ಕರ್ನಾಟಕದ ವಿಧಾನಸಭೆ ಚುನಾವಣೆಗೆ ರಜೆ ಘೋಷಿಸಿದ ಗೋವಾ ಸರ್ಕಾರ

ಪಣಜಿ:ಪಣಜಿ: ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು ಅನುಕೂಲವಾಗುವಂತೆ ಗೋವಾದ ಬಿಜೆಪಿ ಸರ್ಕಾರವು ಖಾಸಗಿ ಸಂಸ್ಥೆಗಳು ಮತ್ತು ಕೈಗಾರಿಕಾ ಕಾರ್ಮಿಕರಿಗೆ ಮೇ 10 ರಂದು ವೇತನ ಸಹಿತ ರಜೆ ಘೋಷಿಸಿದೆ.. ಆದಾಗ್ಯೂ, ಪ್ರಮೋದ ಸಾವಂತ್ ಸರ್ಕಾರದ ನಿರ್ಧಾರಕ್ಕೆ ಗೋವಾದ ವಿರೋಧ ಪಕ್ಷಗಳು ಮತ್ತು ಉದ್ಯಮ ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿದೆ. ಗೋವಾ ರಾಜ್ಯ ಕೈಗಾರಿಕೆಗಳ ಸಂಘವು … Continued

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಡೀಸೆಲ್ ವಾಹಗಳನ್ನು ನಿಷೇಧಿಸಿ: ಸರ್ಕಾರಕ್ಕೆ ತೈಲ ಸಚಿವಾಲಯ ಸಮಿತಿ ಶಿಫಾರಸು

ನವದೆಹಲಿ: ಭಾರತವು 2027 ರ ವೇಳೆಗೆ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರ ವಾಹನಗಳ ಬಳಕೆಯನ್ನು ನಿಷೇಧಿಸಬೇಕು ಮತ್ತು ಎಲೆಕ್ಟ್ರಿಕ್ ಮತ್ತು ಅನಿಲ ಇಂಧನ ವಾಹನಗಳಿಗೆ ಬದಲಾಯಿಸಬೇಕು ಎಂದು ತೈಲ ಸಚಿವಾಲಯವು ನಿಯೋಜಿಸಿದ ಸಮಿತಿಯ ವರದಿ ಶಿಫಾರಸು ಮಾಡಿದೆ. ಮಾಜಿ ತೈಲ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ಸಮಿತಿಯ … Continued

ಮಣಿಪುರ ಹಿಂಸಾಚಾರದಲ್ಲಿ 60 ಮಂದಿ ಸಾವು, 231 ಮಂದಿಗೆ ಗಾಯ, 1,700 ಮನೆಗಳಿಗೆ ಬೆಂಕಿ: ಸಿಎಂ ಬಿರೇನ್ ಸಿಂಗ್

ಇಂಫಾಲ: ಮೇ 3 ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ 1,700 ಮನೆಗಳು ಸುಟ್ಟು ಭಸ್ಮವಾಗಿದ್ದು, ಮಹಿಳೆಯರು ಸೇರಿದಂತೆ ಕನಿಷ್ಠ 60 ಜನರು ಸಾವಿಗೀಡಾಗಿದ್ದಾರೆ ಮತ್ತು 231 ಜನರು ಗಾಯಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಸೋಮವಾರ ಹೇಳಿದ್ದಾರೆ. ರಾಜ್ಯ ರಾಜಧಾನಿ ಇಂಫಾಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪುರದ ಅಶಾಂತಿ “ಅತ್ಯಂತ ದುರದೃಷ್ಟಕರ” ಎಂದು ಬಣ್ಣಿಸಿದರು. … Continued

ಹಿಂಸಾಚಾರ ಪೀಡಿತ ಮಣಿಪುರದಿಂದ ಕೋಲ್ಕತ್ತಾಕ್ಕೆ ಪಯಣಿಸಲು ₹ 30,000ದ ವರೆಗೆ ಏರಿದ ವಿಮಾನ ಟಿಕೆಟ್‌ ದರ

