ಚಿಂತಾಮಣಿ | ಕೃಷಿ ಹೊಂಡದಲ್ಲಿ ವಿದ್ಯುತ್​ ಸ್ಪರ್ಶಿಸಿ ಮೂವರು ಯುವಕರು ಸಾವು

ಚಿಕ್ಕಬಳ್ಳಾಪುರ : ಕೃಷಿ ಹೊಂಡದಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಯುವಕರು ಸಾವಿಗೀಡಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುಂತಕೆದಿರೇನಹಳ್ಳಿಯಲ್ಲಿ ನಡೆದಿದೆ. ಎಂದು ವರದಿಯಾಗಿದೆ. ಚಿಂತಾಮಣಿ ತಾಲೂಕಿನ ಮುಂತಕೆದಿರೇನಹಳ್ಳಿಯ ಕೃಷಿ ಹೊಂಡದಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹೊಂಡದಲ್ಲಿ ನೀರೆತ್ತುತ್ತಿದ್ದ 22–28 ವರ್ಷದ ಮೂವರು ವಿದ್ಯುತ್‌ ಸ್ಪರ್ಷದಿಂದ ಸಾವಿಗೀಡಾಗಿದ್ದಾರೆ ಎಂದು … Continued

ಗೂಗಲ್ ಮ್ಯಾಪ್ ತೋರಿದ ದಾರಿಯಲ್ಲಿ ಹೋಗಿ ಕಾರು 30 ಅಡಿ ಆಳದ ಚರಂಡಿಗೆ ಬಿದ್ದು ವ್ಯಕ್ತಿ ಸಾವು…!

ನವದೆಹಲಿ: ಗೂಗಲ್ ಮ್ಯಾಪ್ ನಂಬಿ ಹೋಗಿ ಕಾರೊಂದು 30 ಅಡಿ ಆಳದ ಚರಂಡಿಗೆ ಉರುಳಿಬಿದ್ದು ಅದರೊಳಗೆ ಪ್ರಯಾಣಿಸುತ್ತಿದ್ದ 31 ವರ್ಷದ ಸ್ಟೇಷನ್ ಮಾಸ್ಟರ್ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಗ್ರೇಟರ್ ನೋಯ್ಡಾದ ಪಿ-4 ಸೆಕ್ಟರ್ ಬಳಿ ಸಂಭವಿಸಿದ ಅಪಘಾತಕ್ಕೆ ಪ್ರಾಧಿಕಾರ ಹಾಗೂ ಗೂಗಲ್ ಮ್ಯಾಪ್‌ ಕಾರಣ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು … Continued

ಬೆಳಗಾವಿ | ಪ್ರೇಯಸಿಯ ಕತ್ತು ಸೀಳಿ ಸಾಯಿಸಿ ಅದೇ ಚೂರಿಯಿಂದ ತಾನೂ ಇರಿದುಕೊಂಡು ಸಾವಿಗೀಡಾದ ಪ್ರೇಮಿ…!

 ಬೆಳಗಾವಿ: ಮದುವೆಗೆ ಒಪ್ಪದ ಪ್ರಿಯತಮೆಗೆ ಚೂರಿ ಇರಿದು ಕೊಲೆ ಮಾಡಿದ ಯುವಕ, ಅದೇ ಚೂರಿಯಿಂದ ತಾನೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಶಹಾಪುರದ ನವಿ ಗಲ್ಲಿ ಮನೆಯಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಶಹಾಪುರದ ನಾಥ ಪೈ ವೃತ್ತದ ನಿವಾಸಿ ಐಶ್ವರ್ಯಾ ಮಹೇಶ ಲೋಹಾರ (18) ಎಂಬವರು ಕೊಲೆಯಾದ ಯುವತಿ. ಯಳ್ಳೂರ ಗ್ರಾಮದ ಪ್ರಶಾಂತ … Continued

ಕೋಲಾರ | ಇನ್ನೋವಾ ಕಾರು-ಬೈಕ್‌ ಡಿಕ್ಕಿ; ಮಗು ಸೇರಿ ನಾಲ್ವರು ಸಾವು

ಕೋಲಾರ: ಇನ್ನೋವಾ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿ ನಾಲ್ವರು ಸಾವಿಗೀಡಾದ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕುಪ್ಪನಹಳ್ಳಿ ಬಳಿಯ ನೂತನ ಚೆನ್ನೈ – ಬೆಂಗಳೂರು ಕಾರಿಡಾರ್ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಅಪಗಾತದಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ. ಮಹೇಶ (45), ಉದ್ವಿತಾ (3), ರತ್ನಮ್ಮ … Continued

ಹುಲಿಯ ಜೊತೆ ಕಾದಾಟ ನಡೆಸಿ ತನ್ನ ಒಡೆಯನನ್ನು ರಕ್ಷಿಸಿದ ನಾಯಿ ! ಓಡಿ ಹೋದ ಹುಲಿ…!! ಆದರೆ…

ಉಮಾರಿಯಾ: ಮನುಷ್ಯರ ಮೇಲಿನ ನಾಯಿಯ ಅಚಲ ನಿಷ್ಠೆ ಹಾಗೂ ನಂಬಿಕೆಯನ್ನು ಎತ್ತಿ ತೋರಿಸುವ ಘಟನೆಯೊಂದರಲ್ಲಿ ಜರ್ಮನ್ ಶೆಫರ್ಡ್ ನಾಯಿಯೊಂದು ಹುಲಿಯಿಂದ ತನ್ನ ಮಾಲೀಕನನ್ನು ರಕ್ಷಿಸಿದೆ. ಮಾಲೀಕನನ್ನು ಕಾಪಾಡಲು ಹುಲಿಯ ವಿರುದ್ಧವೇ ಹೋರಾಡಿದ ನಾಯಿ ಹುಲಿಯನ್ನು ಹೆದರಿಸಿ ಕಾಡಿಗೆ ಓಡಿಸಲು ಸಫಲವಾದರೂ ಹುಲಿಯೊಟ್ಟಿಗಿನ ಕಾಳಗದಲ್ಲಿ ಉಂಟಾದ ಗಾಯಗಳಿಂದಾಗಿ ಕೆಲ ಸಮಯದ ನಂತರ ವೀರ ಮರಣ ಹೊಂದಿದೆ. ಈ … Continued

ಸಾಕು ಬೆಕ್ಕಿನ ಶವದೊಂದಿಗೆ ಎರಡು ದಿನ ಕಳೆದ ಮಹಿಳೆ…! ನಂತರ ಮನನೊಂದು ಆತ್ಮಹತ್ಯೆ…!!

