ವೀಡಿಯೊ..| 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಈಗ ಸನ್ಯಾಸಿಯಾಗಿ ತಾಯಿ ಬಳಿಗೆ ಬಂದ: ಬಂದವ ಹೊರಟು ಹೋದ : ಯಾಕೆ ? ಅದೇ ಸ್ವಾರಸ್ಯ…

ನವದೆಹಲಿ : ನಾಪತ್ತೆಯಾಗಿದ್ದ ಮಗ, ಎರಡು ದಶಕಗಳ ನಂತರ ವಾಪಸ್ಸಾಗಿದ್ದು ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಗ್ರಾಮವೊಂದರಲ್ಲಿ ತಲ್ಲಣಕ್ಕೆ ಕಾರಣವಾಗಿದೆ. 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ಈಗ ಸನ್ಯಾಸಿಯಾಗಿ ಗ್ರಾಮಕ್ಕೆ ಮರಳಿದ್ದು, ಎಲ್ಲರಿಗೂ ದಿಗ್ಭ್ರಮೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊವು ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಪುನರ್ಮಿಲನವನ್ನು ತೋರಿಸುತ್ತದೆ. … Continued

ಬುರ್ಖಾ ಧರಿಸಿ ಬಂದು ಮನೆಯಲ್ಲಿ ತಂಗಿಯ ಮದುವೆಗೆಂದು ಇಟ್ಟಿದ್ದ ಆಭರಣ ದೋಚಿದ ಅಕ್ಕ..!

ನವದೆಹಲಿ: ತನ್ನ ತಂಗಿ ಬಗ್ಗೆಯೇ ಅಸೂಯೆ ಪಟ್ಟ ಸಹೋದರಿಯೊಬ್ಬಳು ಆಕೆಯ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿರುವ ಘಟನೆಯೊಂದು ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ. ದೆಹಲಿಯ ಉತ್ತಮ್ ನಗರದ ಸೇವಕ್ ಪಾರ್ಕ್‌ನಲ್ಲಿರುವ ತನ್ನ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿದೆ ಎಂದು ಜನವರಿ 30 ರಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಎಫ್ಐಆರ್ … Continued

ಮುಂಬೈ ಅಲ್ಲ, ದೆಹಲಿಯೂ ಅಲ್ಲ…. ಈ ಎರಡು ನಗರಗಳು ಭಾರತದಲ್ಲೇ ಅತ್ಯಂತ ಕೆಟ್ಟ ಸಂಚಾರ ದಟ್ಟಣೆ ನಗರಗಳು..!

ನವದೆಹಲಿ : ಬ್ರಿಟನ್ ರಾಜಧಾನಿ ಲಂಡನ್ 2023ರಲ್ಲಿ ವಿಶ್ವದ ಅತ್ಯಂತ ನಿಧಾನಗತಿಯ ನಗರವಾಗಿದ್ದು, ರಶ್ ಅವರ್‌ನಲ್ಲಿ ವಾಹನಗಳು ಗಂಟೆಗೆ ಸರಾಸರಿ ವೇಗ 14 ಕಿ.ಮೀ ಎಂದು ವರದಿಯೊಂದು ತಿಳಿಸಿದೆ. ಇದೇವೇಳೆ ಎರಡು ಭಾರತೀಯ ನಗರಗಳಾದ ಬೆಂಗಳೂರು ಮತ್ತು ಪುಣೆ ಕೂಡ ಕೆಟ್ಟ ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿವೆ ಎಂದು ಆಮ್ಸ್ಟರ್‌ಡ್ಯಾಮ್ ಮೂಲದ ಸ್ಥಳ ತಂತ್ರಜ್ಞಾನ ತಜ್ಞ … Continued

