ಭಾರಿ ಮಳೆ ಮುನ್ಸೂಚನೆ : ಉತ್ತರ ಕನ್ನಡ ಜಿಲ್ಲೆಯ ಐದು ತಾಲೂಕುಗಳಿಗೆ ಜುಲೈ 7ರಂದು ರಜೆ ಘೋಷಣೆ

ಶಿರಸಿ: ಭಾರಿ ಮಳೆ ಮುನ್ಸೂಚನೆ ಇರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ ಹಾಗೂ ದಾಂಡೇಲಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜುಲೈ 7 (ಮಂಗಳವಾರ)ರಂದು ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ಮಂಗಳವಾರ ಹವಾಮಾನ ಇಲಾಖೆಯು ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ರೆಡ್‌ ಅಲರ್ಟ್‌ ಘೋಷಿಸಿದೆ. … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 10ರ ವರೆಗೆ ಅತಿ ಭಾರಿ ಗಾಳಿಮಳೆಯಾಗುವ ಮುನ್ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಮತ್ತಷ್ಟು ಬಿರುಸುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ(IMD)ಯು ಕರ್ನಾಟಕದ ಹಲವು ಭಾಗಗಳಿಗೆ ಹೊಸದಾಗಿ ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆ, ಗುಡುಗು-ಮಿಂಚು, ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ನೀಡಿರುವ … Continued

37 ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ದೇಶದ ಅತ್ಯಂತ ದೀರ್ಘಾವಧಿ ಕೈದಿ ಸಾಯಿಬಣ್ಣ

 ಬೆಂಗಳೂರು: ನಿಧಾನವಾದ ಹೆಜ್ಜೆಗಳು, ಉದ್ದನೆಯ ಬಿಳಿ ಗಡ್ಡ, ಕಾಲದ ಗುರುತು ಮೂಡಿಸಿರುವ ಬಿಳಿ ಕೂದಲಿನ 72 ವರ್ಷದ ಸಾಯಿಬಣ್ಣ ಎನ್‌. ನಾಟೀಕರ ಅವರು ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ದ್ವಾರದಿಂದ ಹೊರಬಂದರು. ಸುಮಾರು 37 ವರ್ಷಗಳ ಕಾಲ ಜೈಲಿನಲ್ಲಿದ್ದ ಅವರು ಕೊನೆಗೂಜೈಲಿನಿಂದ ಹೊರಬಂದಿದ್ದಾರೆ. ಉತ್ತಮ ನಡವಳಿಕೆ ಹಾಗೂ ಪುನರ್ವಸತಿ ನೀತಿಯಡಿ ಕರ್ನಾಟಕ … Continued

ಗದಗ : 33 ದಿನಗಳ ಬಳಿಕ ಶಿವಯೋಗ ಸಮಾಧಿಯಿಂದ ಹೊರಬಂದು ದರ್ಶನ ನೀಡಿದ ಸ್ವಾಮೀಜಿ

ಗದಗ : ಜಿಲ್ಲೆಯ ಅಂತೂರ-ಬೆಂತೂರ ಗ್ರಾಮದ ಬೂದೀಶ್ವರ ಮಠದ ಪೀಠಾಧಿಪತಿ ರಾಚೋಟೇಶ್ವರ ಶ್ರೀಗಳು ಲೋಕ ಕಲ್ಯಾಣಕ್ಕಾಗಿ ಕೈಗೊಂಡಿದ್ದ 33 ದಿನಗಳ ಶಿವಯೋಗ ಸಮಾಧಿ ಹಾಗೂ ಮೌನಾನುಷ್ಠಾನ ಭಾನುವಾರ ಮುಕ್ತಾಯವಾಯಿತು. ಭಾನುವಾರ ಬೆಳಿಗ್ಗೆ ಕಲ್ಲಿನಿಂದ ನಿರ್ಮಿಸಿದ್ದ ಗರ್ಭಗುಡಿಯಿಂದ ಹೊರಬಂದ ರಾಚೋಟೇಶ್ವರ ಶ್ರೀಗಳು ಸಾವಿರಾರು ಭಕ್ತರಿಗೆ ದರ್ಶನ ನೀಡಿದರು. ಜೂನ್ 3ರಂದು ಮುಂಜಾನೆ ಗರ್ಭಗುಡಿಯನ್ನು ಪ್ರವೇಶಿಸಿದ್ದ ರಾಚೋಟೇಶ್ವರ ಶ್ರೀಗಳು, … Continued

ಉತ್ತರ ಕನ್ನಡ ; ಭಾರಿ ಗಾಳಿಮಳೆಗೆ ಹಲವೆಡೆ ಹಾನಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಭಾನುವಾರದ ಗಾಳಿ ಮಳೆಗೆ ಬೃಹತ್ ಮರವೊಂದು ಜೆಎಂ ಎಫ್ ಸಿ ನ್ಯಾಯಾಲಯದ ಎಪಿಪಿ ಕಚೇರಿಯ ಮೇಲೆ ಬಿದ್ದಿದ್ದು, ಹಾನಿಯಾಗಿದೆ. ಭಾನುವಾರವಾದ ಕಾರಣ ಯಾರೂ ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ಹೆಚ್ಚಿನ ಅಪಾಯ ತಪ್ಪಿದೆ. ಸುದ್ದಿ ತಿಳಿಯುತ್ತಿದ್ದಂತೆ ಆಗ್ನಿಶಾಮಕ ದಳ, ನಗರಸಭೆಯ ಸಿಬ್ಬಂದಿ ಆಗಮಿಸಿ ಬಿದ್ದ ಮರ ಕತ್ತರಿಸಿ … Continued

