ಸಿಂಗಾಪುರದ ಶಾಲೆಯಲ್ಲಿ ಬೆಂಕಿ ಅನಾಹುತದಲ್ಲಿ ಆಂಧ್ರ ಡಿಸಿಎಂ ಪವನ ಕಲ್ಯಾಣ ಪುತ್ರನಿಗೆ ಗಾಯ ; ಆಸ್ಪತ್ರೆಗೆ ದಾಖಲು

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ ಅವರ ಕಿರಿಯ ಪುತ್ರ ಮಾರ್ಕ್ ಶಂಕರ ಅವರು ಸಿಂಗಾಪುರದ ತಮ್ಮ ಶಾಲೆಯಲ್ಲಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೊಗೆಯಿಂದ ಉಸಿರಾಟದ ತೊಂದರೆಯ ಜೊತೆಗೆ ಶಂಕರ ಅವರ ಕೈಗಳು ಮತ್ತು ಕಾಲುಗಳಿಗೆ ಗಾಯಗಳಾಗಿವೆ ಎಂದು ಆರಂಭಿಕ ವರದಿಗಳು ಸೂಚಿಸುತ್ತವೆ. ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪಮುಖ್ಯಮಂತ್ರಿ ಕಲ್ಯಾಣ ಅವರು … Continued

ನಿಪ್ಪಾಣಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಆಕಸ್ಮಿಕ : ಅಪಾರ ಹಾನಿ

ಬೆಳಗಾವಿ: ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಹಾನಿಯಾದ ಘಟನೆ ಶುಕ್ರವಾರ ನಡೆದಿದೆ. ಸ್ಥಳೀಯ ಎರಡು ಅಗ್ನಿಶಾಮಕ ವಾಹನಗಳು ಸೇರಿದಂತೆ, ಸಂಕೇಶ್ವರ, ಚಿಕ್ಕೋಡಿ, ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನಿಂದ ಸೇರಿ ಸುಮಾರು ಏಳು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಪ್ರಯತ್ನಿಸಿವೆ. ಸಂಜೆ 4 ಗಂಟೆಗೆ 24 ಟಿಪಿಎಚ್ ಬಾಯ್ಲರ್ … Continued

ಮಹಾ ಕುಂಭದಲ್ಲಿ ಬೆಂಕಿ ಅನಾಹುತ : ಸುಮಾರು 100 ಟೆಂಟ್‌ಗಳು ಸುಟ್ಟು ಕರಕಲು

ಪ್ರಯಾಗರಾಜ್ : ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ ಮಹಾಕುಂಭ ಸ್ಥಳದಲ್ಲಿ ಟೆಂಟ್‌ನಲ್ಲಿ ಎರಡು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. 100ಕ್ಕೂ ಹೆಚ್ಚು ಡೇರೆಗಳಿಗೆ ಬೆಂಕಿ ವ್ಯಾಪಿಸಿ ಸುಟ್ಟು ಕರಕಲಾಗಿದೆ ಎಂದು ವರದಿ ತಿಳಿಸಿದೆ. ಅದೃಷ್ವಶಾತ್‌ ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬೃಹತ್ ಮಹಾಕುಂಭದಲ್ಲಿ ಸುರಕ್ಷತಾ ವ್ಯವಸ್ಥೆಯ … Continued

ವೀಡಿಯೊ…| ಚುನಾವಣೆಯಲ್ಲಿ ಗೆಲುವು ; ವಿಜಯೋತ್ಸವದ ವೇಳೆ ಒಮ್ಮೆಗೇ ಹೊತ್ತಿ ಉರಿದ ಬೆಂಕಿ, ಹಲವರಿಗೆ ಗಾಯ

