ಬೆಂಗಳೂರು: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ; ಅಂಧ ದಂಪತಿ ಸಾವು

ಬೆಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಬೈಕ್​ ಡಿಕ್ಕಿಯಾಗಿ ಅಂಧ ದಂಪತಿ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ನೆಲಮಂಗಲದ ಬಳಿ ನಡೆದಿದೆ. ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಶ್ರೀಧರ (52) ಹಾಗೂ ಅರ್ಚನಾ (35) ಎಂದು ಗುರುತಿಸಲಾಗಿದೆ. ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್​ ಡಿಕ್ಕಿಯಾದ … Continued

ಯರಗಟ್ಟಿ :ಕಾರುಗಳ ಮುಖಾಮುಖಿ ಡಿಕ್ಕಿ ; ಸ್ಥಳದಲ್ಲೇ ಮೂವರ ಸಾವು

ಬೆಳಗಾವಿ: ಸ್ವಿಫ್ಟ್‌ ಮತ್ತು ಅಲ್ಟೋ ಕಾರು ಮುಖಾಮುಖಿ ಡಿಕ್ಕಿಯಾದ ಘಟನೆ ಯರಗಟ್ಟಿ ತಾಲೂಕಿನ ಕುರಬಗಟ್ಟಿ ಕ್ರಾಸ್ ಬಳಿ ಶುಕ್ರವಾರ ನಡೆದಿದ್ದು, ಭೀಕರ ಅಪಘಾತದಲ್ಲಿ ಓರ್ವ ಮಹಿಳೆ, ಮಗು ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಮುತ್ತು ನಾಯಕ(8), ಗೋಪಾಲ ನಾಯಕ(45) ಹಾಗೂ ಧಾರವಾಡ ಮೂಲದ ಅನ್ನಪೂರ್ಣ(53) ಎಂಬವರು ಸ್ಥಳದಲ್ಲೇ … Continued

ಖಾನಾಪುರ : ಮರಕ್ಕೆ ಕಾರು ಡಿಕ್ಕಿ ; ಸ್ಥಳದಲ್ಲೇ ಆರು ಮಂದಿ ಸಾವು

ಬೆಳಗಾವಿ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ  ಬೀಡಿ-ಮಂಗ್ಯಾನಕೊಪ್ಪ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ ಎಂದು ವರದಿಯಾಗಿದೆ.  ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಕಾರು ಚಾಲಕ ಶಾರುಖ್ ಪೆಂಡಾರಿ (30), … Continued

ರಾಯಚೂರು : ಬಸ್‌-ಬೈಕ್‌ ಡಿಕ್ಕಿ ; ಮೂವರು ಸಾವು

ರಾಯಚೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ಬುಧವಾರ ರಾತ್ರಿ ತಾಲೂಕಿನ ಮಿಟ್ಟಿ ವಲ್ಕಾಪುರ ಬಳಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ನಗರದ ಇಂದಿರಾ ನಗರದ ನಿವಾಸಿಗಳಾದ ರಾಘವೇಂದ್ರ (28), ಪರಶುರಾಮ (30), ಗೋವಿಂದ (28) ಎಂದು ಗುರುತಿಸಲಾಗಿದೆ. ಮೂವರು ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಂತ್ರಾಲಯದಿಂದ ರಾಯಚೂರಿಗೆ … Continued

ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು : ಅಪಘಾತಕ್ಕೆ ನಾನೇ ಕಾರಣವೆಂದು ಮನನೊಂದು ಮತ್ತೊಬ್ಬ ಬೈಕ್‌ ಸವಾರ ಆತ್ಮಹತ್ಯೆ..

ಮಡಿಕೇರಿ : ಮಡಿಕೇರಿಯಲ್ಲಿ ಶುಕ್ರವಾರ ನಡೆದ ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ಪದವೀಧರ ವಿದ್ಯಾರ್ಥಿ ಮೃತಪಟ್ಟ ನಂತರ ಈ ಅಪಘಾತಕ್ಕೆ ತಾನೇ ಕಾರಣ, ನನ್ನಿಂದಾಗಿ ಒಂದು ಜೀವ ಹೋಯಿತು ಎಂದು ಮನನೊಂದ ಮತ್ತೊಬ್ಬ ಬೈಕ್ ಸವಾರ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಮಮನೊಂದು ಆತ್ಮಹತ್ಯೆ ಮಾಡಿಕೊಂಡ ಬೈಕ್‌ ಸವಾರನನ್ನು ಹೆರವನಾಡಿನ ತಮ್ಮಯ್ಯ (57) ಎಂದು ಗುರುತಿಸಲಾಗಿದೆ. … Continued