ಉತ್ತರ ಕನ್ನಡ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ; ಪಿಎಸ್‌ಐ ಬಂಧನ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಚ್ಚಿಬೀಳಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಅಭಿನಂದನ ಅವರನ್ನು ಪೋಕ್ಸೊ (POCSO) ಕಾಯ್ದೆಯಡಿ ಭಟ್ಕಳ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಅಪ್ರಾಪ್ತ ಬಾಲಕಿಗೆ ಪಿಎಸ್‌ಐ ಅಭಿನಂದನ ಲೈಂಗಿಕ … Continued

ಕಲಬುರಗಿ : ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಲಾಯಿಸಿದ ಚಾಲಕ ; ವಿಡಿಯೋ ವೈರಲ್‌

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ಕ್ಕೆ ಸೇರಿದ ಬಸ್ ಒಂದು ಹೆಡ್‌ಲೈಟ್‌ಗಳು ಸರಿಯಾಗಿಲ್ಲದೆ ಸಂಚರಿಸಿದ್ದು, ರಸ್ತೆ ಕಾಣುವಂತೆ ಮಾಡಲು ಬಸ್‌ ಕಂಡಕ್ಟರ್‌ ತೋರಿಸಿದ ಮೊಬೈಲ್ ಫೋನ್‌ನ ಟಾರ್ಚ್ ಬೆಳಕಿನಲ್ಲಿ ಚಾಲಕ್‌ ಬಸ್‌ ಓಡಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಕಲಬುರಗಿ ನಗರದಿಂದ … Continued

ವಿಡಿಯೋ | ಪುಟ್ಟ ಮಕ್ಕಳು ಮಲಗಿದ್ದಾಗಲೇ ಹಾಸಿಗೆಯೊಳಗೆ ಸೇರಿಕೊಂಡಿದ್ದ ಬೃಹತ್‌ ಬೃಹತ್‌ ನಾಗರಹಾವು….!

ಬೆಂಗಳೂರು : ರಾತ್ರಿ ವೇಳೆ ಮನೆಯಲ್ಲಿ ಮಕ್ಕಳು ಮಲಗಿದ್ದಾಗ ಯಾರಿಗೂ ಗೊತ್ತಾಗದಂತೆ ಅವರ ಹಾಸಿಗೆಯೊಳಗೆ ಸೇರಿಕೊಂಡಿದ್ದ 5 ಅಡಿ ಉದ್ದದ ಅಪಾಯಕಾರಿ ನಾಗರಹಾವನ್ನು ಉರಗ ತಜ್ಞರು ಸುರಕ್ಷಿತವಾಗಿ ಹಿಡಿದಿದ್ದು, ಈ ಘಟನೆ ಯಲಹಂಕ ತಾಲೂಕಿನ ಹೆಸರಘಟ್ಟದ ತೋಟಗೆರೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಯಲಹಂಕ ತಾಲೂಕಿನ ಹೆಸರಘಟ್ಟದ ತೋಟಗೆರೆ ಗ್ರಾಮದಲ್ಲಿ ಜುಲೈ 2 ರಾತ್ರಿ 10:50ರ … Continued

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ; ನೂತನ ಮೇಯರ್‌ ಆಗಿ ದುರ್ಗಮ್ಮ ಬಿಜವಾಡ, ಉಪಮೇಯರ್ ಆಗಿ ರತ್ನಾಭಾಯಿ ಆಯ್ಕೆ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್‌ ಆಗಿ ಬಿಜೆಪಿಯ ದುರ್ಗಮ್ಮ ಬಿಜವಾಡ ಹಾಗೂ ಉಪಮೇಯರ್ ಆಗಿ  ರತ್ನಾಬಾಯಿ ನಾಝರೆ ಆಯ್ಕೆಯಾಗಿದ್ದಾರೆ. ಶನಿವಾರ ಪಾಲಿಕೆಯ ಸಭಾಭವನದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕೈ ಎತ್ತುವ ಮೂಲಕ ಮತದಾನ ನಡೆದು ಇಬ್ಬರೂ ಆಯ್ಕೆಯಾದರು.  ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಂಸದರಾದ ಪ್ರಲ್ಹಾದ ಜೋಶಿ, ಎಂ. ನಾಗರಾಜ್, ಶಾಸಕರಾದ ಅರವಿಂದ್ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮತ್ತಷ್ಟು ಜೋರು ; 4 ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಜುಲೈ 5 ರಿಂದ 8ರ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಾರಿ ಮಳೆಯಾಗಲಿದೆ ಎಂದು ತಿಳಿಸಿದ್ದು,  ಕೆಲವು ಜಿಲ್ಲೆಗಳಿಗೆ ಆರೆಂಜ್‌, ಯೆಲ್ಲೋ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ರಾಜ್ಯದ ಒಂದೆರಡು ಸ್ಥಳಗಳಲ್ಲಿ … Continued