ಶಿವಮೊಗ್ಗ : ತೈಲ ಬೆಲೆ ಏರಿಕೆ ಪ್ರತಿಭಟನೆ ವೇಳೆ ಹೃದಯಾಘಾತ ; ಬಿಜೆಪಿ ನಾಯಕ ಭಾನುಪ್ರಕಾಶ ನಿಧನ

ಶಿವಮೊಗ್ಗ: ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೋಮವಾರ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಹಿರಿಯ ಮುಖಂಡ ಮತ್ತೂರಿನ ಎಂ.ಬಿ‌.ಭಾನುಪ್ರಕಾಶ ಅವರು ತೀವ್ರವಾಗಿ ಅಸ್ವಸ್ಥಗೊಂಡು ಕುಸಿದುಬಿದ್ದು ಮೃತಪಟ್ಟಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಗೋಪಿ ಸರ್ಕಲ್‌ನಲ್ಲಿ ಸೋಮವಾರ ನಡೆದ ಬಿಜೆಪಿ ಪ್ರತಿಭಟನೆ ಕಾರ್ಯಕ್ರಮದ ನಂತರ ಭಾನುಪ್ರಕಾಶ ಅವರಿಗೆ ಹೃದಯಾಘಾತವಾಗಿದೆ. ಅವರು ಅಲ್ಲಿಯೇ … Continued

ಟೆಂಪೋ ಟ್ರಾವೆಲರ್ ಕಮರಿಗೆ ಬಿದ್ದು14 ಮಂದಿ ಸಾವು

ನವದೆಹಲಿ : ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಋಷಿಕೇಶ-ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ 26 ಜನರಿದ್ದ ಟೆಂಪೋ ಟ್ರಾವೆಲರ್ ರಸ್ತೆಯಿಂದ ಸ್ಕಿಡ್ ಆಗಿ ಅಲಕನಂದಾ ನದಿಗೆ ಬಿದ್ದ ಪರಿಣಾಮ ಕನಿಷ್ಠ 14 ಪ್ರವಾಸಿಗರು ಮೃತಪಟ್ಟಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು … Continued

ಜೊಯಿಡಾ : ಪೊಲೀಸ್‌ ಠಾಣೆ ಎದುರು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು

ಕಾರವಾರ; ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಕಿರಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಠಾಣೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸುಟ್ಟ ಗಾಯಗಳಿಂದ ತೀವ್ರವಾಗಿ ಗಾಯಗೊಂಡಿದ್ದ ರಾಮನಗರದ ಹನುಮಾನ ಗಲ್ಲಿ ನಿವಾಸಿ ಭಾಸ್ಕರ ಬೋಂಡೆಲ್ಕರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. … Continued

ಕುವೈತ್‌ ಕಟ್ಟಡದಲ್ಲಿ ಅಗ್ನಿ ಅವಘಡ ; ಭಾರತೀಯರು ಸೇರಿ 41 ಮಂದಿ ಸಾವು

ಕುವೈತ್ : ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ ಅನಾಹುತದಲ್ಲಿ ಕನಿಷ್ಠ 41 ಜನರು ಸಾವಿಗೀಡಾಗಿದ್ದಾರೆ ಎಂದು ದೇಶದ ಸರ್ಕಾರಿ ಮಾಧ್ಯಮವು ಬುಧವಾರ ವರದಿ ಮಾಡಿದೆ. ವರದಿಗಳ ಪ್ರಕಾರ, ದುರಂತ ಘಟನೆಯಲ್ಲಿ ಹಲವಾರು ಭಾರತೀಯರು ಸಹ ಮೃತಪಟ್ಟಿದ್ದಾರೆ. ಸ್ಥಳೀಯ ಮಾಧ್ಯಮಗಳು ಈ ಕಟ್ಟಡವು ಹೆಚ್ಚಿನ ಮಲಯಾಳಂ ಜನಸಂಖ್ಯೆಯನ್ನು ಹೊಂದಿದೆ ಎಂದು ವರದಿ ಮಾಡಿದೆ. … Continued

ಖ್ಯಾತ ಸರೋದ್ ವಾದಕ ಪಂಡಿತ ರಾಜೀವ ತಾರಾನಾಥ ನಿಧನ

ಮೈಸೂರು : ಖ್ಯಾತ ಸರೋದ್ ವಾದಕ ಪಂಡಿತ ರಾಜೀವ ತಾರಾನಾಥ (93) ಅವರು ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಮಂಗಳವಾರ (ಜೂನ್ 11) ನಿಧನರಾಗಿದ್ದಾರೆ. ಕುವೆಂ‍ಪು ನಗರದ ಪಂಚಮಂತ್ರ ರಸ್ತೆಯಲ್ಲಿರುವ ನಿವಾಸದಲ್ಲಿ, ತಿಂಗಳ ಹಿಂದೆ ಕುಸಿದು ಬಿದ್ದು ಅವರ ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಯಲ್ಲಿ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಚೇತರಿಸಕೊಳ್ಳುತ್ತಿದ್ದರು. … Continued

ಉಳ್ಳಾಲ : ಸಮುದ್ರಪಾಲಾಗುತ್ತಿದ್ದ ಮೂವರು ಮಹಿಳೆಯರ ರಕ್ಷಣೆ ; ರಕ್ಷಿಸಿದರೂ ಬಚಾವಾಗದ ಓರ್ವ ಮಹಿಳೆ