ರಾಣಿಪೂಲ್ ಮೇಳದಲ್ಲಿ ಮೂರು ಕಾರುಗಳಿಗೆ ಡಿಕ್ಕಿ ಹೊಡೆದ ಹಾಲಿನ ಟ್ಯಾಂಕರ್ : ಕನಿಷ್ಠ 3 ಸಾವು, 20 ಮಂದಿಗೆ ಗಾಯ ; ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ

ಸಿಕ್ಕಿಂ: ಸಿಕ್ಕಿಂನ ರಾಣಿಪೂಲ್‌ನಲ್ಲಿ ದಾರುಣ ಘಟನೆ ಸಂಭವಿಸಿದ್ದು, ಜಾತ್ರೆಯ ಮೈದಾನದ ಬಳಿ ನಿಂತಿದ್ದ ಮೂರು ಕಾರುಗಳಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಮೂವರು ಸಾವಿಗೀಡಾಗಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಶನಿವಾರ ನಡೆದ ಈ ಭಯಾನಕ ಘಟನೆ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿಂತಿದ್ದ ಕಾರುಗಳಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ … Continued

ಮಂಡ್ಯ | ರಸ್ತೆ ಬದಿಯ ಹಳ್ಳಕ್ಕೆ ಬಿದ್ದ ಕಾರು : ಮೂವರು ಸಾವು

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಹಳ್ಳಕ್ಕೆ ಬಿದ್ದು, ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಬಳಿ ಶನಿವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಕೆ.ಆ‌ರ್.ಪೇಟೆ ನಿವಾಸಿಗಳಾದ ಅನಿಕೇತನ(30), ಪವನ್‌ ಶೆಟ್ಟಿ(32) ಹಾಗೂ ಚಿರಂಜೀವಿ (32) ಘಟನೆಯಲ್ಲಿ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿರುವ ಸಾಗರ ಎಂಬ … Continued

ಉಜಿರೆ : ಬಸ್ಸಿಗಾಗಿ ಕಾಯುತ್ತಿದ್ದವರ ಮೇಲೆ ನುಗ್ಗಿದ ಲಾರಿ ; ಇಬ್ಬರು ಸ್ಥಳದಲ್ಲೇ ಸಾವು

ಬೆಳ್ತಂಗಡಿ: ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದವರಿಗೆ ಲಾರಿಯೊಂದು ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಜಿರೆ ಸಮೀಪ ಭಾನುವಾರ ಮಧ್ಯಾಹ್ನ ನಡೆದಿದೆ ಎಂದು ವರದಿಯಾಗಿದೆ. ಮೃತರು ಒಬ್ಬರು ಪುರುಷನಾದರೆ ಮತ್ತೊಬ್ಬರು ಮಹಿಳೆಯಾಗಿದ್ದಾರೆ. ಉಜಿರೆ ಸಮೀಪದ ಗಾಂಧಿನಗರ ಕಕ್ಕೆಜಾಲು ನಿವಾಸಿ ಕೃಷ್ಣಪ್ಪ (52), ಕುಂಟಿನಿ ನಿವಾಸಿ ಮೋಹಿನಿ (56) ಮೃತಪಟ್ಟವರು. ಉಜಿರೆ ಸಮೀಪದ ಗಾಂಧಿ ನಗರ … Continued

ಕಾಗವಾಡ : ಟ್ರ್ಯಾಕ್ಟರ್‌ ಟೇಲರ್‌ ಪಲ್ಟಿ ; ನಾಲ್ವರು ಪಾದಚಾರಿ ಮಹಿಳೆಯರು ಸಾವು

ಬೆಳಗಾವಿ : ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಬಳಿ ಭಾನುವಾರ ಕಬ್ಬು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್‌ ಟೇಲರ್ ಪಲ್ಟಿಯಾಗಿ ಅದರಡಿ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆ ಒಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು ಮಾಲಾಬಾಯಿ ರವಸಾಬ್ ಐನಾಪುರೆ (61), ಚಂಪಾ ಲಕ್ಕಪ್ಪ ತಳಕಟ್ಟಿ … Continued

ಜೀಪ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಸಾವು

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಗರ್ಲಗುಂಜಿ ರಸ್ತೆಯಲ್ಲಿ ಸಣ್ಣ ಹೊಸೂರ ಬಳಿ ಜೀಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಬೇಕವಾಡ ಗ್ರಾಮದ ರಾಮಲಿಂಗ ಮುತಗೇಕರ ಮತ್ತು ಹನುಮಂತ ಪಾಟೀಲ (19) ಎಂದು ಗುರುತಿಸಲಾಗಿದೆ. ನಂದಿಹಾಳ ಗ್ರಾಮಕ್ಕೆ ಸೈನಿಕ ತರಬೇತಿ ಪಡೆಯಲು ಇವರು ತೆರಳುತ್ತಿದ್ದರು … Continued