ಅಯೋಧ್ಯೆ ರಾಮಮಂದಿರ ಕುರಿತು ಆಕ್ಷೇಪಾರ್ಹ ಹೇಳಿಕೆ: ಮಣಿಶಂಕರ ಅಯ್ಯರ್ ಪುತ್ರಿ ವಿರುದ್ಧ ದೂರು ದಾಖಲು

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ‘ಪ್ರಾಣ ಪ್ರತಿಷ್ಠೆ’ ಖಂಡಿಸಿ ಜನವರಿ 20 ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಅವರ ಪುತ್ರಿ ಸುರಣ್ಯಾ ಅಯ್ಯರ್ ವಿರುದ್ಧ ದೂರು ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ನಾಯಕರಾದ ಅಜಯ ಅಗರ್ವಾಲ್ ಅವರು ದೆಹಲಿಯ ಸೈಬರ್ ಕ್ರೈಂ ಪೊಲೀಸ್ … Continued

ದೆಹಲಿಯಲ್ಲಿ ಫೆ.7 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧರಣಿ

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಪಾಲಿನ ಅನುದಾನ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶುಕ್ರವಾರ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧ ದೆಹಲಿಯಲ್ಲಿ ನಡೆಯುವ ಧರಣಿಯ ನೇತೃತ್ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದಾರೆ. ಅಲ್ಲದೆ, ರಾಜ್ಯದ 138 … Continued

ಬಾಬರ್ ರಸ್ತೆ ನಾಮಫಲಕ ಅಳಿಸಿ ಅಯೋಧ್ಯಾ ಮಾರ್ಗ ಎಂಬ ಪೋಸ್ಟರ್ ಅಂಟಿಸಿದ ಹಿಂದೂ ಸೇನಾ ಕಾರ್ಯಕರ್ತರು…

ನವದೆಹಲಿ : ದೆಹಲಿಯಲ್ಲಿರುವ ಬಾಬರ್ ರಸ್ತೆಯ ನಾಮಫಲಕಗಳ ಮೇಲೆ ‘ಅಯೋಧ್ಯಾ ಮಾರ್ಗ’ ಎಂಬ ಪೋಸ್ಟರ್‌ಗಳನ್ನು ಹಿಂದೂ ಸೇನಾ ಕಾರ್ಯಕರ್ತರು ಅಂಟಿಸಿರುವುದು ಬೆಳಕಿಗೆ ಬಂದಿದೆ. ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯಾ ರಸ್ತೆ ಎಂದು ಬದಲಾಯಿಸುವಂತೆ ಹಿಂದೂ ಸೇನಾ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈಗ ಬಾಬರ್ ರಸ್ತೆಯ ಫಲಕದ ಮೇಲೆ ಅಯೋಧ್ಯಾ ಮಾರ್ಗ ಎಂದು ಪೋಸ್ಟರ್ ಅನ್ನು ಅಂಟಿಸಿದ್ದಾರೆ. ಈ … Continued

ಅರವಿಂದ್ ಕೇಜ್ರಿವಾಲರನ್ನು ‘ಆರ್‌ಎಸ್‌ಎಸ್ ಕಾ ಚೋಟಾ ರೀಚಾರ್ಜ್’ ಎಂದು ಕರೆದ ಓವೈಸಿ, ತಿರುಗೇಟು ನೀಡಿದ ಎಎಪಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಂಘ ಪರಿವಾರದ ರಾಜಕೀಯವನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು “ಆರ್‌ಎಸ್‌ಎಸ್ ಕಾ ಚೋಟಾ ರೀಚಾರ್ಜ್” ಎಂದು ಕರೆದ ನಂತರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ನಡುವೆ ವಾಕ್ಸಮರ ಆರಂಭವಾಗಿದೆ. ದೆಹಲಿಯಲ್ಲಿ ಸುಂದರಕಾಂಡ ಪಠಣ ಕಾರ್ಯಕ್ರಮವನ್ನು … Continued

