ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ ; ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಸೊಸೆ ಸಾವು, ಪುತ್ರ-ಮೊಮ್ಮಗನಿಗೆ ಗಾಯ

ಜೈಪುರ: ಮಂಗಳವಾರ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಾಜಿ ಕೇಂದ್ರ ಸಚಿವ ಜಸ್ವಂತ ಸಿಂಗ್‌ ಪುತ್ರ ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದ ಮಾನವೇಂದ್ರ ಸಿಂಗ್ ಅವರ ಪತ್ನಿ ಚಿತ್ರಾ ಸಿಂಗ್ ಸಾವಿಗೀಡಾಗಿದ್ದಾರೆ. 59 ವರ್ಷದ ಮಾನವೇಂದ್ರ ಸಿಂಗ್‌ ಕೂಡ ಕಾರಿನಲ್ಲಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದಾರೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದ ಸಮಯದಲ್ಲಿ ಮಾನವೇಂದ್ರ ಸಿಂಗ್ … Continued

ಜಮಖಂಡಿ: ಶಾಲಾ ವಾರ್ಷಿಕೋತ್ಸವ ಮುಗಿಸಿ ವಾಪಸಾಗುವ ವೇಳೆ ಅಪಘಾತ ; 4 ವಿದ್ಯಾರ್ಥಿಗಳು ಸಾವು

ಬಾಗಲಕೋಟೆ : ಶಾಲಾ ವಾಹನ ಮತ್ತು ಟ್ರ್ಯಾಕ್ಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಹಳಿ ನಡೆದಿದೆ ಎಂದು ವರದಿಯಾಗಿದೆ. ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಮೂವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ‌. ಎಂಟಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ‌ವಾಗಿದೆ. ಮೃತ ವಿದ್ಯಾರ್ಥಿಗಳನ್ನು ಶ್ವೇತಾ … Continued

ಪಂಚರ್ ಹಾಕುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ : ಸ್ಥಳದಲ್ಲೇ ಇಬ್ಬರು ಸಾವು

ತುಮಕೂರು : ಪಂಚರ್ ಆಗಿದ್ದ ಕಾರನ್ನು ದುರಸ್ತಿ ಮಾಡುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-4ರ ಕುಂಟೇಗೌಡನಹಳ್ಳಿ ಗೇಟ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಬೆಂಗಳೂರಿನ ಆವಲಹಳ್ಳಿ ನಿವಾಸಿಗಳಾದ ಮಹೇಶ್(40) ಮತ್ತು ವಕೀಲರ ಸಹಕಾರ ಬ್ಯಾಂಕ್ ಉದ್ಯೋಗಿ ಉಮೇಶ(40) ಎಂದು ಗುರುತಿಸಲಾಗಿದೆ. ಮಹೇಶ … Continued

ಬೊಲೆರೊ ವಾಹನ ಪಲ್ಟಿ: ಮೂವರು ಸಾವು

ದಾವಣಗೆರೆ : ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಸಮೀಪದ ಚಿನ್ನಿಕಟ್ಟಿ ಗ್ರಾಮದ ಬಳಿ ಬೊಲೆರೊ ಪಲ್ಟಿಯಾಗಿ ಮೂವರು ಮೃತಪಟ್ಟಿದ್ದಾರೆ ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶಿವಮೊಗ್ಗ-ಶಿಕಾರಿಪುರ ರಸ್ತೆಯ ಚಿನ್ನಿಕಟ್ಟೆ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಚಂದನಕೆರೆ ಗ್ರಾಮದ ಮಂಜುನಾಥ (45), ನಾಗರಾಜ (39) ಶಿವಮೊಗ್ಗ ಆಸ್ಪತ್ರೆಯಲ್ಲಿ … Continued

ಮಂಗಳೂರು : ಬಂಟ್ವಾಳ ಶಾಸಕರಿಗೆ ಕಾರು ಡಿಕ್ಕಿ

ಮಂಗಳೂರು : ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಕಾರು ಡಿಕ್ಕಿಯಾದ ಘಟನೆ ನಡೆದ ಘಟನೆ ಭಾನುವಾರ ಮಧ್ಯಾಹ್ನದ ಸುಮಾರಿಗೆ ಮಂಗಳೂರು ಹೊರವಲಯದ ತೆಂಕ ಎಡಪದವು ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದ್ದು, ಶಾಸಕರು ಅಪಾಯದಿಂದ ಪಾರಾಗಿದ್ದಾರೆ. ಶಾಸಕ ರಾಜೇಶ ನಾಯ್ಕ್ ಅವರು ಸಂಕ್ರಮಣದ ಅಂಗವಾಗಿ ಎಡಪದವು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಸ್‌ ತನ್ನ … Continued

