ನವಜೋತ್ ಸಿಧು ಹಣಕ್ಕಾಗಿ ತಾಯಿಯನ್ನೇ ತೊರೆದ ಕ್ರೂರ ವ್ಯಕ್ತಿ: ಸಹೋದರಿ ಸುಮನ್

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹಣದ ಆಸೆಗಾಗಿ ವೃದ್ಧಾಪ್ಯದಲ್ಲಿದ್ದ ತಾಯಿಯನ್ನೇ ತೊರೆದಿದ್ದಾರೆ ಎಂದು ಅವರ ಹಿರಿಯ ಸಹೋದರಿ ಸುಮನ್ ತುರ್ ಆರೋಪಿಸಿದ್ದಾರೆ.ಅಮೆರಿಕದಲ್ಲಿರುವ ಸುಮನ್ ತುರ್ ಅವರು ನವಜೋತ್ ಸಿಧು ಅವರನ್ನು “ಕ್ರೂರ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ. ಸುಮನ್ ತುರ್ ಪ್ರಸ್ತುತ ಚಂಡೀಗಢದಲ್ಲಿದ್ದು, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1986ರಲ್ಲಿ ತಮ್ಮ ತಂದೆ … Continued

ಮಹಾರಾಷ್ಟ್ರ ವಿಧಾನಸಭೆಯಲ್ಲಿ 12 ಬಿಜೆಪಿ ಶಾಸಕರ ಅಮಾನತು ಮಾಡಿದ್ದ ಸ್ಪೀಕರ್‌ ಆದೇಶ ರದ್ದು ಮಾಡಿದ ಸುಪ್ರೀಂಕೋರ್ಟ್‌

ನವದೆಹಲಿ: ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಅಶಿಸ್ತುತೋರಿದ ಆರೋಪದ ಮೇಲೆ ಒಂದು ವರ್ಷಗಳ ಕಾಲ ವಿಧಾನಸಭೆ ಕಲಾಪದಿಂದ ೧೨ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಕ್ರಮವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ೧೨ ಶಾಸಕರನ್ನು ಒಂದು ವರ್ಷಗಳ ಕಾಲ ಅಮಾನತು ಮಾಡಿರುವ ನಿರ್ಧಾರ ಅಸಾಂವಿಧಾನಿಕ ಮತ್ತು ಅನಿಯಂತ್ರಿತ’ ಎಂದು ಹೇಳಿರುವ ಸುಪ್ರೀಂಕೋರ್ಟ್‌ ಶಾಸಕರ ಮೇಲೆ ವಿಧಿಸಲಾಗಿದ್ದ ಅಮಾನತನ್ನು ರದ್ದು … Continued

ಗೋವಾ- ಶೇ. 53 ಮರಣ ಲಸಿಕೆ ಪಡೆಯದವರು

ಪಣಜಿ: ಗೋವಾ ರಾಜ್ಯದಲ್ಲಿ ಮೂರನೇ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಲ್ಲಿ ಶೇ. 53 ಜನರು ಲಸಿಕೆ ಪಡೆದಿರಲಿಲ್ಲ ಎಂದು ಗೋವಾ ಆರೋಗ್ಯ ಇಲಾಖೆ ಹೇಳಿದೆ. ಮೂರನೇ ಅಲೆಯಲ್ಲಿ ಈ ವರೆಗೆ 91 ಜನರು ಮೃತಪಟ್ಟಿದ್ದು, 49 ಜನರು ಲಸಿಕೆ ಪಡೆಯದವರಾಗಿದ್ದಾರೆ ಎಂದು ಹೇಳಿದೆ. ಎರಡನೇ ಅಲೆಯಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿತ್ತು. ಶೇ. 75 ಜನರು … Continued

