ಭಾರತದಲ್ಲಿ 13,596 ಕೋವಿಡ್ -19 ಹೊಸ ಪ್ರಕರಣಗಳು ದಾಖಲು, ಇದು 230 ದಿನಗಳಲ್ಲಿ ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 13,596 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಇದು 230 ದಿನಗಳಲ್ಲಿ ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ಇತ್ತೀಚಿನ ಕೋವಿಡ್ -19 ಬುಲೆಟಿನ್ ತಿಳಿಸಿದೆ. ಇದು ಹಿಂದಿನ ದಿನ ದೇಶವು ಕಂಡಿದ್ದಕ್ಕಿಂತ ಶೇಕಡಾ 3.9 ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಒಟ್ಟು … Continued

ಕೇರಳ: ನೋಡ ನೋಡುತ್ತಲೇ ನದಿಯಲ್ಲಿ ಕೊಚ್ಚಿ ಹೋದ ಮನೆ.. ಪ್ರವಾಹದಲ್ಲಿ ಕ್ಷಣಾರ್ಧದಲ್ಲಿ ಮಾಯ…ವೀಕ್ಷಿಸಿ

ಕೇರಳದ ಕೊಟ್ಟಾಯಂ ಜಿಲ್ಲೆಯ ಮುಂಡಕಾಯಂನಲ್ಲಿ ಭಾರೀ ಮಳೆಯಿಂದಾಗಿ ನದಿಯ ಬಲವಾದ ನೀರಿನ ಪ್ರವಾಹದಿಂದ ಮನೆಯೊಂದು ಕೊಚ್ಚಿಹೋಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಅದರ ಕೆಳಗಿರುವ ನೆಲವು ಕುಸಿಯುತ್ತಿರುವುದರಿಂದ ಒಂದು ಅಂತಸ್ತಿನ ಮನೆ ನಿಧಾನವಾಗಿ ಕೆಳಕ್ಕೆ ಉರುಳುತ್ತಿರುವುದನ್ನು ಕಾಣಬಹುದು. ನಂತರ ಅದು ನದಿಯಲ್ಲಿ ಬಿದ್ದು ಭಾರೀ ಪ್ರವಾಹದಲ್ಲಿ ಬಿದ್ದು ಕಣ್ಮರೆಯಾಗುತ್ತದೆ. ಸುತ್ತಮುತ್ತಲಿನವರು … Continued

ತಮಿಳುನಾಡು ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇ-ಮೇಲ್ ಸೃಷ್ಟಿ: ಪ್ರಕರಣ ದಾಖಲು

ಚೆನ್ನೈ: ದುಷ್ಕರ್ಮಿಗಳು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರ ಹೆಸರಿನಲ್ಲಿ ನಕಲಿ ಇ-ಮೇಲ್ ಖಾತೆಗಳನ್ನು ಸೃಷ್ಟಿಸಿದ್ದಾರೆ. ಈಗ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೋಲಿಸರಿಗೆ ದೂರು ನೀಡಲಾಗಿದೆ ಎಂದು ಭಾನುವಾರ ತಮಿಳುನಾಡು ರಾಜಭವನ ತಿಳಿಸಿದೆ. ಇತ್ತೀಚೆಗೆ ಕೆಲವು ದುಷ್ಕರ್ಮಿಗಳು ಗೌರವಾನ್ವಿತ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇ ಮೇಲ್ ಖಾತೆಗಳನ್ನು ಸೃಷ್ಟಿಸಿ ಆಕ್ಷೇಪಾರ್ಹ ವಿಷಯಗಳೊಂದಿಗೆ ಇ-ಮೇಲ್‌ಗಳನ್ನು ಕಳುಹಿಸುತ್ತಿದ್ದಾರೆ.ದುಷ್ಕರ್ಮಿಗಳನ್ನು … Continued

ಇ-ಶ್ರಮ್​​ ವೆಬ್​ಸೈಟ್​​ನಲ್ಲಿ ಎರಡೇ ತಿಂಗಳಲ್ಲಿ 4 ಕೋಟಿಗೂ ಅಧಿಕ ಕಾರ್ಮಿಕರಿಂದ ನೋಂದಣಿ

ನವದೆಹಲಿ: ದೇಶದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್​ ತಯಾರಿಸಲು ಕೇಂದ್ರ ಸರ್ಕಾರ ಹೊರತಂದ ಇ-ಶ್ರಮ್​ ಪೋರ್ಟಲ್ಲಿನಲ್ಲಿ (E-Shram Portal)​ ಎರಡೇ ತಿಂಗಳಲ್ಲಿ ಅಸಂಘಟಿತ ವಲಯದ 4 ಕೋಟಿಗೂ ಅಧಿಕ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸಚಿವ ಭೂಪೇಂದ್ರ ಯಾದವ್​ ತಿಳಿಸಿದ್ದಾರೆ. ಇದು ನಿಜಕ್ಕೂ ಒಂದು ಮೈಲಿಗಲ್ಲು. ಈ … Continued