ಬೆಳಗಾವಿ: ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಚಂದಗಢ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಿವಾಜಿ ಪಾಟೀಲ ಅವರ ವಿಜಯೋತ್ಸವದ ವೇಳೆ ಅವಘಡ ಸಂಭವಿಸಿದೆ. ಅವಘಡದಲ್ಲಿ ಮೆರವಣಿಗೆಯಲ್ಲಿದ್ದ ಕೆಲ ಮಹಿಳೆಯರಿಗೂ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಗಡಿಭಾಗವಾದ ಮಹಾರಾಷ್ಟ್ರದ ಚಂದಗಢ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದ … Continued

ವೀಡಿಯೊ..| ರಸ್ತೆ ಪಕ್ಕ ನಿಂತು ಬೀಡಿಗೆ ಬೆಂಕಿ ಹಚ್ಚಿ ಹೊಗೆ ಬಿಡುವ ಮುನ್ನವೇ ಅಂಗಡಿ-ವಾಹನಗಳು ಬೆಂಕಿ ಜ್ವಾಲೆಗೆ ಸುಟ್ಟು ಭಸ್ಮ..!

ಹೈದರಾಬಾದ್: ಆಘಾತಕಾರಿ ವಿದ್ಯಮಾನದಲ್ಲಿ, ಬೀಡಿ ಸೇದಿ ಎಸೆದ ಬೆಂಕಿ ಕಡ್ಡಿ ಬೆಂಕಿ ಅವಘಡಕ್ಕೆ ಕಾರಣವಾಗಿ, ಅನೇಕ ವಾಹನಗಳು-ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ಸಂಭವಿಸಿದೆ. ಸ್ಥಳೀಯರ ಕ್ಷಿಪ್ರ ಕ್ರಮದಿಂದಾಗಿ ಹೆಚ್ಚಿನ ಹಾನಿಯನ್ನು ತಡೆಯಲಾಗಿದೆ. ಆ ವ್ಯಕ್ತಿ ಬೀಡಿ ಹಚ್ಚಿ ನೆಲಕ್ಕೆ ಬೆಂಕಿಕಡ್ಡಿ ಎಸೆದ ನಂತರ ಬೆಂಕಿ ಹೊತ್ತುಕೊಂಡ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ … Continued

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭಾರೀ ಅಗ್ನಿಅವಘಡ : 14 ಅರ್ಚಕರಿಗೆ ಗಾಯ

ಉಜ್ಜಯಿನಿ : ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 14 ಅರ್ಚಕರಿಗೆ ಗಾಯವಾಗಿದೆ. ಆವರಣದಲ್ಲಿ ಹೋಳಿ ಆಚರಣೆಯ ನಡುವೆ ಮುಂಜಾನೆ ‘ಭಸ್ಮ ಆರತಿ’ ವೇಳೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇವಾಲಯದ ಗರ್ಭಗೃಹದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಉಜ್ಜಯಿನಿ ಜಿಲ್ಲಧಿಕಾರಿ ನೀರಜಕುಮಾರ ಸಿಂಗ್ ಹೇಳಿದ್ದಾರೆ. “14 ಪುರೋಹಿತರಿಗೆ … Continued

ಹೊನ್ನಾವರ: ಡಿಕೆ ಶಿವಕುಮಾರ ಹೆಲಿಕಾಪ್ಟರ್ ಲ್ಯಾಂಡ್‌ ಆದ ಹೆಲಿಪ್ಯಾಡ್‌ ಸಮೀಪವೇ ಹೊತ್ತಿಕೊಂಡ ಬೆಂಕಿ: ಅಪಾಯದಿಂದ ಪಾರು