ಎಲೆಕ್ಟ್ರಾನಿಕ್ ವಸ್ತು ರಫ್ತು ಡಿಸೆಂಬರ್ ತಿಂಗಳಲ್ಲಿ ಶೇ. 33 ಹೆಚ್ಚಳ

ನವದೆಹಲಿ: ಭಾರತದಿಂದ ಎಲೆಕ್ಟ್ರಾನಿಕ್ ವಸ್ತುಗಳ ರಫ್ತು ಡಿಸೆಂಬರ್ ತಿಂಗಳಲ್ಲಿ ಶೇ. 33ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ. ಡಿಸೆಂಬರ್ ತಿಂಗಳಲ್ಲಿ 1.67 ಬಿಲಿಯನ್ ಯುಎಸ್ ಡಾಲರ್ ಮೊತ್ತದ ವಹಿವಾಟ ದಾಖಲಾಗಿದೆ. ಅದರಲ್ಲಿ ಮೊಬೈಲ್ ಫೋನ್ ವಿಭಾಗದಲ್ಲೇ ಗರಿಷ್ಠ ರಫ್ತು ಆಗಿದೆ. ಅಲ್ಲದೆ ಲ್ಯಾಪ್ ಟಾಪ್, ಟ್ಯಾಬ್ಲೆಟ್, ಟಿವಿ, ಆಡಿಯೋ ಉಪಕರಣಗಳು, ಕೈಗಾರಿಕೆಗೆ ಸಂಬಂಧಿಸಿದ … Continued

ವೈನ್ ಮದ್ಯವಲ್ಲ, ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಲಾಭ

ಮುಂಬೈ: ವೈನ್ ಮದ್ಯವಲ್ಲ, ವೈನ್ ಮಾರಾಟ ಹೆಚ್ಚಿದರೆ ರೈತರಿಗೆ ಹೆಚ್ಚಿನ ಲಾಭ ಬರುತ್ತದೆ ಎಂದು ಶಿವಸೇನೆಯ ಮುಖಂಡ ಸಂಜಯ ರಾವತ್ ಹೇಳಿದ್ದಾರೆ. ರಾಜ್ಯದ ಸೂಪರ್ ಮಾರ್ಕೆಟುಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಲು ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲಿ ರಾವತ್ ಈ ರೀತಿ ಸಮರ್ಥಿಸಿಕೊಂಡಿದ್ದಾರೆ. ಈ ಕ್ರಮದಿಂದ ರೈತರ ಆದಾಯ ದ್ವಿಗೊಳ್ಳಲಿದೆ. ಆದರೆ ಬಿಜೆಪಿ … Continued

ಝೀ ನ್ಯೂಸ್‌ ಒಪಿನಿಯನ್ ಪೋಲ್‌: ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ ಚುನಾವಣೆಯಲ್ಲಿ ಗೆಲ್ಲುವವರು ಯಾರು..?

ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದ ಐದು ರಾಜ್ಯಗಳು ವಿಧಾನಸಭಾ ಚುನಾವಣಾ ಕದನಕ್ಕೆ ಸಾಕ್ಷಿಯಾಗಲಿವೆ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾಗಲಿದ್ದು, ಝೀ ನ್ಯೂಸ್ ಡಿಸೈನ್‌ಬಾಕ್ಸಡ್‌ ನೊಂದಿಗೆ ಸೇರಿಕೊಂಡು ದೇಶದ ಅತಿದೊಡ್ಡ ಚುನಾವಣಾ ಪೂರ್ವ ಅಭಿಪ್ರಾಯ ಸಂಗ್ರಹ ‘ಜನತಾ ಕಾ ಮೂಡ್’ ಸಮೀಕ್ಷೆ ನಡೆಸಿದೆ. ಝೀ ನ್ಯೂಸ್ -ಡಿಸೈನ್‌ಬಾಕ್ಸಡ್‌ ಸಮೀಕ್ಷೆಯು … Continued

