ಪಶ್ಚಿಮ ಬಂಗಾಳ ಚುನಾವಣೆ: ಅಚ್ಚರಿ ನೀಡಿದ ಬಿಜೆಪಿ, ನಾಲ್ವರು ಸಂಸದರಿಗೆ ಟಿಕೆಟ್‌

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯು 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು , ಮೂವರು ಹಾಲಿ ಲೋಕಸಭಾ ಸದಸ್ಯರು ಮತ್ತು ಒಬ್ಬ ರಾಜ್ಯಸಭಾ ಸದಸ್ಯರನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿಯನ್ನುಂಟು ಮಾಡಿದೆ. ದಕ್ಷಿಣ ಕೊಲ್ಕತ್ತಾದ ಟೋಲಿಗುಂಗ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಅರೂಪ್ ಬಿಸ್ವಾಸ್ ವಿರುದ್ಧ ಹಾಲಿ ಕೇಂದ್ರ ಸಚಿವ … Continued

ತಮಿಳುನಾಡು ಚುನಾವಣೆ: ಬಿಜೆಪಿಯಿಂದ ಖುಷ್ಬೂ, ಅಣ್ಣಾಮಲೈ ಸ್ಪರ್ಧೆ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ನಟಿ ಖುಷ್ಬೂ ಸುಂದರ್, ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರೂ ಸೇರಿದ್ದಾರೆ. ತಮಿಳುನಾಡಿನ 20 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದ್ದು, 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಡಿಸಲಾಗಿದೆ. ಈ ಪೈಕಿ ಅಣ್ಣಾಮಲೈ ಹಾಗೂ ಖುಷ್ಬೂ ಅವರ ಹೆಸರಿದೆ. ಬಿಜೆಪಿ … Continued

ಕೇರಳ: ಪಾಲಕ್ಕಾಡ್‌ನಿಂದ ಮೆಟ್ರೋ ಮ್ಯಾನ್‌ ಸ್ಪರ್ಧೆ

ನವ ದೆಹಲಿ: ಏ.೬ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಎಂದೇ ಹೇಳಲಾಗುತ್ತಿರುವ ಮೆಟ್ರೋ ಮ್ಯಾನ್ ಖ್ಯಾತಿಯ ಇ. ಶ್ರೀಧರನ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಕಂಜಿರಪಲ್ಲಿ ವಿಧಾನಸಭೆ ಕ್ಷೇತ್ರದಿಂದ ಆಲ್ಫಾನ್ಸೊ, ತ್ರಿಶೂರ್ ಅಸೆಂಬ್ಲಿ ಕ್ಷೇತ್ರದಿಂದ ಸುರೇಶ್ ಗೋಪಿ ಸ್ಪರ್ಧಿಸಲಿದ್ದಾರೆ. ಶ್ರೀಧರನ್ ಕೇರಳದ ಪಾಲಕ್ಕಾಡ್ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಕೇರಳ ಬಿಜೆಪಿ ಘಟಕದ … Continued

ಬಿಜೆಪಿ ವಿರುದ್ಧ ಬಂಗಾಳದಲ್ಲಿ ಬಿಕೆಯು ನಾಯಕ ಟಿಕಾಯತ್‌ ಪ್ರಚಾರ

ನವ ದೆಹಲಿ: ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಟಿಎಂಸಿಗೆ ಬೆಂಬಲ ಸೂಚಿಸಿದ್ದು, ಚುನಾವಣಾ ಪ್ರಚಾರಕ್ಕೆ ದುಮುಖಿದ್ದಾರೆ. ಶನಿವಾರ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಬಂಗಾಳ ರಾಜ್ಯದ ರೈತರ ಸಂಕಷ್ಟಗಳನ್ನ ಅರ್ಥಮಾಡಿಕೊಳ್ಳಲು ರಾಜ್ಯಕ್ಕೆ ಭೇಟಿ ನೀಡಿದ ರೈತ ನಾಯಕ, ನಂದಿಗ್ರಾಮ ಮತ್ತು ಕೊಲ್ಕತಾದಲ್ಲಿ ಬೃಹತ್ ‘ಮಹಾ ಪಂಚಾಯತ್’ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಈ … Continued