ನವದೆಹಲಿ : ಮಣಿಪುರದ ಹಿಂಸಾಚಾರ ನಡುವೆ ಇಂಫಾಲ-ಕೋಲ್ಕತ್ತಾ ಮಾರ್ಗದ ವಿಮಾನ ಟಿಕೆಟ್ ದರವು ಸಾಮಾನ್ಯ ದರಕ್ಕಿಂತ ಸುಮಾರು 5-6 ಪಟ್ಟು ಏರಿಕೆಯಾಗಿದ್ದು, ಪ್ರತಿ ಟಿಕೆಟ್‌ಗೆ ₹ 20,000- 30,000ಕ್ಕೆ ತಲುಪಿದೆ ಎಂದು ವರದಿಯಾಗಿದೆ. ಇಂಡಿಯನ್ ಅಸೋಸಿಯೇಷನ್ ಆಫ್ ಟೂರ್ ಆಪರೇಟರ್ಸ್, ಪಶ್ಚಿಮ ಬಂಗಾಳ ಚಾಪ್ಟರ್‌ನ ಅಧ್ಯಕ್ಷ ದೇಬಜಿತ್ ದತ್ತಾ ಅವರು, “ಮಣಿಪುರದ ಪರಿಸ್ಥಿತಿಯು ಉದ್ವಿಗ್ನವಾಗಿರುವುದರಿಂದ ಮತ್ತು … Continued

‘ದಿ ಕೇರಳ ಸ್ಟೋರಿ’ ಸಿನೆಮಾ ನಿಷೇಧಕ್ಕೆ ಮುಂದಾದ ಪಶ್ಚಿಮ ಬಂಗಾಳ

ಕೋಲ್ಕತ್ತಾ: ವಿವಾದಾತ್ಮಕ ಚಿತ್ರ “ದಿ ಕೇರಳ ಸ್ಟೋರಿ”ಯನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅವರು ಈ ಸಿನೆಮಾ ಅಶಾಂತಿಯನ್ನು ಉಂಟುಮಾಡಬಹುದು ಎಂದು ವಾದಿಸಿದ್ದಾರೆ. “ಕಾಶ್ಮೀರ ಫೈಲ್‌ಗಳ ಮಾದರಿಯಲ್ಲಿ ಚಿತ್ರಕ್ಕೆ ಬಿಜೆಪಿ ಹಣ ನೀಡುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು, ಸೋಮವಾರ ರಾಜ್ಯ ಸಚಿವಾಲಯದಲ್ಲಿ ಚಲನಚಿತ್ರವನ್ನು ನಿಷೇಧಿಸುವ … Continued

ತಿಹಾರ್ ಜೈಲಿನೊಳಗೆ ಗ್ಯಾಂಗ್‌ಸ್ಟರ್ ಹತ್ಯೆ ಪ್ರಕರಣ : ತಮಿಳುನಾಡಿನ 7 ಪೊಲೀಸರ ಅಮಾನತು-ವರದಿ

ನವದೆಹಲಿ: ಮೇ 2 ರಂದು ತಿಹಾರ ಜೈಲಿನೊಳಗೆ ವಿರೋಧಿ ಗ್ಯಾಂಗ್‌ ಗ್ಯಾಂಗ್‌ಸ್ಟರ್ ತಿಲ್ಲು ತಾಜ್‌ಪುರಿಯ ಹತ್ಯೆಯ ಸಂದರ್ಭದಲ್ಲಿ ತಿಹಾರ್ ಜೈಲಿನಲ್ಲಿ ಕರ್ತವ್ಯದಲ್ಲಿದ್ದ ತಮಿಳುನಾಡು ವಿಶೇಷ ಪೊಲೀಸ್ (ಟಿಎನ್‌ಎಸ್‌ಪಿ) ನ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕೊಲೆ ನಡೆದಾಗ ಏನೂ ಮಾಡದೆ ಸುಮ್ಮನೆ ನಿಂತಿದ್ದರು ಎಂಬ ಕಾರಣಕ್ಕೆ ಅವರನ್ನು ತಮಿಳುನಾಡಿಗೆ ವಾಪಸ್ ಕಳುಹಿಸಲಾಗಿತ್ತು. ಎನ್‌ಡಿಟಿವಿ ಪ್ರಕಾರ, ದೆಹಲಿ … Continued

ಮನೆ ಮೇಲೆ ಬಿದ್ದ ಮಿಗ್-21 ಯುದ್ಧ ವಿಮಾನ : ಮೂವರು ಗ್ರಾಮಸ್ಥರು ಸಾವು, ಪೈಲಟ್ ಅಪಾಯದಿಂದ ಪಾರು

ಬಿಕಾನೇರ್/ನವದೆಹಲಿ : ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನವೊಂದು ಇಂದು, ಸೋಮವಾರ ರಾಜಸ್ಥಾನದ ಹಳ್ಳಿಯೊಂದರಲ್ಲಿ ಮನೆ ಮೇಲೆ ಬಿದ್ದ ಪರಿಣಾಮ ಮೂವರು ಸಾವಿಗೀಡಾಗಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಮೂವರೂ ಮಹಿಳೆಯರು ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನವು ಸೂರತ್‌ಗಢ ವಾಯುನೆಲೆಯಿಂದ ನಿತ್ಯದ ಹಾರಾಟಕ್ಕಾಗಿ ಟೇಕಾಫ್ ಆಗಿದ್ದು, ತಾಂತ್ರಿಕ ದೋಷದಿಂದಾಗಿ ರಾಜಸ್ಥಾನದ … Continued

