A++ ಗ್ರೇಡ್‌ ನೀಡಲು ಲಂಚದ ಆರೋಪ : ನ್ಯಾಕ್‌ ಪರಿಶೀಲನಾ ಸಮಿತಿ ಅಧ್ಯಕ್ಷ, ದಾವಣಗೆರೆ ವಿವಿ ಪ್ರಾಧ್ಯಾಪಕಿ ಸೇರಿ 10 ಮಂದಿ ಬಂಧನ

ನವದೆಹಲಿ : A++ ಮಾನ್ಯತೆ ಪಡೆಯಲು ನ್ಯಾಷನಲ್ ಅಸೆಸ್ಮೆಂಟ್ ಮತ್ತು ಅಕ್ರೆಡಿಟೇಶನ್ ಕೌನ್ಸಿಲ್ (NAAC) ಒಳಗೊಂಡ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಕ್‌ ಪರಿಶೀಲನಾ ಸಮಿತಿಯ ಅಧ್ಯಕ್ಷರು, ದಾವಣೆಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಜೆಎನ್‌ಯು ಪ್ರಾಧ್ಯಾಪಕ ಸೇರಿದಂತೆ 10 ವ್ಯಕ್ತಿಗಳನ್ನು ಬಂಧಿಸಿದೆ. ಬಂಧಿತ ವ್ಯಕ್ತಿಗಳಲ್ಲಿ ನ್ಯಾಕ್ ಪರಿಶೀಲನಾ ಸಮಿತಿಯ ಅಧ್ಯಕ್ಷರು ಮತ್ತು ಆರು … Continued

ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗಲೇ ಕಾಂಗ್ರೆಸ್‌ ಸಂಸದರನ್ನು ಬಂಧಿಸಿದ ಪೊಲೀಸರು…

ಲಕ್ನೋ: ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್ ಅವರನ್ನು ಗುರುವಾರ ಬಂಧಿಸಲಾಗಿದೆ. ಉತ್ತರ ಪ್ರದೇಶದ ಸೀತಾಪುರದ ಲೋಕಸಭಾ ಸಂಸದ ರಾಥೋಡ್ ಅವರನ್ನು ಅವರ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗಲೇ ಬಂಧಿಸಲಾಯಿತು. ಸಂಸದ ರಾಥೋಡ್ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದು, ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಕೊತ್ವಾಲಿ ನಗರ ಪೊಲೀಸರು ರಾಥೋಡ್ ಅವರನ್ನು … Continued

ಹುಬ್ಬಳ್ಳಿಯಲ್ಲಿ ತಡರಾತ್ರಿ ಯುವಕನ ಕೊಲೆ; ಪೊಲೀಸರಿಂದ ಮೂವರು ಆರೋಪಿಗಳ ಕಾಲಿಗೆ ಗುಂಡು

ಹುಬ್ಬಳ್ಳಿ; ಮಹಾನಗರದ ಲಿಂಗರಾಜ ನಗರದಲ್ಲಿರುವ ಗೋಲ್ಡನ್ ಹೈಟ್ಸ್ ಬಾರ್ ಪಾರ್ಕಿಂಗ್ ಜಾಗದಲ್ಲಿ ಆಕಾಶ ವಾಲ್ಮೀಕಿ ಎಂಬ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ (Murder) ಮಾಡಲಾಗಿದೆ. ತಡರಾತ್ರಿ ನಡೆದ ಕೊಲೆ ಬಗ್ಗೆ ಮಾಹಿತಿ ಪಡೆದ ಪೊಲೀಸರು (Police) ಆರೋಪಿಗಳನ್ನು ಬಂಧಿಸಲು ತೆರಳಿದಾಗ ಅವರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ನಂತರ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ … Continued

ಪರಸ್ಪರರ ಕಚೇರಿ ಮೇಲೆ ಗುಂಡಿನ ದಾಳಿ, ಕಲ್ಲು ಎಸೆತ : ಹಿಂಸಾಚಾರಕ್ಕೆ ತಿರುಗಿದ ಬಿಜೆಪಿ ನಾಯಕ-ಶಾಸಕರ ನಡುವಿನ ರಾಜಕೀಯ ವೈಷಮ್ಯ; ಬಂಧನ

ಉತ್ತರಾಖಂಡದ ರೂರ್ಕಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಕುನ್ವರ್ ಪ್ರಣವ ಸಿಂಗ್ ಚಾಂಪಿಯನ್ ಮತ್ತು ಪಕ್ಷೇತರ ಶಾಸಕ ಉಮೇಶಕುಮಾರ ನಡುವಿನ ವೈಷಮ್ಯ ಭಾನುವಾರ ಹಿಂಸಾಚಾರಕ್ಕೆ ತಿರುಗಿದ್ದು, ಪರಸ್ಪರರ ಕಚೇರಿಗೆ ಗುಂಡು ಹಾರಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವೀಡಿಯೋದಲ್ಲಿ ಚಾಂಪಿಯನ್ ತನ್ನ ಬೆಂಬಲಿಗರೊಂದಿಗೆ ಉಮೇಶಕುಮಾರ ಅವರ ಕಚೇರಿಯ ಮೇಲೆ ಹಲವಾರು ಗುಂಡುಗಳನ್ನು ಹಾರಿಸುವುದನ್ನು ತೋರಿಸುತ್ತದೆ. … Continued

500ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿದ ಅಮೆರಿಕ ; ಮಿಲಿಟರಿ ವಿಮಾನ ಬಳಸಿ ನೂರಾರು ಜನರ ಗಡೀಪಾರು

