ತಿರಂಗಾ ಯಾತ್ರೆ ವೇಳೆ ಹಸು ನುಗ್ಗಿ ಕಾಲು ಮುರಿತಕ್ಕೊಳಗಾದ ಗುಜರಾತಿನ ಮಾಜಿ ಡಿಸಿಎಂ ನಿತಿನ್ ಪಟೇಲ್ : ದೃಶ್ಯ ಸೆರೆ

ಅಹಮದಾಬಾದ್‌: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕಡಿ ಪಟ್ಟಣದಲ್ಲಿ ಇಂದು, ಶನಿವಾರ ಗುಜರಾತ್‌ನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ನೇತೃತ್ವದ “ತಿರಂಗ ಯಾತ್ರೆ” ಜನ ಸಂದಣಿಯಲ್ಲಿ ನುಗ್ಗಿದ ಘಟನೆ ನಡೆದಿದ್ದು, ಈ ವೇಳೆ ನಿತಿನ್ ಪಟೇಲ್ ಅವರ ಎಡಗಾಲಿಗೆ ಮೂಳೆ ಮುರಿತವಾಗಿದೆ ಎಂದು ಬಿಜೆಪಿ ನಾಯಕ ತಿಳಿಸಿದ್ದಾರೆ. “ಕಡಿ ನಗರದಲ್ಲಿ ತಿರಂಗ ಯಾತ್ರೆಯಲ್ಲಿ ಸುಮಾರು 2,000 … Continued

ಧ್ವಜ ಬೀಸುವ ಮೂಲಕ ಅತಿದೊಡ್ಡ ಮಾನವ ಚಿತ್ರ ನಿರ್ಮಿಸಿ ವಿಶ್ವ ದಾಖಲೆ ನಿರ್ಮಿಸಿದ ಚಂಡೀಗಡ ವಿವಿ ವಿದ್ಯಾರ್ಥಿಗಳು

ಚಂಡೀಗಡ: ಆಗಸ್ಟ್ 15 ರಂದು 75 ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರವು ಸಜ್ಜಾಗಿದೆ. ಜನರು ಮತ್ತು ವಿವಿಧ ಸಂಘಟನೆಗಳು ಈಗಾಗಲೇ ಈ ಸಂದರ್ಭವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸಲು ಪ್ರಾರಂಭಿಸಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರೆ, ಇನ್ನು ಕೆಲವರು ದೊಡ್ಡ ಪ್ರಮಾಣದಲ್ಲಿ ದಿನವನ್ನು ಆಚರಿಸುತ್ತಿದ್ದಾರೆ. ಚಂಡೀಗಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಎನ್‌ಐಡಿ (NID) … Continued

ಎರಡು ತಿಂಗಳ ನಂತರ ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಸೋಂಕು

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮತ್ತೆ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಎಂದು ಪಕ್ಷದ ಮಾಧ್ಯಮ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಪ್ರತ್ಯೇಕವಾಗಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು, ಶನಿವಾರ ಕೋವಿಡ್ -19 … Continued

ಹರ್ ಘರ್ ತಿರಂಗಾ ಅಭಿಯಾನ : ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೊಕ್ಕೆ ರಾಷ್ಟ್ರಧ್ವಜ ಹಾಕಿಕೊಂಡ ಆರ್‌ಎಸ್‌ಎಸ್‌

ನವದೆಹಲಿ: ಭಾರತವು ತನ್ನ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ವು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರಗಳನ್ನು ತನ್ನ ಸಾಂಪ್ರದಾಯಿಕ ಕೇಸರಿ ಧ್ವಜದಿಂದ ರಾಷ್ಟ್ರಧ್ವಜಕ್ಕೆ ಬದಲಾಯಿಸಿದೆ. ಇದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿಯವರು “ಆಜಾದಿ ಕಾ ಅಮೃತ ಮಹೋತ್ಸವ” ಕಾರ್ಯಕ್ರಮದ ಅಡಿಯಲ್ಲಿ ಭಾರತದ ಸ್ವಾತಂತ್ರ್ಯದ 75 ವರ್ಷಗಳ … Continued