ತೃಣಮೂಲ ಕಾಂಗ್ರೆಸ್‌ ಸೇರಿದ ಬಿಜೆಪಿ ಮಾಜಿ ನಾಯಕ ಯಶ್ವಂತ ಸಿನ್ಹಾ

ಬಿಜೆಪಿ ಮಾಜಿ ನಾಯಕ ಮತ್ತು ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಮಾಜಿ ಹಣಕಾಸು ಸಚಿವರು ಕೊಲ್ಕತ್ತಾದ ಟಿಎಂಸಿ ಭವನಕ್ಕೆ ಆಗಮಿಸಿ ಔಪಚಾರಿಕವಾಗಿ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ರಾಜ್ಯವು ಬಹು-ಹಂತದ ವಿಧಾನಸಭಾ ಚುನಾವಣೆ ಪ್ರಾರಂಭಿಸುವ ಕೆಲವೇ ವಾರಗಳ ಮೊದಲು ಸಿನ್ಹಾ ಟಿಎಂಸಿ ಸೇರುವ ನಿರ್ಧಾರ ಹೊರಬಿದ್ದಿದೆ. ಅವರು … Continued

ಪಶ್ಚಿಮ ಬಂಗಾಳ: ಬಿಜೆಪಿ ತೆಕ್ಕೆಗೆ ಸೇರಿದ ಟಿಎಂಸಿ ಸಚಿವ, ಶಾಸಕ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಎಂಸಿ ಟಿಕೇಟ್‌ ನಿರಾಕರಿಸಿದ ನಂತರ ಸಚಿವ ಬಚ್ಚು ಹನ್ಸದಾ ಹಾಗೂ ಶಾಸಕ ಗೌರಿಶಂಕರ ದತ್ತ ಬಿಜೆಪಿ ಪಾಳೆಯಕ್ಕೆ ಬಂದು ಸೇರಿದ್ದಾರೆ. ಉತ್ತರ ಬಂಗಾಳ ಅಭಿವೃದ್ಧಿ ರಾಜ್ಯ ಸಚಿವ ಬಚ್ಚು ಹನ್ಸದಾ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಅವರು ದಕ್ಷಿಣ ದಿನಾಜ್‌ಪುರ ಜಿಲ್ಲೆಯ … Continued

ಹರಿಯಾಣ: ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯ ಸೋಲಿಸಿದ ಬಿಜೆಪಿ-ಜೆಜೆಪಿ ಮೈತ್ರಿಕೂಟ

ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯವನ್ನು ಬಿಜೆಪಿ-ಜೆಜೆಪಿ ಸರಕಾರ ಸೋಲಿಸಿದೆ. ಎಲ್ಲ ಕಾಂಗ್ರೆಸ್‌ ಶಾಸಕರು ಅವಿಶ್ವಾಸ ನಿರ್ಣಯ ಬೆಂಬಲಿಸಿದರೆ, ಬಿಜೆಪಿ-ಜೆಜೆಪಿ ಶಾಸಕರು ಇದರ ವಿರುದ್ಧ ಮತ ಚಲಾಯಿಸಿದರು. ಅವಿಶ್ವಾಸ ನಿರ್ಣಯವನ್ನು ೩೨ ಸದಸ್ಯರು ಬೆಂಬಲಿಸಿದರೆ, ೫೫ ಸದಸ್ಯರು ವಿರೋಧಿಸಿದರು. ಜೆಜೆಪಿ ಶಾಸಕರಾದ ರಾಮ್ ಕುಮಾರ್ ಗೌತಮ್ ಮತ್ತು ದೇವೇಂದರ್ ಬಬ್ಲಿ ಅವರು ಬಿಜೆಪಿಯಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುವಂತೆ … Continued

ಚುನಾವಣೆ ಹೊಸ್ತಿಲಲ್ಲಿ ಮತ್ತೆ ಐವರು ಟಿಎಂಸಿ ಶಾಸಕರು ಬಿಜೆಪಿಗೆ ಸೇರ್ಪಡೆ…!

