ಜೈಪುರ: ದೀಪಾವಳಿಗಾಗಿ ಹಸುವಿನ ಸಗಣಿಯಿಂದ 3 ಲಕ್ಷಕ್ಕೂ ಹೆಚ್ಚು ದೀಪಗಳ ತಯಾರಿಕೆ

ಜೈಪುರ: ದೀಪಾವಳಿ ಪ್ರಯುಕ್ತ ‘ಶ್ರೀ ಕೃಷ್ಣ ಬಲರಾಮ ಗೋ ಸೇವಾ ಟ್ರಸ್ಟ್‌’ ಹಸುವಿನ ಸಗಣಿ ಬಳಸಿ ಸುಮಾರು 3 ಲಕ್ಷಕ್ಕೂ ಹೆಚ್ಚಿನ ದೀಪಗಳನ್ನು ತಯಾರಿಸಿದೆ ಎಂದು ಸಂಸ್ಥೆಯ ವಕ್ತಾರೊಬ್ಬರು ತಿಳಿಸಿದ್ದಾರೆ. ದೀಪಗಳನ್ನು ತಯಾರಿಸಲು ಬೇಕಾದ ಸಗಣಿಯನ್ನು ಹಿಂಗೋನಿಯಾ ಗೋಶಾಲೆಯಿಂದ ತರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. 2016 ರಲ್ಲಿ ರಾಜಸ್ಥಾನ ಸರ್ಕಾರ ಮತ್ತು ಜೈಪುರ ಮಹಾನಗರ ಪಾಲಿಕೆಯು … Continued

ವಿಶ್ವಕಪ್‌ 2023 : ನೆದರ್ಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ರೋಹಿತ ಶರ್ಮಾ

ನವದೆಹಲಿ: ಭಾರತದ ನಾಯಕ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಆಟಗಾರನಾಗಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. 36ರ ಹರೆಯದ ಶರ್ಮಾ ಅವರು ವಿಶ್ವಕಪ್ ನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯಾವಳಿಯ 9 ನೇ ಹಣಾಹಣಿಯಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದರು. ಆರಂಭಿಕ ಆಟಗಾರನಾಗಿ ರೋಹಿತ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14000 ರನ್ ಗಳಿಸಿದ … Continued

ಉತ್ತರಾಖಂಡ; ಸುರಂಗ ಕುಸಿತ, 40 ಕಾರ್ಮಿಕರು ಒಳಗೆ ಸಿಲುಕಿರುವ ಶಂಕೆ

ಉತ್ತರಕಾಶಿ : ಉತ್ತರಾಖಂಡ ರಾಜ್ಯದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತಗೊಂಡಿದೆ. ಸುರಂಗ ಮಾರ್ಗ ಕಾಮಗಾರಿಯಲ್ಲಿ ತೊಡಗಿದ್ದ ಸುಮಾರು 40 ಕಾರ್ಮಿಕರು ಅದರ ಒಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕಾರ್ಮಿಕರನ್ನು ರಕ್ಷಣೆ ಮಾಡಲು ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಉತ್ತರಕಾಶಿಯಲ್ಲಿ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತಿತ್ತು. ಭಾನುವಾರ ಮುಂಜಾನೆ ಈ ಸುರಂಗ ಮಾರ್ಗದ ಒಂದು … Continued

ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲಿ ವಸಾಹತು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಮತ ಚಲಾಯಿಸಿದ ಭಾರತ

ನವದೆಹಲಿ: ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ವಸಾಹತುಗಳನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ. “ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರಾಂತ್ಯದಲ್ಲಿ ಮತ್ತು ಆಕ್ರಮಿತ ಸಿರಿಯನ್ ಗೋಲನ್‌ನಲ್ಲಿ” ವಸಾಹತು ಚಟುವಟಿಕೆಗಳನ್ನು ಖಂಡಿಸುವ ನಿರ್ಣಯವನ್ನು ಗುರುವಾರ ಅಂಗೀಕರಿಸಲಾಯಿತು. ಇದನ್ನು ವಿರೋಧಿಸಿದ ಏಳು ದೇಶಗಳಲ್ಲಿ ಅಮೆರಿಕ ಮತ್ತು ಕೆನಡಾ ಸೇರಿವೆ. ಹದಿನೆಂಟು ದೇಶಗಳು ಮತದಾನದಿಂದ ದೂರ ಉಳಿದವು. … Continued

ಐಸಿಸ್ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದೊಂದಿಗೆ ನಂಟು ಹೊಂದಿರುವ 4 ಮಂದಿ ಬಂಧನ

ನವದೆಹಲಿ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಉತ್ತರ ಪ್ರದೇಶದ ವಿವಿಧ ಭಾಗಗಳಿಂದ ಆರು ಶಂಕಿತ ಐಸಿಸ್ ಕಾರ್ಯಕರ್ತರನ್ನು ಬಂಧಿಸಿದೆ. ಆರು ಮಂದಿಯಲ್ಲಿ ನಾಲ್ವರನ್ನು ರಕೀಬ್ ಇನಾಮ್, ನಾವೇದ್ ಸಿದ್ದಿಕಿ, ಮೊಹಮ್ಮದ್ ನೋಮನ್ ಮತ್ತು ಮೊಹಮ್ಮದ್ ನಾಜಿಮ್ ಎಂದು ಗುರುತಿಸಲಾಗಿದೆ. ಎಲ್ಲಾ ಬಂಧಿತ ಆರೋಪಿಗಳು ಅಲಿಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆ(SAMU)ಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅಲಿಗಢ … Continued

