ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ : ರಾಜ್ಯಕ್ಕೆ ಬರ ಪರಿಹಾರ ಹಣ ತುರ್ತು ಬಿಡುಗಡೆಗೆ ಮನವಿ

ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ (ಡಿಸೆಂಬರ್‌ 19) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಪರಿಹಾರದ ಹಣವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬರ ಪರಿಸ್ಥಿತಿಯ ಕುರಿತು … Continued

ಪರ್ತಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣ : 4 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ನವದೆಹಲಿ: ದೆಹಲಿಯಲ್ಲಿ ಅಪರಾಧ ನಡೆದ ಸುಮಾರು 15 ವರ್ಷಗಳ ನಂತರ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ದೆಹಲಿಯ ಸಾಕೇತ್ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ, ಐದನೇ ಅಪರಾಧಿ ಈಗಾಗಲೇ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾನೆ. ಎಲ್ಲ ನಾಲ್ವರು ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಬೀರ್ ಮಲಿಕ್, ಅಜಯಕುಮಾರ ಅವರಿಗೆ ಜೀವಾವಧಿ … Continued

ಕ್ರೂರ ಹತ್ಯೆ….: 17 ವರ್ಷದ ಹುಡುಗನನ್ನು 60ಕ್ಕೂ ಹೆಚ್ಚು ಬಾರಿ ಇರಿದ ಕೊಂದ 16 ವರ್ಷದ ಹುಡುಗ…!

ನವದೆಹಲಿ: ಮಂಗಳವಾರ ರಾತ್ರಿ ದೆಹಲಿಯ ರಸ್ತೆಯಲ್ಲಿ 17 ವರ್ಷದ ಯುವಕನೊಬ್ಬನಿಗೆ ಕಿರಿಯ ಹುಡುಗನೊಬ್ಬ ಹಲವು ಬಾರಿ ಇರಿದು ಸಾಯಿಸಿದ್ದಾನೆ. ಅತ್ಯಂತ ಆಘಾತಕಾರಿ ವೀಡಿಯೊ ದೃಶ್ಯಗಳಲ್ಲಿ ಅಪ್ರಾಪ್ತ ಬಾಲಕ ದೇಹದ ಪಕ್ಕದಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. 16 ವರ್ಷದ ಬಾಲಕ 17 ವರ್ಷದ ಹುಡುಗನಿಗೆ ಕನಿಷ್ಠ 60 ಬಾರಿ ಇರಿದಿದ್ದಾನೆ, ಆತನ ಕುತ್ತಿಗೆಯನ್ನು ಕತ್ತರಿಸಲು ಪ್ರಯತ್ನಿಸಿದ್ದಾನೆ, ಆತನ … Continued

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ : ಶಾಲೆಗಳಿಗೆ ರಜೆ ಘೋಷಣೆ

ನವದೆಹಲಿ: ದೆಹಲಿಯಲ್ಲಿ ಕಳೆದೊಂದು ವಾರದಿಂದ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿರುವುದರಿಂದ ನವೆಂಬರ್ 10ರ ವರೆಗೆ ಶಾಲೆಗಳಿಗೆ ರಜೆ ವಿಸ್ತರಿಸಲಾಗಿದೆ. 5ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ನವೆಂಬರ್‌ 10ರ ವರೆಗೆ ಬಂದ್ ಮಾಡುವಂತೆ ಆದೇಶವನ್ನು ವಿಸ್ತರಿಸಲಾಗಿದೆ. 6ರಿಂದ 12 ನೇ ತರಗತಿಯವರೆಗಿನ ಶಾಲೆಗಳನ್ನು ಬಂದ್ ಮಾಡುವ ಅಗತ್ಯವಿಲ್ಲ, ಆದರೂ ಈ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ … Continued

ವೈದ್ಯಕೀಯ ಪವಾಡ…: ಅಪಘಾತದಿಂದ ಪ್ರಜ್ಞಾಹೀನಳಾಗಿ ವೆಂಟಿಲೇಟರ್‌ನಲ್ಲಿದ್ದಾಗಲೇ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಮಹಿಳೆ…!

ನವದೆಹಲಿ : ವೈದ್ಯಕೀಯ ಪವಾಡವೊಂದರಲ್ಲಿ, ಮಾರಣಾಂತಿಕ ರಸ್ತೆ ಅಪಘಾತದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ವೆಂಟಿಲೇಟರ್‌ನಲ್ಲಿದ್ದ ಮಹಿಳೆಯೊಬ್ಬರು ಕಳೆದ ವಾರ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಏಮ್ಸ್) ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ನಂದಿನಿ ತಿವಾರಿ (22) ಅವರನ್ನು ಅಕ್ಟೋಬರ್ 17 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು. ಮಹಿಳೆ … Continued

ಕ್ರಿಕೆಟ್‌ ವಿಶ್ವಕಪ್ 2023 : ಇಂಗ್ಲೆಂಡಿಗೆ ಆಘಾತ, ಅಫ್ಘಾನಿಸ್ತಾನದ ವಿರುದ್ಧ ಹೀನಾಯವಾಗಿ ಸೋತ ಹಾಲಿ ವಿಶ್ವ ಚಾಂಪಿಯನ್….!

