ಚಿತ್ರದುರ್ಗ : ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸಾವು, ಹಲವರಿಗೆ ಗಾಯ

ಚಿತ್ರದುರ್ಗ : ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ ಮೂವರು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹನುಮಂತ ದೇವರ ಕಣಿವೆ ಪ್ರದೇಶದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ – 13ರಲ್ಲಿ ಅಪಘಾತವು ಮುಂಜಾನೆ 5 ಗಂಟೆ ಸುಮಾರಿಗೆ … Continued

ವೀಡಿಯೊ..| ಟೋಲ್ ಪ್ಲಾಜಾ ಮೇಲೆ ಮುಸುಕುಧಾರಿಗಳಿಂದ ಗುಂಡಿನ ದಾಳಿ, ಸಿಬ್ಬಂದಿಗೆ ಥಳಿತ ; ಓಡಿಹೋದ ಇಬ್ಬರು ಸಿಬ್ಬಂದಿ ಬಾವಿಯಲ್ಲಿ ಬಿದ್ದು ಸಾವು

ಭೋಪಾಲ್: ಆಘಾತಕಾರಿ ಘಟನೆಯಲ್ಲಿ ಸುಮಾರು 10-12 ಜನ ಮುಸುಕುಧಾರಿ ಗೂಂಡಾಗಳು ಮಂಗಳವಾರ ಮಧ್ಯರಾತ್ರಿ ಮಧ್ಯಪ್ರದೇಶದ ದಾಟಿಯಾದಲ್ಲಿನ ಟೋಲ್ ಪ್ಲಾಜಾ ಮೇಲೆ ದಾಳಿ ನಡೆಸಿ ಟೋಲ್ ನೌಕರರಿಗೆ ಅಮಾನುಷವಾಗಿ ಥಳಿಸಿದ್ದಾರೆ. ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. ಮುಸುಕುಧಾರಿ ಬಂದೂಕುಧಾರಿಗಳ ದಾಳಿಯ ವೇಳೆ ತಮ್ಮನ್ನು ರಕ್ಷಿಸಿಕೊಳ್ಳಲು ಟೋಲ್ ಪ್ಲಾಜಾದ ಇಬ್ಬರು ಉದ್ಯೋಗಿಗಳು ಓಡುತ್ತಿದ್ದಾಗ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ … Continued

ವೀಡಿಯೊ..| ಬಿರುಗಾಳಿ ಮಳೆ : ಪಶ್ಚಿಮ ಬಂಗಾಳದಲ್ಲಿ ಐದು ಜನರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

ಜಲಪೈಗುರಿ: ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾನುವಾರ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗಿದ್ದು, ಮಳೆ ಸಂಬಂಧಿತ ಅವಘಡದಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಜಲಪೈಗುರಿ ಜಿಲ್ಲೆಯ ರಾಜರ್‌ಹಾಟ್, ಬರ್ನಿಷ್‌, ಬಾಕಲಿ, ಜೋರ್‌ಪಕಡಿ, … Continued

ಖ್ಯಾತ ನಟ ಪ್ರಕಾಶ ಹೆಗ್ಗೋಡು ನಿಧನ

ಬೆಂಗಳೂರು: ಖ್ಯಾತ ನಟ, ರಂಗಕರ್ಮಿ ಪ್ರಕಾಶ ಹೆಗ್ಗೋಡು ಅನಾರೋಗ್ಯದಿಂದ ಶನಿವಾರ (ಮಾರ್ಚ್‌ 30) ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಯೇಸುಪ್ರಕಾಶ್‌ ಕಲ್ಲುಕೊಪ್ಪ ಎಂದೂ ಗುರುತಿಸ್ಪಡುತ್ತಿದ್ದ ಪ್ರಕಾಶ ಹೆಗ್ಗೋಡು ಶಿವಮೊಗ್ಗ … Continued

ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನ

ಧಾರವಾಡ: ಹಿರಿಯ ಸಾಹಿತಿ ಗುರುಲಿಂಗ ಕಾಪಸೆ (96 ವರ್ಷ) ಮಂಗಳವಾರ ತಡರಾತ್ರಿ ನಗರದ ನಿರ್ಮಲಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾಗಿದ್ದರು. ಗುರುಲಿಂಗ ಕಾಪಸೆ ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 1928ರ ಎಪ್ರಿಲ್ 2ರಂದು ಜನಿಸಿದ ಗುರುಲಿಂಗ ಕಾಪಸೆ ಅವರು ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ … Continued

ಮಾಸ್ಕೋದಲ್ಲಿ ಭಯೋತ್ಪಾದಕರ ಅಟ್ಟಹಾಸ ; ಸಂಗೀತ ಕಛೇರಿ ಸಭಾಂಗಣದಲ್ಲಿ ದಾಳಿ : 60 ಜನರು ಸಾವು, 145 ಜನರಿಗೆ ಗಾಯ