ಮಳೆ ಆರ್ಭಟಕ್ಕೆ ನಲುಗಿದ ಕೇರಳ: ಸಾವಿನ ಸಂಖ್ಯೆ 26ಕ್ಕೆ ಏರಿಕೆ

ತಿರುವನಂತಪುರ: ಮಳೆರಾಯನ ಆರ್ಭಟಕ್ಕೆ ನೆರೆಯ ಕೇರಳ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಗುಡ್ಡ ಕುಸಿತ, ಪ್ರವಾಹದಿಂದಾಗಿ ಕೇರಳದವರ ಬದುಕು ಸರ್ವನಾಶವಾಗುತ್ತಿದ್ದು, ಮಳೆ ಸಂಬಂಧದ ಘಟನೆಗಳಲ್ಲಿ ಇದುವರೆಗೆ 26 ಮಂದಿ ಮೃತಪಟ್ಟಿದ್ದಾರೆ. ಕೊಟ್ಟಾಯಂನ ಕೊಟ್ಟಿಕ್ಕಲ್ ಒಂದರಲ್ಲೇ 11 ಜನ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಪೀರ್‍ಮೆಡ್ ಎಂಬಲ್ಲಿ ಅತ್ಯಧಿಕ 24 ಸೆಂಟಿ ಮೀಟರ್ ಮಳೆಯಾಗಿದ್ದರೆ … Continued

ಅಫ್ಘಾನಿಸ್ತಾನ ಶಾಂತಿ ಕುರಿತು ಚರ್ಚೆ : ಎನ್‌ಎಸ್‌ಎ ಸಭೆಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಭಾರತದ ಆಹ್ವಾನ

ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀಪಡಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಮತ್ತು ಪ್ರಾದೇಶಿಕ ಶಕ್ತಿಗಳ ಜತೆ ಚರ್ಚೆ ನಡೆಸಲು ಭಾರತ ಮುಂದಾಗಿದೆ. ಅಫ್ಘಾನಿಸ್ತಾನ ಭವಿಷ್ಯ ಎಂಬ ವಿಚಾರ ಕುರಿತು ನವೆಂಬರ್ ನಲ್ಲಿ ನವದೆಹಲಿಯಲ್ಲಿ ಪ್ರಾದೇಶಿಕ ಭದ್ರತಾ ಸಂವಾದ ನಡೆಸಲು ತೀರ್ಮಾನಿಸಲಾಗಿದ್ದು, ಈ ಮಹತ್ವಪೂರ್ಣ ಸಭೆಗೆ ರಷ್ಯಾ, ಚೀನಾ, ಇರಾನ್, ಪಾಕಿಸ್ತಾನ, … Continued

ಕೊರೊನಾ ಸಾಂಕ್ರಾಮಿಕ ರೋಗದ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಒಂದೂ ಕೋವಿಡ್ ಸಾವು ದಾಖಲಿಸದ ಮುಂಬೈ..!

ಮುಂಬೈ: ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕದ ಆರಂಭವಾದ ನಂತರ ಇದೇ ಮದಲ ಬಾರಿಗೆ ಮುಂಬೈ ಭಾನುವಾರ ಒಂದೇ ಒಂದು ಕೋವಿಡ್ -19 ಸಾವನ್ನು ದಾಖಲಿಸಲಿಲ್ಲ. ಟ್ವೀಟ್‌ನಲ್ಲಿ, ಮುಂಬೈ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಅವರು ಮಾರ್ಚ್ 26, 2020 ರ ನಂತರ ಇದೇ ಮೊದಲ ಬಾರಿಗೆ ಮುಂಬೈ ಭಾನುವಾರ ಕೊರೊನಾ ವೈರಸ್ಸಿನಿಂದ ಶೂನ್ಯ ಸಾವುಗಳನ್ನು ವರದಿ … Continued