ನವದೆಹಲಿ: ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 69 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ಅಫ್ಘಾನಿಸ್ತಾನ ತಂಡವು ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಬುಡಮೇಲು ಫಲಿತಾಂಶವನ್ನು ದಾಖಲಿಸಿದೆ. ಬ್ಯಾಟಿಂಗ್ ಆಗಿರಲಿ ಅಥವಾ ಬೌಲಿಂಗ್ ಆಗಿರಲಿ, ಎಲ್ಲದರಲ್ಲಿಯೂ ಅಫ್ಘಾನಿಸ್ತಾನ ತಂಡವು ಇಂಗ್ಲಿಷ್ ತಂಡಕ್ಕೆ ಪುನರಾಗಮನಕ್ಕೆ ಅವಕಾಶವನ್ನೇ ನೀಡಲಿಲ್ಲ. ಅಫ್ಘಾನಿಸ್ತಾನದ 284 … Continued

ಅಕ್ಟೋಬರ್ 9 ರಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ

ನವದೆಹಲಿ: ಪ್ರಸ್ತುತ ರಾಜಕೀಯ ಪರಿಸ್ಥಿತಿ, ಜಾತಿ ಗಣತಿ ಮತ್ತು ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸಿಡಬ್ಲ್ಯುಸಿ (CWC) ಅಕ್ಟೋಬರ್ 9 ರಂದು ದೆಹಲಿಯಲ್ಲಿ ಸಭೆ ನಡೆಸಲಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಅಧಿಕಾರವನ್ನು ಬರಲು ಹಾಗೂ ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಅಧಿಕಾರವನ್ನು … Continued

ದೆಹಲಿ ಮದ್ಯ ನೀತಿ ಪ್ರಕರಣ : ಮನೆ ಇ.ಡಿ. ದಾಳಿ ನಡೆದ ಕೆಲವೇ ಗಂಟೆಗಳ ನಂತರ ಎಎಪಿ ನಾಯಕ ಸಂಜಯ ಸಿಂಗ್ ಬಂಧನ

ನವದೆಹಲಿ: ದೆಹಲಿ ಮದ್ಯ ನೀತಿಯ ತನಿಖೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷ (AAP)ಕ್ಕೆ ಜಾರಿ ನಿರ್ದೇಶನಾಲಯವು ಶಾಕ್‌ ನೀಡಿದೆ. (ED). ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಅವರನ್ನು ಇ.ಡಿ. ಇಂದು ಬುಧವಾರ (ಅಕ್ಟೋಬರ್‌ 4) ಬಂಧಿಸಿದೆ. ಬುಧವಾರ ಬೆಳಗ್ಗೆಯಿಂದಲೇ ಸಂಸದರ ದೆಹಲಿ ನಿವಾಸದಲ್ಲಿ ಶೋಧ ಕಾರ್ಯ … Continued

ಎನ್‌ಐಎ ದಾಳಿಯಲ್ಲಿ ಮೋಸ್ಟ್ ವಾಂಟೆಡ್ ಶಂಕಿತ ಐಸಿಸ್ ಭಯೋತ್ಪಾದಕ ದೆಹಲಿಯಲ್ಲಿ ಬಂಧನ

ನವದೆಹಲಿ: ಶಂಕಿತ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಮತ್ತು ಇತರ ಇಬ್ಬರು ಭಯೋತ್ಪಾದಕ ಶಂಕಿತರನ್ನು ದೆಹಲಿ ಪೊಲೀಸ್ ವಿಶೇಷ ದಳ ಸೋಮವಾರ ಬಂಧಿಸಿದೆ. ಐಸಿಸ್ ಭಯೋತ್ಪಾದಕ ಮೊಹಮ್ಮದ್ ಶಹನವಾಜ್ ಅಲಿಯಾಸ್ ಶಫಿ ಉಜ್ಜಮಾ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದು, ಆತನ ತಲೆಗೆ 3 ಲಕ್ಷ ರೂ.ಘೋಷಿಸಲಾಗಿತ್ತು. ದೆಹಲಿಯಲ್ಲಿ ಐಸಿಸ್ ಮಾಡ್ಯೂಲ್‌ನ ಸುಳಿವು … Continued

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕೆಂಪು ಅಂಗಿ ತೊಟ್ಟು ʼಹಮಾಲಿʼಯಾದ ರಾಹುಲ್ ಗಾಂಧಿ | ವೀಕ್ಷಿಸಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ದೆಹಲಿಯ ಆನಂದ್ ವಿಹಾರ ರೈಲು ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿದರು ಮತ್ತು ಕೆಂಪು “ಕೂಲಿ” ಶರ್ಟ್ ಮತ್ತು ಕೈಗೆ ಬ್ಯಾಡ್ಜ್ ಕಟ್ಟಿಕೊಂಡು ತಲೆಯ ಮೇಲೆ ಲಗೇಜ್ ಹೊತ್ತುಕೊಂಡು ಸಾಗಿದರು. ವೈರಲ್ ಕ್ಲಿಪ್‌ನಲ್ಲಿ, ವಯನಾಡ್ ಸಂಸದ ತಲೆಯ ಮೇಲೆ ಟ್ರಾಲಿ ಬ್ಯಾಗ್ ಇರಿಸುತ್ತಿರುವುದು ಹಾಗೂ ಪೋರ್ಟರ್‌ಗಳು ಅವರನ್ನು ಸುತ್ತುವರೆದಿರುವುದನ್ನು … Continued