ಭಯೋತ್ಪಾದಕರ ಜೊತೆ ಸಂಪರ್ಕ: ಕಾಶ್ಮೀರಿ ಪಂಡಿತರ ಹತ್ಯೆ ಆರೋಪಿ ಬಿಟ್ಟಾ ಕರಾಟೆ ಪತ್ನಿ ಸೇರಿ ನಾಲ್ವರು ಸರ್ಕಾರಿ ಅಧಿಕಾರಿಗಳ ವಜಾ

ಜಮ್ಮು: 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಭಯೋತ್ಪಾದಕ-ನಿಧಿ ಆರೋಪ ಎದುರಿಸುತ್ತಿರುವ ಭಯೋತ್ಪಾದಕ ಬಿಟ್ಟಾ ಕರಾಟೆಯ ಪತ್ನಿ ಸೇರಿದಂತೆ ತನ್ನ ನಾಲ್ವರು ಸರ್ಕಾರಿ ಉದ್ಯೋಗಿಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಜಾಗೊಳಿಸಿದೆ. ಭಯೋತ್ಪಾದಕ ಸಂಪರ್ಕಕ್ಕಾಗಿ ನಾಲ್ವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಯೋತ್ಪಾದಕ ಫಾರೂಕ್ … Continued

ರಿಕವರಿ ಏಜೆಂಟ್‌ಗಳಿಗೆ ಆರ್‌ಬಿಐ ಬಿಸಿ: ಸಾಲ ವಸೂಲಿ ವೇಳೆ ಬೆದರಿಕೆ ಹಾಕುವಂತಿಲ್ಲ ಎಂದು ಸುತ್ತೋಲೆ

ಮುಂಬೈ: ಸಾಲ ವಸೂಲು ಮಾಡುವಾಗ ರಿಕವರಿ ಏಜೆಂಟರು ಬೆಳಗ್ಗೆ 8 ಗಂಟೆಯಿಂದ ಮೊದಲು ಮತ್ತು ರಾತ್ರಿ 7 ಗಂಟೆಯ ಅನಂತರ ಪೋನ್‌ ಮಾಡಿ ಬೆದರಿಕೆ ಹಾಕುವಂತಿಲ್ಲ ಎಂದು ಆರ್‌ಬಿಐ ಶುಕ್ರವಾರ ಹೊಸ ಸುತ್ತೋಲೆ ಹೊರಡಿಸಿದೆ. ಬ್ಯಾಂಕೇತರ ವಿತ್ತೀಯ ಸಂಸ್ಥೆಗಳು (ಎನ್‌ಬಿಎಫ್ಸಿ), ಆಸ್ತಿ ಪುನರ್‌ರಚನೆ ಸೇವೆ ನೀಡುವ ಕಂಪನಿಗಗಳಿಗೆ (ಎಆರ್‌ಸಿ) ಹೊಸ ನಿಯಮ ಅನ್ವಯವಾಗಲಿದೆ. ಈ ಹಿಂದೆಯೇ … Continued

ನೂಪುರ್ ಶರ್ಮಾ ಹತ್ಯೆಗೆ ಜೆಇಎಂ ಭಯೋತ್ಪಾದಕ ಸಂಘಟನೆಯಿಂದ ನಿಯೋಜಿಸಿದ್ದ ಉಗ್ರನ ಬಂಧನ

ಲಕ್ನೋ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶುಕ್ರವಾರ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ತೆಹ್ರಿಖ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ)-ಸಂಬಂಧಿತ ಭಯೋತ್ಪಾದಕ ಮುಹಮ್ಮದ್ ನದೀಮ್‌ನನ್ನು ಸಹರಾನ್‌ಪುರದಿಂದ ಬಂಧಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಜೆಇಎಂ ಮತ್ತು ಟಿಟಿಪಿಯೊಂದಿಗೆ ನದೀಮ್ ನೇರ ಸಂಪರ್ಕ ಹೊಂದಿದ್ದ. ನೂಪುರ್ ಶರ್ಮಾ ಅವರನ್ನು ಕೊಲ್ಲುವ ಕೆಲಸವನ್ನು … Continued

