ಹೃದಯಾಘಾತದಿಂದ ದಕ್ಷಿಣ ಭಾರತದ ಖ್ಯಾತ ಹಾಸ್ಯನಟ ವಿವೇಕ ನಿಧನ

ಚೆನ್ನೈ: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ದಕ್ಷಿಣ ಭಾರತದ ಹಿರಿಯ ಹಾಸ್ಯನಟ ವಿವೇಕ್ ( 59 ವರ್ಷ) ಶನಿವಾರ ಬೆಳಿಗ್ಗೆ ಚೆನ್ನೈನಲ್ಲಿ ನಿಧನರಾದರು. ವಿಶೇಷವಾಗಿ ತಮಿಳು ಹಾಗೂ ತೆಲುಗು ಸೇರಿದಂತೆ 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ವಿವೇಕ್‌ ಶನಿವಾರ ಮುಂಜಾನೆ 4.35 ಕ್ಕೆ ಹೃದಯ ಸ್ತಂಭನದ ನಂತರ ನಿಧನರಾದರು. ವೈದ್ಯರ ಪ್ರಕಾರ, ನಟನಿಗೆ ಎಲ್ಎಡಿ … Continued

ಚೆಕ್‌ ಬೌನ್ಸ್‌ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕೇಂದ್ರಕ್ಕೆ ಸುಪ್ರಿಂ ಕೋರ್ಟ್‌ ನೊಟೀಸ್‌ ‌

ನವದೆಹಲಿ:ಚೆಕ್ ಬೌನ್ಸ್ ಕೇಸುಗಳ ಶೀಘ್ರ ವಿಲೇವಾರಿಗೆ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್, ಒಬ್ಬ ವ್ಯಕ್ತಿಯ ವಿರುದ್ಧ ಒಂದು ವರ್ಷದೊಳಗೆ ದಾಖಲಾಗುವ ಪ್ರಕರಣಗಳಲ್ಲಿ ವಿಚಾರಣೆಗಳನ್ನು ಒಟ್ಟುಗೂಡಿಸಿ ವಿಚಾರಣೆಗಳ ಶೀಘ್ರ ವಿಲೇವಾರಿ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಸಂಬಂಧ ಎಲ್ಲಾ ಹೈಕೋರ್ಟ್ ಗಳಿಗೆ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್, ಚೆಕ್ ಬೌನ್ಸ್ ಕೇಸುಗಳನ್ನು ನಿಭಾಯಿಸುವಂತೆ ವಿಚಾರಣಾಧೀನ … Continued

ಕೊರೊನಾ ಔಷಧಿ ರೆಮ್‌ಡಿಸಿವಿರ್‌ ಬೆಲೆ ಇಳಿಕೆ

ನವದೆಹಲಿ: ಕೊರೊನಾ ಪೀಡಿತರ ಚಿಕಿತ್ಸೆಗೆ ಬಳಕೆ ಮಾಡುವ “ರೆಮ್‌ಡಿಸಿವಿರ್‌ʼ ಔಷಧಿಯ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಸದಾನಂದಗೌಡ ತಿಳಿಸಿದ್ದಾರೆ. ಅವರು ಟ್ವೀಟ್‌ನಲ್ಲಿ, ಕೇಂದ್ರ ಸರಕಾರದ ಮಧ್ಯ ಪ್ರವೇಶದಿಂದಾಗಿ ರೆಮ್‌ಡಿಸಿವಿರ್‌ ಬೆಲೆಯನ್ನು ಎಪ್ರಿಲ್‌ ೧೫ರಿಂದ ಅನ್ವಯವಾಗುವಂತೆ ಉತ್ಪಾದಕರು ೫೪೦೦ರೂ.ಗಳಿಂದ ೩೫೦೦ಗಳಿಗೆ ಇಳಿಕೆ ಮಾಡಿದ್ದಾರೆ. ಇದರಿಂದ ಕೊವಿಡ್‌ ವಿರುದ್ಧದ ಪ್ರಧಾನಿ ಹೋರಾಟಕ್ಕೆ ಬೆಂಬಲ … Continued

ಈವೆರಗಿನ ಗರಿಷ್ಠ ದೈನಂದಿನ ಪ್ರಕರಣಕ್ಕೆ ಸಾಕ್ಷಿಯಾದ ಉತ್ತರ ಪ್ರದೇಶ..!

