ಹಣ ಸುಲಿಗೆ ಪ್ರಕರಣ ; ದೆಹಲಿ ಎಎಪಿ ಶಾಸಕ ನರೇಶ ಬಲ್ಯಾನ್ ಬಂಧನ

ನವದೆಹಲಿ : ಕಳೆದ ವರ್ಷ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ನರೇಶ ಬಲ್ಯಾನ್ ಅವರನ್ನು ಶನಿವಾರ ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯ ಉತ್ತಮ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ನರೇಶ ಬಲ್ಯಾನ್ ಅವರನ್ನು ವಿಚಾರಣೆಗಾಗಿ ಆರ್ ಕೆ ಪುರಂನಲ್ಲಿರುವ ದೆಹಲಿ ಪೊಲೀಸರ ಅಪರಾಧ ವಿಭಾಗದ ಕಚೇರಿಗೆ ಕರೆಸಲಾಯಿತು ಮತ್ತು ನಂತರ … Continued

ಮ್ಯಾಚ್ ಫಿಕ್ಸಿಂಗ್ ಪ್ರಕರಣ ; ದಕ್ಷಿಣ ಆಫ್ರಿಕಾದ ಮೂವರು ಮಾಜಿ ಕ್ರಿಕೆಟಿಗರ ಬಂಧನ

2015-16 ರ ರಾಮ್ ಸ್ಲಾಮ್ T20 ಚಾಲೆಂಜ್ ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಮೂವರು ಮಾಜಿ ಕ್ರಿಕೆಟ್‌ ಆಟಗಾರರನ್ನು ಬಂಧಿಸಲಾಗಿದೆ. ಮಾಜಿ ಅನುಭವಿ ಆಟಗಾರರಾದ ಲೊನ್ವಾಬೊ ತ್ಸೊಟ್ಸೊಬೆ, ಥಾಮಿ ತ್ಸೊಲೆಕಿಲೆ ಮತ್ತು ಎಥಿ ಎಂಬಾಲಾಟಿ ಅವರನ್ನು ಬಂಧಿಸಲಾಗಿದೆ ಮತ್ತು ಅವರ ಅನೇಕ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇವರು ದಕ್ಷಿಣ … Continued

ವೀಡಿಯೊ…| ಬಾಂಗ್ಲಾದೇಶದ ಬಂಧಿತ ಹಿಂದೂ ಧಾರ್ಮಿಕ ಸಂತನ ಬೆಂಬಲಿಗರನ್ನು ನ್ಯಾಯಾಲಯದ ಹೊರಗೆ ಥಳಿಸಿದ ಪೊಲೀಸರು…

ಚಟ್ಟೋಗ್ರಾಮ (ಬಾಂಗ್ಲಾದೇಶ) : ಮಂಗಳವಾರ ಬಾಂಗ್ಲಾದೇಶದ ಚಟ್ಟೋಗ್ರಾಮದ ನ್ಯಾಯಾಲಯದ ಹೊರಗೆ ಬಂಧಿತ ಹಿಂದೂ ಸಂತ ಚಿನ್ಮಯ ಕೃಷ್ಣ ದಾಸ ಅವರ ಬೆಂಬಲಿಗರು ಮತ್ತು ಪೊಲೀಸರು ನಡುವೆ ಘರ್ಷಣೆಗಳು ನಡೆದವು. ಅಲ್ಪಸಂಖ್ಯಾತ ಹಿಂದೂ ಸಮುದಾಯದವರು ಎಂದು ನಂಬಲಾದ ನೂರಾರು ಜನರು, ಇಸ್ಕಾನ್ ಸ್ವಾಮೀಜಿ ಅವರನ್ನು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಿರುವುದನ್ನು ವಿರೋಧಿಸಿ ನ್ಯಾಯಾಲಯದ ಆವರಣದ ಹೊರಗೆ ಜಮಾಯಿಸಿದ್ದರು. ಬಾಂಗ್ಲಾದೇಶ … Continued

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಇಸ್ಕಾನ್‌ ಸನ್ಯಾಸಿಯನ್ನು ಢಾಕಾದಲ್ಲಿ ಬಂಧಿಸಿದ ಆಡಳಿತ

ಕೋಲ್ಕತ್ತಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ವ್ಯಾಪಕ ರಾಜಕೀಯ ಹಿಂಸಾಚಾರವನ್ನು ಕಂಡಿರುವ ಬಾಂಗ್ಲಾದೇಶದಲ್ಲಿ ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ದಾಳಿ ನಡೆಯುತ್ತಿದೆ ಎಂಬ ಆರೋಪಗಳ ಮಧ್ಯೆ ಬಾಂಗ್ಲಾದೇಶದ ಹಿಂದೂ ಸಂನ್ಯಾಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ನಾಯಕ ಚಿನ್ಮಯ ಕೃಷ್ಣ ದಾಸ ಬ್ರಹ್ಮಚಾರಿ ಅವರನ್ನು ಢಾಕಾದಲ್ಲಿ ಬಂಧಿಸಲಾಗಿದೆ. ಢಾಕಾದಿಂದ ಉತ್ತರಕ್ಕೆ ಸುಮಾರು 300 … Continued

