ಮಹಿಳೆ ‘ಲೈಂಗಿಕವಾಗಿ ಪ್ರಚೋದನಕಾರಿ’ ಉಡುಗೆ ತೊಟ್ಟಾಗ ಲೈಂಗಿಕ ಕಿರುಕುಳ ಆರೋಪ ಪ್ರಾಥಮಿಕವಾಗಿ ನಿಲ್ಲುವುದಿಲ್ಲ: ಕೇರಳ ಕೋರ್ಟ್

ಕೋಝಿಕ್ಕೋಡ್: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಮಹಿಳೆಯೊಬ್ಬರು “ಲೈಂಗಿಕ ಪ್ರಚೋದನಕಾರಿ” ಉಡುಗೆ ತೊಟ್ಟಿದ್ದರೆ ಮೇಲ್ನೋಟಕ್ಕೆ ಪ್ರಾಥಮಿಕವಾಗಿ ನಿಲ್ಲುವುದಿಲ್ಲ ಎಂದು ಕೇರಳ ಕೋರ್ಟ್ ಬುಧವಾರ ಹೇಳಿದೆ. ಸಾಮಾಜಿಕ ಕಾರ್ಯಕರ್ತ ಮತ್ತು ಲೇಖಕ, ಚಂದ್ರನ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪವಿದೆ. ದೂರುದಾರ ಮಹಿಳೆ ಯುವ ಬರಹಗಾರ್ತಿ, ಫೆಬ್ರವರಿ 8, 2020 ರಂದು … Continued

ಯಡಿಯೂರಪ್ಪಗೆ ಬಿಜೆಪಿಯಲ್ಲಿ ಉನ್ನತ ಸ್ಥಾನ, ಸಂಸದೀಯ ಮಂಡಳಿಗೆ ಸೇರ್ಪಡೆ: ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್ ಹೊರಕ್ಕೆ

ನವದೆಹಲಿ: ಪ್ರಮುಖ ಪುನರ್ರಚನೆಯಲ್ಲಿ, ಬಿಜೆಪಿ ಬುಧವಾರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಸರ್ಬಾನಂದ ಸೋನೋವಾಲ್ ಅವರಿಗೆ  ಪಕ್ಷದ ನಿರ್ಧಾರ ತೆಗೆದುಕೊಳ್ಳುವ ಉನ್ನತ ಸಮಿತಿಯಾದ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ. ಸಂಸದೀಯ ಮಂಡಳಿಯು ಬಿಜೆಪಿಯ ಉನ್ನತ … Continued

ಅಪಹರಣ ಪ್ರಕರಣದ ಆರೋಪಿ ಬಿಹಾರದ ನೂತನ ಕಾನೂನು ಸಚಿವರಿಗೆ ಬಂಧನದ ಭೀತಿ. ತನಗೆ ಇದು ಗೊತ್ತಿಲ್ಲ ಎಂದ ಸಿಎಂ ನಿತೀಶಕುಮಾರ್

ಪಾಟ್ನಾ: ನಿತೀಶ್ ಕುಮಾರ್ ಅವರ ನೂತನ ಕಾನೂನು ಸಚಿವ ಕಾರ್ತಿಕೇಯ ಸಿಂಗ್ ಅವರು ಅಪಹರಣ ಪ್ರಕರಣದಲ್ಲಿ ಬಂಧನದ ವಾರಂಟ್ ಎದುರಿಸುತ್ತಿದ್ದಾರೆ. ಆದರೆ, ಬಿಹಾರ ಮುಖ್ಯಮಂತ್ರಿ ಅಂತಹ ಯಾವುದೇ ಪ್ರಕರಣದ ಬಗ್ಗೆ ನನಗೆ ತಿಳಿದಿಲ್ಲ ಎಂದು ಇಂದು, ಬುಧವಾರ ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಪಕ್ಷಕ್ಕೆ ಸೇರಿದ ಕಾರ್ತಿಕೇಯ ಸಿಂಗ್ ವಿರುದ್ಧ ವಾರೆಂಟ್ ಕುರಿತು ಸುದ್ದಿಗಾರರು … Continued

ಪನ್ನೀರಸೆಲ್ವಂ ಪರವಾಗಿ ಮದ್ರಾಸ್ ಹೈಕೋರ್ಟ್ ತೀರ್ಪು, ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆ ನಡೆಸಲು ಆದೇಶ

ಚೆನ್ನೈ: ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸಾಮಾನ್ಯ ಮಂಡಳಿ ಸಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್, ಓ ಪನ್ನೀರಸೆಲ್ವಂ (ಒಪಿಎಸ್) ಪರವಾಗಿ ತೀರ್ಪು ನೀಡಿದೆ. ಜಸ್ಟಿಸ್ ಜಿ ಜಯಚಂದ್ರನ್ ಅವರು ಜೂನ್ 23ರಂತೆಯೇ ಎಐಎಡಿಎಂಕೆ ಯಥಾಸ್ಥಿತಿ ಮುಂದುವರಿಯುತ್ತದೆ ಎಂದು ತೀರ್ಪು ನೀಡಿದರು ಹಾಗೂ ಅವರು ಹೊಸದಾಗಿ ಸಾಮಾನ್ಯ ಮಂಡಳಿ ಸಭೆ ನಡೆಸಲು … Continued

ನಮ್ಮ ದೇಶದ ನಾಗರಿಕರಿಗೆ ಉತ್ತಮವಾದದ್ದನ್ನು ಖಚಿತಪಡಿಸುವುದು ನನ್ನ ನೈತಿಕ ಕರ್ತವ್ಯ: ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ ಪ್ರತಿಕ್ರಿಯೆ

