ ರಾಯಭಾರಿಯನ್ನು ಕರೆಸಿದೆ. ಫೆಬ್ರವರಿ 5 ರಂದು ಪಾಕಿಸ್ತಾನದ “ಕಾಶ್ಮೀರ ಐಕ್ಯತಾ ದಿನದ ಬಗ್ಗೆ ಹ್ಯುಂಡೈ ಪಾಕಿಸ್ತಾನದಿಂದ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬಗ್ಗೆ ಸಚಿವಾಲಯವು ರಾಯಭಾರಿ ಚಾಂಗ್ ಜೇ-ಬೊಕ್ ಅವರಿಂದ … Continued

ಹಿಮಪಾತದಲ್ಲಿ ಸಿಲುಕಿದ್ದ 7 ಸೈನಿಕರ ಮೃತದೇಹ ಪತ್ತೆ

ನವದೆಹಲಿ: ಅರುಣಾಚಲ ಪ್ರದೇಶದ ಪಶ್ಚಿಮ ತುದಿಯಲ್ಲಿರುವ ಕಮೆಂಗ್‌ನಲ್ಲಿನ ಎತ್ತರದ ಪ್ರದೇಶದಲ್ಲಿ ಭಾನುವಾರ ಉಂಟಾದ ಭಾರೀ ಹಿಮಪಾತದಲ್ಲಿ 7 ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ. ಹಿಮಪಾತದಲ್ಲಿ ಸಿಲುಕಿದ್ದ ಅವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈಗ ಹಿಮಪಾತದಲ್ಲಿ ಸಿಲುಕಿದ್ದ 7 ಯೋಧರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್‌ನ ಎತ್ತರದ ಪ್ರದೇಶದಲ್ಲಿ ಭಾರೀ … Continued

ಪ್ರೇಮಿಗಳ ದಿನದಂದು ಇಸ್ರೋದಿಂದ ಪಿಎಸ್‌ಎಲ್‌ವಿ-ಸಿ 52ರಲ್ಲಿ ಭೂ ವೀಕ್ಷಣಾ ಉಪಗ್ರಹ ಉಡಾವಣೆ

ನವದೆಹಲಿ; ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) 2022 ರ ಮೊದಲ ಉಡಾವಣೆಯನ್ನು ಪ್ರೇಮಿಗಳ ದಿನದಂದು ಭೂಮಿಯ ವೀಕ್ಷಣಾ ಉಪಗ್ರಹದಿಂದ (EOS-04) ಮಾಡಲಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್, PSLV-C52 ಫೆಬ್ರವರಿ 14 ರಂದು ಬೆಳಿಗ್ಗೆ 05:59 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಿಂದ ಉಡಾವಣೆಯಾಗಲಿದೆ. ಲಾಂಚರ್ 1710-ಕಿಲೋಗ್ರಾಂ … Continued

ಹಿಜಾಬ್ ವಿವಾದ: ಮಧ್ಯಪ್ರದೇಶದಲ್ಲೂ ಏಕರೂಪದ ಡ್ರೆಸ್ ಕೋಡ್ ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ ಎಂದ ಸಚಿವ

ಭೋಪಾಲ್: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಇದೀಗ ಮಧ್ಯಪ್ರದೇಶಕ್ಕೂ ತಲುಪಿದೆ. ಮಂಗಳವಾರ, ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು ಸರ್ಕಾರವು ಈಗ ಶಿಸ್ತಿಗೆ ಆದ್ಯತೆ ನೀಡಲಿದೆ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈಗ ಏಕರೂಪದ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಶಾಲಾ ಸಮವಸ್ತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಲಾ ಶಿಕ್ಷಣ ಇಲಾಖೆ … Continued

ಪತ್ರಕರ್ತರು, ಆನ್‌ಲೈನ್ ಸುದ್ದಿ ವೇದಿಕೆಗಳಿಗೆ ಸರ್ಕಾರದ ಮಾರ್ಗಸೂಚಿಗಳು ಪ್ರಕಟ

ನವದೆಹಲಿ: ಕೇಂದ್ರ ಸರ್ಕಾರವು ಸೋಮವಾರ ಕೇಂದ್ರ ಮಾಧ್ಯಮ ಮಾನ್ಯತೆ ಮಾರ್ಗಸೂಚಿ-2022 ಅನ್ನು ಬಿಡುಗಡೆ ಮಾಡಿದ್ದು, ಇದರ ಅಡಿಯಲ್ಲಿ ಪತ್ರಕರ್ತರು ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆ, ವಿದೇಶಗಳೊಂದಿಗೆ ಸೌಹಾರ್ದ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದರೆ, ಗಂಭೀರ ಅಪರಾಧದ ಆರೋಪ ಇದ್ದರೆ ಮಾನ್ಯತೆ ಹಿಂಪಡೆಯಲಾಗುತ್ತದೆ ಅಥವಾ ಅಮಾನತುಗೊಳಿಸಲಾಗುತ್ತದೆ. ಸಭ್ಯತೆ ಅಥವಾ ನೈತಿಕತೆ ಮೇಲೆ … Continued