156 ದೇಶಗಳಿಗೆ ಮಾನ್ಯವಾದ ಇ-ವೀಸಾ ಮರುಸ್ಥಾಪಿಸಿದ ಭಾರತ; ಎಲ್ಲರಿಗೂ ನಿಯಮಿತ ವೀಸಾಗಳು

ನವದೆಹಲಿ: ಅಮಾನತುಗೊಂಡ ಎರಡು ವರ್ಷಗಳ ನಂತರ 156 ದೇಶಗಳ ನಾಗರಿಕರಿಗೆ ಪ್ರಸ್ತುತ ಮಾನ್ಯವಾಗಿರುವ ಐದು ವರ್ಷಗಳ ಇ-ಟೂರಿಸ್ಟ ವೀಸಾ ಮತ್ತು ಎಲ್ಲ ದೇಶಗಳ ಪ್ರಜೆಗಳಿಗೆ ನಿಯಮಿತ ಪೇಪರ್ ವೀಸಾವನ್ನು ಭಾರತವು ತಕ್ಷಣವೇ ಜಾರಿಗೆ ತರಲಿದೆ. ಅಮೆರಿಕ ಮತ್ತು ಜಪಾನಿನ ಪ್ರಜೆಗಳಿಗೆ ತಾಜಾ ದೀರ್ಘಾವಧಿಯ (10 ವರ್ಷ) ಪ್ರವಾಸಿ ವೀಸಾವನ್ನು ಸಹ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. … Continued

ಶ್ರೀನಗರದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿ; ಮುಂದುವರಿದ ಕಾರ್ಯಾಚರಣೆ ನಿನ್ನೆ ಜಮ್ಮು-ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ ಕೂಡ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಅದರಲ್ಲಿ ಜೈಶ್​ ಇ ಮೊಹಮ್ಮದ್​ ಸಂಘಟನೆಯ ಉಗ್ರನೊಬ್ಬನನ್ನು ಹತ್ಯೆ ಶ್ರೀನಗರದ ನೌಗಮ್​​ ಪ್ರದೇಶದಲ್ಲಿ ಇಂದು, ಬುಧವಾರ ಭದ್ರತಾ ಪಡೆ ಸಿಬ್ಬಂದಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. … Continued

ಮುಸ್ಲಿಂ ಹುಡುಗಿಯರನ್ನು ಇನ್ನು ಮುಂದೆ ನಿರ್ಬಂಧಿಸಲಾಗುವುದಿಲ್ಲ: ಹಿಜಾಬ್ ತೀರ್ಪನ್ನು ಶ್ಲಾಘಿಸಿದ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಇಸ್ಲಾಮಿಕ್ ನಂಬಿಕೆಯಲ್ಲಿ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸ್ವಾಗತಿಸಿದ್ದಾರೆ. ಮುಸ್ಲಿಂ ಯುವತಿಯರನ್ನು ಮನೆಯ ನಾಲ್ಕು ಗೋಡೆಗಳ ಮಧ್ಯೆ ತಳ್ಳುವ ಇಂತಹ ನಿರಂತರ ಪ್ರಯತ್ನಗಳು ವಿಫಲವಾಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿ … Continued

12-14 ವರ್ಷದೊಳಗಿನ 4.71 ಕೋಟಿ ಮಕ್ಕಳಿಗೆ ಇಂದಿನಿಂದ ಕೋವಿಡ್‌ ಲಸಿಕೆ ನೀಡುವುದು ಆರಂಭ

ನವದೆಹಲಿ: 12ರಿಂದ 14 ವರ್ಷ ವಯಸ್ಸಿನ ಅಂದಾಜು 4.71 ಕೋಟಿ ಮಕ್ಕಳಿಗೆ ಬುಧವಾರದಿಂದ ಲಸಿಕೆ ನೀಡಲಾಗುತ್ತಿದ್ದು, 60 ವರ್ಷಕ್ಕಿಂತ ಮೇಲ್ಪಟ್ಟ 13.75 ಕೋಟಿ ಜನರು ತಮ್ಮ ಬೂಸ್ಟರ್ ಶಾಟ್‌ಗಳಿಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. ಭಾರತದಲ್ಲಿ ಶಾಲೆಗಳು ಪ್ರಾರಂಭವಾಗುತ್ತಿದ್ದಂತೆ 12ರಿಂದ14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಬಹು ನಿರೀಕ್ಷಿತ ನಿರ್ಧಾರವನ್ನು ಸೋಮವಾರ ಪ್ರಕಟಿಸಿದ … Continued

ರಿಯಾಯ್ತಿ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಭಾರತದಿಂದ ಮಾತುಕತೆ

ನವದೆಹಲಿ: ರಷ್ಯಾ ಕಚ್ಚಾ ತೈಲವನ್ನು ಖರೀದಿಸಲು ಭಾರತವು ಆಯ್ಕೆಗಳನ್ನು ಅನ್ವೇಷಿಸುತ್ತಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ. ಉಕ್ರೇನ್ ಸಂಘರ್ಷಕ್ಕೆ ಜಾಗತಿಕ ಹಿನ್ನಡೆಯ ಹಿನ್ನೆಲೆಯಲ್ಲಿ ಬೆಲೆಗಳು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ನವ ದೆಹಲಿಯು ಮಾಸ್ಕೋದೊಂದಿಗೆ ಐತಿಹಾಸಿಕ ರಾಜತಾಂತ್ರಿಕ ಮತ್ತು ರಕ್ಷಣಾ ಸಂಬಂಧಗಳನ್ನು ಹೊಂದಿದೆ, ಕಳೆದ ವರ್ಷದ ಕೊನೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಅಪರೂಪದ ಸಾಗರೋತ್ತರ … Continued