ನವದೆಹಲಿ: ಭಾರತೀಯರಿಗೆ ತೈಲಕ್ಕೆ ಹೆಚ್ಚಿನ ಬೆಲೆಯನ್ನು ಪಾವತಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ದೇಶವು ರಷ್ಯಾದೊಂದಿಗೆ ಕಚ್ಚಾ ತೈಲ ಒಪ್ಪಂದಗಳನ್ನು ಮುಂದುವರೆಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಹೇಳಿದ್ದಾರೆ. ನಾವು ನಮ್ಮ ಹಿತಾಸಕ್ತಿಗಳ ಬಗ್ಗೆ ತುಂಬಾ ಮುಕ್ತವಾಗಿದ್ದೇವೆ ಮತ್ತು ಪ್ರಾಮಾಣಿಕರಾಗಿದ್ದೇವೆ. ನಾನು 2000 ಅಮೆರಿಕನ್‌ ಡಾಲರ್‌ ತಲಾ ಆದಾಯ ಹೊಂದಿರುವ ದೇಶವನ್ನು ಪ್ರತಿನಿಧಿಸಿದ್ದೇನೆ. ಇವರು ಹೆಚ್ಚಿನ … Continued

200 ಕೋಟಿ ಸುಲಿಗೆ ಪ್ರಕರಣದಲ್ಲಿ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆರೋಪಿ ಎಂದು ಹೆಸರಿಸಿದ ಇ.ಡಿ

ನವದೆಹಲಿ: ₹ 200 ಕೋಟಿ ಮೊತ್ತದ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ. ಸುಲಿಗೆ ಪ್ರಕರಣದ ಹಣದ ಜಾಡು ಹಿಡಿದು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ಈ ನಟಿಯನ್ನು … Continued

ಸೋಲಾರ್ ಹಗರಣದ ಲೈಂಗಿಕ ಕಿರುಕುಳ ಪ್ರಕರಣ: ಕಾಂಗ್ರೆಸ್‌ ನಾಯಕ ಕೆ.ಸಿ. ವೇಣುಗೋಪಾಲ್ ಪ್ರಶ್ನಿಸಿದ ಸಿಬಿಐ

ನವದೆಹಲಿ: ಕೇರಳದ 2012ರ ಸೋಲಾರ್ ಹಗರಣ ಪ್ರಕರಣದ ಪ್ರಮುಖ ಆರೋಪಿಯ ಲೈಂಗಿಕ ಶೋಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ), ವಿಚಾರಣೆಗೆ ಒಳಪಡಿಸಿದೆ. ಸಿಬಿಐ ಮೂಲಗಳ ಪ್ರಕಾರ, ಕಳೆದ ವಾರ ಕಾಂಗ್ರೆಸ್ ನಾಯಕನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ತನಿಖಾ ಸಂಸ್ಥೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. … Continued

ಜಮ್ಮುವಿನ ಮನೆಯಲ್ಲಿ ಕುಟುಂಬದ ಆರು ಮಂದಿ ಶವವಾಗಿ ಪತ್ತೆ

ಜಮ್ಮು: ಬುಧವಾರ ಬೆಳಗ್ಗೆ ಜಮ್ಮುವಿನ ಸಿಂಧ್ರಾ ಪ್ರದೇಶದ ತಮ್ಮ ಮನೆಯಲ್ಲಿ ತಾಯಿ ಮತ್ತು ಅವರ ಹೆಣ್ಣುಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರನ್ನು ಸಕೀನಾ ಬೇಗಂ, ಅವರ ಪುತ್ರಿಯರಾದ ನಸೀಮಾ ಅಖ್ತರ್ ಮತ್ತು ರುಬಿನಾ ಬಾನೋ, ಮಗ … Continued

ದೆಹಲಿ: ಕೋವಿಡ್‌ ಸಕಾರಾತ್ಮಕತೆ ದರ 20%ರ ಸಮೀಪ, ಆಸ್ಪತ್ರೆಗೆ ದಾಖಲಾದವರಲ್ಲಿ 90% ರಷ್ಟು ರೋಗಿಗಳು ಬೂಸ್ಟರ್ ಡೋಸ್‌ ಪಡೆದಿಲ್ಲ

ನವದೆಹಲಿ: ಕೋವಿಡ್-19 ಪ್ರಕರಣಗಳಲ್ಲಿ ಹೆಚ್ಚಳ ಮತ್ತು ಸಕಾರಾತ್ಮಕತೆಯ ಪ್ರಮಾಣ ಸುಮಾರು ಶೇಕಡಾ 20ಕ್ಕೆ ತಲುಪಿದೆ ಎಂದು ದೆಹಲಿ ವರದಿ ಮಾಡಿದೆ. ಲಸಿಕೆಗಳ ಬೂಸ್ಟರ್ ಡೋಸ್ ತೆಗೆದುಕೊಂಡವರು ತೆಗೆದುಕೊಳ್ಳದವರಿಗಿಂತ ಕೊರೊನಾವೈರಸ್ ಸೋಂಕಿನಿಂದ ಹೆಚ್ಚು ಸುರಕ್ಷಿತರಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ಹೇಳಿದ್ದಾರೆ. ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 917 ಹೊಸ ಪ್ರಕರಣಗಳು ಮತ್ತು 3 … Continued

ಜಮ್ಮು-ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡ ಕೆಲವೇ ತಾಸುಗಳ ನಂತರ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ, ಗುಲಾಂ ನಬಿ ಆಜಾದ್ ಅವರು ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಹೊಸದಾಗಿ ಕಾಂಗ್ರೆಸ್ ಪ್ರಚಾರ ಸಮಿತಿಯನ್ನು ರಚಿಸಲಾಗಿದೆ. ಪ್ರಚಾರ … Continued