75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ: ಕೋವಿಡ್ ಕಾರಣದಿಂದ ದೊಟ್ಟಮಟ್ಟದಲ್ಲಿ ಗುಂಪು ಸೇರುವುದನ್ನು ತಪ್ಪಿಸಿ ; ರಾಜ್ಯಗಳಿಗೆ ಕೇಂದ್ರ ಸೂಚನೆ

ನವದೆಹಲಿ: ದೇಶದಾದ್ಯಂತ ಪ್ರತಿದಿನ ಹೊಸದಾಗಿ 15 ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ದೊಡ್ಡಮಟ್ಟದಲ್ಲಿ ಸಭೆ ಸೇರುವಂತಿಲ್ಲ, ಪ್ರತಿಯೊಬ್ಬರೂ ತಪ್ಪದೆ ಕೋವಿಡ್ ನಿಯಯಮಾವಳಿಗಳನ್ನು ಅನುಸರಿಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ … Continued

ಬಾಡಿಗೆಗಳ ಮೇಲೆ ಜಿಎಸ್‌ಟಿ ? : ಜಿಎಸ್‌ಟಿ ನೋಂದಾಯಿತ ಬಾಡಿಗೆದಾರರು ಮನೆ ಬಾಡಿಗೆಗೆ 18% ತೆರಿಗೆ ಪಾವತಿಸಬೇಕು; ಯಾರು ಪಾವತಿಸಬೇಕು, ಇಲ್ಲಿದೆ ಮಾಹಿತಿ

ನವದೆಹಲಿ: ಜುಲೈ 18 ರಿಂದ ಜಾರಿಗೆ ಬಂದ ಹೊಸ ಜಿಎಸ್‌ಟಿ ನಿಯಮಗಳ ಪ್ರಕಾರ, ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಒಬ್ಬ ಹಿಡುವಳಿದಾರನು ವಸತಿ ಆಸ್ತಿಯನ್ನು ಬಾಡಿಗೆಗೆ ಪಡೆಯಲು ಶೇಕಡಾ 18 ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. GST ಅಡಿಯಲ್ಲಿ ನೋಂದಾಯಿಸಲಾದ ಬಾಡಿಗೆದಾರರಿಗೆ ಪಾವತಿಸಿದ ಬಾಡಿಗೆಗೆ ಶೇಕಡಾ 18 ತೆರಿಗೆ ಮಾತ್ರ ಅನ್ವಯಿಸುತ್ತದೆ. ಈ ಹಿಂದೆ, ಬಾಡಿಗೆ ಅಥವಾ ಲೀಸ್‌ನಲ್ಲಿ … Continued

ಮಹಾರಾಷ್ಟ್ರ ಸರ್ಕಾರದ ಶೇ. 75ರಷ್ಟು ಸಚಿವರ ಮೇಲಿದೆ ಕ್ರಿಮಿನಲ್ ಪ್ರಕರಣಗಳು: ಎಡಿಆರ್‌

ಮುಂಬೈ: ಮಹಾರಾಷ್ಟ್ರದ ಶೇ. 75ರಷ್ಟು ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ವರದಿಯೊಂದು ಹೇಳಿದೆ. ಮಹಾರಾಷ್ಟ್ರದ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ 20 ಸಚಿವರಿದ್ದು, ಅವರಲ್ಲಿ 15 ಮಂದಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಎಡಿಆರ್‌ ಸಂಸ್ಥೆ ಹೇಳಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ … Continued