ಲಕ್ನೋ: ಉತ್ತರಪ್ರದೇಶದ ಕೊರೊನಾ ಎರಡನೇ ಅಲೆಗೆ ತತ್ತರಿಸುತ್ತಿದೆ. ಶುಕ್ರವಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದೈನಂದಿನ ಕೊರೊನಾ ಸೋಂಕು 27,426 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, 103 ಸಾವುಗಳು ವರದಿಯಾಗಿವೆ. ಶುಕ್ರವಾರದ ಸಕ್ರಿಯ ಪ್ರಕರಣಗಳ ಸಂಖ್ಯೆ ಗುರುವಾರ 22,439ಕ್ಕಿಂತ5,000 ಹೆಚ್ಚಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ರಾಜ್ಯದಾದ್ಯಂತ 1.5 ಲಕ್ಷ ದಾಟಿದೆ. ರಾಜ್ಯದ ರಾಜಧಾನಿ ಲಕ್ನೋ ಅತ್ಯಂತ … Continued

ದೇಶೀಯ ಕೋವಿಡ್‌ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಭಾರತ್ ಬಯೋಟೆಕ್‌ ಸೇರಿ ನಾಲ್ಕು ಸಂಸ್ಥೆಗಳಿಗೆ ಕೇಂದ್ರದಿಂದ ಆರ್ಥಿಕ ನೆರವು

ನವ ದೆಹಲಿ: ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಉತ್ಪಾದನೆ ಹೆಚ್ಚಿಸಲು ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಶುಕ್ರವಾರ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಮತ್ತು ಹ್ಯಾಫ್ಕೈನ್ ಬಯೋಫಾರ್ಮಾಸ್ಯುಟಿಕಲ್ ಕಾರ್ಪೊರೇಶನ್ ಲಿಮಿಟೆಡ್ ಸೇರಿದಂತೆ ನಾಲ್ಕು ಸಂಸ್ಥೆಗಳಿಗೆ ಆರ್ಥಿಕ ನೆರವು ಪ್ರಕಟಿಸಿದೆ. ಅನುದಾನದಲ್ಲಿ, ಲಸಿಕೆಯ ಸಹ-ಡೆವಲಪರ್ ಭಾರತ್ ಬಯೋಟೆಕ್ ತನ್ನ ಹೊಸ ಬೆಂಗಳೂರು ಸೌಲಭ್ಯವನ್ನು ಕೋವಾಕ್ಸಿನ್ … Continued

ಮಹಾರಾಷ್ಟ್ರದಲ್ಲಿ ಶುಕ್ರವಾರ ಈವರೆಗಿನ ಅತಿಹೆಚ್ಚು ದೈನಂದಿನ ಕೊರೊನಾ ಸೋಂಕು ದಾಖಲು..!

ಮುಂಬೈ: 63,729 ಹೊಸ ಕೋವಿಡ್‌ -19 ಪ್ರಕರಣಗಳೊಂದಿಗೆ, ಮಹಾರಾಷ್ಟ್ರವು ಶುಕ್ರವಾರ (ಏಪ್ರಿಲ್ 16) ಸಾಂಕ್ರಾಮಿಕ ರೋಗದ ನಂತರದ ಅತಿ ಹೆಚ್ಚು ಏಕದಿನ ಉಲ್ಬಣ ದಾಖಲಿಸಿದೆ. ಹಿಂದಿನ ಏಕದಿನ ಗರಿಷ್ಠ 63,294 ಆಗಿದ್ದು, ಇದು ಏಪ್ರಿಲ್ 11 ರಂದು ದಾಖಲಾಗಿತ್ತು. ಇದೇ ಅವಧಿಯಲ್ಲಿ 398 ಕೋವಿಡ್‌-19 ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 59,551 ಕ್ಕೆ ತಲುಪಿದೆ. ಈ … Continued

೧೮ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ : ಸುಪ್ರಿಂ ಕೋರ್ಟ್‌ಗೆ ಪಿಐಎಲ್‌

