ವಿಧಾಸಭೆಯಿಂದ 18 ಬಿಜೆಪಿ ಶಾಸಕರು ಅಮಾನತು ; ಸದನದಿಂದ ಹೊರಗೆ ಹೊತ್ತೊಯ್ದ ಮಾರ್ಷಲ್‌ ಗಳು

ಬೆಂಗಳೂರು : ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಶುಕ್ರವಾರ 18 ಬಿಜೆಪಿ ಶಾಸಕರನ್ನು ಆರು ತಿಂಗಳವರೆಗೆ ಅಮಾನತುಗೊಳಿಸಿದ್ದಾರೆ. ಸಭಾಪತಿ ಆದೇಶವನ್ನು ಧಿಕ್ಕರಿಸಿ ಅಶಿಸ್ತು ಮತ್ತು ಅಗೌರವದಿಂದ ನಡೆದುಕೊಂಡು ಸದಸ್ಯರು ವಿಧಾನಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಮಾನತುಗೊಂಡ ಶಾಸಕರು ಸಭಾಧ್ಯಕ್ಷರ ವೇದಿಕೆ ಏರುವುದು, ಸಭಾಧ್ಯಕ್ಷರತ್ತ ಪೇಪರ್ ಎಸೆದು ಸದನದ ಬಾವಿಗಿಳಿದು … Continued

ಶಾಸಕರ ಒಟ್ಟು ಆಸ್ತಿ | ಕರ್ನಾಟಕವೇ ನಂ.1 ; ದೇಶದ ಟಾಪ್ 10 ಶ್ರೀಮಂತ ಶಾಸಕರಲ್ಲಿ ಡಿಕೆ ಶಿವಕುಮಾರಗೆ ಎಷ್ಟನೇ ಸ್ಥಾನ ಗೊತ್ತೆ..? ಪಟ್ಟಿ ಇಲ್ಲಿದೆ…

ನವದೆಹಲಿ: ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಬಿಡುಗಡೆ ಮಾಡಿದ ವರದಿಯ ಪ್ರಕಾರ ಮುಂಬೈನ ಘಾಟಕೋಪಾರ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿಯ ಶಾಸಕ ಪರಾಗ್ ಶಾ ಅವರು ಭಾರತದ ಶ್ರೀಮಂತ ಶಾಸಕರಾಗಿದ್ದಾರೆ ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ದೇಶದ ಎರಡನೇ ಶ್ರೀಮಂತ ಶಾಸಕರಾಗಿದ್ದಾರೆ. ಮುಂಬೈನ ಶಾಸಕ ಪರಾಗ್ ಶಾ ಸುಮಾರು 3,400 … Continued

ಹರಿಯಾಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು…

ಚಂಡೀಗಢ: ಹರಿಯಾಣದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಆಡಳಿತಾರೂಢ ಬಿಜೆಪಿ ಬುಧವಾರ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ. ಬಿಜೆಪಿಯು ರೋಹ್ಟಕ್, ಸಿರ್ಸಾ ಮತ್ತು ಕರ್ನಾಲ್‌ನಲ್ಲಿ ದೊಡ್ಡ ಗೆಲುವುಗಳನ್ನು ದಾಖಲಿಸಿದೆ, ಅಲ್ಲಿ ಅಭ್ಯರ್ಥಿಗಳು ತಮ್ಮ ಕಾಂಗ್ರೆಸ್ ವಿರೋಧಿಗಳ ವಿರುದ್ಧ ಭಾರಿ ಅಂತರದಿಂದ ವಿಜಯಶಾಲಿಯಾಗಿದ್ದಾರೆ. ಬಿಜೆಪಿಯು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 10 ಮೇಯರ್ ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆದ್ದಿದೆ. … Continued

ಪ್ರಧಾನಿ ಮೋದಿ ನನ್ನ ನೆಚ್ಚಿನ ನಟ ಎಂದು ಹೇಳಿಕೆ ನೀಡಿ ಬಿಜೆಪಿಯನ್ನೇ ಪೇಚಿಗೆ ಸಿಲುಕಿಸಿದ ರಾಜಸ್ಥಾನ ಸಿಎಂ…!

ಜೈಪುರ: ಜೈಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಭಜನಲಾಲ ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ನೆಚ್ಚಿನ ನಟ ಎಂದು ಹೇಳಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜಸ್ಥಾನ ಮುಖ್ಯಮಂತ್ರಿಗಳ ಈ ಹೇಳಿಕೆಗೆ ವಿಪಕ್ಷಗಳು ಬಿಜೆಪಿಯನ್ನು ಅಪಹಾಸ್ಯ ಮಾಡಿವೆ. ಜೈಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ … Continued

ವಿಷಕಾರಿ ಇಂಜೆಕ್ಷನ್ ನೀಡಿ ಹಿರಿಯ ಬಿಜೆಪಿ ನಾಯಕನ ಹತ್ಯೆ….!?