ಲಕ್ನೋ: ಮಹಿಳೆಯೊಬ್ಬರು ತನ್ನ ಸಾಕು ಬೆಕ್ಕು ಸತ್ತ ನಂತರ ಅದರ ಶವದ ಜೊತೆ ಎರಡು ದಿನ ಕಾಲ ಕಳೆದ ಬಳಿಕ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. 35 ವರ್ಷದ ಮಹಿಳೆ ಪೂಜಾ ಎಂಬವರು ತನ್ನ ಪ್ರೀತಿಯ ಮುದ್ದಿನ ಬೆಕ್ಕಿನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಸನ್‌ಪುರ ಪಟ್ಟಣದ … Continued

ಟಿಪ್ಪರ್ – ಕಾರಿನ ನಡುವೆ ಡಿಕ್ಕಿ: ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಐವರು ಸಾವು

ಚಾಮರಾಜನಗರ: ಟಿಪ್ಪರ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನಕ್ಕೆ ತೆರಳುತ್ತಿದ್ದ ಐವರು ಸಾವಿಗೀಡಾದ ಘಟನೆ ಕೊಳ್ಳೇಗಾಲ ತಾಲೂಕಿನ ಚಿಕ್ಕಿಂದುವಾಡಿ ರಸ್ತೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಮೈಸೂರಿನ ಶ್ರೀಲಕ್ಷ್ಮೀ, ಲಿಖಿತಾ, ಮಂಡ್ಯದ ಸುಹಾಸ್, ನಿತಿನ್ ಮತ್ತು ಶ್ರೇಯಸ್ ಮೃತಪಟ್ಟವರೆಂದು ತಿಳಿದುಬಂದಿದೆ. ಮೃತರೆಲ್ಲರೂ ಸ್ನೇಹಿತರಾಗಿದ್ದು, ಮಹಾಶಿವರಾತ್ರಿ ರಥೋತ್ಸವ … Continued

ದೊಡ್ಡಬಳ್ಳಾಪುರ | ರೀಲ್ಸ್‌ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಂಡ ಮೂವರು ಯುವಕರು..!

ದೊಡ್ಡಬಳ್ಳಾಪುರ: ರೀಲ್ಸ್‌ (Reels) ಹುಚ್ಚಿಗೆ ಬಿದ್ದು ಮೂವರು ಯುವಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರೀಲ್ಸ್​ ಮಾಡುವಾಗ ರೈಲು ಡಿಕ್ಕಿ ಹೊಡೆದು ಉತ್ತರ ಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಸಿದ್ದೆನಾಯಕನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದೆ. ಮೃತರನ್ನು ರಾಹುಲ್ (18), ಬಿಕೇಶ (20) ಮತ್ತು ಲಲ್ಲನ್ (24) … Continued

ತರಬೇತಿ ವೇಳೆ ಪವರ್‌ಲಿಫ್ಟರ್‌ ಕುತ್ತಿಗೆ ಮೇಲೆ ಬಿದ್ದ 270 ಕೆಜಿ ರಾಡ್; 17 ವರ್ಷದ ಚಿನ್ನದ ಪದಕ ವಿಜೇತ ಅಥ್ಲೀಟ್ ಸಾವು

ಜೈಪುರ : ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಪವರ್-ಲಿಫ್ಟರ್ ಅಭ್ಯಾಸದ ವೇಳೆ ಕುತ್ತಿಗೆಯ ಮೇಲೆ 270 ಕೆಜಿ ತೂಕದ ರಾಡ್ ಬಿದ್ದಿದ್ದರಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಹಿಳಾ ಪವರ್‌ಲಿಫ್ಟರ್ ಯಾಷ್ಟಿಕಾ ಆಚಾರ್ಯ (17) ಜಿಮ್‌ನಲ್ಲಿ ಭಾರ ಎತ್ತುವುದನ್ನು ಅಭ್ಯಾಸ ಮಾಡುವ ವೇಳೆ ಸಾವಿಗೀಡಾಗಿದ್ದಾರೆ. ಮಂಗಳವಾರ 270 … Continued

ಯಲ್ಲಾಪುರ | ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತ ; ಒಂದೇ ಕುಟುಂಬದ ಮೂವರು ಸಾವು

ಕಾರವಾರ : ಭೀಕರ ಅಪಘಾತದಲ್ಲಿ (Accident) ಒಂದೇ ಕುಟುಂಬದ ಮೂವರು ಸಾವಿಗೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಓವರ್​ಟೇಕ್ ಮಾಡುವ ಭರದಲ್ಲಿ ವೇಗದಲ್ಲಿ ಬಂದ ಲಾರಿ ಕಾರಿಗೆ ಗುದ್ದಿದೆ ಎಂದು ಹೇಳಲಾಗಿದೆ. ಲಾರಿ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿ ಹೋಗಿದೆ.  ಕಾರಿನಲ್ಲಿದ್ದ ಮೂವರು … Continued