ಕೇರಳದ ಪ್ರವಾಸಿ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ 22ಕ್ಕೆ ಏರಿಕೆ : ನಿಯಮಗಳ ಉಲ್ಲಂಘನೆ

ಮಲಪ್ಪುರಂ : ಕೇರಳದ ಮಲಪ್ಪುರಂ ಜಿಲ್ಲೆಯ ಕಡಲತೀರದ ಬಳಿ ಭಾನುವಾರ ಸಂಜೆ ಡಬಲ್ ಡೆಕ್ಕರ್ ದೋಣಿ ಮುಳುಗಿದ ದುರಂತದಲ್ಲಿ ಸಾವಿನ ಸಂಖ್ಯೆ 22ಕ್ಕೆ ಏರಿದೆ. ಏಳು ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಜಿಲ್ಲೆಯ ತಾನೂರ್ ಪ್ರದೇಶದ ತುವಲ್ತಿರಾಮ್ ಬೀಚ್ ಬಳಿ ಸಂಜೆ 7 ಗಂಟೆ ಸುಮಾರಿಗೆ ಈ … Continued

ಕೇರಳ: ತನೂರ್ ಒಟ್ಟುಪುರಂ ತೂವಲ್ ಕಡಲತೀರದಲ್ಲಿ ಪ್ರವಾಸಿಗರ ದೋಣಿ ನದಿಯಲ್ಲಿ ಮುಳುಗಿ 18 ಮಂದಿ ಸಾವು

ಮಲಪ್ಪುರಂ: ಮಲಪ್ಪುರಂ ಜಿಲ್ಲೆಯ ತನೂರ್‌ನಲ್ಲಿ ಒಟ್ಟುಪುರಂ ತೂವಲ್ ಬೀಚ್‌ನ ನದಿಯಲ್ಲಿ ಪ್ರವಾಸಿಗರ ದೋಣಿ ಮುಳುಗಿ 18 ಮಂದಿ ಸಾವಿಗೀಡಾದ ಘಟನೆ ಭಾನುವಾರ ಸಂಜೆ ನಡೆದಿದೆ. ಮೂಲಗಳ ಪ್ರಕಾರ, ಸುಮಾರು 40 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಸಂಜೆ 7:30 ರ ಸುಮಾರಿಗೆ ಜಾಯ್‌ರೈಡ್‌ನಲ್ಲಿ ಪಲ್ಟಿಯಾಗಿದೆ. ಸುಮಾರು 20 ಜನರನ್ನು ರಕ್ಷಿಸಲಾಗಿದ್ದು, 15 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತಪಟ್ಟವರಲ್ಲಿ … Continued

ಕಣ್ಮರೆಯಾಗುತ್ತಿರುವ ಶನಿಗ್ರಹದ ವಿಶಿಷ್ಟ ‘ಉಂಗುರ’….!

ಬಾಹ್ಯಾಕಾಶದಲ್ಲಿ ನಡೆಯುವ ಕುತೂಹಲಕಾರಿ ಸಂಗತಿ, ಅಪಾಯದ ಮುನ್ಸೂಚನೆಗಳನ್ನು ನೀಡುತ್ತಾರೆ. ಇದೀಗ ವಿಜ್ಞಾನಿಗಳು ಶನಿಗ್ರಹದ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಶನಿ ಗ್ರಹ ತನ್ನ ವಿಶಿಷ್ಟವಾದ ಉಂಗುರಗಳಿಂದಲೇ ಹೆಸರುವಾಸಿಯಾಗಿದೆ. ಆದರೆ ಈಗ ಶನಿ ಗ್ರಹದ ಉಂಗುರ ನಿಧಾನವಾಗಿ ಕಣ್ಮರೆಯಾಗುತ್ತಿವೆ ಎಂದು ವಿಜ್ಞಾನಿಗಳು ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.ಬೃಹದಾಕಾರದ ಮಂಜುಗಡ್ಡೆಯಿಂದ ರೂಪುಗೊಂಡಿರುವ ಶನಿ ಗ್ರಹದ ಉಂಗುರಗಳು ಸವೆಯುತ್ತಿದೆ. ಆ ಉಂಗುರಗಳು ಎಷ್ಟು … Continued