ಮಂಗಳೂರು : ಉಳ್ಳಾಲ ಸಮುದ್ರತೀರಕ್ಕೆ ವಿಹಾರಕ್ಕೆ ಬಂದಿದ್ದ ಆಂಧ್ರಪ್ರದೇಶದ ನಾಲ್ವರು ಮಹಿಳೆಯರು ತೆರೆಯ ಅಬ್ಬರಕ್ಕೆ ಸಿಲುಕಿದ್ದು, ಅವರಲ್ಲಿ ಮೂವರನ್ನು ರಕ್ಷಿಸಲಾಗಿದ್ದು ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿಯಾಗಿರುವ ಪರಿಮಿ ರತ್ನಕುಮಾರಿ (57) ಎಂಬವರು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಉಳ್ಳಾಲ ಕಡಲತೀರದಲ್ಲಿ ಇವರು ವಿಹರಿಸುತ್ತಿದ್ದ ಸಂದರ್ಭದಲ್ಲಿ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿದೆ. ಅಲೆಯ … Continued

ಪೊಲೀಸರ ಎನ್‌ಕೌಂಟರ್‌ನಲ್ಲಿ ಹತರಾದ ತಲೆಯ ಮೇಲೆ 38 ಲಕ್ಷ ರೂ.ಬಹುಮಾನವಿದ್ದ 6 ನಟೋರಿಯಸ್‌ ನಕ್ಸಲರು…

ರಾಯ್ಪುರ : ಎರಡು ದಿನಗಳ ಹಿಂದೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ಆರು ನಕ್ಸಲೀಯರ ತಲೆಯ ಮೇಲೆ 38 ಲಕ್ಷ ರೂ.ಗಳ ಬಹುಮಾನ ಹೊಂದಿದ್ದರು ಎಂದು ವರದಿಯಾಗಿದೆ. ಈ ಕಾರ್ಯಾಚರಣೆಯು ನಕ್ಸಲೀಯರ ದಾಳಿಯ ಶಕ್ತಿಯ ಆಧಾರಸ್ತಂಭವೆಂದು ಪರಿಗಣಿಸಲಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಕಂಪನಿ ನಂ.6ರ ಮೇಲೆ ಭದ್ರತಾ … Continued

ಮೀಡಿಯಾ ಬ್ಯಾರನ್- ರಾಮೋಜಿ ರಾವ್ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಹೈದರಾಬಾದ್‌ : ತೆಲುಗು ಮೀಡಿಯಾ ಬ್ಯಾರನ್ ಮತ್ತು ಹೈದರಾಬಾದ್‌ನ ಫಿಲ್ಮ್ ಸಿಟಿಯ ಸಂಸ್ಥಾಪಕ ರಾಮೋಜಿ ರಾವ್ ಶನಿವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ರಾಮೋಜಿ ರಾವ್ ಅವರ ಸುಪ್ರಸಿದ್ಧ ಪ್ರಯಾಣವು ಜೂನ್ 8, 2024 ರಂದು ಕೊನೆಗೊಂಡಿತು, ಅವರು ಹೃದಯ ಸಂಬಂಧಿ ತೊಡಕುಗಳಿಂದ ನಿಧನರಾದರು. ಭಾರತೀಯ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲಿ … Continued

ಉತ್ತರಾಖಂಡದಲ್ಲಿ ಕೆಟ್ಟ ಹವಾಮಾನದಿಂದಾಗಿ ಕರ್ನಾಟಕದವರು ಸೇರಿ 9 ಚಾರಣಿಗರು ಸಾವು

ಕರ್ನಾಟಕದ 18 ಚಾರಣಿಗರು ಸೇರಿದಂತೆ 22 ಸದಸ್ಯರ ಚಾರಣಿಗರ ತಂಡದಲ್ಲಿದ್ದ ಒಂಬತ್ತು ಚಾರಣಿಗರು ನಿನ್ನೆ ಉತ್ತರಾಖಂಡದ ಉತ್ತರಕಾಶಿಯ ಸಹಸ್ರ ತಾಲ್ (ಸರೋವರ) ಕ್ಕೆ ತೆರಳುತ್ತಿದ್ದಾಗ ಕೆಟ್ಟ ಹವಾಮಾನದಿಂದಾಗಿ ದಾರಿ ತಪ್ಪಿ ಸಿಕ್ಕಿಬಿದ್ದು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಕರ್ನಾಟಕದ ಐವರು ಇದ್ದಾರೆ ಎಂದು ಹೇಳಲಾಗಿದೆ. ವಾಯು-ನೆಲದ ಜಂಟಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಇದುವರೆಗೆ ಹದಿಮೂರು … Continued

ವೀಡಿಯೊ..| ಯೋಗ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಬೀಸುತ್ತ ಡ್ಯಾನ್ಸ್ ಮಾಡುವಾಗ ಪ್ರಾಣಬಿಟ್ಟ ನಿವೃತ್ತ ಸೈನಿಕ ; ಯೋಗ ಮಾಡುತ್ತಿದ್ದಾನೆಂದು ತಿಳಿದು ಚಪ್ಪಾಳೆ ತಟ್ಟಿದ ಜನ

ಮಧ್ಯಪ್ರದೇಶದ ಇಂದೋರ್ (Indore) ಯೋಗ ಕೇಂದ್ರದಲ್ಲಿ ಆಸ್ತ ಯೋಗ ಕ್ರಾಂತಿ ಅಭಿಯಾನದ ವತಿಯಿಂದ ನಡೆದ ಯೋಗ ಕಾರ್ಯಕ್ರಮದಲ್ಲಿ ನಗು ಮತ್ತು ತೂಕ ಇಳಿಸುವ ಯೋಗಕ್ಕೆ ಹೆಸರಾದ ಬಲ್ವಿಂದರ್ ಸಿಂಗ್ ಛಾಬ್ರಾ (Balwinder Singh Chhabra) ಎಂಬ ನಿವೃತ್ತ ಸೈನಿಕ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಯೋಗ … Continued