ಸಂಭಲ್‌ : ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ಬಿಜೆಪಿಯ ಹಿರಿಯ ನಾಯಕರೊಬ್ಬರು ಸೋಮವಾರ “ನಿಗೂಢ ರೀತಿಯಲ್ಲಿ” ಸಾವಿಗೀಡಾಗಿದ್ದಾರೆ. ಅವರನ್ನು ವಿಷಪೂರಿತ ಚುಚ್ಚುಮದ್ದಿನ ಮೂಲಕ ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಹೊರಬಿದ್ದಿವೆ. ವರದಿಗಳ ಪ್ರಕಾರ, ಮೃತ ಬಿಜೆಪಿ ನಾಯಕ ಗುಲ್ಫಾಮ್ ಸಿಂಗ್ ಯಾದವ್ (60) ಮಧ್ಯಾಹ್ನ 1 ಗಂಟೆ ಸುಮಾರಿಗೆ ದಫ್ತಾರಾ ಗ್ರಾಮದ … Continued

ಕೆಲ ಕಾಂಗ್ರೆಸ್‌ ನಾಯಕರು ಬಿಜೆಪಿಗಾಗಿ ಕೆಲಸ ಮಾಡ್ತಾರೆ, ಅಂತಹ 30-40 ನಾಯಕರನ್ನು ಪಕ್ಷದಿಂದ ಕಿತ್ತೆಸೆಯಬಹುದು ; ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆ

ಅಹಮದಾಬಾದ್‌ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ತಮ್ಮ ಪಕ್ಷದ ನಾಯಕರ ವಿರುದ್ಧವೇ ಸ್ಫೋಟಕ ಹೇಳಿಕೆ ನೀಡಿದ್ದು ಪಕ್ಷದ ಕೆಲ ನಾಯಕರು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಗತ್ಯಬಿದ್ದರೆ ಅಂತಹ 30-40 ಕಾಂಗ್ರೆಸ್ ನಾಯಕರನ್ನು ವಜಾ ಮಾಡಬಹುದು ಎಂದು ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ಗುಜರಾತ್ ಪ್ರವಾಸದ ಎರಡನೇ ದಿನ ಈ ಹೇಳಿಕೆಗಳನ್ನು … Continued

ಬೆಂಗಳೂರು | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರಿನ ಯುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭರತನಾಟ್ಯ ಹಾಗೂ ಸಂಗೀತ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನಕಪುರ ರಸ್ತೆಯ ರೆಸಾರ್ಟ್ ನಲ್ಲಿ ಮದುವೆ ನಡೆದಿದ್ದು, ಸಂಸದ ತೇಜಸ್ವಿ ಸೂರ್ಯ, ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದಪ್ರಸಾದ ಅವರು ಗುರುವಾರ ಬೆಳಿಗ್ಗೆ ಶುಭ ಮೂಹರ್ತದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. … Continued

ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕೆಂಡ

ಬೆಂಗಳೂರು : ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ನೀಡಲು ಯೋಜಿಸುತ್ತಿದೆ ಎಂದು ಬಿಜೆಪಿ ಬುಧವಾರ ಆರೋಪಿಸಿದೆ. ರಾಜ್ಯಾದ್ಯಂತ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವಾಗ, ಆಡಳಿತಾರೂಢ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಸರ್ಕಾರಿ ಟೆಂಡರ್‌ಗಳಲ್ಲಿ ಶೇಕಡಾ 4ರಷ್ಟು ಮೀಸಲಾತಿ ನೀಡುವ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ನಿರ್ಧರಿಸಿದೆ ಎಂದು ಬಿಜೆಪಿ … Continued

ವಿವಾದಕ್ಕೆ ಕಾರಣವಾದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಕುರಿತಾದ ಕಾಂಗ್ರೆಸ್‌ ನಾಯಕಿ ಹೇಳಿಕೆ

ನವದೆಹಲಿ: ಕಾಂಗ್ರೆಸ್ ವಕ್ತಾರರಾದ ಶಮಾ ಮೊಹಮದ್ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು “ದಪ್ಪ” ಮತ್ತು ಅವರು ದೇಶದ ಇತಿಹಾಸದಲ್ಲಿ “ಅತ್ಯಂತ ಕಳಪೆ ನಾಯಕ ಎಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ವಕ್ತಾರೆ ಶಮಾ ಮೊಹಮ್ಮದ್, “ರೋಹಿತ್ ಶರ್ಮಾ ದಪ್ಪವಾಗಿದ್ದಾರೆ! ತೂಕವನ್ನು ಕಳೆದುಕೊಳ್ಳಬೇಕಾಗಿದೆ! ಮತ್ತು ಸಹಜವಾಗಿ, ಭಾರತ ಇದುವರೆಗೆ ಕಂಡ … Continued

ಮಾರ್ಚ್ ಮಧ್ಯದ ವೇಳೆಗೆ ಬಿಜೆಪಿಯ ನೂತನ ಅಧ್ಯಕ್ಷರ ಆಯ್ಕೆ ; ಈ ಬಾರಿ ಮಹಿಳೆಗೆ ಸಾರಥ್ಯ…?

ನವದೆಹಲಿ : 13 ರಾಜ್ಯಗಳಲ್ಲಿ ಸಾಂಸ್ಥಿಕ ಚುನಾವಣೆಗಳು ಮುಗಿದ ನಂತರ ಮಾರ್ಚ್ ಮಧ್ಯದ ವೇಳೆಗೆ 15 ಅಥವಾ 16 ರಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ. ಜೆಪಿ ನಡ್ಡಾ ಅವರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯು ಒಮ್ಮತದಿಂದ ನಡೆಯಲಿದೆ ಎಂದು ಪಕ್ಷದ ಮೂಲಗಳು ಸೂಚಿಸುತ್ತವೆ. ದಕ್ಷಿಣ ಭಾರತದಲ್ಲಿ … Continued