ಕಾಜಲ್ ಝಾ ಯಾರು..? ಇವಳ ₹ 100 ಕೋಟಿ ಮೌಲ್ಯದ ದೆಹಲಿ ಬಂಗಲೆ ಸೀಜ್‌ ಮಾಡಿದ ಪೊಲೀಸರು…

ನವದೆಹಲಿ: ಸ್ಕ್ರ್ಯಾಪ್ ಮೆಟಲ್ ಮಾಫಿಯಾ ಮತ್ತು ಗ್ಯಾಂಗ್‌ಸ್ಟರ್‌ ರವೀಂದ್ರ ನಗರ, ಅಲಿಯಾಸ್ ರವಿ ಕಾನಾ ವಿರುದ್ಧದ ಕಾರ್ಯಾಚರಣೆಯಲ್ಲಿ, ನೋಯ್ಡಾ ಪೊಲೀಸರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ₹200 ಕೋಟಿಗೂ ಹೆಚ್ಚು ಮೌಲ್ಯದ ಆತನ ಆಸ್ತಿಯನ್ನು ಯಶಸ್ವಿಯಾಗಿ ಸೀಲ್ ಮಾಡಿದ್ದಾರೆ. ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದ ನೋಯ್ಡಾ ಪೊಲೀಸರು ರವಿ ಕಾನಾ ತನ್ನ ಗೆಳತಿ ಕಾಜಲ್ ಝಾಗೆ ಉಡುಗೊರೆಯಾಗಿ ನೀಡಿದ ₹ … Continued

ದೆಹಲಿಯಲ್ಲಿ ದಟ್ಟವಾದ ಮಂಜು, ಶೂನ್ಯ ಸಮೀಪ ಗೋಚರತೆ : 110 ವಿಮಾನಗಳು, 25 ರೈಲುಗಳ ಸಂಚಾರದ ಮೇಲೆ ಪರಿಣಾಮ

ನವದೆಹಲಿ: ಬುಧವಾರ ಬೆಳಗ್ಗೆ ಉತ್ತರ ಭಾರತದಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಗೋಚರತೆ ಕೇವಲ 50 ಮೀಟರಿಗೆ ಕುಸಿದಿದೆ. ಇದು ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ 110 ಕ್ಕೂ ಹೆಚ್ಚು ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿವೆ. ದೆಹಲಿಗೆ ತೆರಳುವ 25 ರೈಲುಗಳು ವಿಳಂಬವಾಗಿವೆ ಎಂದು ಉತ್ತರ ರೈಲ್ವೆ ತಿಳಿಸಿದೆ. ಶೀತ ಅಲೆಯ … Continued

ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ : ರಾಯಭಾರಿಗೆ ಬರೆದ ಪತ್ರ ಪತ್ತೆ

ನವದೆಹಲಿ: ಮಂಗಳವಾರ ಸಂಜೆ ಇಸ್ರೇಲ್ ರಾಯಭಾರಿ ಕಚೇರಿ ಬಳಿ “ಸ್ಫೋಟ”ದ ಶಬ್ದ ಕೇಳಿಬರುತ್ತಿರುವ ಬಗ್ಗೆ ದೆಹಲಿ ಪೊಲೀಸರಿಗೆ ಕರೆ ಬಂದಿದೆ. ದೆಹಲಿ ಪೊಲೀಸರ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಆದರೆ ಅವರು ಸ್ಥಳವನ್ನು ಹುಡುಕಿದಾಗ ಮತ್ತು ಅನುಮಾನಾಸ್ಪದವಾಗಿ ಏನೂ ಸಿಗದ ನಂತರ ಅಲ್ಲಿಂದ ತೆರಳಿದೆ ಎಂದು ವರದಿಯಾಗಿದೆ. ಆದಾಗ್ಯೂ, ರಾಯಭಾರ ಕಚೇರಿಯಿಂದ ಕೆಲವೇ ಮೀಟರ್ ದೂರದಲ್ಲಿರುವ … Continued