ವೀಡಿಯೊ.: ತೆಲಂಗಾಣದಲ್ಲಿ ಪ್ರಧಾನಿ ರ‍್ಯಾಲಿಯಲ್ಲಿ ಲೈಟ್‌ ಟವರ್ ಏರಿದ ಮಹಿಳೆ ; ಭಾಷಣದ ಮಧ್ಯೆ ಗಮನಿಸಿ ʼಮಗಳೇ ಕೆಳಗೆ ಇಳಿʼ ಎಂದು ಪದೇ ಪದೇ ಮನವಿ ಮಾಡಿದ ಮೋದಿ | ವೀಕ್ಷಿಸಿ

ಹೈದರಾಬಾದ್‌ : ಶನಿವಾರ ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ, ಮಹಿಳೆಯೊಬ್ಬರು ಅವರ ಗಮನ ಸೆಳೆಯಲು ಮತ್ತು ತನ್ನ ಸಮಸ್ಯೆಗಳ ಬಗ್ಗೆ ಮಾತನಾಡಲು ಲೈಟ್ ಟವರ್ ಅನ್ನು ಏರಿದ್ದರು. ಭಾಷಣ ಮಾಡುತ್ತಿರುವಾಗ ಟವರ್‌ ಏರಿದ ಮಹಿಳೆಯನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಟವರ್‌ನಿಂದ ಕೆಳಗೆ ಬರುವಂತೆ ಮನವಿ ಮಾಡಿದರು. ವೀಡಿಯೊದಲ್ಲಿ ಮಹಿಳೆ ಎತ್ತರದ … Continued

ತನ್ನದೇ ವಿಶ್ವ ದಾಖಲೆ ಮುರಿದ ಅಯೋಧ್ಯೆ : ದೀಪಾವಳಿ ಮುನ್ನಾದಿನ ಏಕಕಾಲದಲ್ಲಿ ಬೆಳಗಿದ 22 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆ ದೀಪಗಳು

ಅಯೋಧ್ಯೆ: ದೀಪಾವಳಿ ಆಚರಣೆಯ ಅಂಗವಾಗಿ 22,23, 000 ದೀಪಗಳನ್ನು (ಮಣ್ಣಿನ ಹಣಣೆ ದೀಪಗಳು) ಬೆಳಗಿಸಿದ ನಂತರ ಅಯೋಧ್ಯೆಯಲ್ಲಿ ದೀಪಾಳಿಯ ದೀಪೋತ್ಸವವು ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ವಿಶ್ವದಾಖಲೆ ಮಾಡಿದೆ. ದೀಪೋತ್ಸವದ ಸಮಯದಲ್ಲಿ, ರಾಮ್ ಕಿ ಪೈರಿಯಲ್ಲಿ 24 ಲಕ್ಷ ‘ದಿಯಾಗಳು’ (ಮಣ್ಣಿನ ದೀಪಗಳು) ಬೆಳಗಿವೆ. ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅಭೂತಪೂರ್ವ ಸಂಖ್ಯೆಯ ದೀಪಗಳನ್ನು ಬೆಳಗಿಸುವ … Continued

ಕ್ರಿಕೆಟ್ ವಿಶ್ವಕಪ್ 2023 : ಸೆಮಿಫೈನಲ್‌ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್‌ ಎದುರಾಳಿ

ನವದೆಹಲಿ: ಈಗ ದೃಢೀಕರಿಸಲ್ಪಟ್ಟಿದೆ..! ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಗುರುವಾರ ಈಡನ್‌ ಗಾರ್ಡನ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇಂಗ್ಲೆಂಡ್ ವಿರುದ್ಧ 6.4 ಓವರ್‌ಗಳಲ್ಲಿ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ವಿಫಲವಾದ ನಂತರ ಬಾಬರ್ ಅಜಮ್ … Continued

ಉದ್ಯೋಗಕ್ಕಾಗಿ ಭೂ ಹಗರಣ: ಲಾಲು ಕುಟುಂಬದ ಆಪ್ತನನ್ನು ಬಂಧಿಸಿದ ಇ.ಡಿ.

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ಅವರ ಸಹಚರನನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ಶನಿವಾರ (ನವೆಂಬರ್ 11) ತಿಳಿಸಿವೆ. ‘ಸಹವರ್ತಿ’ ಅಮಿತ್ ಕತ್ಯಾಲ್ ಅವರನ್ನು ಶುಕ್ರವಾರ ಕೇಂದ್ರೀಯ … Continued

ಸೂರತ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ : ಓರ್ವ ಸಾವು, ಹಲವರಿಗೆ ಗಾಯ

ಸೂರತ್ : ಗುಜರಾತ್‌ನ ಸೂರತ್ ರೈಲು ನಿಲ್ದಾಣದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ದೀಪಾವಳಿಗೆ ತಮ್ಮ ಊರುಗಳಿಗೆ ತೆರಳುವ ಅಪಾರ ಸಂಖ್ಯೆಯ ಜನರು ವಿವಿಧ ರಾಜ್ಯಗಳಿಗೆ ತೆರಳಲು ನಿಲ್ದಾಣದಲ್ಲಿ ಜಮಾಯಿಸಿದ್ದರು. ರೈಲು ಹತ್ತುವಾಗ ಕಾಲ್ತುಳಿತ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಪ್ರಜ್ಞೆ ತಪ್ಪಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ … Continued