ತನ್ನ ಪ್ರಾಣ ಪಣಕ್ಕಿಟ್ಟು ಉಕ್ಕಿ ಹರಿಯುತ್ತಿರುವ ಹೊಳೆಯಲ್ಲಿ ಸಿಲುಕಿದ್ದ ನಾಯಿ ರಕ್ಷಿಸಿದ ಹೋಮ್ ಗಾರ್ಡ್..ದೃಶ್ಯ ವಿಡಿಯೊದಲ್ಲಿ ಸೆರೆ

ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆಯಡಿ ಉದ್ಯೋಗಿಯಾಗಿರುವ ಹೋಂ ಗಾರ್ಡ್‌ನ ಮೈನವಿರೇಳಿಸುವ ವಿಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕ್ಲಿಪ್, ಉಕ್ಕಿ ಹರಿಯುವ ಹೊಳೆಯಲ್ಲಿ ಸಿಕ್ಕಿಬಿದ್ದ ನಾಯಿಯನ್ನು ರಕ್ಷಿಸಲು ಸಿಬ್ಬಂದಿ ತನ್ನ ಪ್ರಾಣ ಪಣಕ್ಕಿಟ್ಟು ಸಾಹಸ ಮಾಡಿದ್ದನ್ನು ತೋರಿಸುತ್ತದೆ. ಮುಜೀಬ್ ಎಂದು ಗುರುತಿಸಲಾದ ಹೋಮ್ ಗಾರ್ಡ್ ನಾಯಿ ರಕ್ಷಣೆಗೆ ಧಾವಿಸಿದ್ದಾರೆ … Continued

ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಪತಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ…!

ಆನಂದ್: ಆಘಾತಕಾರಿ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತ್ರಿವಳಿ ತಲಾಖ್ ನೀಡಿದ ಘಟನೆ ಗುಜರಾತಿನ ಆನಂದ್ ಜಿಲ್ಲೆಯಲ್ಲಿ ನಡೆದಿದೆ. ಈಗ ಪೊಲೀಸರು 28 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಉಮ್ರೆತ್ ತಾಲೂಕಿನ ನಿವಾಸಿಯಾದ 27 ವರ್ಷದ ಮಹಿಳೆ ತನ್ನ ಪೋಷಕರೊಂದಿಗೆ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದಳು. ಮಹಿಳೆ 2019 ರ ನವೆಂಬರ್‌ನಲ್ಲಿ ಮಹಿಸಾಗರ್ … Continued

ವಿದೇಶಾಂಗ ಸಚಿವ ಜೈಶಂಕರಗೆ ಕೊರೊನಾ ಸೋಂಕು

ನವದೆಹಲಿ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಅವರಿಗೆ ಗುರುವಾರ ಕೋವಿಡ್-19 ಸೋಂಕು ದೃಢಪಟ್ಟಿದೆ. ಟ್ವಿಟ್ಟರಿನಲ್ಲಿ ಮಾಹಿತಿ ನೀಡಿರುವ ಅವರು, ಇತ್ತೀಚೆಗೆ ತಮ್ಮ ಸಂಪರ್ಕಕ್ಕೆ ಬಂದವರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ನನಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳಬೇಕು ಎಂದು ವಿನಂತಿಸುತ್ತೇನೆ ಎಂದು ಜೈಶಂಕರ್ … Continued

ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಸುಧಾರಣೆ: ವೆಂಟಿಲೇಟರ್ ತೆಗೆದ ವೈದ್ಯರು

ಮುಂಬೈ: ಪ್ರಸ್ತುತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರು ಈಗ ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತಿದ್ದು, ಅವರಿಗೆ ವೆಂಟಿಲೇಟರ್‌ ತೆಗೆಯಲಾಗಿದೆ. ಲತಾ ಮಂಗೇಶ್ಕರ್‌ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಮುಂದುವರಿದಿದೆ ಎಂದು ಕುಟುಂಬದ ಹೇಳಿಕೆ ತಿಳಿಸಿದೆ. ಪ್ರಸ್ತುತ, ಅವರು ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. … Continued