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭರವಸೆಯ ಸಾಮೂಹಿಕ ಗಡಿಪಾರು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ 500ಕ್ಕೂ ಹೆಚ್ಚು ವಲಸಿಗರನ್ನು ಬಂಧಿಸಲಾಗಿದೆ ಮತ್ತು ನೂರಾರು ಜನರನ್ನು ಮಿಲಿಟರಿ ವಿಮಾನಗಳ ಮೂಲಕ ದೇಶದಿಂದ ಹೊರಗೆ ಕಳುಹಿಸಲಾಯಿತು ಎಂದು ಶ್ವೇತಭವನ ತಿಳಿಸಿದೆ. ಅಂಕಿಅಂಶಗಳನ್ನು ಹಂಚಿಕೊಂಡ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು, ಅಮೆರಿಕದ ಅಧಿಕಾರಿಗಳು 538 ಅಕ್ರಮ … Continued

ಎರಡನೇ ಮದುವೆಗಾಗಿ ಗಂಡು ಮಗು ಮಾರಾಟ ಪ್ರಕರಣ ಬೆಳಕಿಗೆ : ನಾಲ್ವರ ಬಂಧನ

ಬೆಳಗಾವಿ : ಮಹತ್ವದ ಕಾರ್ಯಾಚರಣೆ ನಡೆಸಿದ ಹುಕ್ಕೇರಿ ಪೊಲೀಸರು ಎರಡನೇ ಮದುವೆಗಾಗಿ ಏಳು ವರ್ಷದ ಗಂಡು ಮಗುವನ್ನು ಮಾರಾಟ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹುಕ್ಕೇರಿ ತಾಲೂಕು ಸುಲ್ತಾನಪುರ ಗ್ರಾಮದ ಲಕ್ಷ್ಮೀ ಗೋಲಬಾವಿ, ಸದಾಶಿವ ಮಗದುಮ್ಮ, ಹಳಿಯಾಳ ತಾಲೂಕಿನ ಕೆಸರೊಳ್ಳಿಯ … Continued

ಮಂಗಳೂರು | ಕೋಟೆಕಾರು ಬ್ಯಾಂಕ್‌ ದರೋಡೆ : ಮೂವರು ಆರೋಪಿಗಳ ಬಂಧನ

ಮಂಗಳೂರು : ಮಂಗಳೂರು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಯಲ್ಲಿ ಎರಡು ದಿನಗಳ ಹಿಂದೆ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಿದ್ದಾರೆ. ಮುಂಬೈ ಮೂಲದ ಗ್ಯಾಂಗ್ ನಿಂದ ದರೋಡೆಯಾಗಿದ್ದು, ತಮಿಳುನಾಡು ಮೂಲದ ಮುರುಗಂಡಿ ದೇವರ್, ಪ್ರಕಾಶ ಅಲಿಯಾಸ್ ಜೋಶ್ವಾ ,ಮನಿವೆನನ್ ಬಂಧಿತರು. ಬಂಧಿತರಿಂದ ಕಳ್ಳತನಕ್ಕೆ … Continued

ನಟ ಸೈಫ್ ಅಲಿ ಖಾನ್‌ಗೆ ಇರಿದು ಪರಾರಿಯಾಗಿ ಅಡಗಿದ್ದ ಬಾಂಗ್ಲಾದೇಶಿ ವ್ಯಕ್ತಿಯನ್ನು ಒಂದು ಸುಳಿವನ್ನಾಧರಿಸಿ ಪೊಲೀಸರು ಹಿಡಿದಿದ್ದೇ ರೋಚಕ..!

ಮುಂಬೈ: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮತ್ತು ಬಿಜೋಯ ದಾಸ್ ಎಂಬ ಸುಳ್ಳು ಹೆಸರಿನಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ನನ್ನು ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ಕಳ್ಳತನ ಯತ್ನದ ವೇಳೆ ನಟನ ಮೇಲೆ ಮತ್ತು ಅವರ ಸಿಬ್ಬಂದಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಆರೋಪಿಯ … Continued

ನಟ ಸೈಫ್ ಅಲಿ ಖಾನ್ ಗೆ ಚಾಕುವಿನಿಂದ ಇರಿದ ಪ್ರಕರಣ : ಬಂಧಿತ ಮುಖ್ಯ ಆರೋಪಿ ಶರೀಫುಲ್ ಇಸ್ಲಾಂ ಬಗ್ಗೆ ಈವರೆಗೆ ತಿಳಿದಿದ್ದೇನೆಂದರೆ….

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈ ನಿವಾಸದ ಒಳನುಗ್ಗಿ ಅವರನ್ನು ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ಎಂಬ ವ್ಯಕ್ತಿಗೆ ತಾನು ಸೈಫ್‌ ಅಲಿ ಖಾನ್ ಅವರ … Continued

ನಟ ಸೈಫ್ ಅಲಿ ಖಾನಗೆ ಚಾಕುವಿನಿಂದ ಇರಿದ ಆರೋಪಿಯ ಬಂಧನ ; ದಾಳಿಕೋರ ಬಾಂಗ್ಲಾದೇಶಿ, 5 ತಿಂಗಳ ಹಿಂದೆ ಮುಂಬೈಗೆ ಬಂದಿರುವ ಶಂಕೆ : ಪೊಲೀಸರು

ಮುಂಬೈ: ಮುಂಬೈನ ನಿವಾಸದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು ಚಾಕುವಿನಿಂದ ಇರಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆಯಲ್ಲಿ ವ್ಯಕ್ತಿಯೊಬ್ಬನನ್ನು ಇಂದು, ಭಾನುವಾರ ಮುಂಜಾನೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 30 ವರ್ಷದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶಹಜಾದ್ ಎಂದು ಗುರುತಿಸಲಾಗಿದ್ದು, ಈತ ಬೇರೆಬೇರೆ ಹೆರನ್ನು ಇಟ್ಟುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸೈಫ್‌ … Continued