ಬೆಳಗಾವಿ : ನಿಂತಿದ್ದ ಲಾರಿಗೆ ಗುದ್ದಿದ ಕಾರು, ಯುವ ವೈದ್ಯ ಸಾವು, ಇಬ್ಬರಿಗೆ ಗಾಯ

ಬೆಳಗಾವಿ : ರಸ್ತೆ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಯುವ ವೈದ್ಯ ಮೃತಪಟ್ಟಿದ್ದು, ಇಬ್ಬರು ಎಂಬಿಎ ಪದವೀಧರರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಬೆಳಗಾವಿಯಲ್ಲಿ ನಡೆದಿದೆ. ನಗರದ ಯಡಿಯೂರಪ್ಪ ಮಾರ್ಗದಲ್ಲಿ ಈ ದುರ್ಘಟನೆ ನಡೆದಿದ್ದು, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಯುವ ವೈದ್ಯ ಸೌರಭ ಕಾಂಬಳೆ (25)ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಮಖಂಡಿಯ ಗಿರೀಶ ಕರೆಮ್ಮನವರ(25) … Continued

ಯಶ್‌ ನೋಡಲು ಬಂದಾಗ ಬೈಕ್‌ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಯಶ್ ಅಭಿಮಾನಿ ಸಾವು

ಗದಗ : ನಟ ಯಶ್ ಜನ್ಮದಿನಕ್ಕೆ ಶುಭಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ಮೃತಪಟ್ಟ ಘಟನೆ ನಂತರ ಮೃತ ಕುಟುಂಬದವರಿಗೆ ಸಾಂತ್ವನ ಹೇಳಲು ಬಂದಿದ್ದ ನಟ ಯಶ್‌ ಅವರ ಭೇಟಿ ವೇಳೆ ಮತ್ತೊಬ್ಬ ಅಭಿಮಾನಿ ಸಾವಿಗೀಡಾಗಿದ್ದಾನೆ. ವಿದ್ಯುತ್‌ ಸ್ಪರ್ಶದ ಘಟನೆಯಲ್ಲಿ ಗಾಯಗೊಂಡಿದ್ದವರ ಆರೋಗ್ಯ ವಿಚಾರಿಸಲೆಂದು ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಾಪಸ್ ಆಗುತ್ತಿದ್ದಾಗ … Continued

ಸಾರಿಗೆ ಬಸ್‍ಗಳ ಮುಖಾಮುಖಿ ಡಿಕ್ಕಿ; ಇಬ್ಬರು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ವಿಜಯಪುರ: ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಮೃತಪಟ್ಟು, 10ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕವಲಗಿ ಗ್ರಾಮದ ಮದಭಾವಿ ಕ್ರಾಸ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಬಸವನ ಬಾಗೇಬಾಡಿ ತಾಲೂಕಿನ ಡೋಣೂರ ಗ್ರಾಮದ ಸಾಜೀದಾ ಬೇಗಂ ಮಕಾನದಾರ್ (36) ಮತ್ತು ಕಲಬುರಗಿ ಪಟ್ಟಣದ ನಿವಾಸಿ ರೋಹಿಣಿ ಪಂಚಾಳ (31) … Continued

ವೀಡಿಯೊ…| ಟೇಕಾಫ್‌ ಆದ ನಂತರ ಆಗಸದಲ್ಲೇ ಕಳಚಿ ಬಿದ್ದ ವಿಮಾನದ ಬಾಗಿಲು…!

ಅಲಾಸ್ಕಾ ಏರ್‌ಲೈನ್ಸ್ ಬೋಯಿಂಗ್ 737-9 MAX ಶುಕ್ರವಾರ ಒರೆಗಾನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಟೇಕಾಫ್ ಆದ ನಂತರ ಅದರ ಒಂದು ಬಾಗಿಲು ಕಳಚಿದ್ದು, ಗಾಳಿಯಲ್ಲಿ ಬಾಗಿಲು ಹಾರಿಹೋಗಿದೆ. ಘಟನೆಯಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ ಮತ್ತು ಈ ವಿಷಯವು ತನಿಖೆಯಲ್ಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಸಾಮಾಜಿಕ ಮಾಧ್ಯಮದ ಹಂಚಿಕೊಂಡ ವೀಡಿಯೊಗಳಲ್ಲಿ ವಿಮಾನದ ಮಧ್ಯ … Continued

ಎರಡು ಕಾರು, ಲಾರಿ ಮಧ್ಯೆ ಸರಣಿ ಅಪಘಾತ : ನಾಲ್ವರು ಸಾವು, ನಾಲ್ವರಿಗೆ ಗಾಯ

ಹುಬ್ಬಳ್ಳಿ: ನಿಂತಿದ್ದ ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ (Dharwad) ಜಿಲ್ಲೆ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಕ್ರಾಸ್ ಬಳಿ ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ (ಜನವರಿ 6) ಬೆಳಗಿನ ಜಾವ ಸಂಭವಿಸಿದೆ. ಘಟನೆಯಲ್ಲಿ ಹಾಸನದ ‌ಮೂಲದ ಮೂವರು, ಬೆಂಗಳೂರಿನ ಓರ್ವ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಕಾರು ಹಾಗೂ … Continued