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಸಮೀಪಿಸತ್ತಿದ್ದಂತೆಯೇ ಮಮತಾ ಬ್ಯಾನರ್ಜಿಗೂ ತಲೆನೋವು ಜಾಸ್ತಿಯಾಗುತ್ತಿದೆ. ಚುನಾವಣೆಯ ಹೊಸ್ತಿಲಲ್ಲಿಯೇ ಪಕ್ಷದ ಐವರು ಶಾಸಕರು ತೃಣಮೂಲ ಕಾಂಗ್ರೆಸ್‌ ತೊರೆದು ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಬಿಜೆಪಿ ಸೇರಿದ್ದಾರೆ. ಅದೂ ಪ್ರಧಾನಿ ಮೋದಿ ನಡೆಸಿದ ಮಹಾ ಸಾವೇಶದ ಮಾರನೇ ದಿನವೇ..! ಟಿಎಂಸಿಯ ಐವರು ಶಾಸಕರು ಸೋಮವಾರ ಬಿಜೆಪಿ ಸೇರಿದ್ದು, … Continued

ನಾನು ನಾಗರ ಹಾವು, ಕಚ್ಚಿದ್ರೆ ನೀವು ಇರೋಲ್ಲ: ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ ಹೇಳಿಕೆ‌

ಕೊಲ್ಕತ್ತಾ: .ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ತೆರಳಲು ಕೇವಲ ಮೂರು ವಾರಗಳ ಮೊದಲು ಭಾನುವಾರ ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಗ್ರೌಂಡ್ ಸಮಾವೇಶದಲ್ಲಿ ಖ್ಯಾತ ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ದಿಲೀಪ್ ಘೋಷ್ ಇತರರು ಅವರನ್ನು … Continued

ಶ್ರೀಲಂಕಾದಲ್ಲೂ ಬಿಜೆಪಿ ಶಾಖೆ ತೆರೆದಿದೆಯೇ? ಶ್ರೀಲಂಕಾ ಭಾರತೀಯ ಜನತಾ ಪಕ್ಷಕ್ಕೂ ಬಿಜೆಪಿಗೂ ಸಂಬಂಧವಿದೆಯೇ..?

ಕೇಂದ್ರದ ಆಡಳಿರೂಢ ಪಕ್ಷವಾದ ಭಾರತೀಯ ಜನತಾ ಪಕ್ಷವು ಶ್ರೀಲಂಕಾದಲ್ಲಿ ‘ಶಾಖೆ’ ಪ್ರಾರಂಭಿಸಿದೆ ಎಂಬ ಹೇಳಿಕೆಯೊಂದಿಗೆ ಒಂದು ಚಿತ್ರ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ…! ಈ ಚಿತ್ರವು ವಿ.ಮುತ್ತುಸ್ವಾಮಿಯವರಾಗಿದ್ದು, ಅವರನ್ನು ಶ್ರೀಲಂಕಾ ಭಾರತೀಯ ಜನತಾ ಪಕ್ಷದ ನಾಯಕ ಎಂದು ಬಣ್ಣಿಸಲಾಗಿದೆ. ಇದರಿಂದ ಶ್ರೀಲಂಕಾದಲ್ಲಿ ಬಿಜೆಪಿ ಶಾಖೆ ತೆರೆದಿದೆಯೇ ಎಂದು ಹಲವರು ಆಶ್ಚರ್ಯಪಡುವಷ್ಟರ ಮಟ್ಟಿಗೆ ಈ ಚಿತ್ರ ವೈರಲ್‌ … Continued