ನಿರ್ದೇಶಕನ ಕೊಲೆ ಯತ್ನ ಆರೋಪ ; ನಟ ತಾಂಡವ ರಾಮ ಬಂಧನ

 ಬೆಂಗಳೂರು: ನಿರ್ದೇಶಕನಿಗೆ ಬೆದರಿಕೆ ಹಾಕಿದ್ದಲ್ಲದೆ, ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ತಾಂಡವ ರಾಮ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಚಂದ್ರಲೇಔಟ್‌ನಲ್ಲಿ ಘಟನೆ ನಡೆದಿದ್ದು, ಸಿನಿಮಾ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಮುಗಿಲ್ ಪೇಟೆ ಸಿನಿಮಾ ನಿರ್ದೇಶಕ ಭರತ್ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ನಟ ತಾಂಡವ ರಾಮ ಬಂಧನವಾಗಿದೆ. ತಾಂಡವ ರಾಮ ಕಿರುತೆರೆಯಲ್ಲಿ … Continued

ಬಾಬಾ ಸಿದ್ದಿಕ್ ಹತ್ಯೆ ಆರೋಪಿ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅಮೆರಿಕದಲ್ಲಿ ಬಂಧನ ; ಮೂಲಗಳು

ನವದೆಹಲಿ: ಜೈಲಿನಲ್ಲಿದ್ದರೂ ಜಾಗತಿಕ ಕ್ರಿಮಿನಲ್ ಸಿಂಡಿಕೇಟ್ ನಡೆಸುತ್ತಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. 2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮತ್ತು ಕಳೆದ ತಿಂಗಳು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಮತ್ತು ಈ ವರ್ಷದ ಜೂನ್‌ನಲ್ಲಿ ನಟ … Continued

ತೆಲುಗು ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ; ನಟಿ ಕಸ್ತೂರಿ ಶಂಕರ ಬಂಧನ

ಹೈದರಾಬಾದ್‌ : ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ತೆಲುಗು ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ದಕ್ಷಿಣ ಭಾರತದ ನಟಿ ಕಸ್ತೂರಿ ಶಂಕರ ಅವರನ್ನು ಚೆನ್ನೈ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ. ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ನಟಿ ಕಸ್ತೂರಿ ಶಂಕರ ಅವರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದ ನಂತರ, ಚೆನ್ನೈನಲ್ಲಿರುವ ತನ್ನ ಮನೆಯಿಂದ ನಟಿ ನಾಪತ್ತೆಯಾಗಿದ್ದರು. ಮತ್ತು … Continued

ಸಚಿವ ಜಮೀರ್ ಅಹಮದಗೆ ನಿಂದನೆ ಆರೋಪ ; ಪುನೀತ ಕೆರೆಹಳ್ಳಿ ಬಂಧನ

ಬೆಂಗಳೂರು: ಸಚಿವ ಜಮೀರ್ ಅಹಮ್ಮದ್ (Zameer Ahmed) ಅವರನ್ನು ನಿಂದಿಸಿದ ಆರೋಪದ ಮೇಲೆ ಹಿಂದೂ ಸಂಘಟನೆ ಮುಖಂಡ ಪುನೀತ ಕೆರೆಹಳ್ಳಿ (Puneeth Kerehalli) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪುನೀತ ಕೆರೆಹಳ್ಳಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪೋಸ್ಟ್ ಮಾಡಿ ಸಚಿವ ಜಮೀರ್ ಅಹ್ಮದ್ ಅವರನ್ನು ಟೀಕಿಸಿದ್ದರು. ಧರ್ಮ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಅವಾಚ್ಯ … Continued

ಸಲ್ಮಾನ್ ಖಾನಗೆ ಜೀವ ಬೆದರಿಕೆ ಪ್ರಕರಣ ; ಮುಂಬೈ ಪೊಲೀಸರಿಂದ ರಾಯಚೂರಿನ ಯುವಕ ವಶಕ್ಕೆ

ಮುಂಬೈ : ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಟೋಯಿ ಹೆಸರಲ್ಲಿ ನಟ ಸಲ್ಮಾನ್ ಖಾನ್‌ ಜೀವ ಬೆದರಿಕೆ ಹಾಕಿ 5 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ ಮಾನ್ವಿಯ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬಿಷ್ಟೋಯಿ ಹೆಸರಲ್ಲಿ ಸಲ್ಮಾನ್ ಖಾನ್‌ ಗೆ ಬೆದರಿಕೆ ಹಾಕಿ ಬಂಧನಕ್ಕೆ ಒಳಗಾದ ಈ ವ್ಯಕ್ತಿಯನ್ನು … Continued

ಭಾರತದ ಘೋಷಿತ ಭಯೋತ್ಪಾದಕ, ಉಗ್ರಗಾಮಿ ನಿಜ್ಜರನ ನಂಬಿಗಸ್ಥ ಬಂಟ ಅರ್ಶ್‌ ‘ದಲ್ಲಾ’ ಕೆನಡಾದಲ್ಲಿ ಬಂಧನ..?

ನವದೆಹಲಿ : ಭಾರತವು ಭಯೋತ್ಪಾದಕ ಎಂದು ಘೋಷಿಸಿರುವ ಖಲಿಸ್ತಾನಿ ಉಗ್ರ ಅರ್ಶದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾನನ್ನು ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಗುಂಡಿನ ದಾಳಿಯ ನಂತರ ಬಂಧಿಸಿರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಅಕ್ಟೋಬರ್ 28 ರಂದು ಮಿಲ್ಟನ್‌ನಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ದಲ್ಲಾ, ನಿಷೇಧಿತ ಖಾಲಿಸ್ತಾನ ಟೈಗರ್‌ ಫೋರ್ಸ್‌ನೊಂದಿಗೆ (ಕೆಟಿಎಫ್‌) … Continued