ಭಾರತದ ತಂಡದ ಮಾಜಿ ಕ್ರಿಕೆಟ್‌ ಆಟಗಾರ ಯುವರಾಜ್ ಸಿಂಗ್ ಬಂಧನ; ವಿಚಾರಣೆ ಬಳಿಕ ಬಿಡುಗಡೆ

ಚಂಡೀಗಡ: ಪರಿಶಿಷ್ಟ ಜಾತಿ ಸಮುದಾಯವನ್ನು ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್‌ ತಂಡದ ಮಾಜಿ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರನ್ನು ಹರಿಯಾಣದ ಪೊಲೀಸರು ಇಲ್ಲಿ ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ಲೈವ್ ಚ್ಯಾಟಿಂಗ್ ಮಾಡುವ ವೇಳೆ ಪರಿಶಿಷ್ಟ ಜಾತಿಯ ಯುಜವೇಂದ್ರ ಚಹಲ್ ಅವರನ್ನ ಜಾತಿ ಕಾರಣಕ್ಕೆ … Continued

ಜ್ವರ, ಶೀತಕ್ಕೆ ಚಿಕಿತ್ಸೆ ನೀಡಲು 7 ತಿಂಗಳ ಮಗುವಿಗೆ ಕಬ್ಬಿಣದ ಸರಳಿಂದ ಬರೆ ಎಳೆದ ಮಾಂತ್ರಿಕ..!

ಜೈಪುರ: ಈವಿಜ್ಞಾನ ಹಾಗೂ ತಂತ್ರಜ್ಞಾನದ ಕಾಲದಲ್ಲಿಯೂ ಮೂಢ ನಂಬಿಕೆ ಅನುಸರಿಸುವವರೂ ಇದ್ದಾರೆ. ಇದಕ್ಕೆ ಉದಾಹರಣೆಯಾಗಿ ರಾಜಸ್ಥಾನದ ಭಿಲ್ವಾರಾದಲ್ಲಿ ಘಟನೆಯೊಂದು ನಡೆದಿದ್ದು, ತಾಂತ್ರಿಕನೊಬ್ಬ 7 ತಿಂಗಳ ಗಂಡು ಮಗುವಿಗೆ ಜ್ವರ ಮತ್ತು ಶೀತಕ್ಕೆ ಚಿಕಿತ್ಸೆ ನೀಡುವುದಾಗಿ ಹೇ ಬಿಸಿ ಕಬ್ಬಿಣ ರಾಡ್‌ನಿಂದ ಬರೆ ಎಳೆದಿದ್ದಾನೆ. ಭಿಲ್ವಾರಾದ ದಾದಾಬರಿ ಕಾಲೋನಿಯಲ್ಲಿ ಮಧ್ಯಪ್ರದೇಶದ ನೆಮಂಚ್ ಮೂಲದ ಕೂಲಿ ಕಾರ್ಮಿಕ ಶಂಭು … Continued

ಕಾಶ್ಮೀರದ ಕುಲ್ಗಾಂನಲ್ಲಿ ಮತ್ತೆ ಇಬ್ಬರು ಸ್ಥಳೀಯೇತರ ಕಾರ್ಮಿಕರ ಗುಂಡಿಕ್ಕಿ ಹತ್ಯೆ ಮಾಡಿದ ಭಯೋತ್ಪಾಕರು, ಎರಡು ದಿನಗಳಲ್ಲಿ ಮೂರನೇ ದಾಳಿ

ಕುಲಗಂ: : ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾನುವಾರ ಭಯೋತ್ಪಾದಕರು ಇಬ್ಬರು ಸ್ಥಳೀಯೇತರ ಕಾರ್ಮಿಕರನ್ನು ಗುಂಡು ಹೊಡೆದು ಕೊಂದಿದ್ದು, ಮತ್ತೊಬ್ಬನನ್ನು ಗಾಯಗೊಳಿಸಿದ್ದಾರೆ. ಕಾಶ್ಮೀರದಲ್ಲಿ ಕಳೆದ 15 ದಿನಗಳಲ್ಲಿ 11 ನಾಗರಿಕರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಕುಲ್ಗಾಂನ ಲಾರಾನ್ ಗಂಗಿಪೋರ ವನ್ಪೋಹ್ ನಲ್ಲಿ ಕಾರ್ಮಿಕರ ಬಾಡಿಗೆ ವಸತಿಗೃಹ ಪ್ರವೇಶಿಸದ ಬಂದೂಕುಧಾರಿಗಳು ಪ್ರವೇಶಿಸಿದರು ಮತ್ತು ಅವರ ಮೇಲೆ ಗುಂಡು … Continued