ಮಾಸ್ಕೊ: ಉಗ್ರರ ದಾಳಿಗೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ರಕ್ತದ ಕೋಡಿ ಹರಿದಿದೆ. ಮಾಸ್ಕೋದ ಅತೀ ದೊಡ್ಡ ಒಳಾಂಗಣ ಸಭಾಂಗಣವಾದ ಕ್ರಾಕಸ್ ಸಿಟಿ ಹಾಲ್‌ಗೆ (Crocus City Hall) ನುಗ್ಗಿದ ಶಸ್ತ್ರಸಜ್ಜಿತ ಉಗ್ರರು ನಡೆಸಿದ ಗುಂಡಿನ ದಾಳಿಯಿಂದ 60 ಜನ ಮೃತಪಟ್ಟಿದ್ದಾರೆ ಹಾಗೂ 145 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾ ಹೇಳಿದೆ. ಐದು ಮಕ್ಕಳು ಸೇರಿದಂತೆ 115 … Continued

ವೀಡಿಯೊ…| ತಂದೆಯ ಕೈಯಿಂದ ಜಾರಿ ಮೂರನೇ ಮಹಡಿಯಿಂದ ಬಿದ್ದು ಮಗು ಸಾವು

ಛತ್ತೀಸ್‌ಗಢ : ಶಾಪಿಂಗ್ ಮಾಲ್‌ನ ಮೂರನೇ ಮಹಡಿಯಲ್ಲಿ ಎಸ್ಕಲೇಟರ್‌​​​​​ ಹತ್ತುವಾಗ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ 40 ಅಡಿಗಳಷ್ಟು ಕೆಳಗೆ ಬಿದ್ದ ಹೃದಯ ವಿದ್ರಾವಕ ಘಟನೆ ಮಂಗಳವಾರ ಛತ್ತೀಸ್‌ಗಢದ ರಾಜಧಾನಿ ರಾಯ್ಪುರದ ದೇವೇಂದ್ರ ನಗರದ ಮಾಲ್‌ನಲ್ಲಿ ನಡೆದಿದೆ. ಸುಮಾರು 40 ಅಡಿಗಳಷ್ಟು ಆಳಕ್ಕೆ ಮಗು ಬಿದ್ದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿ … Continued

ಇಸ್ರೇಲ್‌ ದಾಳಿಯಲ್ಲಿ ಕೊಲ್ಲಲ್ಪಟ್ಟ ಹಮಾಸ್ ಉಪ ಸೇನಾ ನಾಯಕ : ವರದಿ

ಗಾಜಾದಲ್ಲಿ ಹಮಾಸ್‌ನ ಮಿಲಿಟರಿ ವಿಭಾಗದ ಉಪ ಕಮಾಂಡರ್ ಮತ್ತು ದಕ್ಷಿಣ ಇಸ್ರೇಲ್‌ನ ಅಕ್ಟೋಬರ್ 7 ರ ದಾಳಿಯ ಮಾಸ್ಟರ್‌ಮೈಂಡ್ ಆಗಿರುವ ಮಾರ್ವಾನ್ ಇಸ್ಸಾ ಒಂದು ವಾರದ ಹಿಂದೆ ಇಸ್ರೇಲಿ ವೈಮಾನಿಕ ದಾಳಿಯ ನಂತರ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಹಮಾಸ್‌ನ ಅತ್ಯುನ್ನತ ಶ್ರೇಣಿಯ ಅಧಿಕಾರಿಗಳಲ್ಲಿ ಒಬ್ಬರಾದ ಮಾರ್ವಾನ್ ಇಸ್ಸಾ ಮಾರ್ಚ್ 11 ರಂದು … Continued

ಸಿದ್ದಾಪುರ : ಮಂಗನಕಾಯಿಲೆಗೆ ಒಂದೇ ದಿನ ಇಬ್ಬರು ಸಾವು

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಮಂಗನಕಾಯಿಲೆ(ಕೆಎಫ್‌ಡಿ)ಗೆ ಒಂದೇ ದಿನ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸಿದ್ದಾಪುರ ತಾಲೂಕಿನ ಹೆಗ್ಗೆಕೊಪ್ಪ ಗ್ರಾಮದ 88 ವರ್ಷದ ವೃದ್ಧ ಮತ್ತು ಕಲ್ಲೂರು ಗ್ರಾಮದ 65 ವರ್ಷದ ವೃದ್ಧ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಮಂಗನ ಕಾಯಿಲೆಯಿಂದ … Continued

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮತ್ತೊಂದು ಸಾವು

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ(KFD)ಗೆ ಮತ್ತೊಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಜಿಲ್ಲೆಯ ಶಿರಸಿ ತಾಲೂಕಿನ 68 ವರ್ಷದ ವ್ಯಕ್ತಿಯೊಬ್ಬರು ಮಂಗನಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ. ಶಿರಸಿ ತಾಲೂಕಿನ ಹತ್ತರಗಿಯ ನವಿಲಗಾರ ಗ್ರಾಮದ 68 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಫೆ.22ರಂದು‌ … Continued