ಹೊನ್ನಾವರ: ಮೈಸೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಹೆಲಿಕ್ಯಾಪ್ಟರ್ ಇಳಿದ ಪಟ್ಟಣದ ರಾಮತೀರ್ಥದ ಹೆಲಿಪ್ಯಾಡಿನ ಸಮೀಪದಲ್ಲಿ ಸ್ಮೋಕ್ ಕ್ಯಾಂಡಲ್ ಬೆಂಕಿ ಒಣಹುಲ್ಲಿಗೆ ತಗುಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಡಿ.ಕೆ. ಶಿವಕುಮಾರ ಅವರು ಹ್ಯಾಲಿಕ್ಯಾಪ್ಟರ್ ನಿಂದ ಇಳಿದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಗಾಳಿ ಇತ್ತು. ಹೆಲಿಕ್ಯಾಪ್ಟರ್‌ … Continued

ಸೈದಾಪುರ; ಅಗ್ನಿ ದುರಂತ, ದಂಪತಿ ಸಜೀವ ದಹನ

ಯಾದಗಿರಿ: ವಿದ್ಯುತ್‌ ಅವಘಡದಿಂದ ಬಟ್ಟೆ ಅಂಗಡಿಯೊಂದು ಹೊತ್ತಿ ಉರಿದು ದಂಪತಿ ಸಜೀವ ದಹನವಾಗಿರುವ ಘಟನೆ ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ನಡೆದ ವರದಿಯಾಗಿದೆ. ಇಂದು, ಸೋಮವಾರ ತಡರಾತ್ರಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ರಾಗಯ್ಯ (39) ಹಾಗೂ ಅವರ ಪತ್ನಿ ಶಿಲ್ಪ (35) ಮೃತಪಟ್ಟಿದ್ದಾರೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಎರಡು ಅಂಗಡಿಯಲ್ಲಿ ಬಟ್ಟೆ ಅಂಗಡಿಯಿತ್ತು. ಮತ್ತೊಂದರಲ್ಲಿ ದಂಪತಿ ಹಾಗೂ … Continued

ತಾಯಿ, ಇಬ್ಬರು ಮಕ್ಕಳು ಸಜೀವ ದಹನ: ಶಾರ್ಟ್‌ ಸರ್ಕಿಟ್‌ನಿಂದ ಎಸಿ ಸ್ಫೋಟಗೊಂಡ ಶಂಕೆ

ರಾಯಚೂರು: ಶಾರ್ಟ್‌ ಸರ್ಕಿಟ್‌ನಿಂದ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಮನೆಯೊಳಗಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ದಹನವಾಗಿರುವ ದುರಂತ ಘಟನೆ ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಕ್ತಿನಗರದ ಕೆಪಿಸಿ ಕ್ವಾಟ್ರಸ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದ್ದು ಮೃತರನ್ನು ಮಂಡ್ಯ ಮೂಲದ ರಂಜಿತಾ(33), ಮಕ್ಕಳಾದ ಮೃದಲ (13), ತಾರುಣ್ಯ(5) ಎಂದು ಗುರುತಿಸಲಾಗಿದೆ. ಶಾರ್ಟ್‌ … Continued

ಗುಡಿಸಲಿಗೆ ಆಕಸ್ಮಿಕ ಬೆಂಕಿ: ವೃದ್ಧ ದಂಪತಿ ಸಜೀವ ದಹನ

ವಿಜಯಪುರ: ಗುಡಿಸಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡದಿಂದ ಇಬ್ಬರು ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಚಡಚಣ ಪಟ್ಟಣದ ಹೊರ ವಲಯದ ಜಮೀನಿನ ಗುಡಿಸಲಿನಲ್ಲಿ ವಾಸವಿದ್ದ ಕರೀಮಸಾಬ ಇಮಾಮಸಾಬ ಟಪಾಲ (82), ಸಾಜನಬಿ ಕರೀಮಸಾಬ ಟಪಾಲ ಮೃತಪಟ್ಟಿರುವ ದುರ್ದೈವಿಗಳು ಎಂದು ಗುರುತಿಸಲಾಗಿದೆ. ನೀವರಗಿ ರಸ್ತೆಯಲ್ಲಿನ ತಮ್ಮ ಜಮೀನಿನಲ್ಲಿ ಈ … Continued