ಒಬ್ಬ ಬಿಹಾರಿ, ನೂರು ರೋಗಗಳಿಗೆ ಸಮ: ವಿವಾದಕ್ಕೆ ಕಾರಣವಾದ ಟಿಎಂಸಿ ನಾಯಕನ ವೈರಲ್‌ ವೀಡಿಯೊದಲ್ಲಿನ ಹೇಳಿಕೆ..!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌(TMC) ಪಕ್ಷದ ನಾಯಕರೊಬ್ಬರು ಸಾರ್ವಜನಿಕ ಸಭೆಯೊಂದರಲ್ಲಿ ಬಿಹಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾತನಾಡಿರುವುದು ಊಈಗ ವಿವಾದಕ್ಕೆ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ ಶಾಸಕ ಮನೋರಂಜನ್ ಬೈಪಾರಿ ಅವರು ಬಿಹಾರದ ಜನರನ್ನು “ಬಿಮಾರಿ” ಅಥವಾ ರೋಗಿಗಳು ಎಂದು ಕರೆದಿದ್ದಾರೆ. ಹಾಗೂ ಬಂಗಾಳವನ್ನು “ರೋಗ ಮುಕ್ತ” ರಾಜ್ಯ … Continued

ಚುನಾವಣಾ ಸೋಲಿನ ನಂತರ ಐದು ರಾಜ್ಯಗಳ ಕಾಂಗ್ರೆಸ್ ಮುಖ್ಯಸ್ಥರಿಗೆ ರಾಜೀನಾಮೆಗೆ ಸೂಚಿಸಿದ ಸೋನಿಯಾ ಗಾಂಧಿ

ನವದೆಹಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ರಾಜ್ಯ ಚುನಾವಣೆಯಲ್ಲಿ ಸೋಲಿನ ನಂತರ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚುನಾವಣೆ ನಡೆದ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳ ಮುಖ್ಯಸ್ಥರಿಗೆ ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ, ಸೋನಿಯಾ ಗಾಂಧಿ ಅವರು, ಪ್ರದೇಶ ಕಾಂಗ್ರೆಸ್‌ ಸಮಿತಿಗಳ ಮರುಸಂಘಟನೆಗೆ ಅನುಕೂಲವಾಗುವಂತೆ ಉತ್ತರ … Continued

ಹಿಜಾಬ್ ನಿಷೇಧ: ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ನವದೆಹಲಿ: ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಂಗಳವಾರ, ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠವು ರಾಜ್ಯದ ಉಡುಪಿಯ ಪದವಿಪೂರ್ವ ಕಾಲೇಜುಗಳ ಮುಸ್ಲಿಂ ಹುಡುಗಿಯರು ತರಗತಿಯೊಳಗೆ ಸಮವಸ್ತ್ರದೊಂದಿಗೆ ಹಿಜಾಬ್ ಅಥವಾ ಶಿರಸ್ತ್ರಾಣವನ್ನು ಧರಿಸುವ … Continued

ಗುಜರಾತ್:‌ ವಿಷಾಹಾರ ಸೇವಿಸಿ 116 ಹಸುಗಳು ಸಾವು-ವಿಧಾನಸಭೆಗೆ ಸರ್ಕಾರದಿಂದ ಮಾಹಿತಿ

ಗಾಂಧಿನಗರ (ಗುಜರಾತ): ಹದಿನೈದು ದಿನಗಳ ಹಿಂದೆ ಸಬರಕಾಂತ ಜಿಲ್ಲೆಯ ಇದಾರ್‌ನ ಪಂಜ್‌ಪೋಲ್‌ನಲ್ಲಿ ವಿಷ ಸೇವಿಸಿ 116 ಹಸುಗಳು ಮೃತಪಟ್ಟಿವೆ ಎಂದು ರಾಜ್ಯ ಸರ್ಕಾರ ಸೋಮವಾರ ವಿಧಾನಸಭೆಗೆ ತಿಳಿಸಿದೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಮ್‌ ವರದಿ ಮಾಡಿದೆ. ಗುಜರಾತ್ ವಿಧಾನಸಭೆಯ ನಿಯಮ 116 ರ ಅಡಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ರಾಜೇಂದ್ರ ಸಿಂಗ್ ಠಾಕೂರ್, … Continued

12-14 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆಗೆ ಮಾರ್ಗಸೂಚಿಗಳು ಬಿಡುಗಡೆ

ನವದೆಹಲಿ: ಮಾರ್ಚ್ 16 ರಿಂದ ಪ್ರಾರಂಭವಾಗುವ 12-14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್‌-19 ಲಸಿಕೆಗಾಗಿ ಮಾರ್ಗಸೂಚಿಗಳನ್ನು ಕೇಂದ್ರವು ಮಂಗಳವಾರ ಬಿಡುಗಡೆ ಮಾಡಿದೆ ಮತ್ತು ಈ ವಯಸ್ಸಿನ ಫಲಾನುಭವಿಗಳಿಗೆ ಕಾರ್ಬೆವಾಕ್ಸ್ ಲಸಿಕೆಯನ್ನು ಮಾತ್ರ ಬಳಸಲಾಗುತ್ತದೆ ಎಂದು ಹೇಳಿದೆ. 28 ದಿನಗಳ ಮಧ್ಯಂತರದಲ್ಲಿ 12-14 ವರ್ಷ ವಯಸ್ಸಿನ ಫಲಾನುಭವಿಗಳಿಗೆ ಎರಡು ಡೋಸ್ ಬಯೋಲಾಜಿಕಲ್‌ ಇ ಇಂಟ್ರಾಮಸ್ಕುಲರ್ ಲಸಿಕೆ ಕಾರ್ಬೆವಾಕ್ಸ್ ಅನ್ನು … Continued