ನವ ದೆಹಲಿ: ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ೧೮ ವರ್ಷಗಳ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಹಾಕಬೇಕೆಂದು ನಿರ್ದೇಶಿಸುವಂತೆ ಸರ್ವೋಚ್ವ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಎಐಎಲ್‌) ಸಲ್ಲಿಸಲಾಗಿದೆ. ನ್ಯಾಯವಾದಿ ರಶ್ಮಿ ಸಿಂಗ್‌ ಅರ್ಜಿ ಸಲ್ಲಿಸಿದ್ದಾರೆ. ೧೮ರಿಂದ ೪೫ ವರ್ಷದವರಿಗೆ ಲಸಿಕೆ ನೀಡದಿರುವುದು ತಾರತಮ್ಯ ಹಾಗೂ ಅವಿವೇಕದ ಕ್ರಮವಾಗಿದೆ. ಅಲ್ಲದೇ ಸಮಾನತೆ ಹಾಗೂ ಜೀವಿಸುವ … Continued

ಗುಜರಾತ್‌ :ಕೊರೊನಾ ಸೋಂಕಿನಿಂದ ಜನಿಸಿದ್ದ 15 ದಿನದ ನವಜಾತ ಶಿಶು ಸಾವು..!!

ಸೂರತ್: ಗುಜರಾತಿನ ಸೂರತ್ ನಗರದ ಆಸ್ಪತ್ರೆಯೊಂದರಲ್ಲಿ ಕೋವಿಡ್-19 ಸೋಂಕಿತ ಮಹಿಳೆಗೆ ಜನಿಸಿದ 15 ದಿನದ ಹಸುಗೂಸು ಹೆಣ್ಣು ಮಗುವೊಂದು ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಏಪ್ರಿಲ್ 1ರಂದು ಕೋವಿಡ್‌ ಸೋಂಕಿನೊಂದಿಗೆ ಈ ಶಿಶು ಜನಿಸಿತ್ತು, ಆ ಮಗುವಿನ ತಾಯಿ ಕೂಡ ಸೋಂಕಿಗೆ ಒಳಗಾಗಿದ್ದರು ಎಂದು ಡೈಮಂಡ್ ಆಸ್ಪತ್ರೆಯ ಟ್ರಸ್ಟಿ ದಿನೇಶ್ ನವಾಡಿಯಾ ಹೇಳಿದ್ದಾರೆ. ಈ … Continued

ನೀರವ್ ಮೋದಿ ಭಾರತ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದ ಬ್ರಿಟನ್‌ : ಸಿಬಿಐ ಅಧಿಕಾರಿಗಳು

ಪರಾರಿಯಾದ ಬಿಲಿಯನೇರ್ ಮತ್ತು ವಜ್ರ ವ್ಯಾಪಾರಿ ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ‌ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಕ್ಲಿಯರ್‌ ಮಾಡಿದ್ದಾರೆ ಎಂದು ಸಿಬಿಐ ವರದಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ನೀರವ್ ಮೋದಿ ಮೇಲೆ 14,000 ಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಸಾಂಕ್ರಾಮಿಕ ಮತ್ತು … Continued

ಕೊರೊನಾ ಹೆಚ್ಚಳ: ಪುಣೆ ಟಾಟಾ ಮೋಟರ್ಸ್‌ನಲ್ಲಿ ಉತ್ಪಾದನೆ ಸ್ಥಗಿತಕ್ಕೆ ನಿರ್ಧಾರ..!

ಪುಣೆ: ಕೊರೊನಾ ೨ನೇ ಅಲೆ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುಣೆಯಲ್ಲಿರುವ ಟಾಟಾ ಮೋಟರ್ಸ್‌ ಘಟಕ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುಣೆಯ ಘಟಕದಲ್ಲಿ ಪ್ರಸ್ತುತ ಸೀಮಿತ ಸಂಖ್ಯೆಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪುಣೆ ಘಟಕದಲ್ಲಿ ಹ್ಯಾರಿಯರ್‌, ಸಫಾರಿ ಕಾರುಗಳ ಉತ್ಪಾದನೆಯಾಗುತ್ತಿದೆ. ಅಲ್ಲದೇ ಇದೇ ಘಟಕದಲ್ಲಿ ಟಾಟಾ ಬಸ್‌ ಹಾಗೂ … Continued